ಕುಂದಾಪುರ

ನಾಡ:ಐಶ್ವರ್ಯ ಫೈನಾನ್ಸ್ & ಇನ್ವೆಸ್ಟ್‍ಮೆಂಟ್ಸ್ ನೂತನ ಕಛೇರಿ ಉದ್ಘಾಟನೆ

Share

ಕುಂದಾಪುರ:ನಾಡಗುಡ್ಡೆಅಂಗಡಿ ಎಸ್‍ಪಿ ಪಾರ್ಕ್‍ನ ವಾಣಿಜ್ಯ ಸಂಕೀರ್ಣದ ಕಟ್ಟಡದಲ್ಲಿ ಶುಭರಂಭಗೊಂಡಿರುವ ಐಶ್ವರ್ಯ ಫೈನಾನ್ಸ್ & ಇನ್ವೆಸ್ಟ್‍ಮೆಂಟ್ಸ್ ಕಛೇರಿಯ ಉದ್ಘಾಟನಾ ಕಾರ್ಯಕ್ರಮ ನಾನಾ ಧಾಮಿರ್ಕ ವಿಧಿವಿಧಾನಗಳೊಂದಿಗೆ ಮಂಗಳವಾರ ಅದ್ದೂರಿಯಾಗಿ ನಡೆಯಿತು.ಕಛೇರಿ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.

ಪಡುಕೋಣೆ ಚರ್ಚ್ ನ ಧರ್ಮಗುರುಗಳಾದ ಫ್ರಾನ್ಸಿಸ್ ಕನೇಲಿಯಾ ಅವರು ಧಾರ್ಮಿಕ ಆಚರಣೆಗಳನ್ನು ನೆರವೇರಿಸಿ ಮಾತನಾಡಿ,ಶುಭ ಗಳಿಗೆಯಲ್ಲಿ ಕಛೇರಿ ಉದ್ಘಾಟನೆಗೊಂಡಿರುವುದು ಬಹಳಷ್ಟು ಒಳ್ಳೆಯ ವಿಚಾರವಾಗಿದೆ.ಫೈನಾನ್ಸ್ ಮಾಲೀಕರು ಮತ್ತು ಅವರ ಗ್ರಾಹಕರಿಗೆ ಶುಭವಾಗಲಿ ಎಂದು ಹಾರೈಸಿದರು.

ಐಶ್ವರ್ಯ ಫೈನಾನ್ಸ್ ಮುಖ್ಯರಸ್ಥರಾದ ಕೆನಡಿ ಪಿರೇರಾ ಅವರು ಮಾತನಾಡಿ,ಗ್ರಾಮೀಣ ಭಾಗದ ಜನರಿಗೆ ಸಾಲ,ಸೌಲಭ್ಯಗಳು ಸುಲಭವಾದ ರೀತಿಯಲ್ಲಿ ಸಿಗಬೇಕು ಎನ್ನುವ ಉದ್ದೇಶದಿಂದ 1995 ರ ಫೆಬ್ರವರಿ 15 ರಂದು ಐಶ್ವರ್ಯ ಫೈನಾನ್ಸ್ ಎಂಬ ಸಂಸ್ಥೆಯನ್ನು ಹುಟ್ಟು ಹಾಕಲಾಗಿದೆ.ನಮ್ಮ ಈ ಸಂಸ್ಥೆಗೆ 28 ವರ್ಷಗಳು ತುಂಬಿದೆ,ಜನರಿಗೆ ಉತ್ತಮವಾದ ಸೇವೆಯನ್ನು ನೀಡಿದಂತಹ ತೃಪ್ತಿ ನಮಗೆ ಇದೆ ಎಂದು ಹೇಳಿದರು.ಮುಂದಿನ ದಿನಗಳಲ್ಲಿಯೂ ಜನರಿಗೆ ಉತ್ತಮವಾದ ಸೇವೆಯನ್ನು ನೀಡಲಾಗುವುದು ಎಂದರು.

ವೆನಾನ್ಸಿಯಸ್ ಪಿರೇರಾ ಅವರು ಐಶ್ವರ್ಯ ಫೈನಾನ್ಸ್‍ನ ನೂತನ ಕಛೇರಿಯನ್ನು ಉದ್ಘಾಟಿಸಿ ಶುಭಹಾರೈಸಿದರು.ಈ ಸಂಧರ್ಭದಲ್ಲಿ ರೋಜರಿ ಸೊಸೈಟಿ ಕುಂದಾಪುರ ಅಧ್ಯಕ್ಷರಾದ ಜೋಕೊಬ್ ಡಿಸೋಜಾ,ಕುಂದಾಪುರ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಶಂಕರ ಶೆಟ್ಟಿ ಬೆಳ್ಳಾಡಿ,ವ್ಯವಸಾಯ ಸೇವಾ ಸಹಕಾರಿ ಸಂಘ ಆಲೂರು ವ್ಯವಸ್ಥಾಪಕ ಮಂಜು ಪೂಜಾರಿ,ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ,ವಿನ್ಸೆಂಟ್ ಡಿ ಸೋಜಾ ಕುಂದಾಪುರ,ಮಾಜಿ ಗ್ರಾಮ ಪಂಚಾಯತ್ ಸದಸ್ಯ ರಾಜೀವ ಶೆಟ್ಟಿ,ಕಟ್ಟಡದ ಮಾಲೀಕರಾದ ವಿಜಯ್ ಶೆಟ್ಟಿ ಮುಂಬೈ,ಗ್ರ್ರೆಗರಿ ಹೈಸ್ಕೂಲ್ ನಾಡ ಅಧ್ಯಾಪಕರಾದ ಸ್ಟಾಲಿನ್ ಪಿರೇರಾ,ಗ್ರೇಷನ್ ಕ್ರಾಸ್ತಾ ಮರವಂತೆ,ಗ್ರೆಗರಿ ಪ್ರೌಢ ಶಾಲೆ ನಾಡ ಸಂಚಾಲಕ ಸಿಲ್ವೆಸ್ಟರ್ ಅಲ್ಮೇಡಾ,ವಿಜಯ್ ಪಿರೇರಾ,ಆಶ್ಟನ್ ಲೆನಿನ್ ಪಿರೇರಾ,ಕಿರಣ್ ಲೋಬೋ ಉಪಸ್ಥಿತರಿದ್ದರು.

Advertisement

Share
Team Kundapur Times

Recent Posts

ತ್ರಾಸಿ-ಮರವಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ:ಮೂರು ಸಾವುಕುಂದಾಪುರ:ತ್ರಾಸಿ ಮರವಂತೆ ಬೀಚ್ ಮುಂಭಾಗ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬುಧವಾರ ಸಂಭವಿಸಿದ…

2 months ago

ಲಾರಿಗೆ ಕಾರು ಡಿಕ್ಕಿ:ನೆಲಮಂಗಲ ಮೂಲದ ಇಬ್ಬರು ಸಾವು

ಕುಂದಾಪುರ:ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೈಂದೂರು ತಾಲೂಕಿನ ನಾವುಂದ ಮಸ್ಕಿಯಲ್ಲಿ…

3 months ago

ಏಪ್ರಿಲ್ 12 ರಂದು ಅರಾಟೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಏಕಪವಿತ್ರ ನಾಗಮಂಡಲೋತ್ಸವ

ಕುಂದಾಪುರ:ತಾಲೂಕಿನ ಹೊಸಾಡು ಗ್ರಾಮದ ಅರಾಟೆ ಚಿತ್ತೇರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಏಪ್ರಿಲ್ 12 ರ ಭಾನುವಾರ ದಂದು ನಡೆಯಲಿರುವ ಶ್ರೀ…

3 months ago

ಎಸ್ಐ ನಾಸೀರ್ ಹುಸೇನ್ ಕುಸಿದು ಬಿದ್ದು ಮೃತ್ಯು

ಕುಂದಾಪುರ:ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಕರ್ನಾಟಕ ಪೊಲೀಸ್ ರನ್ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ…

4 months ago

ನಿರ್ದೇಶಕರಾಗಿ ಸುರೇಂದ್ರ ಗುಡ್ಡೆಹೋಟೆಲ್ ಆಯ್ಕೆ

ಕುಂದಾಪುರ:ರಾಜ್ಯ ಸರಕಾರಿ ಶಿಕ್ಷಕರ ನೌಕರರ ಹಾಗೂ ಇಲಾಖೆಯಲ್ಲಿನ ಇತರರ ಗೃಹ ನಿರ್ಮಾಣ ಸಹಕಾರ ಸಂಘ (ನಿ) ಬೆಂಗಳೂರು ಅದರ ರಾಜ್ಯ…

4 months ago

ಧಾರ್ಮಿಕ ಮುಖಂಡ ಅಪ್ಪಣ್ಣ ಹೆಗ್ಡೆ ವಿಧಿವಶ

ಕುಂದಾಪುರ:ಮಾಜಿ ಎಂಎಲ್ಎ ಧಾರ್ಮಿಕ ಮುಖಂಡ ಅಜಾತಶತ್ರು ಅಪ್ಪಣ್ಣ ಹೆಗ್ಡೆ ಶನಿವಾರ ವಿಧಿವಶರಾಗಿದ್ದಾರೆ.ನೂರಕ್ಕೂ ಅಧಿಕ ನಾಗಮಂಡಲದ ನೇತೃತ್ವವನ್ನು ವಹಿಸಿಕೊಡಿದ್ದ ಅವರು, ಹಲವು…

4 months ago