ಕುಂದಾಪುರ

ಹರ್ಕೂರು ಶ್ರೀಮಹಾಗಣಪತಿ ದೇವರ ಪುನರ್ ಪ್ರತಿಷ್ಠೆ ಮಹೋತ್ಸವ

Share

ಕುಂದಾಪುರ:ತಾಲೂಕಿನ ಹರ್ಕೂರು ಗ್ರಾಮದ ಶ್ರೀಮಹಾಗಣಪತಿ ದೇವರ ಅಷ್ಟಬಂಧ ಪ್ರತಿಷ್ಠಾ ಮಹೋತ್ಸವ ಕಾರ್ಯಕ್ರಮ ವೃಷಭ ಲಗ್ನ ಸುಮುಹೂರ್ತದಲ್ಲಿ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಬುಧವಾರ ವಿಜೃಂಭಣೆಯಿಂದ ನಡೆಯಿತು.ಶ್ರೀಮಹಾಗಣಪತಿ ದೇವರ ಪ್ರತಿಷ್ಠಾ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಜೀವ ಕುಂಭಾಬಿಷೇಕ,ಪ್ರತಿಷ್ಠಾ ಕಲಶಾಭಿಷೇಕ,ಮಹಾಪೂಜೆ,ಪ್ರಾಯಶ್ಚಿತ ಹೋಮ,ಶಿಖರ ಪ್ರತಿಷ್ಠೆ,ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಿತು.ಶ್ರೀದೇವರಿಗೆ ಬೆಳ್ಳಿ ಪ್ರಭಾವಳಿ ಮತ್ತು ಬೆಳ್ಳಿ ಮುಖವಾಡವನ್ನು ಸಮರ್ಪಣೆ ಮಾಡಲಾಯಿತು.ಸಾವಿರಾರು ಭಕ್ತರು ಶ್ರೀಕ್ಷೇತ್ರಕ್ಕೆ ಆಗಮಿಸಿ ಶ್ರೀದೇವರ ಪ್ರಸಾದವನ್ನು ಸ್ವೀಕರಿಸಿದರು.ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಿತು.
ವೇದ ಬ್ರಹ್ಮ ಹೃಷಿಕೇಶ ಬಾಯರಿ ಬಾರ್ಕೂರು ಹಾಗೂ ವೇದ ಮೂರ್ತಿ ಚನ್ನಕೇಶವ ಉಪಾಧ್ಯ ಬಾರಂದಾಡಿ ಅವರ ನೇತೃತ್ವದಲ್ಲಿ ಶ್ರೀದೇವರ ಪ್ರತಿಷ್ಠಾಂಗ ವಿಧಿವಿಧಾನಗಳು ಜರುಗಿತು.
ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಎಚ್.ಜಯಶೀಲ ಎನ್ ಶೆಟ್ಟಿ ಮಾತನಾಡಿ,ಶ್ರೀಮಹಾಗಣಪತಿ ದೇವರ ಪುನರ್ ಪ್ರತಿಷ್ಠೆ ಹಾಗೂ ಪ್ರತಿಷ್ಠಾ ಕಲಶಾಭಿಷೇಕ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ಶ್ರೀದೇವರ ಆರ್ಶೀವಾದದಿಂದ ನಿರ್ವಿಘ್ನವಾಗಿ ನಡೆದಿದೆ ಎಂದು ಹೇಳಿದರು.ಮಾರ್ಚ್ 28 ರ ಗುರುವಾರ ದಂದು ಶ್ರೀಕ್ಷೇತ್ರದಲ್ಲಿ ನಡೆಯುವ ಶ್ರೀಮಹಾಗಣಪತಿ ದೇವರ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಹಾಗೂ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಬೇಕೆಂದು ವಿನಂತಿಸಿಕೊಂಡರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಮಾತನಾಡಿ,ಗಣಪತಿ ದೇವರ ಆರಾಧನೆಯಿಂದ ನಮ್ಮ ಇಷ್ಟಾರ್ಥಗಳನ್ನು ಪಡೆಯಬಹುದಾಗಿದ್ದು ಪ್ರಥಮ ಪೂಜಿತ ಗಣಪನಿಗೆ ಅಗ್ರಸ್ಥಾನವಿದೆ.ಕಲಿಯುಗದಲ್ಲಿ ಕೇಳಿದನ್ನು ಕರುಣಿಸುವ ಶ್ರೀ ಗಣಪತಿ ದೇವರು ಎಲ್ಲಾ ಊರಿನಲ್ಲೂ ಇದ್ದಾನೆ,ಎಲ್ಲರ ಮನೆಯಲ್ಲಿಯೂ ಇದ್ದಾನೆ.ಬಹಳ ವಿಶೇಷವಾದ ರೀತಿಯಲ್ಲಿ ಸಂಕಲ್ಪದಂತೆ ಹರ್ಕೂರು ನಲ್ಲಿ ಶಿಲಾಮಯ ದೇಗುಲ ಲೋಕಾರ್ಪಣೆ ಮಾಡಿರುವುದರಿಂದ ಗ್ರಾಮದ ಜನರಿಗೂ ಒಳ್ಳೆಯದು ಆಗಲಿದೆ ಎಂದು ಹೇಳಿದರು.
ಜೀರ್ಣೋದ್ಧಾರ ಸಮಿತಿ ಜೊತೆ ಕಾರ್ಯದರ್ಶಿ ಪ್ರಸನ್ನಕುಮಾರ ಶೆಟ್ಟಿ ಹೊಸಮನೆ ಮಾತನಾಡಿ,ಊರಿನ ಹಿರಿಯರು,ದಾನಿಗಳು,ಗ್ರಾಮಸ್ಥರ ಸಹಕಾರದಿಂದ ಸುಂದರವಾದ ದೇಗುಲವನ್ನು ನಿರ್ಮಿಸಲು ಸಾಧ್ಯವಾಗಿದೆ ಎಂದು ಹೇಳಿದರು.ಇವೊಂದು ದೇಗುಲದ ನಿರ್ಮಾಣದ ಕೆಲಸಲದಲ್ಲಿ ಭಾಗವಹಿಸಿದ ಎಲ್ಲಾರಿಗೂ ಶ್ರೀಮಹಾಗಣಪತಿ ದೇವರು ಒಳಿತನ್ನು ಕುರುಣಿಸಲಿ ಎಂದು ಶುಭಹಾರೈಸಿದರು.
ಅರ್ಚಕರಾದ ಶಿವರಾಮ ಅಡಿಗ ಮಾತನಾಡಿ,ಸುಮಾರು 300 ವರ್ಷಗಳಷ್ಟು ಇತಿಹಾಸವನ್ನು ಹೊಂದಿರುವ ಶ್ರೀಮಹಾಗಣಪತಿ ದೇವರ ಪುನರ್ ಪ್ರತಿಷ್ಠಾ ಮಹೋತ್ಸವ ಕಾರ್ಯಕ್ರಮವನ್ನು ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿಸಲಾಗಿದೆ ಎಂದು ಹೇಳಿದರು.ಶ್ರೀಮಹಾಗಣಪತಿ ದೇವರು ಭಕ್ತರ ಎಲ್ಲಾ ಕಾಮನೆಗಳನ್ನು ಈಡೇರಿಕೆ ಮಾಡುವಂತೆ ಹಾರೈಸಲಿ ಎಂದು ಶ್ರೀ ದೇವರಲ್ಲಿ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಗೌರವ ಸಲಹೆಗಾರರಾದ ಕೃಷ್ಣಪ್ರಸಾದ ಅಡ್ಯಂತಾಯ ಮತ್ತು ಸದಾನಂದ ಹೆಗ್ಡೆ ಕಟ್ಟಿನಮಕ್ಕಿ ಹರ್ಕೂರು ಪಟೇಲರ ಮನೆ,ಚುಚ್ಚಿ ನಾರಾಯಣ ಶೆಟ್ಟಿ,ಅಶೋಕ ರಾಜ ಶೆಟ್ಟಿ,ಕಾರ್ಯಾಧ್ಯಕ್ಷ ಮಂಜಯ್ಯ ಶೆಟ್ಟಿ ಹರ್ಕೂರು ಹೊಸಮನೆ,ಗೌರವಾಧ್ಯಕ್ಷರಾದ ಚಿತ್ತರಂಜನ್ ಹೆಗ್ಡೆ ಹರ್ಕೂರು ಪಟೇಲರಮನೆ,ಬೈಂದೂರು ಬಂಟರ ಸಂಘದ ಅಧ್ಯಕ್ಷ ವಸಂತ ಕುಮಾರ್ ಶೆಟ್ಟಿ,ಆನಂದ ಶೆಟ್ಟಿ ಹಳಗೇರಿ ಮನೆ ಹಾಗೂ ಹರ್ಕೂರು ಮೂರು ಮನೆಯವರು,ಗ್ರಾಮಸ್ಥರು ಉಪಸ್ಥಿತರಿದ್ದರು.

Advertisement

Share
Team Kundapur Times

Recent Posts

ತ್ರಾಸಿ-ಮರವಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ:ಮೂರು ಸಾವುಕುಂದಾಪುರ:ತ್ರಾಸಿ ಮರವಂತೆ ಬೀಚ್ ಮುಂಭಾಗ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬುಧವಾರ ಸಂಭವಿಸಿದ…

1 month ago

ಲಾರಿಗೆ ಕಾರು ಡಿಕ್ಕಿ:ನೆಲಮಂಗಲ ಮೂಲದ ಇಬ್ಬರು ಸಾವು

ಕುಂದಾಪುರ:ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೈಂದೂರು ತಾಲೂಕಿನ ನಾವುಂದ ಮಸ್ಕಿಯಲ್ಲಿ…

2 months ago

ಏಪ್ರಿಲ್ 12 ರಂದು ಅರಾಟೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಏಕಪವಿತ್ರ ನಾಗಮಂಡಲೋತ್ಸವ

ಕುಂದಾಪುರ:ತಾಲೂಕಿನ ಹೊಸಾಡು ಗ್ರಾಮದ ಅರಾಟೆ ಚಿತ್ತೇರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಏಪ್ರಿಲ್ 12 ರ ಭಾನುವಾರ ದಂದು ನಡೆಯಲಿರುವ ಶ್ರೀ…

2 months ago

ಎಸ್ಐ ನಾಸೀರ್ ಹುಸೇನ್ ಕುಸಿದು ಬಿದ್ದು ಮೃತ್ಯು

ಕುಂದಾಪುರ:ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಕರ್ನಾಟಕ ಪೊಲೀಸ್ ರನ್ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ…

3 months ago

ನಿರ್ದೇಶಕರಾಗಿ ಸುರೇಂದ್ರ ಗುಡ್ಡೆಹೋಟೆಲ್ ಆಯ್ಕೆ

ಕುಂದಾಪುರ:ರಾಜ್ಯ ಸರಕಾರಿ ಶಿಕ್ಷಕರ ನೌಕರರ ಹಾಗೂ ಇಲಾಖೆಯಲ್ಲಿನ ಇತರರ ಗೃಹ ನಿರ್ಮಾಣ ಸಹಕಾರ ಸಂಘ (ನಿ) ಬೆಂಗಳೂರು ಅದರ ರಾಜ್ಯ…

3 months ago

ಧಾರ್ಮಿಕ ಮುಖಂಡ ಅಪ್ಪಣ್ಣ ಹೆಗ್ಡೆ ವಿಧಿವಶ

ಕುಂದಾಪುರ:ಮಾಜಿ ಎಂಎಲ್ಎ ಧಾರ್ಮಿಕ ಮುಖಂಡ ಅಜಾತಶತ್ರು ಅಪ್ಪಣ್ಣ ಹೆಗ್ಡೆ ಶನಿವಾರ ವಿಧಿವಶರಾಗಿದ್ದಾರೆ.ನೂರಕ್ಕೂ ಅಧಿಕ ನಾಗಮಂಡಲದ ನೇತೃತ್ವವನ್ನು ವಹಿಸಿಕೊಡಿದ್ದ ಅವರು, ಹಲವು…

4 months ago