ಕುಂದಾಪುರ:ನಾಡಗುಡ್ಡೆಅಂಗಡಿ ಎಸ್‍ಪಿ ಪಾರ್ಕ್‍ನ ವಾಣಿಜ್ಯ ಸಂಕೀರ್ಣದ ಕಟ್ಟಡದಲ್ಲಿ ಶುಭರಂಭಗೊಂಡಿರುವ ಐಶ್ವರ್ಯ ಫೈನಾನ್ಸ್ & ಇನ್ವೆಸ್ಟ್‍ಮೆಂಟ್ಸ್ ಕಛೇರಿಯ ಉದ್ಘಾಟನಾ ಕಾರ್ಯಕ್ರಮ ನಾನಾ ಧಾಮಿರ್ಕ ವಿಧಿವಿಧಾನಗಳೊಂದಿಗೆ ಮಂಗಳವಾರ ಅದ್ದೂರಿಯಾಗಿ ನಡೆಯಿತು.ಕಛೇರಿ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.
ಪಡುಕೋಣೆ ಚರ್ಚ್ ನ ಧರ್ಮಗುರುಗಳಾದ ಫ್ರಾನ್ಸಿಸ್ ಕನೇಲಿಯಾ ಅವರು ಧಾರ್ಮಿಕ ಆಚರಣೆಗಳನ್ನು ನೆರವೇರಿಸಿ ಮಾತನಾಡಿ,ಶುಭ ಗಳಿಗೆಯಲ್ಲಿ ಕಛೇರಿ ಉದ್ಘಾಟನೆಗೊಂಡಿರುವುದು ಬಹಳಷ್ಟು ಒಳ್ಳೆಯ ವಿಚಾರವಾಗಿದೆ.ಫೈನಾನ್ಸ್ ಮಾಲೀಕರು ಮತ್ತು ಅವರ ಗ್ರಾಹಕರಿಗೆ ಶುಭವಾಗಲಿ ಎಂದು ಹಾರೈಸಿದರು.
ಐಶ್ವರ್ಯ ಫೈನಾನ್ಸ್ ಮುಖ್ಯರಸ್ಥರಾದ ಕೆನಡಿ ಪಿರೇರಾ ಅವರು ಮಾತನಾಡಿ,ಗ್ರಾಮೀಣ ಭಾಗದ ಜನರಿಗೆ ಸಾಲ,ಸೌಲಭ್ಯಗಳು ಸುಲಭವಾದ ರೀತಿಯಲ್ಲಿ ಸಿಗಬೇಕು ಎನ್ನುವ ಉದ್ದೇಶದಿಂದ 1995 ರ ಫೆಬ್ರವರಿ 15 ರಂದು ಐಶ್ವರ್ಯ ಫೈನಾನ್ಸ್ ಎಂಬ ಸಂಸ್ಥೆಯನ್ನು ಹುಟ್ಟು ಹಾಕಲಾಗಿದೆ.ನಮ್ಮ ಈ ಸಂಸ್ಥೆಗೆ 28 ವರ್ಷಗಳು ತುಂಬಿದೆ,ಜನರಿಗೆ ಉತ್ತಮವಾದ ಸೇವೆಯನ್ನು ನೀಡಿದಂತಹ ತೃಪ್ತಿ ನಮಗೆ ಇದೆ ಎಂದು ಹೇಳಿದರು.ಮುಂದಿನ ದಿನಗಳಲ್ಲಿಯೂ ಜನರಿಗೆ ಉತ್ತಮವಾದ ಸೇವೆಯನ್ನು ನೀಡಲಾಗುವುದು ಎಂದರು.
ವೆನಾನ್ಸಿಯಸ್ ಪಿರೇರಾ ಅವರು ಐಶ್ವರ್ಯ ಫೈನಾನ್ಸ್‍ನ ನೂತನ ಕಛೇರಿಯನ್ನು ಉದ್ಘಾಟಿಸಿ ಶುಭಹಾರೈಸಿದರು.ಈ ಸಂಧರ್ಭದಲ್ಲಿ ರೋಜರಿ ಸೊಸೈಟಿ ಕುಂದಾಪುರ ಅಧ್ಯಕ್ಷರಾದ ಜೋಕೊಬ್ ಡಿಸೋಜಾ,ಕುಂದಾಪುರ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಶಂಕರ ಶೆಟ್ಟಿ ಬೆಳ್ಳಾಡಿ,ವ್ಯವಸಾಯ ಸೇವಾ ಸಹಕಾರಿ ಸಂಘ ಆಲೂರು ವ್ಯವಸ್ಥಾಪಕ ಮಂಜು ಪೂಜಾರಿ,ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ,ವಿನ್ಸೆಂಟ್ ಡಿ ಸೋಜಾ ಕುಂದಾಪುರ,ಮಾಜಿ ಗ್ರಾಮ ಪಂಚಾಯತ್ ಸದಸ್ಯ ರಾಜೀವ ಶೆಟ್ಟಿ,ಕಟ್ಟಡದ ಮಾಲೀಕರಾದ ವಿಜಯ್ ಶೆಟ್ಟಿ ಮುಂಬೈ,ಗ್ರ್ರೆಗರಿ ಹೈಸ್ಕೂಲ್ ನಾಡ ಅಧ್ಯಾಪಕರಾದ ಸ್ಟಾಲಿನ್ ಪಿರೇರಾ,ಗ್ರೇಷನ್ ಕ್ರಾಸ್ತಾ ಮರವಂತೆ,ಗ್ರೆಗರಿ ಪ್ರೌಢ ಶಾಲೆ ನಾಡ ಸಂಚಾಲಕ ಸಿಲ್ವೆಸ್ಟರ್ ಅಲ್ಮೇಡಾ,ವಿಜಯ್ ಪಿರೇರಾ,ಆಶ್ಟನ್ ಲೆನಿನ್ ಪಿರೇರಾ,ಕಿರಣ್ ಲೋಬೋ ಉಪಸ್ಥಿತರಿದ್ದರು.
ಕುಂದಾಪುರ:ಪುದುಚೇರಿಯಲ್ಲಿ ನಡೆದ 21 ನೇ ರಾಷ್ಟ್ರ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿಥ್ಮೆಟಿಕ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿದ ಹಟ್ಟಿಯಂಗಡಿ ಸಿದ್ಧಿ ವಿನಾಯಕ…
ಕುಂದಾಪುರ:2025 ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ತಾಲೂಕು ಮಟ್ಟದಲ್ಲಿ ಅತಿ ಹೆಚ್ಚು ಅಂಕ ಹಾಗೂ ರಾಜ್ಯ ಮಟ್ಟದಲ್ಲಿ 7ನೇ ರ್ಯಾಂಕ್…
ಕುಂದಾಪುರ:ಗ್ರಾಮ ಪಂಚಾಯಿತಿ ಹೊಸಾಡು,ಆರೋಗ್ಯ ಇಲಾಖೆ,ಕೃಷಿ ಇಲಾಖೆ,ಅರಣ್ಯ ಇಲಾಖೆ,ಆರಕ್ಷಕ ಠಾಣೆ ಗಂಗೊಳ್ಳಿ,ಪಶು ಸಂಪಗೋನಾ ಮತ್ತು ತೋಟಗಾರಿಕಾ ಹಾಗೂ ಮೆಸ್ಕಾಂ,ಶಿಕ್ಷಣ ಇಲಾಖೆ,ಆಯುಷ್ ಮತ್ತು…
ಕುಂದಾಪುರ:ಗ್ರಾಮೀಣ ಪ್ರದೇಶದ ಕೃಷಿಕರಿಗೆ ಅನುಕೂಲವಾಗುವ ಉದ್ದೇಶದಿಂದ ಕಳೆದ ಹನ್ನೊಂದು ವರ್ಷಗಳ ಹಿಂದೆ ಶ್ರೀ ಮೂಕಾಂಬಿಕಾ ಭತ್ತ ಬೆಳೆಗಾರರ ಒಕ್ಕೂಟವನ್ನು ಹುಟ್ಟು…
oplus_2 ಮುಳ್ಳಿಕಟ್ಟೆ:ಲಯನ್ಸ್ ಕ್ಲಬ್ ಹಕ್ಲಾಡಿ ಚೆನ್ನಕೇಶವ ಜೋನ್ 2 ರೀಜನ್ 6 ಡಿಸ್ಟ್ರಿಕ್ಟ್ 317 ಸಿವತಿಯಿಂದ ಲಯನ್ ಆಸರೆ ಯೋಜನೆ…
ಕುಂದಾಪುರ:ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ ಆಂಡ್ ಆರ್‌ಚೀಟಿಕ್ಸ್ (ಸಿವಿಲ್ ಎಂಜಿನಿಯರ್ ಮತ್ತು ವಾಸ್ತುಶಿಲ್ಪಿಗಳ ಸಲಹಾ ಸಂಘ) ಕುಂದಾಪುರ ಇದರ…