ಕುಂದಾಪುರ:ಅಕಾಲಿಕವಾಗಿ ಸುರಿದ ಬಾರಿ ಮಳೆಗೆ ಬೈಂದೂರು ತಾಲೂಕಿನ ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡಾಕೆರೆ,ನಾಡ,ತಾರಿಬೇರು,ಜಡ್ಡಾಡಿ,ಕಡಿಕೆ,ಕೋಣ್ಕಿ ಹಾಗೂ ಹೆಮ್ಮಾಡಿ ಭಾಗದಲ್ಲಿ ಕೃಷಿ ನಷ್ಟ ಉಂಟಾಗಿದೆ.ಜಾನುವಾರುಗಳ ಬೈಹುಲ್ಲು ಬೈಲಿನಲ್ಲಿ ಕೊಳೆಯುತ್ತಿದೆ.
ಹವಾಮಾನ ವೈಪರಿತ್ಯದಿಂದಾಗಿ ಭಾನುವಾರ ಕುಂದಾಪುರ ಮತ್ತು ಬೈಂದೂರು ತಾಲೂಕಿನಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಭತ್ತ ಬೆಳೆಗೆ ಸಂಕಷ್ಟ ಎದುರಾಗಿದ್ದು ಮಳೆ ಕಾರಣದಿಂದ ಸಮಯಕ್ಕೆ ಸರಿಯಾಗಿ ಕೊಯ್ಲು ಮಾಡದೆ ಫಸಲು ಭರಿತ ಬೆಳೆ ಬೈಲಿನಲ್ಲಿ ನಶೀಸುತ್ತಿದೆ.ಭತ್ತದ ಬೆಳೆಗೆ ಅವಶ್ಯಕವಾಗಿರುವ ಸಂದರ್ಭ ಮಳೆ ಕೈಕೊಟ್ಟಿದ್ದು ಕೊಯ್ಲು ಸಮಯದಲ್ಲಿ ಮಳೆ ಎಡಬಿಡದೆ ಸುರಿಯುತ್ತಿದೆ.ಕೊಯ್ಲು ಮಾಡಿದ ಬೈಹುಲ್ಲು ನೀರಿನಲ್ಲಿ ಮುಳುಗಿದ್ದು ಜಾನುವಾರುಗಳಿಗೆ ಅಗತ್ಯವಾಗಿರುವ ಒಣ ಹುಲ್ಲು ಮಳೆ ಅಪೋಷಣೆ ಗೈಯುತ್ತಿದೆ.ನಾಡ ಗ್ರಾಮ ಪಂಚಾಯತ್ ವ್ಯಾಪ್ತಿ ಪ್ರದೇಶ ಒಂದರಲ್ಲೇ ಹತ್ತಾರು ಎಕರೆ ಕೃಷಿ ಭೂಮಿಯಲ್ಲಿ ಕೊಯ್ಲು ಮಾಡಿದ ಬೈಹುಲ್ಲು ನೀರಿನಲ್ಲಿ ಕೊಳೆಯುತ್ತಿದೆ ಹೈನುಗಾರಿಕೆಯಲ್ಲಿ ತೊಡಗಿ ಕೊಂಡಿರುವ ಕೃಷಿಕರ ಪಾಡು ಕಷ್ಟದ ಪರಿಸ್ಥಿತಿಗೆ ಸಿಲುಕಿದೆ.ಭತ್ತದ ಪೈರು ಒಣಗಿ ಸೊರಗಿ ಹೋಗಿದ್ದು ತೆನೆಗಳು ನೆಲಕ್ಕೆ ಉದುರಿ ಬೀಳುವ ಹಂತಕ್ಕೆ ತಲುಪಿದೆ.
ಕುಂದಾಪುರ:ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೈಂದೂರು ತಾಲೂಕಿನ ನಾವುಂದ ಮಸ್ಕಿಯಲ್ಲಿ…
ಕುಂದಾಪುರ:ತಾಲೂಕಿನ ಹೊಸಾಡು ಗ್ರಾಮದ ಅರಾಟೆ ಚಿತ್ತೇರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಏಪ್ರಿಲ್ 12 ರ ಭಾನುವಾರ ದಂದು ನಡೆಯಲಿರುವ ಶ್ರೀ…
ಕುಂದಾಪುರ:ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಕರ್ನಾಟಕ ಪೊಲೀಸ್ ರನ್ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ…
ಕುಂದಾಪುರ:ರಾಜ್ಯ ಸರಕಾರಿ ಶಿಕ್ಷಕರ ನೌಕರರ ಹಾಗೂ ಇಲಾಖೆಯಲ್ಲಿನ ಇತರರ ಗೃಹ ನಿರ್ಮಾಣ ಸಹಕಾರ ಸಂಘ (ನಿ) ಬೆಂಗಳೂರು ಅದರ ರಾಜ್ಯ…
ಕುಂದಾಪುರ:ಮಾಜಿ ಎಂಎಲ್ಎ ಧಾರ್ಮಿಕ ಮುಖಂಡ ಅಜಾತಶತ್ರು ಅಪ್ಪಣ್ಣ ಹೆಗ್ಡೆ ಶನಿವಾರ ವಿಧಿವಶರಾಗಿದ್ದಾರೆ.ನೂರಕ್ಕೂ ಅಧಿಕ ನಾಗಮಂಡಲದ ನೇತೃತ್ವವನ್ನು ವಹಿಸಿಕೊಡಿದ್ದ ಅವರು, ಹಲವು…
ಕುಂದಾಪುರ:ಕಾಂಗ್ರೆಸ್ ಪಕ್ಷದ ಮುಖಂಡರಾದ,ಪ್ರಬಲ ರಾಜಕಾರಣಿ,ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ ತ್ರಾಸಿ ಸೋಮವಾರ ನಿಧನರಾದರು.ಅವರು ಪತ್ನಿ ಮಕ್ಕಳು, ಬಂದು…