ಕುಂದಾಪುರ ತಾಲೂಕಿನ ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಮುಳ್ಳಿಕಟ್ಟೆ ಸರ್ಕಲ್‍ನಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ಲಾರಿ ಮತ್ತು ಕಾರು ನಡುವೆ ನಡೆದ ರಸ್ತೆ ಅಪಘಾತದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನವಿನ್ ಭಟ್ (32) ಕಿರಿಮಂಜೇಶ್ವರ ಮತ್ತು ಜಯಂತ ಭಟ್ ಅವರು ಗಂಭೀರ ಸ್ವರೂಪದ ಗಾಯದೊಂದಿಗೆ ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.
ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ಸಾಗುತ್ತಿದ್ದ ಲಾರಿ ಹಿಂಭಾಗಗಕ್ಕೆ ಅದೆ ಮಾರ್ಗದಲ್ಲಿ ವೇಗದಿಂದ ಸಾಗುತ್ತಿದ್ದ ಕಾರು ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ.ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ನಜ್ಜು ಗುಜ್ಜಾಗಿದೆ.ಆಂಬ್ಯುಲೆನ್ಸ್ ಇಬ್ರಾಹಿಂ ಗಂಗೊಳ್ಳಿ ಮತ್ತು ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು.ಒಂದೆ ವಾರದ ಒಳಗೆ ಮುಳ್ಳಿಕಟ್ಟೆ ಸರ್ಕಲ್‍ನಲ್ಲಿ ಸಂಭವಿಸಿದ ಮೂರನೇ ಅಪಘಾತವಾಗಿದೆ.
ಕುಂದಾಪುರ:ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಕರ್ನಾಟಕ ಪೊಲೀಸ್ ರನ್ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ…
ಕುಂದಾಪುರ:ರಾಜ್ಯ ಸರಕಾರಿ ಶಿಕ್ಷಕರ ನೌಕರರ ಹಾಗೂ ಇಲಾಖೆಯಲ್ಲಿನ ಇತರರ ಗೃಹ ನಿರ್ಮಾಣ ಸಹಕಾರ ಸಂಘ (ನಿ) ಬೆಂಗಳೂರು ಅದರ ರಾಜ್ಯ…
ಕುಂದಾಪುರ:ಮಾಜಿ ಎಂಎಲ್ಎ ಧಾರ್ಮಿಕ ಮುಖಂಡ ಅಜಾತಶತ್ರು ಅಪ್ಪಣ್ಣ ಹೆಗ್ಡೆ ಶನಿವಾರ ವಿಧಿವಶರಾಗಿದ್ದಾರೆ.ನೂರಕ್ಕೂ ಅಧಿಕ ನಾಗಮಂಡಲದ ನೇತೃತ್ವವನ್ನು ವಹಿಸಿಕೊಡಿದ್ದ ಅವರು, ಹಲವು…
ಕುಂದಾಪುರ:ಕಾಂಗ್ರೆಸ್ ಪಕ್ಷದ ಮುಖಂಡರಾದ,ಪ್ರಬಲ ರಾಜಕಾರಣಿ,ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ ತ್ರಾಸಿ ಸೋಮವಾರ ನಿಧನರಾದರು.ಅವರು ಪತ್ನಿ ಮಕ್ಕಳು, ಬಂದು…
ಕುಂದಾಪುರ:ಪುದುಚೇರಿಯಲ್ಲಿ ನಡೆದ 21 ನೇ ರಾಷ್ಟ್ರ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿಥ್ಮೆಟಿಕ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿದ ಹಟ್ಟಿಯಂಗಡಿ ಸಿದ್ಧಿ ವಿನಾಯಕ…
ಕುಂದಾಪುರ:2025 ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ತಾಲೂಕು ಮಟ್ಟದಲ್ಲಿ ಅತಿ ಹೆಚ್ಚು ಅಂಕ ಹಾಗೂ ರಾಜ್ಯ ಮಟ್ಟದಲ್ಲಿ 7ನೇ ರ್ಯಾಂಕ್…