ಕುಂದಾಪುರ:ಶ್ರೀವಿನಾಯಕ ಯುವಕ ಸಂಘ ನೆಂಪು ಪ್ರಸ್ತುತ್ತಿಯಲ್ಲಿ ರಜತ ಮಹೋತ್ಸವದ ಪ್ರಯುಕ್ತ ನೆಂಪು ಉತ್ಸವ ಕಾರ್ಯಕ್ರಮ ನೆಂಪು ಕರ್ನಾಟಕ ಪಬ್ಲಿಕ್ ಸ್ಕೂಲ್ ವಠಾರದಲ್ಲಿ ಶನಿವಾರ ಅದ್ದೂರಿಯಾಗಿ ನಡೆಯಿತು.
ಶ್ರೀವಿನಾಯಕ ಯುವಕ ಮಂಡಲ ನೆಂಪು ರಜತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ನೆಂಪು ವಿನಾಯಕನಿಗೆ ಮಹಾ ರಂಗಪೂಜೆ,ತೆಂಕು-ಬಡಗು ಸೊರ್ಧಾತ್ಮಕ ಗಾನ ವೈಭವ,ನೆಂಪು ಯಕ್ಷ ಕಂಪು ಕಾರ್ಯಕ್ರಮ,ಸಹಾಯಹಸ್ತ,ರಜತ ಪುರಸ್ಕಾರ,ಸಾಧಕರಿಗೆ ಸನ್ಮಾನ,ಸಾಂಸ್ಕ್ರತಿಕ ಉತ್ಸವ,ರಜತ ಪುರಸ್ಕಾರ ಕಾರ್ಯಕ್ರಮ,ಹುಟ್ಟೂರು ಸನ್ಮಾನ,ಯಕ್ಷಗಾನ ನೃತ್ಯ,ಪ್ರಸಿದ್ದ ಸಿನಿ ಗಾಯಕರಿಂದ ಸಂಗೀತೋತ್ಸವ ಕಾರ್ಯಕ್ರಮ ಹಾಗೂ ಸ್ಥಳೀಯ ಪ್ರತಿಭೆಗಳಿಂದ ನೃತ್ಯೋತ್ಸವ,ಹೆಂಗ್ಸ್ರ್ ಪಂಚೇತಿ ಕಾರ್ಯಕ್ರಮ ಜರುಗಿತು.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ ರಾಘವೇಂದ್ರ ಅವರು ನೆಂಪು ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ಅಸಾಧ್ಯವಾದ ಕೆಲಸವನ್ನು ಸಾಧ್ಯ ಎನ್ನುವುದರ ಮೂಲಕ ತೋರಿಸಿ ಕೊಟ್ಟ ಶ್ರೀವಿನಾಯಕ ಯುವಕ ಮಂಡಲದ ಪದಾಧಿಕಾರಿಗಳೆ ಅತ್ಯುತ್ತಮವಾದ ಉದಾಹರಣೆ ಆಗಿದೆ.ಎಷ್ಟೋ ಸಂಘ ಸಂಸ್ಥೆಗಳು ಉದ್ಘಾಟನೆ ಪೂರ್ವದಲ್ಲೇ ಸ್ಥಗಿತಗೊಂಡಿರುವಂತಹ ಬಹಳಷ್ಟು ಉದಾಹರಣೆಗಳನ್ನು ನಾವು ನೋಡಬಹುದಾಗಿದೆ.ಇದಕ್ಕೆ ಅಪವಾದ ಎನ್ನುವುದಕ್ಕೆ ನೆಂಪು ಯುವಕ ಮಂಡಲ ಕಳೆದ 25 ವರ್ಷಗಳಿಂದ ನಿರಂತರವಾಗಿ ಸಮಾಜ ಸೇವೆ,ರಕ್ತದಾನ ಶಿಬಿರ,ವಿದ್ಯಾರ್ಥಿ ವೇತನ,ಪ್ರತಿಭಾ ಪುರಸ್ಕಾರ ನಿಡುವುದರ ಮುಖೇನ ಅನೇಕ ಸಮಾಜ ಮುಖಿ ಕಾರ್ಯಗಳನ್ನು ಮಾಡುವುದರ ಮೂಲಕ ಸಾಮಾಜಿಕ ಕಾರ್ಯಗಳನ್ನು ಕೈಗೊಂಡಿರುವುದು ಶ್ಲಾಘನೀಯ ವಾದದ್ದು ಎಂದು ಹೇಳಿದರು.ಪ್ರಪಂಚದಲ್ಲೆ ಯುವ ಶಕ್ತಿಯನ್ನು ಹೊಂದಿರುವ ದೇಶ ನಮ್ಮದು ಆಗಿದೆ.ಯುವ ಜನತೆ ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಲು ಮೋದಿ ಸರಕಾರ ಬಹಳಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.
ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಅವರು ಮಾತನಾಡಿ,ಯಾವ ಒಂದು ಊರಿನಲ್ಲಿ ವಿದ್ಯೆಯನ್ನು ಪೂಜಿಸುತ್ತಾರೊ ಆ ಊರು ಯಾವತ್ತೂ ಹಿಂದೆ ಬೀಳಲು ಸಾಧ್ಯವಿಲ್ಲ,ಬೈಂದೂರು ಕ್ಷೇತ್ರದಲ್ಲಿ ಶಿಕ್ಷಣ ಕ್ರಾಂತಿ ಆಗಿರುವುದು ಬಹಳಷ್ಟು ಸಂತೋಷದ ವಿಚಾರವಾಗಿದೆ.ತಮ್ಮ ಊರಿನ ಶಾಲೆಗಳನ್ನು ಅಭಿವೃದ್ಧಿಗೊಳಿಸಲು ಊರಿನವರು ಮುಂದೆ ಬರುತ್ತಿರುವುದರಿಂದ ಬಾಗಿಲು ಮುಚ್ಚುವಂತಹ ಶಾಲೆಗಳು ಬೆಳಕನ್ನು ಕಾಣುತ್ತಿದೆ ಎಂದು ಹೇಳಿದರು.ನೆಂಪುವಿನ ಕಂಪನ್ನು ನೋಡಿದರೆ ನೆಂಪುವಿಗೆ ನೆಂಪು ಸಾಟಿ ಎಂದು ಬಣ್ಣಿಸಿದರು.
ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ,ತಮ್ಮ ಗ್ರಾಮದ ಅಭಿವೃದ್ಧಿ ಬಗ್ಗೆ ತಮ್ಮೂರಿನಲ್ಲಿ ನಡೆಯುತ್ತಿರುವ ಕಾರ್ಯಕ್ರಮದ ಬಗ್ಗೆ ಒಗ್ಗಟ್ಟಿನ ಕೆಲಸವನ್ನು ತೋರಿಸುತ್ತಿರುವುದು ಎಲ್ಲರಿಗೂ ಮಾದರಿ ಆಗಿದೆ ಎಂದು ಬಣ್ಣಿಸಿದರು.ಒಂದು ಕ್ಷೇತ್ರ ಅಭಿವೃದ್ಧಿಗೊಳ್ಳಬೇಕಾದರೆ ಅದರ ಬಗ್ಗೆ ಸ್ಪಷ್ಟವಾದ ಕಲ್ಪನೆ ಇರಬೇಕು ಆ ನಿಟ್ಟಿನಲ್ಲಿ ಸಂಸದರು ಶಾಸಕರ ಕಾರ್ಯವೈಖರಿ ಜನಮೆಚ್ಚುಗೆಗೆ ಪಾತ್ರವಾಗಿದೆ ಎಂದು ಹೇಳಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ರಜತ ಪುರಸ್ಕಾರ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿ,ನೆಂಪು ಗ್ರಾಮಸ್ಥರು ಮಾಡಿದಂತಹ ಸನ್ಮಾನ ನನಗೆ ಸಿಕ್ಕಿದ್ದ ರಾಜ್ಯೋತ್ಸವ ಪ್ರಶಸ್ತಿಗಿಂತಲೂ ದೊಡ್ಡದಾಗಿದೆ.ಹಿರಿಯರಿಗೆ ಇವೊಂದು ಪ್ರಶಸ್ತಿ ನೀಡಿ ಎಂದಿದ್ದರೂ ನನ್ನ ಮೇಲಿ ಅಭಿಮಾನದಿಂದ ನನಗೆ ನೀಡಿದ್ದಾರೆ ಇದು ನನ್ನ ಸೌಭಾಗ್ಯ ಎಂದರು.ನಾವು ಸಂಪಾದನೆ ಮಾಡಬೇಕು ಆದರೆ ಆ ಸಂಪತ್ತು ನಮ್ಮ ಮಕ್ಕಳಿಗೆ ಆಸ್ತಿಯಾಗಿರ ಬಾರದು.ಮಕ್ಕಳಿಗೆ ಶಿಕ್ಷಣ ಕೊಟ್ಟಾಗ ಮಾತ್ರ ಅವರು ತಮ್ಮ ಜೀವನವನ್ನು ಕಂಡುಕೊಳ್ಳಲು ಸಾಧ್ಯವಿದೆ.ಮಕ್ಕಳಿಗೆ ವಿದ್ಯೆ ಕೊಡಿಸಿ ಆದರೆ ಮಕ್ಕಳಿಗಾಗಿ ಸಂಪತ್ತನ್ನು ಕೂಡಿಡಬೇಡಿ ಎಂದು ಕಿವಿ ಮಾತು ಹೇಳಿದರು.
ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಮ್ಯಾನೇಂಜಿಗ್ ಟ್ರಸ್ಟಿ ಡಾ.ಗೋವಿಂದ ಬಾಬು ಪೂಜಾರಿ ಮಾತನಾಡಿ ಶುಭಹಾರೈಸಿದರು.
ಸಮಾಜ ಸೇವಕ ಉದ್ಯಮಿಗಳಾದ ಸೀತಾರಾಮ ಶೆಟ್ಟಿ ನೆಂಪು,ದಾನಿಗಳಾದ ಶ್ರೀನಿವಾಸ್ ಮೆಂಡನ್ ಬಳ್ಳಿಹಿತ್ಲು,ಶಿವರಾಮ್ ಮಂಗಲಸನಕಟ್ಟೆ ಅವರಿಗೆ ಹೂಟ್ಟೂರ ಸನ್ಮಾನ ಮಾಡಲಾಯಿತು.ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.
ಶ್ರೀವಿನಾಯಕ ಯುವಕ ಸಂಘ ನೆಂಪು ಅಧ್ಯಕ್ಷ ಅರುಣ ಮೊಗವೀರ ಅಧ್ಯಕ್ಷತೆ ವಹಿಸಿದ್ದರು.ನಿವೃತ್ತ ನಿರ್ದೇಶಕರು ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ ಕರ್ನಾಟಕ ಸರಕಾರ ಬಿ.ಎನ್. ಶೆಟ್ಟಿ ಬಗ್ವಾಡಿ ಮೆತ್ತಿನಮನೆ,ಉದ್ಯಮಿ ಮೊಹಮ್ಮದ್ ಇರ್ಷಾದ್,ಕೃಷ್ಣ ಪೈಪ್ ಭಾಸ್ಕರ ನಾಯ್ಕ ನೇರಳಕಟ್ಟೆ,ಉದ್ಯಮಿ ದಯಾನಂದ ಶ್ರೀಯಾನ್ ಮಂಕಿ,ಪ್ರವೀಣ್ ಕುಮಾರ್ ಶೆಟ್ಟಿ ನಿಡಗೋಡು ಉಳ್ಳೂರು,ರಜತ ಮಹೋತ್ಸವ ಸಮಿತಿ ಅಧ್ಯಕ್ಷ ಗೋಪಾಲ ನಾಯ್ಕ್ ಶಾರಾಳ,ನೆಂಪು ಶಾಲೆ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷ ಕುಮಾರ್ ಶೆಟ್ಟಿ ನೆಂಪು,ಕಾಲೇಜಿನ ಪ್ರಿನ್ಸಿಪಾಲ್ ರಾಜೀವ ನಾಯ್ಕ್,ಶ್ರೀವಿನಾಯಕ ಯುವ ಸಂಘ ಸ್ಥಾಪಕಾಧ್ಯಕ್ಷ ಚಂದ್ರಶೇಖರ ಶೆಟ್ಟಿ ನೀರ್ಕೊಡ್ಲು,ಕೃಷ್ಣಪ್ರಸಾದ್ ಅಡ್ಯಂತಾಯ,ಲಕ್ಷ್ಮಣ್ ಉದ್ಯಮಿ,ರಾಜು ಮೆಂಡನ್ ಬಳಿಹಿತ್ಲು,ಮುಂಬೈ ಉದ್ಯಮಿ ಭಾಸ್ಕರ್ ಮೆಂಡನ್,ಶಾಂತರಾಮ್ ಶೆಟ್ಟಿ,ಕರ್ಕುಂಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಬಿಜ್ರಿ ರಾಜೀವ ಶೆಟ್ಟಿ,ದಿವಾಕರ ಆಚಾರ್ಯ,ಶ್ರೀವಿನಾಯಕ ಯುವಕ ಸಂಘ ನೆಂಪು ಗೌರವಾಧ್ಯಕ್ಷ ಜಗದೀಶ ಎಮ್ ನೆಂಪು ಉಪಸ್ಥಿತರಿದ್ದರು.ಶಶಿಧರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ,ಸ್ವಾಗತಿಸಿದರು.ದಾಮೋದರ ಶರ್ಮ ಮತ್ತು ಮಂಜುನಾಥ ನಿರೂಪಿಸಿದರು.
ವರದಿ: ಜಗದೀಶ ದೇವಾಡಿಗ ಮುಳ್ಳಿಕಟ್ಟೆ
ಕುಂದಾಪುರ:ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಜಿಲ್ಲಾ ಸಮಿತಿ ಉಡುಪಿ ವತಿಯಿಂದ ನವಚೇತನ ಸಮಾವೇಶ ಹಾಗೂ ಕುಂದಾಪುರ ತಾಲೂಕು…
ಉಡುಪಿ:ನೀಲಾವರದಲ್ಲಿ ಮನೆಗೆ ಸಿಡಿಲು ಬಡಿದ ಪರಿಣಾಮ ಮನೆಯಲ್ಲಿನ ಎಲೆಕ್ಟ್ರಾನಿಕ್ ಉಪಕರಣಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿ ಹೋಗಿದ್ದು ಲಕ್ಷಾಂತರ ರೂಪಾಯಿ ನಷ್ಟ…
ಮಂಗಳೂರು:ಫೆಂಗಲ್ ಚಂಡಮಾರುತದ ಹಿನ್ನೆಲೆಯಲ್ಲಿ ದ.ಕ ಜಿಲ್ಲೆಯಲ್ಲಿ ಸೋಮವಾರ ಭಾರಿ ಮಳೆಯಾಗಿದೆ.ಹವಾಮಾನ ವೈಪರಿತ್ಯ ದಿಂದಾಗಿ ಏಕಾಏಕಿ ಸುರಿದ ವರುಣನ ಅಬ್ಬರಕ್ಕೆ ಜಿಲ್ಲೆಯ…
ಕುಂದಾಪುರ: ಕೃಷಿಕರಾದ ನಾವುಂದ ಕಾರಂತರ ಹಿತ್ತಲು ಸೂರ ಪೂಜಾರಿಯವರ ಮನೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ಭತ್ತವನ್ನು ಶೇಕರಿಸಿಡುವ ಕುಂದಾಪುರದ ಆಡು ಭಾಷೆಯಲ್ಲಿ…
https://youtu.be/Nuq2NNGkcP4?si=GBDHfmSHQBwcQO7R ಕುಂದಾಪುರ:ಬೆಳ್ವೆ ಸಮೀಪದ ಗೊಮ್ಮೋಲ್ಚರ್ಚ್ ಹಿಂಭಾಗದಿಂದಒಳ್ಳೆ ಹೊಂಡ ಕಜ್ಕೆ ಸಂತೆಕಟ್ಟೆ ಸಂಪರ್ಕದ ಒಳ್ಳೆ ಹೊಂಡ ಬಳಿಕಿಂಡಿ ಅಣೆಕಟ್ಟಿನ ಮೇಲ್ಭಾಗದಲ್ಲಿ ಮಧ್ಯಾಹ್ನದ…
https://youtu.be/Nuq2NNGkcP4?si=GBDHfmSHQBwcQO7R ಕುಂದಾಪುರ:2000 ಇಸವಿಯಲ್ಲಿ ಆರಂಭಗೊಂಡಿರುವ ಡಾನ್ ಬಾಸ್ಕೊ ತ್ರಾಸಿ-ಹೊಸಾಡು ಸಂಸ್ಥೆಗೆ 25 ವರ್ಷ ತುಂಬಿರುವುದರಿಂದ ಸಂಸ್ಥೆಯ ರಜತ ಮಹೋತ್ಸವ ಕಾರ್ಯಕ್ರಮವನ್ನು…