ಕುಂದಾಪುರ

ಇಸ್ರೇಲ್‍ನಲ್ಲಿ ಕರಾವಳಿ ಕನ್ನಡಿಗರು ಸುರಕ್ಷಿತ

Share

ಕುಂದಾಪುರ:ಇಸ್ರೇಲ್ ಸೇನಾಪಡೆ ಮತ್ತು ಹಮಾಸ್ ಉಗ್ರರ ನಡುವೆ ನಡೆಯುತ್ತಿರುವ ಕದನ ತೀವೃಗೊಳ್ಳುತ್ತಿರುವ ನಡುವೆ ಕರಾವಳಿ ಭಾಗದಲ್ಲಿ ಆತಂಕ ಎದುರಾಗಿದೆ.ಉಡುಪಿ ಮತ್ತು ಮಂಗಳೂರು ಜಿಲ್ಲೆಯ ಭಾಗ ಒಂದರಲ್ಲೇ ಅಂದಾಜು 2000 ಕ್ಕೂ ಅಧಿಕ ಮಂದಿ ಇಸ್ರೇಲ್‍ನಲ್ಲಿ ಉದ್ಯೋಗವನ್ನು ಮಾಡುತ್ತಿದ್ದಾರೆ.ಇಸ್ರೇಲ್‍ನಲ್ಲಿ ಯುದ್ದದ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ಕುಟುಂಬಸ್ಥರಲ್ಲಿ ಒಂದು ರೀತಿಯ ಭಯದ ವಾತಾವರಣ ನಿರ್ಮಾಣವಾಗಿದ್ದು.ತಮ್ಮ ಮಕ್ಕಳ ಯೋಗ ಕ್ಷೇಮದ ಬಗ್ಗೆ ಚಿಂತಿಸುವಂತೆ ಆಗಿದೆ.


ಯುದ್ದದ ಭೀತಿ ಉಂಟಾಗಿದ್ದ ಇಸ್ರೇಲ್-ಗಾಜಾಪಟ್ಟಿಯಿಂದ ಸುಮಾರು 90 ಕಿ.ಮೀ ದೂರದಲ್ಲಿ ವಾಸಮಾಡುತ್ತಿರುವ ಕುಂದಾಪುರ ತಾಲೂಕಿನ ಹೆಮ್ಮಾಡಿ ಗ್ರಾಮದ ಮೂವತ್ತು ಮುಡಿ ನಿವಾಸಿ ಶಶಿ ಪೂಜಾರಿ ಅವರು ಇಲ್ಲಿ ಹೇಳಿಕೊಳ್ಳುವಂತಹ ಭಯದ ವಾತಾವರಣ ಏನು ಇಲ್ಲಾ.ನಾವೆಲ್ಲ ಸುರಕ್ಷತೆಯಿಂದ ಇದ್ದೇವೆ.ಇಸ್ರೇಲ್ ಸರಕಾರ ದಿಟ್ಟ ತನದಿಂದ ಹಮಾಸ್ ಉಗ್ರರನ್ನು ಸದೆ ಬಡಿಯುವ ಕೆಲಸ ಮಾಡುತ್ತಿದ್ದೆ.ನಾವು ಎಂದಿನಂತೆ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದು ಯಾವುದೆ ರೀತಿಯ ಜೀವಕ್ಕೆ ಹಾನಿ ಆಗುವಂತಹ ಭಯದ ವಾತಾವರಣ ವಿಲ್ಲದೆ ನಿರ್ಭೀತಿಯಿಂದ ಇದ್ದೇವೆ.ಗಡಿ ಒಳಗೆ ನುಗ್ಗಿದ ಹಮಾಸ್ ಬಂಡುಕೊರರನ್ನು ಕ್ಲಿಯರ್ ಮಾಡುವಂತ ಕೆಲಸ ಸೇನೆ ಮಾಡುತ್ತಿದೆ.ಯಾರು ಕೂಡ ನಮ್ಮ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ,ನಮ್ಮ ಬಗ್ಗೆ ಕಾಳಜಿಯನ್ನು ವಹಿಸುತ್ತಿರುವ ಭಾರತ ಸರಕಾರ ಮತ್ತು ನಾಡಿನ ಜನತೆಗೆ ಧನ್ಯವಾದವನ್ನು ಅವರು ತಿಳಿಸಿದ್ದಾರೆ.
ಯುದ್ದದ ಭೀತಿಯ ನಡುವೆಯು ಕರಾವಳಿ ಭಾಗದ ಕನ್ನಡಿಗರು ಸುರಕ್ಷತೆ ಯಿಂದ ಇದ್ದಾರೆ ಎನ್ನುವ ವಿಚಾರ ಖುಷಿಯ ಸಂಗತಿ ಆಗಿದೆ.

Advertisement

Share
Team Kundapur Times

Recent Posts

ತ್ರಾಸಿ-ಮರವಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ:ಮೂರು ಸಾವುಕುಂದಾಪುರ:ತ್ರಾಸಿ ಮರವಂತೆ ಬೀಚ್ ಮುಂಭಾಗ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬುಧವಾರ ಸಂಭವಿಸಿದ…

1 month ago

ಲಾರಿಗೆ ಕಾರು ಡಿಕ್ಕಿ:ನೆಲಮಂಗಲ ಮೂಲದ ಇಬ್ಬರು ಸಾವು

ಕುಂದಾಪುರ:ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೈಂದೂರು ತಾಲೂಕಿನ ನಾವುಂದ ಮಸ್ಕಿಯಲ್ಲಿ…

3 months ago

ಏಪ್ರಿಲ್ 12 ರಂದು ಅರಾಟೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಏಕಪವಿತ್ರ ನಾಗಮಂಡಲೋತ್ಸವ

ಕುಂದಾಪುರ:ತಾಲೂಕಿನ ಹೊಸಾಡು ಗ್ರಾಮದ ಅರಾಟೆ ಚಿತ್ತೇರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಏಪ್ರಿಲ್ 12 ರ ಭಾನುವಾರ ದಂದು ನಡೆಯಲಿರುವ ಶ್ರೀ…

3 months ago

ಎಸ್ಐ ನಾಸೀರ್ ಹುಸೇನ್ ಕುಸಿದು ಬಿದ್ದು ಮೃತ್ಯು

ಕುಂದಾಪುರ:ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಕರ್ನಾಟಕ ಪೊಲೀಸ್ ರನ್ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ…

3 months ago

ನಿರ್ದೇಶಕರಾಗಿ ಸುರೇಂದ್ರ ಗುಡ್ಡೆಹೋಟೆಲ್ ಆಯ್ಕೆ

ಕುಂದಾಪುರ:ರಾಜ್ಯ ಸರಕಾರಿ ಶಿಕ್ಷಕರ ನೌಕರರ ಹಾಗೂ ಇಲಾಖೆಯಲ್ಲಿನ ಇತರರ ಗೃಹ ನಿರ್ಮಾಣ ಸಹಕಾರ ಸಂಘ (ನಿ) ಬೆಂಗಳೂರು ಅದರ ರಾಜ್ಯ…

3 months ago

ಧಾರ್ಮಿಕ ಮುಖಂಡ ಅಪ್ಪಣ್ಣ ಹೆಗ್ಡೆ ವಿಧಿವಶ

ಕುಂದಾಪುರ:ಮಾಜಿ ಎಂಎಲ್ಎ ಧಾರ್ಮಿಕ ಮುಖಂಡ ಅಜಾತಶತ್ರು ಅಪ್ಪಣ್ಣ ಹೆಗ್ಡೆ ಶನಿವಾರ ವಿಧಿವಶರಾಗಿದ್ದಾರೆ.ನೂರಕ್ಕೂ ಅಧಿಕ ನಾಗಮಂಡಲದ ನೇತೃತ್ವವನ್ನು ವಹಿಸಿಕೊಡಿದ್ದ ಅವರು, ಹಲವು…

4 months ago