ಕುಂದಾಪುರ

ಜಗದ್ಗುರು ಶ್ರೀವಿಧುಶೇಖರ ಭಾರತೀ ಮಹಾಸ್ವಾಮಿಜಿ,ಹಟ್ಟಿಅಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಗೆ ಭೇಟಿ

Share

ಕುಂದಾಪುರ:ಶ್ರೀಸಿದ್ಧಿವಿನಾಯಕ ವಸತಿ ಶಾಲೆ ಕನ್ಯಾನ ಹಟ್ಟಿಅಂಗಡಿಗೆ ದಕ್ಷಿಣಾಮ್ನಾಯ ಶ್ರೀ ಶೃಂಗೇರಿ ಶಾರದಾ ಫೀಠಾಧೀಶ್ವರರಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀ ತೀರ್ಥ ಮಹಾಸನ್ನಿಧಾನಂಗಳವರ ಕೃಪಾಶೀರ್ವಾದಗಳಿಂದ ಕೃಪಾಶೀರ್ವಾದಗಳಿಂದ ತತ್ಕರಕಮಲ ಸಂಜಾತರಾದ ಶ್ರೀ ಮಜ್ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳು ಬುಧವಾರ ಭೇಟಿ ನೀಡಿ ಆಶೀರ್ವಚನ ನೀಡಿದರು. ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಗೆಯಲ್ಲಿ ನೂತನವಾಗಿ ನಿರ್ಮಿಸಿರುವ ಶೃಂಗವನವನ್ನು ಉದ್ಘಾಟಿಸಿ,ಭವ ಶರಣ್ ಪ್ರಾರ್ಥನಾ ಕೈಪಿಡಿಯನ್ನು ಲೋಕಾರ್ಪಣೆಗೊಳಿಸಿದರು.ನೂತನ ಭಜನಾ ಆಲಯವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆ ಮಾಡಿದರು.
ಹಟ್ಟಿಅಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಪ್ರಿನ್ಸಿಪಾಲ್ ಶರಣ ಕುಮಾರ ಮತ್ತು ಶಾಲೆಯ ಶಿಕ್ಷಕರು,ವಿದ್ಯಾರ್ಥಿವೃಂದವರು,ಸಿಬ್ಬಂದಿ ವರ್ಗದವರು ಹಾಗೂ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಷ್ಠಾನ ಹಟ್ಟಿಅಂಗಡಿ ಅಧ್ಯಕ್ಷರು ಮತ್ತು ಸದಸ್ಯರು ಸ್ವಾಮಿಗಳನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಅದ್ದೂರಿ ಮೆರವಣಿಗೆ ಮೂಲಕ ಬರಮಾಡಿಕೊಂಡರು.ವಿದ್ಯಾರ್ಥಿಗಳ ಆಕರ್ಷಕ ಪಥಸಂಚಲನ,ಭಜನೆ ಮೆರವಣಿಗೆ ಸಪಬಗನ್ನು ಹೆಚ್ಚಿಸಿತು.ಶೈಕ್ಷಣಿಕ ಚುಟುವಟಿಕೆಗೆ ಪೂರಕವಾದ ವಾತಾವರಣವನ್ನು ನೋಡಿ ಶ್ರೀಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಜಗದ್ಗುರು ಶ್ರೀವಿಧುಶೇಖರ ಭಾರತೀ ಮಹಾಸ್ವಾಮಿಜಿಗಳು ಆಶೀರ್ವಚನ ನೀಡಿ ಮಾತನಾಡಿ,25 ವರ್ಷಗಳಿಂದ ನಡೆಯುತ್ತಿರುವ ವಿದ್ಯಾಭ್ಯಾಸದ ಚಟುವಟಿಗೆ ನೋಡಿದರೆ ಬಹಳಷ್ಟು ಖುಷಿಕೊಡುವಂತಹದ್ದು ಆವೊಂದು ನಿಟ್ಟಿನಲ್ಲಿ ಮಕ್ಕಳಿಗೆ ಉತ್ತಮವಾದ ಶಿಕ್ಷಣ ದೊರೆಯುತ್ತಿದೆ.ವಿದ್ಯಾಭ್ಯಾಸದ ಜೊತೆಗೆ ಮಕ್ಕಳಿಗೆ ಸಂಸ್ಕಾರವನ್ನು ಕೊಟ್ಟು ಇನ್ನೂ ಉತ್ತಮವಾದ ರೀತಿಯಲ್ಲಿ ಮಕ್ಕಳನ್ನು ತಯಾರು ಮಾಡುವಂತಹ ಕಾರ್ಯಶೈಲಿ ಬಹಳಷ್ಟು ಕಾಳಜಿಯಿಂದ ಕೂಡಿದೆ ಎಂದು ಶ್ರೀಗಳು ಹೇಳಿದರು.ವಿಶೇಷವಾಗಿ ಭವ್ಯವಾದಂತಹ ಭಾರತೀಯ ಪರಂರಪರೆಯನ್ನು ಪರಿಚಯಿಸುವುದರ ಮೂಲಕ ಆಧುನಿಕವಾದಂತಹ ಜ್ಞಾನವನ್ನು ಮಕ್ಕಳಿಗೆ ನೀಡುತ್ತಾ ಉತ್ತಮವಾದ ಪ್ರಜೆಗಳನ್ನು ನಿರೂಪಿಸುವಲ್ಲಿ ಮಾಡುತ್ತಿರುವ ಕಾರ್ಯ ಶ್ಲಾಘನೀಯವಾದದ್ದು ಎಂದು ಹೇಳಿದರು.
ಹಟ್ಟಿಅಂಗಡಿ ಶ್ರೀಸಿದ್ಧಿವಿನಾಯಕ ವಸತಿ ಶಾಲೆ ಪ್ರಿನ್ಸಿಪಾಲ್ ಶರಣ ಕುಮಾರ ಅವರು ಸ್ವಾಮೀಜಿಗಳನ್ನು ಸ್ವಾಗತಿಸಿಕೊಂಡು ಮಾತನಾಡಿ,ಹಟ್ಟಿಅಗಂಡಿ ಇತಿಹಾಸವನ್ನು ನೋಡಿದಾಗ 15ನೇ ಶತಮಾನದಲ್ಲಿಯೇ ಇವೊಂದು ಕ್ಷೇತ್ರಕ್ಕೆ ಶೃಂಗೇರಿ ಶ್ರೀಗಳ ಅನುಗ್ರಹ ಸಿಕ್ಕಿದೆ ಇದು ನಮ್ಮ ಪುಣ್ಯವಾಗಿದೆ ಎಂದು ಹೇಳಿದರು.ಜಗದ್ಗುರುಗಳ ಪಾದಸ್ಪರ್ಶದಿಂದ ನಮ್ಮ ವಿದ್ಯಾಸಂಸ್ಥೆಗೆ ನವಚೈತನ್ಯ ತುಂಬಿದೆ ಎಂದರು.ಗುರುಗಳ ಆಶೀರ್ವಾದ ನಮ್ಮ ಸಂಸ್ಥೆ ಮೇಲೆ ಸದಾ ಇರಬೇಕು ಎಂದು ವಿನೃಮವಾಗಿ ವಿನಂತಿಸಿಕೊಂಡರು.
ಈ ಸಂದರ್ಭದಲ್ಲಿ ದಕ್ಷಿಣಾ ಪ್ರಾಂತೀಯ ಧರ್ಮಾಧಿಕಾರಿಗಳು ಶ್ರೀ ಶಾರದಾ ಪೀಠಂ ಶೃಂಗೇರಿ ವೇ.ಮೂ ಲೋಕೇಶ್ ಅಡಿಗ ನಾಗ ಪಾತ್ರಿಗಳು ಬಡಾಕೆರೆ, ಶ್ರೀಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನ ಅಧ್ಯಕ್ಷರಾದ ಎಲ್.ಟಿ ತಿಮ್ಮಪ್ಪ ಸಾಗರ,ಟ್ರಸ್ಟಿಗಳಾದ ಎಸ್.ನಾರಾಯಣರಾವ್,ಡಾ.ಎನ್.ಪಿ ನಾರಾಯಣ ಶೆಟ್ಟಿ,ಹೆಚ್ ಗಣೇಶ್ ಕಾಮತ್ ಗಂಗೊಳ್ಳಿ,ಕಾರ್ಯದರ್ಶಿಗಳು,ಆಡಳಿತಾಧಿಕಾರಿ ವೀಣಾ ರಶ್ಮಿ ಎಂ,ವೈಸ್ ಪ್ರಿನ್ಸಿಪಾಲ್ ರಾಮ ದೇವಾಡಿಗ,ಮುಖ್ಯೋಪಾಧ್ಯಾಯರಾದ ಸುಜಾತ ಸದಾರಾಂ ಉಪಸ್ಥಿತರಿದ್ದರು.ವಿದ್ಯಾರ್ಥಿಗಳು ಪ್ರಾರ್ಥಿಸಿದರು.ಶ್ರೀ ಸಿದ್ಧಿವಿನಾಯಕ ವಿದ್ಯಾಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.

Advertisement

Share
Team Kundapur Times

Recent Posts

ಧಾರ್ಮಿಕ ಮುಖಂಡ ಅಪ್ಪಣ್ಣ ಹೆಗ್ಡೆ ವಿಧಿವಶ

ಕುಂದಾಪುರ:ಮಾಜಿ ಎಂಎಲ್ಎ ಧಾರ್ಮಿಕ ಮುಖಂಡ ಅಜಾತಶತ್ರು ಅಪ್ಪಣ್ಣ ಹೆಗ್ಡೆ ಶನಿವಾರ ವಿಧಿವಶರಾಗಿದ್ದಾರೆ.ನೂರಕ್ಕೂ ಅಧಿಕ ನಾಗಮಂಡಲದ ನೇತೃತ್ವವನ್ನು ವಹಿಸಿಕೊಡಿದ್ದ ಅವರು, ಹಲವು…

4 days ago

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕಾಂಗ್ರೆಸ್ ಪಕ್ಷದ ಮುಖಂಡ ರಾಜು ದೇವಾಡಿಗ ತ್ರಾಸಿ ನಿಧನ

ಕುಂದಾಪುರ:ಕಾಂಗ್ರೆಸ್ ಪಕ್ಷದ ಮುಖಂಡರಾದ,ಪ್ರಬಲ ರಾಜಕಾರಣಿ,ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ ತ್ರಾಸಿ ಸೋಮವಾರ ನಿಧನರಾದರು.ಅವರು ಪತ್ನಿ ಮಕ್ಕಳು, ಬಂದು…

1 week ago

ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆ:ಸಹೋದರರು ಸಾಧನೆ

ಕುಂದಾಪುರ:ಪುದುಚೇರಿಯಲ್ಲಿ ನಡೆದ 21 ನೇ ರಾಷ್ಟ್ರ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿಥ್ಮೆಟಿಕ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿದ ಹಟ್ಟಿಯಂಗಡಿ ಸಿದ್ಧಿ ವಿನಾಯಕ…

2 weeks ago

ಸಾಧಕ ವಿದ್ಯಾರ್ಥಿ ವೈಷ್ಣವಿಗೆ ಗೌರವದ ಸನ್ಮಾನ

ಕುಂದಾಪುರ:2025 ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ತಾಲೂಕು ಮಟ್ಟದಲ್ಲಿ ಅತಿ ಹೆಚ್ಚು ಅಂಕ ಹಾಗೂ ರಾಜ್ಯ ಮಟ್ಟದಲ್ಲಿ 7ನೇ ರ್ಯಾಂಕ್…

2 weeks ago

ಹೊಸಾಡು ಸೇನಾಪುರ ಗ್ರಾಮೋತ್ಸವ ಶಾಸಕ ಗಂಟಿಹೊಳೆ ಉದ್ಘಾಟನೆ

ಕುಂದಾಪುರ:ಗ್ರಾಮ ಪಂಚಾಯಿತಿ ಹೊಸಾಡು,ಆರೋಗ್ಯ ಇಲಾಖೆ,ಕೃಷಿ ಇಲಾಖೆ,ಅರಣ್ಯ ಇಲಾಖೆ,ಆರಕ್ಷಕ ಠಾಣೆ ಗಂಗೊಳ್ಳಿ,ಪಶು ಸಂಪಗೋನಾ ಮತ್ತು ತೋಟಗಾರಿಕಾ ಹಾಗೂ ಮೆಸ್ಕಾಂ,ಶಿಕ್ಷಣ ಇಲಾಖೆ,ಆಯುಷ್ ಮತ್ತು…

3 weeks ago

ಶ್ರೀ ಮೂಕಾಂಬಿಕಾ ಭತ್ತ ಬೆಳೆಗಾರರ ಒಕ್ಕೂಟ ಬೈಂದೂರು ವಾರ್ಷಿಕ ಮಹಾಸಭೆ:2.5 ಕೋಟಿ ರೂ ವ್ಯವಾಹಾರ:ಒಟ್ಟು 1.81 ಲಕ್ಷ ರೂ. ನಿವ್ವಳ ಲಾಭ

ಕುಂದಾಪುರ:ಗ್ರಾಮೀಣ ಪ್ರದೇಶದ ಕೃಷಿಕರಿಗೆ ಅನುಕೂಲವಾಗುವ ಉದ್ದೇಶದಿಂದ ಕಳೆದ ಹನ್ನೊಂದು ವರ್ಷಗಳ ಹಿಂದೆ ಶ್ರೀ ಮೂಕಾಂಬಿಕಾ ಭತ್ತ ಬೆಳೆಗಾರರ ಒಕ್ಕೂಟವನ್ನು ಹುಟ್ಟು…

3 weeks ago