ಕುಂದಾಪುರ

ಸಂಪರ್ಕ ರಸ್ತೆ,ಚರಂಡಿ ದುರಸ್ತಿಗೊಳಿಸುವಂತೆ ಗಂಗೊಳ್ಳಿಯಲ್ಲಿ ಮೌನ ಪ್ರತಿಭಟನೆ

Share

ಕುಂದಾಪುರ:ತಾಲೂಕಿನ ಗಂಗೊಳ್ಳಿ ಪಂಜುರ್ಲಿ ದೇವಸ್ಥಾನದ ಬಳಿ ಹಾದು ಹೋಗಿರುವ ತೆರೆದ ಬೃಹತ್ ಚರಂಡಿಯನ್ನು ದುರಸ್ಥಿಗೊಳಿಸುವಂತೆ ಹಾಗೂ ಪಂಜುರ್ಲಿ ದೇವಸ್ಥಾನಕ್ಕೆ ದಾರಿ ಕಲ್ಪಿಸುವಂತೆ ಆಗ್ರಹಿಸಿ ಗಂಗೊಳ್ಳಿ ಕಳುವಿನಬಾಗಿಲು ಚರಂಡಿ ಬಳಿ ಸ್ಥಳೀಯರು ಮತ್ತು ಮಕ್ಕಳು ಪೋಸ್ಟರ್ ಹಿಡಿದು ಬೃಹತ್ ಪ್ರತಿಭಟನೆಯನ್ನು ಭಾನುವಾರ ನಡೆಸಿದರು.
ಗಂಗೊಳ್ಳಿ ಗ್ರಾಮದ ದೊಡ್ಡಹಿತ್ಲು ಪಂಜುರ್ಲಿ ದೇವಸ್ಥಾನದ ಬಳಿ ಹಾದುಹೋಗಿರುವ ತೆರೆದ ಚರಂಡಿ ಕಲುಷಿತ ಕಪ್ಪು ನೀರಿನೊಂದಿಗೆ ಹರಿಯುತ್ತಿದೆ.ತೋಡಿನಲ್ಲಿ ಹರಿಯುವ ತ್ಯಾಜ್ಯ ದುರ್ನಾತ ಬೀರುತ್ತಿದೆ.ಸಾಂಕ್ರಮಿಕ ರೋಗ ಹರಡುವ ಭೀತಿ ಇದೆ.ಸೊಳ್ಳೆ ಕಡಿತದಿಂದ ಮಕ್ಕಳು ಸಂಕಟ ಪಡುತ್ತಿದ್ದಾರೆ.ಚರ್ಮ ರೋಗ ಸೇರಿದಂತೆ ಶುದ್ಧ ಗಾಳಿ ಕೊರತೆಯಿಂದ ಮಕ್ಕಳಿಗೆ ಹಾಗೂ ಹಿರಿಯರಿಗೆ ಉಸಿರಾಟ ಮಾಡಲು ಸಮಸ್ಯೆ ಆಗುತ್ತಿದೆ ಎಂದು ದೂರಿರುವ ನಾಗರಿಕರು ಚರಂಡಿ ದುರಸ್ತಿಗಾಗಿ ಹೋರಾಟವನ್ನು ಕೈಗೊಂಡಿದ್ದಾರೆ.ಪಂಜುರ್ಲಿ ದೇವಸ್ಥಾನಕ್ಕೆ ಸಂಪರ್ಕ ರಸ್ತೆ ಕಲ್ಪಿಸಬೇಕ್ಕೆನ್ನುವುದು ಸ್ಥಳೀಯರ ಆಗ್ರಹವಾಗಿದ್ದು ಬಿಡುಗಡೆ ಆಗಿರುವ ಅನುದಾನವನ್ನು ಬಳಸಿಕೊಂಡು ಚರಂಡಿ ಅಭಿವೃದ್ಧಿ ಕಾರ್ಯ ಸಹಿತ,ರಸ್ತೆ ಸಂಪರ್ಕ ವ್ಯವಸ್ಥೆ ಕಲ್ಪಿಸಬೇಕ್ಕೆನ್ನುವುದು ಗಂಗೊಳ್ಳಿ ಗ್ರಾಮದ ಜನರ ಬಹು ಕಾಲದ ಬೇಡಿಕೆ ಆಗಿದೆ.ಸಮರ್ಪಕ ರೀತಿಯಲ್ಲಿ ಸಮಸ್ಯೆಗೆ ಪರಿಹಾರ ದೊರಕದೆ ಇದ್ದಲ್ಲಿ ಚುನಾವಣೆ ಬಹಿಷ್ಕಾರ ಮಾಡಲಾಗುದೆಂದು ಸ್ಥಳೀಯರು ತಿಳಿಸಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ತಹಶೀಲ್ದಾರ್ ಭೇಟಿ:ಚರಂಡಿ ಅಭಿವೃದ್ಧಿ ಹಾಗೂ ಗಂಗೊಳ್ಳಿ ಪಂಜುರ್ಲಿ ದೇವಸ್ಥಾನಕ್ಕೆ ಸಂಪರ್ಕ ರಸ್ತೆ ಕಲ್ಪಿಸುವಂತೆ ಸ್ಥಳೀಯರು ಕೈಗೊಂಡಿದ್ದ ಪ್ರತಿಭಟನಾ ಸ್ಥಳಕ್ಕೆ ಕುಂದಾಪುರ ತಹಶೀಲ್ದಾರ್ ಶೋಭಾ ಲಕ್ಷ್ಮೀ ಅವರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿ,ದಾಖಲೆಗಳನ್ನು ಪರಿಶೀಲಿಸಿ ಒಂದು ವಾರದೊಳಗೆ ಬಿಡುಗಡೆ ಆಗಿರುವ ಅನುದಾನದಿಂದ ಕಾಮಗಾರಿಗೆ ಚಾಲನೆ ನೀಡಲು ಕ್ರಮ ಕೈಗೊಳ್ಳಲಾಗುವುದೆಂದು ಭರವಸೆಯನ್ನು ನೀಡಿದರು.ತಮ್ಮ ಬೇಡಿಕೆಗಳ ಕುರಿತು ಗ್ರಾಮಸ್ಥರು ತಹಶೀಲ್ದಾರ್‍ಗೆ ಮನವಿಯನ್ನು ಸಲ್ಲಿಸಿದರು.ಈ ಸಂದರ್ಭದಲ್ಲಿ ಗಂಗೊಳ್ಳಿ ಪಂಚಾಯಿತಿ ಪಿಡಿಒ ಉಮಾಶಂಕರ,ಸ್ಥಳೀಯರಾದ ನವಿನ ಗಂಗೊಳ್ಳಿ,ಯಶವಂತ ಗಂಗೊಳ್ಳಿ,ಸ್ಥಳೀಯರು ಉಪಸ್ಥಿತರಿದ್ದರು.ಗಂಗೊಳ್ಳಿ ಪೆÇಲೀಸ್ ಠಾಣೆಯಿಂದ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ಪೋಸ್ಟರ್ ಅಭಿಯಾನ:ರಸ್ತೆ ಸಂಪರ್ಕ ವ್ಯವಸ್ಥೆ ಹಾಗೂ ಚರಂಡಿ ಅಭಿವೃದ್ಧಿ ಕಾರ್ಯ ಕೈಗೊಳ್ಳುವಂತೆ ಕಳೆದ ಒಂದು ವಾರದ ಸಾರ್ವಜನಿಕರು ಪೆÇೀಸ್ಟರ್ ಅಭಿಯಾನವನ್ನು ಕೈಗೊಂಡಿದ್ದರು.ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಸೇರಿರುವುದು ವಿಶೇಷವಾಗಿತ್ತು.

Advertisement

Share
Team Kundapur Times

Recent Posts

ತ್ರಾಸಿ-ಮರವಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ:ಮೂರು ಸಾವುಕುಂದಾಪುರ:ತ್ರಾಸಿ ಮರವಂತೆ ಬೀಚ್ ಮುಂಭಾಗ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬುಧವಾರ ಸಂಭವಿಸಿದ…

1 month ago

ಲಾರಿಗೆ ಕಾರು ಡಿಕ್ಕಿ:ನೆಲಮಂಗಲ ಮೂಲದ ಇಬ್ಬರು ಸಾವು

ಕುಂದಾಪುರ:ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೈಂದೂರು ತಾಲೂಕಿನ ನಾವುಂದ ಮಸ್ಕಿಯಲ್ಲಿ…

3 months ago

ಏಪ್ರಿಲ್ 12 ರಂದು ಅರಾಟೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಏಕಪವಿತ್ರ ನಾಗಮಂಡಲೋತ್ಸವ

ಕುಂದಾಪುರ:ತಾಲೂಕಿನ ಹೊಸಾಡು ಗ್ರಾಮದ ಅರಾಟೆ ಚಿತ್ತೇರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಏಪ್ರಿಲ್ 12 ರ ಭಾನುವಾರ ದಂದು ನಡೆಯಲಿರುವ ಶ್ರೀ…

3 months ago

ಎಸ್ಐ ನಾಸೀರ್ ಹುಸೇನ್ ಕುಸಿದು ಬಿದ್ದು ಮೃತ್ಯು

ಕುಂದಾಪುರ:ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಕರ್ನಾಟಕ ಪೊಲೀಸ್ ರನ್ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ…

3 months ago

ನಿರ್ದೇಶಕರಾಗಿ ಸುರೇಂದ್ರ ಗುಡ್ಡೆಹೋಟೆಲ್ ಆಯ್ಕೆ

ಕುಂದಾಪುರ:ರಾಜ್ಯ ಸರಕಾರಿ ಶಿಕ್ಷಕರ ನೌಕರರ ಹಾಗೂ ಇಲಾಖೆಯಲ್ಲಿನ ಇತರರ ಗೃಹ ನಿರ್ಮಾಣ ಸಹಕಾರ ಸಂಘ (ನಿ) ಬೆಂಗಳೂರು ಅದರ ರಾಜ್ಯ…

3 months ago

ಧಾರ್ಮಿಕ ಮುಖಂಡ ಅಪ್ಪಣ್ಣ ಹೆಗ್ಡೆ ವಿಧಿವಶ

ಕುಂದಾಪುರ:ಮಾಜಿ ಎಂಎಲ್ಎ ಧಾರ್ಮಿಕ ಮುಖಂಡ ಅಜಾತಶತ್ರು ಅಪ್ಪಣ್ಣ ಹೆಗ್ಡೆ ಶನಿವಾರ ವಿಧಿವಶರಾಗಿದ್ದಾರೆ.ನೂರಕ್ಕೂ ಅಧಿಕ ನಾಗಮಂಡಲದ ನೇತೃತ್ವವನ್ನು ವಹಿಸಿಕೊಡಿದ್ದ ಅವರು, ಹಲವು…

4 months ago