ಕುಂದಾಪುರ:ಜಗತ್ ಪ್ರಸಿದ್ಧ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ನೂತನ ಶಿಲಾಮಯ ದೇಗುಲ ಲೋಕಾರ್ಪಣೆ,ಬ್ರಹ್ಮಕಲಶೋತ್ಸವ,ಲಕ್ಷಮೋದಕ ಹೋಮ,ಶತ ಚಂಡಿಯಾಗ,2016 ಗಣಹೋಮ ಕಾರ್ಯಕ್ರಮದ ಅಂಗವಾಗಿ ಹಸಿರು ಹೊರೆ ಕಾಣಿಗೆ ಹಾಗೂ ಬೆಳ್ಳಿ ರಥ ಮೆರವಣಿಗೆ ಭಾನುವಾರ ಅದ್ದೂರಿಯಾಗಿ ನಡೆಯಿತು.
ಶ್ರೀದೇವರ ಬೆಳ್ಳಿ ರಥ ಮೆರವಣಿಗೆ ಹಾಗೂ ಹಸಿರು ಹೊರೆ ಕಾಣಿಕೆ ಮೆರವಣಿಗೆ ಅಂಗವಾಗಿ ಭಜನಾ ತಂಡಗಳಿಂದ ಭಜನಾ ಕುಣಿತ,ಚೆಂಡೆವಾದನ,ವಾದ್ಯಗೋಷ್ಠಿ,ನಾಶಿಕ್ ಡೋಲು ಮೆರವಣಿಗೆಯ ಸೊಬಗನ್ನು ಹೆಚ್ಚಿಸಿತು.ಮಹಿಳೆಯರು ಪೂರ್ಣಕುಂಭ ಕಳಶದೊಂದಿಗೆ ಶ್ರೀದೆವರ ಬೆಳ್ಳಿರಥ ಹಾಗೂ ಹಸಿರು ಹೊರೆ ಕಾಣಿಕೆಯನ್ನು ಬರಮಾಡಿಕೊಂಡರು.
ಶ್ರೀಹಟ್ಟಿಯಂಗಡಿ ದೇವಸ್ಥಾನದ ಧರ್ಮದರ್ಶಿಗಳಾದ ಹೆಚ್.ಬಾಲಚಂದ್ರ ಭಟ್ಟ ಮಾತನಾಡಿ,ನೂತನ ದೇವಾಲಯ ಲೋಕರ್ಪಣೆ ಮತ್ತು ಬ್ರಹ್ಮಕಲಶೋತ್ಸವ ಅಂಗವಾಗಿ ಹೊರೆ ಕಾಣಿಕೆಯನ್ನು ನೀಡಿದ ಗ್ರಾಮಸ್ಥರು ಹಾಗೂ ಎಲ್ಲಾ ಭಕ್ತಾಭಿಮಾನಿಗಳಿಗೆ ಶ್ರೀ ಸಿದ್ಧಿವಿನಾಯಕ ದೇವರು ಒಳಿತನ್ನು ಮಾಡಲಿ ಎಂದು ಶುಭಹಾರೈಸಿದರು.ಮಾರ್ಚ್ 13 ರಿಂದ ಮಾರ್ಚ್ 17 ರ ತನಕ ನಡೆಯಲಿರುವ ದೇವತಾ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕೇಳಿಕೊಂಡರು.
ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷರಾದ ರಮಾದೇವಿ ರಾಮಚಂದ್ರ ಭಟ್ಟ,ಪದಾಧಿಕಾರಿಗು,ಗ್ರಾಮಸ್ಥರು ,ಕಾರ್ಯಕ್ರಮದ ಮೇಲ್ವಿಚಾರಕರು ಉಪಸ್ಥಿತರಿದ್ದರು.
ಉಡುಪಿ:ಕಾಪು ನಲ್ಲಿ ಗೂಡ್ಸ್ ಟೆಂಪೋ ಪಲ್ಟಿ ಹೊಡೆದ ಪರಿಣಾಮ ದುರ್ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ ಘಟನೆ ಭಾನುವಾರ ನಡೆದಿದೆ.ಅಪಘಾತದ ತೀವ್ರತೆಗೆ ಗೂಡ್ಸ್…
ಕುಂದಾಪುರ:ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಿಕ್ಷಣದ ಮುಖ್ಯ ವಾಹಿನಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿರುವ ರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿ ಕುಂದಾಪುರ ತಾಲೂಕಿನ…
ಕುಂದಾಪುರ:ತಾಲೂಕಿನ ತ್ರಾಸಿ ರಾಷ್ಟ್ರೀಯ ಹೆದ್ದಾರಿ 66 ರ ಫ್ಲೈಓವರ್ ಸಮೀಪ ರಸ್ತೆ ಬದಿಯಲ್ಲಿ ನಿಂತ್ತಿದ್ದ ಲಾರಿಯಲ್ಲಿ ಲಾರಿ ಚಾಲಕನ ಶವ…
ಕುಂದಾಪುರ:ಶಯೋಮಿ ಇಂಡಿಯಾ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ನ ಸಿ.ಎಸ್.ಆರ್ ಸಹಕಾರದೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಸಾಹಸ್ ತಂಡ ಮತ್ತು ಕ್ಲೀನ್ ಕಿನಾರ…
ಬ್ರಹ್ಮಾವರ:ರೆಡ್ ಕ್ರಾಸ್ ವಿಭಾಗದ ವತಿಯಿಂದ ಬ್ರಹ್ಮಾವರ ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ನಶ ಮುಕ್ತ ಭಾರತ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳಿಗೆ…
ಕುಂದಾಪುರ:ಐಡಿಯಲ್ ಪ್ಲೇ ಆಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ಮೂಡುಬಿದ್ರೆ ಆಳ್ವಾಸ್ ಪಿಯು ಕ್ಯಾಂಪಸ್ನಲ್ಲಿ ನಡೆದ 20ನೇ ರಾಜ್ಯ ಮಟ್ಟದ…