ಕುಂದಾಪುರ:ಭಾರತದಲ್ಲಿ ಅತ್ಯಂತ ದೊಡ್ಡ ಮಾರುಕಟ್ಟೆ ವ್ಯವಸ್ಥೆಯನ್ನು ಹೊಂದಿರುವ ಜನಪ್ರೀಯ ಎಚ್.ಪಿ ಫ್ಯೂಲ್ಸ್ ನ ಘಟಕ ಸುಸಜ್ಜಿತವಾದ ವ್ಯವಸ್ಥೆಯಡಿಯಲ್ಲಿ ಕುಂದಾಪುರ ತಾಲೂಕಿನ ಅರಾಟೆಯಲ್ಲಿ ನಿರ್ಮಾಣವಾಗಿರುವುದರಿಂದ ಪರಿಸರದ ಜನರಿಗೆ ಉತ್ತಮ ದರ್ಜೆ ತೈಲ ಸಿಗುವಂತಾಗಲಿದೆ.
ರಾಷ್ಟ್ರೀಯ ಹೆದ್ದಾರಿ 66 ರ ಪಕ್ಕದಲ್ಲಿ ನಿರ್ಮಾಣವಾಗಿರುವ ಕಮಲ್ ಫ್ಯೂಲ್ಸ್‍ನ ಹಸಿರು ಗಾರ್ಡನ್ ನೊಡುಗರ ಮನ ಸೆಳೆಯುತ್ತಿದೆ.ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಸಹಿತ ಶೌಚಾಲಯ ಹಾಗೂ ನೈಟ್ರೋಜನ್ ಗಾಳಿ ಹಾಕುವ ಯಂತ್ರ ಕೂಡ ಲಭ್ಯವಿದ್ದು.ಬ್ಯಾಟರಿ ಚಾಲಿತ ವಾಹನಗಳಿಗೆ ಚಾರ್ಚ್‍ಂಜಿಗ್ ಸ್ಟೇಷನ್ ಕೂಡ ಲಭ್ಯವಾಗಲಿದೆ.ಒಂದೆ ಸೂರಿನಡಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.ದಕ್ಷತೆಯುಳ್ಳ ಪೆಟ್ರೋಲ್ ಮತ್ತು ಡಿಸೇಲ್ ಹಾಕಿಸಿಕೊಳ್ಳಲು ಕಮಲ್ ಫ್ಯೂಲ್ಸ್‍ಗೆ ಭೇಟಿ ನೀಡಬಹುದು.
ಕಮಲ್ ಫ್ಯೂಲ್ಸ್ ಮಾಲೀಕರಾದ ನಾಗರಾಜ ಶೆಟ್ಟಿ ಗುಲ್ವಾಡಿ ದೊಡ್ಮನೆ ಅವರು ಮಾತನಾಡಿ,ಒಂದಿಷ್ಟು ಜನರಿಗೆ ಉದ್ಯೋಗ ನೀಡುವ ದೃಷ್ಟಿಕೋನದೊಂದಿಗೆ ಹಾಗೂ ಊರಿನಲ್ಲಿ ಉದ್ಯಮವನ್ನು ಸ್ಥಾಪನೆ ಮಾಡಬೇಕು ಎನ್ನುವ ಉದ್ದೇಶದೊಂದಿಗೆ ಶುಭಗಳಿಗೆಯಲ್ಲಿ ಕಮಲ್ ಪೆಟ್ರೋಲ್ ಬಂಕ್‍ನ್ನು ಅರಾಟೆಯಲ್ಲಿ ಆರಂಭಿಸಲಾಗಿದ್ದು.ಉತ್ತಮ ದರ್ಜೆ ತೈಲ ಮತ್ತು ಸೇವೆಯನ್ನು ನೀಡಲಾಗುವುದು ಎಂದು ಹೇಳಿದರು.ಎಲ್ಲರ ಸಹಕಾರವನ್ನು ಕೇಳಿಕೊಂಡರು.
ಕಮಲ್ ಫ್ಯೂಲ್ಸ್ ಮಾಲೀಕರಾದ ರತ್ನಾಕರ ಶೆಟ್ಟಿ ಮೊವಾಡಿ ಉದ್ರಿ ಪಟೇಲರ ಮನೆ ಮಾತನಾಡಿ,ರಾಷ್ಟ್ರೀಯ ಹೆದ್ದಾರಿ 66 ರ ಪಕ್ಕದಲ್ಲಿ ಕಮಲ್ ಫ್ಯೂಲ್ಸ್ ಪೆಟ್ರೋಲ್ ಪಂಪ್‍ನ್ನು ಎಲ್ಲಾ ರೀತಿಯ ಕಾನೂನಿನ ಚೌಕಟ್ಟನ್ನು ಅನುಸರಿಸುವುದರ ಮುಖೇನ ಸುಸಜ್ಜಿತವಾದ ವ್ಯವಸ್ಥೆಯಡಿಯಲ್ಲಿ ನಿರ್ಮಾಣಮಾಡಲಾಗಿದೆ.ಉತ್ತಮ ರೀತಿಯ ಪಾರ್ಕಿಂಗ್ ವ್ಯವಸ್ಥೆ,ಶೌಚಾಲಯ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು.ಗುಣಮಟ್ಟದ ತೈಲವನ್ನು ಹಾಕುವುದರ ಮೂಲಕ ಸೇವೆಯನ್ನು ನೀಡಲಾಗುತ್ತಿದ್ದು.ಎಲ್ಲರೂ ಸಹಕಾರ ಮಾಡಬೇಕೆಂದು ವಿನಂತಿಸಿಕೊಂಡರು.
ಎಚ್.ಪಿ.ಸಿ.ಎಲ್ ಜೋನ್ ಹೆಡ್ ಮಂಗಳೂರು ನವಿನ್ ಕುಮಾರ್ ಅವರು ಕಮಲ್ ಫ್ಯೂಲ್ಸ್ ಕಛೇರಿ ಮತ್ತು ಇಂದಿರಾ ಶೆಟ್ಟಿ ಗುಲ್ವಾಡಿ ದೊಡ್ಮಮನೆ ಮತ್ತು ಗುಲಾಬಿ ಶೆಟ್ಟಿ ಮೊವಾಡಿ ಉದ್ರಿ ಪಟೇಲರ ಮನೆ ಪೆಟ್ರೋಲ್ ಮತ್ತು ಡಿಸೇಲ್ ಬಂಕ್ ಉದ್ಘಾಟಿಸಿದರು.ಸ್ನೇಹಿತರು,ಬಂಧು ಮಿತ್ರರು,ಹಿತೈಷಿಗಳು,ಕುಟುಂಬಿಕರು ಕಮಲ್ ಫ್ಯೂಲ್ಸ್ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ ಶುಭಾಶಯ ಕೋರಿದರು.ವಾಹನಗಳಿಗೆ ತೈಲವನ್ನು ಹಾಕುವುದರ ಮುಖೇನ ಚಾಲನೆಯನ್ನು ನೀಡಲಾಯಿತು.
ಕುಂದಾಪುರ:2025 ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ತಾಲೂಕು ಮಟ್ಟದಲ್ಲಿ ಅತಿ ಹೆಚ್ಚು ಅಂಕ ಹಾಗೂ ರಾಜ್ಯ ಮಟ್ಟದಲ್ಲಿ 7ನೇ ರ್ಯಾಂಕ್…
ಕುಂದಾಪುರ:ಗ್ರಾಮ ಪಂಚಾಯಿತಿ ಹೊಸಾಡು,ಆರೋಗ್ಯ ಇಲಾಖೆ,ಕೃಷಿ ಇಲಾಖೆ,ಅರಣ್ಯ ಇಲಾಖೆ,ಆರಕ್ಷಕ ಠಾಣೆ ಗಂಗೊಳ್ಳಿ,ಪಶು ಸಂಪಗೋನಾ ಮತ್ತು ತೋಟಗಾರಿಕಾ ಹಾಗೂ ಮೆಸ್ಕಾಂ,ಶಿಕ್ಷಣ ಇಲಾಖೆ,ಆಯುಷ್ ಮತ್ತು…
ಕುಂದಾಪುರ:ಗ್ರಾಮೀಣ ಪ್ರದೇಶದ ಕೃಷಿಕರಿಗೆ ಅನುಕೂಲವಾಗುವ ಉದ್ದೇಶದಿಂದ ಕಳೆದ ಹನ್ನೊಂದು ವರ್ಷಗಳ ಹಿಂದೆ ಶ್ರೀ ಮೂಕಾಂಬಿಕಾ ಭತ್ತ ಬೆಳೆಗಾರರ ಒಕ್ಕೂಟವನ್ನು ಹುಟ್ಟು…
oplus_2 ಮುಳ್ಳಿಕಟ್ಟೆ:ಲಯನ್ಸ್ ಕ್ಲಬ್ ಹಕ್ಲಾಡಿ ಚೆನ್ನಕೇಶವ ಜೋನ್ 2 ರೀಜನ್ 6 ಡಿಸ್ಟ್ರಿಕ್ಟ್ 317 ಸಿವತಿಯಿಂದ ಲಯನ್ ಆಸರೆ ಯೋಜನೆ…
ಕುಂದಾಪುರ:ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ ಆಂಡ್ ಆರ್‌ಚೀಟಿಕ್ಸ್ (ಸಿವಿಲ್ ಎಂಜಿನಿಯರ್ ಮತ್ತು ವಾಸ್ತುಶಿಲ್ಪಿಗಳ ಸಲಹಾ ಸಂಘ) ಕುಂದಾಪುರ ಇದರ…
ಉಡುಪಿ:ಕಾಪು ನಲ್ಲಿ ಗೂಡ್ಸ್ ಟೆಂಪೋ ಪಲ್ಟಿ ಹೊಡೆದ ಪರಿಣಾಮ ದುರ್ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ ಘಟನೆ ಭಾನುವಾರ ನಡೆದಿದೆ.ಅಪಘಾತದ ತೀವ್ರತೆಗೆ ಗೂಡ್ಸ್…