ಕುಂದಾಪುರ

ಹೊಸಾಡು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ಉದ್ಘಾಟನೆ

Share

Advertisement
Advertisement

ಕುಂದಾಪುರ:ಕರ್ನಾಟಕ ಸರಕಾರ,ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಬೈಂದೂರು ವಲಯದ ಆಶ್ರಯದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಮೊವಾಡಿ ಶಾಲೆಯಲ್ಲಿ ಹೊಸಾಡು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯ ಉದ್ಘಾಟನಾ ಕಾರ್ಯಕ್ರಮ ಬುಧವಾರ ನಡೆಯಿತು.
ತ್ರಾಸಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಿಥುನ್ ದೇವಾಡಿಗ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಹೊರ ಹೊಮ್ಮಲು ಪ್ರತಿಭಾ ಕಾರಂಜಿ ಅಂತಹ ಸ್ಪರ್ಧೆಗಳು ಉತ್ತಮವಾದ ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ.ಪಾಠದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದಾಗ ಮಾತ್ರ ವಿದ್ಯಾರ್ಥಿ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಮೆಟ್ಟಿ ನಿಲ್ಲಬಹುದು ಎಂದು ಹೇಳಿದರು.
ಮಾಜಿ ಜಿ.ಪಂ ಸದಸ್ಯ ಅನಂತ ಮೊವಾಡಿ ಮಾತನಾಡಿ,ಸಮಾಜದ ಕಟ್ಟಕಡೆಯ ಮಗುವಿಗೂ ಅವಕಾಶಗಳು ಲಭ್ಯವಾದಾಗ ಮಾತ್ರ ಸಂವಿಧಾನಕ್ಕೆ ಹೆಗ್ಗಳಿಕೆ ಸಿಗುತ್ತದೆ.ಪ್ರತಿಭೆಗೆ ಜಾತಿ,ಧರ್ಮದ ಬಣ್ಣವಿಲ್ಲ ಪ್ರತಿಭೆ ಗೆದ್ದಾಗ ಮಾತ್ರ ಕಾರ್ಯಕ್ರಮ ಅರ್ಥಪೂರ್ಣಗೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟರು.

Advertisement


ಸ.ಹಿ.ಪ್ರಾ ಮೊವಾಡಿ ಶಾಲೆ ಎಸ್‍ಡಿಎಂಸಿ ಅಧ್ಯಕ್ಷೆ ಸಂಧ್ಯಾ ಕಾರಂತ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆನ್ನು ವಹಿಸಿದ್ದರು.ತ್ರಾಸಿ ಗ್ರಾ.ಪಂ ಉಪಾಧ್ಯಕ್ಷೆ ಹೇಮಾ,ಹಾಲು ಉತ್ಪಾದಕರ ಸ.ಸಂಘ ಮೊವಾಡಿ ಅಧ್ಯಕ್ಷ ವೆಂಕಟ ಪೂಜಾರಿ,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರವಿರಾಜ್ ಶೆಟ್ಟಿ ಮತ್ತು ಕಾರ್ಯದರ್ಶಿ ಶೇಖರ ಗಾಣಿಗ,ಎಸ್‍ಡಿಎಂಸಿ ಉಪಾಧ್ಯಕ್ಷ ರಾಘವೇಂದ್ರ ಶೆಟ್ಟಿಗಾರ್,ಶ್ರೀನಿವಾಸ್ ಕಾರಂತ್,ಬೈಂದೂರು ತಾಲೂಕು ದೈ.ಶಿ.ಶಿ ಪರಿವೀಕ್ಷಣಾಧಿಕಾರಿ ಚಂದ್ರಶೇಖರ ಶೆಟ್ಟಿ,ಸಮನ್ವಯಾಧಿಕಾರಿ ಮಂಜುನಾಥ ಹಾಗೂ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಶೇಖರ,ಹೆಮ್ಮಾಡಿ ವೃತ್ತ ಸಂಯೋಜಕ ಯೋಗೀಶ್,ಸಿ.ಆರ್.ಪಿ ರಾಜೇಶ್,ಸದಾನಂದ ಮೊವಾಡಿ,ನಿವೃತ್ತ ಮುಖ್ಯೋಪಾಧ್ಯಾಯ ಸೀತಾರಾಮ ಭಟ್,ದಾನಿಗಳಾದ ಶಿವಾ ಆರ್ ಪೂಜಾರಿ,ಡೋಲ್ಫಿ ಡಿಸೋಜಾ,ಪ್ರಾಥಮಿಕ ಆರೋಗ್ಯ ಕೇಂದ್ರ ಮರವಂತೆ ಸಿಬ್ಬಂದಿಗಳು,ಆಶಾ,ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.ಮುಖ್ಯ ಶಿಕ್ಷಕಿ ಪ್ರೇಮಾ ಸ್ವಾಗತಿಸಿದರು.ಪ್ರತಿಭಾ ಕಾರಂಜಿ ನೋಡಲ್ ಅಧಿಕಾರಿ ರಾಮಕೃಷ್ಣ ದೇವಾಡಿಗ ಪ್ರಾಸ್ತಾವಿಕವಾಗಿ ಮಾತನಾಡಿದರು.ಶಿಕ್ಷಕಿ ಭಾಗಿರಥಿ ನಿರೂಪಿಸಿದರು.ಸಹ ಶಿಕ್ಷಕಿ ಶರಾವತಿ ವಂದಿಸಿದರು.ಹೊಸಾಡು ಕ್ಲಸ್ಟರ್ ಮಟ್ಟದ 16 ಶಾಲೆಗಳ ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.ವೇದಿಕೆ ಮೇಲೆ ಮಕ್ಕಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು.

Advertisement
Advertisement

Share
Team Kundapur Times

Recent Posts

ಕಿರಿಮಂಜೇಶ್ವರ ಶ್ರೀ ಅಗಸ್ತೇಶ್ವರ ದೇವಸ್ಥಾನದಲ್ಲಿ ಗಣೇಶ ಚತುರ್ಥಿ ಉತ್ಸವ ಸಂಭ್ರಮ

ಕುಂದಾಪುರ:ಬೈಂದೂರು ತಾಲೂಕಿನ ಪ್ರಸಿದ್ಧ ಶ್ರೀ ಅಗಸ್ತೇಶ್ವರ ಶ್ರೀ ಮಹಾಗಣಪತಿ ಶ್ರೀ ವಿಶಾಲಾಕ್ಷಿ ಅಮ್ಮನವರ ದೇವಸ್ಥಾನ ಕಿರಿಮಂಜೇಶ್ವರದಲ್ಲಿ ಶ್ರೀ ಗಣೇಶ ಚತುರ್ಥಿ…

15 hours ago

ಶ್ರೀ ಪ್ರಸನ್ನ ಗಣಪತಿ ದೇವಸ್ಥಾನ ಉಪ್ಕಲ್‍ಮಠ ನಾಡ:ಗಣೇಶೋತ್ಸವ ಸಂಭ್ರಮ

ಕುಂದಾಪುರ:ಬೈಂದೂರು ತಾಲೂಕಿನ ನಾಡ ಉಪ್ಕಲ್ ಮಠ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ 35ನೇ ವರ್ಷದ ಗಣಪತಿ ಉತ್ಸವ ಕಾರ್ಯಕ್ರಮ ನಾನಾ…

15 hours ago

ತೆಕ್ಕಟ್ಟೆ ಯಿಂದ ತ್ರಾಸಿ ವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ತೈಲ ಸೋರಿಕೆ:ಹಲವು ದ್ವಿಚಕ್ರ ವಾಹನಗಳು ಪಲ್ಟಿ

ಕುಂದಾಪುರ:ರಾಷ್ಟ್ರೀಯ ಹೆದ್ದಾರಿ 66 ರಲ್ಲಿಉಡುಪಿ ಕಡೆಯಿಂದ ಬೈಂದೂರು ಕಡೆಗೆ ಸಾಗುತ್ತಿದ್ದ ತೈಲ ವಾಹನದಿಂದ ತೆಕ್ಕಟ್ಟೆ ಯಿಂದ ತ್ರಾಸಿ ವರೆಗೆ ರಸ್ತೆ…

17 hours ago

ಶ್ರೀ ದುರ್ಗಾ ಹಾರ್ಡ್ ವೇರ್ ತಲ್ಲೂರಿನಲ್ಲಿ ಶುಭಾರಂಭ

ಕುಂದಾಪುರ:ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ತಲ್ಲೂರು ಬಳಿ ಬ್ಯಾಂಕ್ ಆಫ್ ಬರೋಡ ಎದುರುಗಡೆ ಇರುವ ಶ್ರೀ ಬ್ರಾಹ್ಮಿ ದುರ್ಗಾ ಕಾಂಪ್ಲೆಕ್ಸ್…

20 hours ago

ತಿಮಿಂಗಿಲ ಮೀನಿನ ಕಳೆಬರ ಪತ್ತೆ

ಕುಂದಾಪುರ:ತಾಲೂಕಿನ ಗಂಗೊಳ್ಳಿ ಮಡಿ ಲೈಟ್‍ಹೌಸ್ ಕಡಲ ತೀರದಲ್ಲಿ ಮೃತ ತಿಮಿಂಗಿಲ ಮೀನಿನ ಕಳೆಬರ ಮಂಗಳವಾರ ಪತ್ತೆಯಾಗಿದೆ.ಇಲಾಖಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ…

3 days ago

ವಲಯ ಅರಣ್ಯಾಧಿಕಾರಿ ಸವಿತಾ ಆರ್ ದೇವಾಡಿಗಗೆ ಮುಖ್ಯಮಂತ್ರಿ ಪದಕ

ಕುಂದಾಪುರ:ಹೊನ್ನಾವರದಲ್ಲಿ ವಲಯ ಅರಣ್ಯಾಧಿಕಾರಿ ಆಗಿ ಸೇವೆ ಸಲ್ಲಿಸುತ್ತಿರುವ ಸವಿತಾ ಆರ್ ದೇವಾಡಿಗ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಪದಕ…

4 days ago