ಕುಂದಾಪುರ:ತಾಲೂಕಿನ ಪ್ರಸಿದ್ಧ ಕಾರಣಿಕ ಕ್ಷೇತ್ರವಾದ ಹೊಸಾಡು ಗ್ರಾಮದ ಅರಾಟೆ ಒಳನಾಡು ಶ್ರೀಸ್ವಾಮಿಲಿಂಗ ಮತ್ತು ಸಪರಿವಾರ ದೈವಗಳ ಮಹಿಮೆ ಕುರಿತು ಸದಾಶಿವ ಎನ್ ಮೊಗವೀರ ಅವರ ರಚನೆಯಲ್ಲಿ ಮೂಡಿ ಬಂದಿರುವ ನಾಗಬನದ ನಾಗಪ್ಪನ ಮಹಿಮೆ ಮಹಿಮೆ ಎಂಬ ವಿಶೇಷವಾದ ಧ್ವನಿ ಸುರುಳಿಯನ್ನು ದೈವಸ್ಥಾನದ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅದ್ಧೂರಿಯಾಗಿ ಮಂಗಳವಾರ ಬಿಡುಗಡೆ ಮಾಡಲಾಯಿತು.ಶ್ರೀ ಸ್ವಾಮಿಲಿಂಗ ಮತ್ತು ಪರಿವಾರ ದೈವಸ್ಥಾನದ ವಾರ್ಷಿಕ ಉತ್ಸವದ ಅಂಗವಾಗಿ ವಿದ್ಯಾರ್ಥಿಗಳಿಂದ ನೃತ್ಯ ವೈಭವ,ಸಂಗೀತ ರಸಮಂಜರಿ ಕಾರ್ಯಕ್ರಮ ಹಾಗೂ ವಿದ್ಯಾರ್ಥಿ ವೇತನ ಮತ್ತು ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.
ಆನಂದ ಮೊಗವೀರ ಮಾತನಾಡಿ,ನೂರಾರು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ಸಿರಿ ಸಿಂಗಾರ ಕೋಲ ಸೇವೆಯನ್ನು ಊರಿನವರ ಸಹಕಾರ ಮತ್ತು ದೈವವನ್ನು ನಂಬಿದ ಕುಟುಂಬಸ್ಥರ ಸಹಕಾರದಿಂದ ಆಚರಿಸಿಕೊಂಡು ಬರಲಾಗುತ್ತಿದೆ.ಯುವ ಪ್ರತಿಭೆ ಸದಾಶಿವ ಮೊಗವೀರ ಅವರು ರಚಿಸಿರುವ ನಾಗಬನದ ನಾಗಪ್ಪನ ಮಹಿಮೆ ಎಂಬ ಧ್ವನಿ ಸುರಿಯನ್ನು ಈಗಾಗಲೇ ಬಿಡುಗಡೆ ಮಾಡಲಾಗಿದ್ದು ಅದ್ಭುತವಾಗಿ ಮೂಡಿ ಬಂದಿದೆ.ಸಂಗೀತ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡುವಂತಹ ಭಾಗ್ಯವನ್ನು ದೇವರು ಅವರಿಗೆ ಕುರುಣಿಸಲಿ ಎಂದು ಹಾರೈಸಿದರು.
ನಾಗಬನದ ನಾಗಪ್ಪನ ಮಹಿಮೆ ಕುರಿತು ಸಂಗೀತವನ್ನು ರಚನೆ ಮಾಡಿರುವ ಸದಾಶಿವ ಮೊಗವೀರ ಮಾತನಾಡಿ,ಸ್ವಾಮಿಲಿಂಗ ಎನ್ನುವ ಹಾಡನ್ನು ಮೊದಲ ಬಾರಿಗೆ ರಚನೆ ಮಾಡಲಾಗಿದ್ದು ದೇವರ ಕೃಪೆಯಿಂದ ಎರಡನೇ ಬಾರಿಗೆ ಶೂಲದ ಹೈಗುಳಿ ಎನ್ನುವ ಸಂಗೀತವನ್ನು ರಚನೆ ಮಾಡಿದ್ದೇನೆ ಈ ಹಿಂದೆ ರಚಿಸಿರುವ ಎರಡು ಧ್ವನಿ ಸುರುಳಿಗಳು ಯಶಸ್ವಿಯಾಗಿ ಮೂಡಿ ಬಂದಿದೆ ಎಲ್ಲರ ಸಹಕಾರದಿಂದ ಮೂರನೇ ಧ್ವನಿ ಸುರುಳಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದ್ದು ಎಲ್ಲರೂ ಪ್ರೋತ್ಸಾಹ ನೀಡಬೇಕೆಂದು ಕೇಳಿಕೊಂಡರು.
ಸದಾಶಿವ ಮೊಗವೀರ ಅವರು ರಚಿಸಿರುವ ನಾಗಬನದ ನಾಗಪ್ಪನ ಮಹಿಮೆ ಧ್ವನಿ ಸುರುಳಿಯನ್ನು ಮಂಜುನಾಥ್ ನಾಯ್ಕ್ ಅವರು ಬಿಡುಗಡೆಗೊಳಿಸಿದರು.ಸದಾಶಿವ ಮೊಗವೀರ ಅವರ ಸಾಹಿತ್ಯದಲ್ಲಿ ಮೂಡಿ ಬಂದಿರುವ 3ನೇ ಧ್ವನಿ ಸುರುಳಿಯಾಗಿದೆ.ಈ ಸಂದರ್ಭದಲ್ಲಿ ಸಂಗೀತ ರಚನೆಗೆ ಸಹಕರಿಸಿದ ಮಹೇಂದ್ರ ಗೌಡ,ಬಾಲು ಮಾಸ್ಟರ್ ಹಾಗೂ ಸದಾಶಿವ ಮೊಗವೀರ ಅವರನ್ನು ದೈವಸ್ಥಾನದ ಮೊಕ್ತೇಸರರಾದ ಕೃಷ್ಣ ಚೆಂದನ್ ಅವರು ಸನ್ಮಾನಿಸಿದರು.ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಸಾಧಕ ವಿದ್ಯಾರ್ಥಿಗಳಾದ ವೈಷ್ಣವಿ,ಯಶೋಧರ,ನವ್ಯಶ್ರೀ ಹಾಗೂ ಸೈನಿಕ ಶ್ರೀನಾಥ್ ನಾಯ್ಕ್ ಅವರನ್ನು ಗೌರವಿಸಲಾಯಿತು.ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಕೃಷ್ಣ ಚೆಂದನ್ ಅಧ್ಯಕ್ಷತೆ ವಹಿಸಿದ್ದರು,ಈ ಸಮಯದಲ್ಲಿ ಗಣೇಶ ಚೆಂದನ್,ಆನಂದ ನಾಯ್ಕ್,ಭಾಸ್ಕರ ಎಂ ನಾಯ್ಕ್,ನರಸಿಂಹ ನಾಯ್ಕ್,ಸುರೇಶ ಪಾತ್ರಿ,ನಾಗರಾಜ ಪಾಣನರ,ಪ್ರಶಾಂತ ನಾಯ್ಕ್,ಗುರುರಾಜ್,ಶಿವರಾಜ್,ಯೋಗೀಶ್,ಜಗದೀಶ,ಮಂಜುನಾಥ ನಾಯ್ಕ್ ಉಪಸ್ಥಿತರಿದ್ದರು.
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿನ ಬಿ.ಸಿ.ಎ ವಿಭಾಗದ ವತಿಯಿಂದ ಎಲೆವೆಂಶಿಯಾ 2ಕೆ24 ಫೆಸ್ಟ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.ರೋಬೊಸಾಫ್ಟ್…
ಉಡುಪಿ:ಜಿಲ್ಲೆಯ ಹೆಬ್ರಿ ತಾಲೂಕಿನ ಹೆಬ್ರಿ ಕಬ್ವಿನಾಲೆ ಸೀತಂಬೈಲುವಿನಲ್ಲಿ ಸೋಮವಾರ ರಾತ್ರಿ ಎ ಎನ್ ಎಫ್ ಹಾಗೂ ನಕ್ಸಲರ ನಡುವೆ ನಡೆದ…
ಕುಂದಾಪುರ:ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕುಂದಾಪುರ,ಕರ್ನಾಟಕ ಪ್ರೌಢ ಶಾಲಾ ಸಹಶಿಕ್ಷಕರ ಸಂಘ ಕುಂದಾಪುರ ತಾಲೂಕು ಘಟಕ…
ಮುಳ್ಳಿಕಟ್ಟೆ:ಕುಂದಾಪುರ ದಿಂದ ಅರಾಟೆಗೆ ಸಾಗುತ್ತಿದ್ದ ಆಟೋ ರಿಕ್ಷಾಕ್ಕೆ ಮುಳ್ಳಿಕಟ್ಟೆ ಸರ್ಕಲ್ ನಲ್ಲಿ ತ್ರಾಸಿ ಕಡೆಯಿಂದ ಕುಂದಾಪುರ ಕಡೆಗೆ ಸಾಗುತ್ತಿದ್ದ ಕಾರು…
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಮತ್ತು ಕುಂದಾಪುರ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ರಕ್ತದಾನ ಶಿಬಿರ ಕಾರ್ಯಕ್ರಮ…
ಜನತಾ ಆವಿಷ್ಕಾರ ಕಾರ್ಯಕ್ರಮದಲ್ಲಿ ತುಂಬಿದ ವಿದ್ಯಾರ್ಥಿ ಸಮೂಹ ಜನತಾ ಪದವಿ ಪೂರ್ವ ಕಾಲೇಜು ಹೆಮ್ಮಾಡಿ ಹೆಮ್ಮಾಡಿ:ಜಗತ್ತು ಇಂದು ವ್ಯಾವಹಾರಿಕವಾಗಿ ಮುನ್ನಡೆಯುತ್ತಿದ್ದು.ವಿದ್ಯಾರ್ಥಿಗಳು…