ಕುಂದಾಪುರ

ಮರವಂತೆ:ಶ್ರೀ ಮಹಾರಾಜ ಸ್ವಾಮಿ,ಶ್ರೀ ವರಾಹ ದೇವಸ್ಥಾನದಲ್ಲಿ ಕರ್ಕಾಟಕ ಅಮಾವಾಸ್ಯೆ ಜಾತ್ರೆ-ಆಗಸ್ಟ್.16 ಕ್ಕೆ

Share

ಕುಂದಾಪುರ:ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಪ್ರಸಿದ್ಧ ಮರವಂತೆ ಮಹಾರಾಜ ಸ್ವಾಮಿ,ಶ್ರೀ ವರಾಹ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ಕರ್ಕಾಟಕ ಅಮಾವಾಸ್ಯೆ ಜಾತ್ರೆ ಆಗಸ್ಟ್.16 ರಂದು ಸಂಪ್ರದಾಯ ಬದ್ಧವಾಗಿ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಮರವಂತೆ ಶ್ರೀ ಮಹಾರಾಜ ಸ್ವಾಮಿ,ಶ್ರೀ ವರಾಹ ದೇವಸ್ಥಾನದಲ್ಲಿ ಈ ಬಾರಿಯ ಕರ್ಕಾಟಕ ಅಮಾವಾಸ್ಯೆ ಜಾತ್ರೆಯು ಜುಲೈ.17 ರಂದು ನಡೆಯಲಿದೆ ಎಂದು ಕೆಲವು ಕ್ಯಾಲೆಂಡರ್‍ಗಳಲ್ಲಿ ತಪ್ಪಾಗಿ ನಮೂದಾಗಿರುವುದರಿಂದ ಸಾರ್ವಜನಿಕ ವಲಯದಲ್ಲಿ ಗೊಂದಲ ಸೃಷ್ಟಿಯಾಗಿತ್ತು.ಈ ಬಗ್ಗೆ ಸ್ಪಷ್ಟನೆಯನ್ನು ನೀಡಿರುವ ದೇವಳದ ಆಡಳಿತ ಸಮಿತಿ ಅಧ್ಯಕ್ಷರಾದ ಸತೀಶ್ ಎಂ.ನಾಯಕ್,ಮರವಂತೆ ಶ್ರೀವರಾಹ ದೇವಸ್ಥಾನದಲ್ಲಿ ವಾರ್ಷಿಕವಾಗಿ ನಡೆಯುವ ಕರ್ಕಾಟಕ ಅಮಾವಾಸ್ಯೆ ಜಾತ್ರೆ ಆಗಸ್ಟ್.16 ರಂದು ನಡೆಯಲಿದೆ,ಭಕ್ತರು ಸಹಕರಿಸಬೇಕೆಂದು ಕೇಳಿಕೊಂಡಿದ್ದಾರೆ.

ರೈತಾಪಿ ವರ್ಗದ ಜನರು ಮಳೆ ದೇವರೆಂದು ಶ್ರೀವರಾಹ ಸ್ವಾಮಿ ದೇವರನ್ನು ಪೂಜಿಸುತ್ತಾರೆ.

ಶ್ರೀ ಮನ್ನಾರಾಯಣನ ದಶ ಅವತಾರಗಳಲ್ಲಿ ಒಂದಾದ ಶ್ರೀವರಾಹ,ವಿಷ್ಣು,ನಾರಸಿಂಹ ಸ್ವರೂಪದಲ್ಲಿ ಉದ್ಭವಿಸಿ ಸೌಪರ್ಣಿಕಾ ನದಿ ಮತ್ತು ಅರಬಿ ಸಮುದ್ರದ ತಟದ ಮಧ್ಯದಲ್ಲಿ ನೆಲೆನಿಂತು ಭಕ್ತರ ಇಷ್ಟಾರ್ಥ ಸಿದ್ಧಿಗಳನ್ನು ಈಡೇರಿಕೆ ಮಾಡುವ ಶ್ರೀ ದೇವರ ಸನ್ನಿಧಾನದಲ್ಲಿ ಕರ್ಕಾಟಕ ಅಮಾವಾಸ್ಯೆ ದಿನದಂದು ವಾರ್ಷಿಕ ಜಾತ್ರೆ ನೆರವೇರುತ್ತದೆ.ಸಹಸ್ರಾರು ಭಕ್ತರು,ರೈತಾಪಿ ವರ್ಗದವರು ಮತ್ತು ಮೀನುಗಾರರು ಹಾಗೂ ನವಜೋಡಿಗಳು ಕ್ಷೇತ್ರಕ್ಕೆ ಆಗಮಿಸಿ ಸಮುದ್ರ ಸ್ನಾನ ಮಾಡಿ,ಸೌಪರ್ಣಿಕಾ ನದಿಯಲ್ಲಿ ತೀರ್ಥ ಸ್ನಾನ ಮಾಡಿ ದೇವರಿಗೆ ಪೂಜೆಯನ್ನು ಸಲ್ಲಿಸುವುದು ವಾಡಿಕೆ ಆಗಿದೆ.ರೈತಾಪಿ ವರ್ಗದ ಜನರು ಮಳೆ ದೇವರೆಂದು ಶ್ರೀವರಾಹ ಸ್ವಾಮಿ ದೇವರನ್ನು ಪೂಜಿಸುತ್ತಾರೆ.
(ಮರವಂತೆ ಮಹಾರಾಜ ಸ್ವಾಮಿ,ಶ್ರೀ ವರಾಹ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ಕರ್ಕಾಟಕ ಅಮಾವಾಸ್ಯೆ ಜಾತ್ರೆ ಆಗಸ್ಟ್.16 ರಂದು ಸಂಪ್ರದಾಯ ಬದ್ಧವಾಗಿ ನಡೆಯಲಿದೆ)

Advertisement

Share
Team Kundapur Times

Recent Posts

ಅಧ್ಯಕ್ಷರಾಗಿ ಸತೀಶ್‌ ಶೆಟ್ಟಿ ಹಕ್ಲಾಡಿ ಆಯ್ಕೆ

ಕುಂದಾಪುರ:ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ ಆಂಡ್ ಆರ್‌ಚೀಟಿಕ್ಸ್ (ಸಿವಿಲ್ ಎಂಜಿನಿಯ‌ರ್ ಮತ್ತು ವಾಸ್ತುಶಿಲ್ಪಿಗಳ ಸಲಹಾ ಸಂಘ) ಕುಂದಾಪುರ ಇದರ…

3 weeks ago

ಕಾಪು:ಗೂಡ್ಸ್ ಟೆಂಪೋ ಪಲ್ಟಿ ನಾಲ್ವರು ಸಾವು

ಉಡುಪಿ:ಕಾಪು ನಲ್ಲಿ ಗೂಡ್ಸ್ ಟೆಂಪೋ ಪಲ್ಟಿ ಹೊಡೆದ ಪರಿಣಾಮ ದುರ್ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ ಘಟನೆ ಭಾನುವಾರ ನಡೆದಿದೆ.ಅಪಘಾತದ ತೀವ್ರತೆಗೆ ಗೂಡ್ಸ್…

4 weeks ago

ಶಿಕ್ಷಕ ಸುರೇಂದ್ರಗೆ ಮಕ್ಕಳ ಮಿತ್ರ ಪ್ರಶಸ್ತಿ

ಕುಂದಾಪುರ:ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಿಕ್ಷಣದ ಮುಖ್ಯ ವಾಹಿನಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿರುವ ರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿ ಕುಂದಾಪುರ ತಾಲೂಕಿನ…

1 month ago

ತ್ರಾಸಿ:ನಿಂತ್ತಿದ್ದ ಲಾರಿಯಲ್ಲಿ ಚಾಲಕನ ಶವ ಪತ್ತೆ

ಕುಂದಾಪುರ:ತಾಲೂಕಿನ ತ್ರಾಸಿ ರಾಷ್ಟ್ರೀಯ ಹೆದ್ದಾರಿ 66 ರ ಫ್ಲೈಓವರ್ ಸಮೀಪ ರಸ್ತೆ ಬದಿಯಲ್ಲಿ ನಿಂತ್ತಿದ್ದ ಲಾರಿಯಲ್ಲಿ ಲಾರಿ ಚಾಲಕನ ಶವ…

2 months ago

ಮರವಂತೆ ಸಮುದ್ರ ಕಿನಾರೆ ಸ್ವಚ್ಚತೆ

ಕುಂದಾಪುರ:ಶಯೋಮಿ ಇಂಡಿಯಾ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ನ ಸಿ.ಎಸ್.ಆರ್ ಸಹಕಾರದೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಸಾಹಸ್ ತಂಡ ಮತ್ತು ಕ್ಲೀನ್ ಕಿನಾರ…

2 months ago

ಬ್ರಹ್ಮಾವರ:ವಿದ್ಯಾಲಕ್ಷ್ಮೀ ಕಾಲೇಜಿನಲ್ಲಿ ನಶ ಮುಕ್ತ ಭಾರತ ಕಾರ್ಯಕ್ರಮ ಆಯೋಜನೆ

ಬ್ರಹ್ಮಾವರ:ರೆಡ್ ಕ್ರಾಸ್ ವಿಭಾಗದ ವತಿಯಿಂದ ಬ್ರಹ್ಮಾವರ ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ನಶ ಮುಕ್ತ ಭಾರತ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳಿಗೆ…

2 months ago