ಕುಂದಾಪುರ:ಸಪ್ತಸ್ವರ ವಿವಿಧೋದ್ದೇಶ ಸಹಕಾರ ಸಂಘ ತಲ್ಲೂರು ಅದರ 2023-24ನೇ ಸಾಲಿನ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ತಲ್ಲೂರು ಜೈ ದುರ್ಗಾ ಮಾತಾ ಕಾಂಪ್ಲೆಕ್ಸ್ ನ ಸಭಾಂಗಣದಲ್ಲಿ ಮಂಗಳವಾರ ನಡೆಯಿತು.
ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿ ನಿಯುಕ್ತಿಗೊಂಡಿರುವ ಭರತ್ ಬಾಬು ದೇವಾಡಿಗ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಸಂಘದ ಸಿಇಒ ವಿಶಾಲ ದೇವಾಡಿಗ ವಾರ್ಷಿಕ ವರದಿ ಮಂಡಿಸಿ ಸದಸ್ಯರಿಂದ ಅನುಮೋದನೆಯನ್ನು ಪಡೆದು ಕೊಂಡರು.
ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷ ಚಂದ್ರ ದೇವಾಡಿಗ ಹರ್ಕೂರು ಮಾತನಾಡಿ,ಸ್ವ ಸಹಾಯ ಸಂಘಗಳನ್ನು ಹುಟ್ಟು ಹಾಕುವುದರ ಮೂಲಕ ಸಮುದಾಯದ ಮಹಿಳೆಯರಿಗೆ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ಆರ್ಥಿಕ ಶಕ್ತಿ ತುಂಬುವ ಕೆಲಸ ಸಂಘದ ವತಿಯಿಂದ ಮಾಡಿಕೊಂಡು ಬರಲಾಗುತ್ತಿದೆ.ಅನಾರೋಗ್ಯಕ್ಕೆ ಒಳಗಾದ ಸಂಘದ ಸದಸ್ಯರಿಗೆ
ವೈದ್ಯಕೀಯ ನೆರವು ಹಾಗೂ ಅಕಾಲಿಕವಾಗಿ ಮೃತಪಟ್ಟ ವರಿಗೆ ಸಹಾಯಧನ ನೀಡಲಾಗಿದ್ದು.ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿಭಾ ಪುರಸ್ಕಾರ ನೀಡುತ್ತಾ ಬರಲಾಗುತ್ತಿದೆ.ಸಂಘದ ಅಭಿವೃದ್ಧಿಗೆ ನಿರ್ದೇಶಕ ಮಂಡಳಿ ಮತ್ತು ಸದಸ್ಯರು ಸದಾ ಸಹಕಾರ ನೀಡಬೇಕೆಂದು ಕೇಳಿಕೊಂಡರು.
ಸಂಘದ ಬೆಳವಣಿಗೆಗೆ ಸ್ವ ಸಾಹಯ ಸಂಘದ ಸದಸ್ಯರ ಕೊಡುಗೆ ಅಪಾರವಾದದ್ದು ಎಂದು ಶ್ಲಾಘಿಸಿದರು.
ತಲ್ಲೂರು ಸಪ್ತಸ್ವರ ವಿವಿಧೋದ್ದೇಶ ಸಹಕಾರ ಸಂಘದ ನಿರ್ದೇಶಕ ರಾಜೇಶ್ ದೇವಾಡಿಗ ತ್ರಾಸಿ ಮಾತನಾಡಿ,2011 ರಲ್ಲಿ ಆರಂಭ ಗೊಂಡಿರುವ ನಮ್ಮ ಸಂಸ್ಥೆಯು ಹಂತ ಹಂತವಾಗಿ ಅಭಿವೃದ್ಧಿ ಕಾಣುತ್ತಾ ಬಂದಿದ್ದು, ನಾಗೂರು ಮತ್ತು ಚಿತ್ತೂರಿನಲ್ಲಿ ಎರಡು ಹೊಸ ಶಾಖೆಗಳನ್ನು ಹೊಂದಿದೆ.ಕಳೆದ ಸಾಲಿನ ವರದಿ ವರ್ಷದಲ್ಲಿ 20 ಲಕ್ಷ.ರೂ ಲಾಭ ಗಳಿಸಿದ ನಮ್ಮ ಸಂಸ್ಥೆ ಈ ವರ್ಷ 50 ಲಕ್ಷ.ರೂ ಲಾಭ ಗಳಿಸಿದೆ.ಲಾಭಾಂಶದಲ್ಲಿ ಸಂಘದ ಸದಸ್ಯರಿಗೆ 14% ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.ಸ್ವ ಸಾಹಯ ಸಂಘದ ಸದಸ್ಯರಿಗೆ 10 ಕೋಟಿ.ರೂ ಸಾಲ ವಿತರಿಸಲಾಗಿದೆ ಎಂದು ತಿಳಿಸಿದರು.
ಸಂಘದ ಉಪಾಧ್ಯಕ್ಷ ಚಂದ್ರಶೇಖರ ದೇವಾಡಿಗ ನಾಡ,ನಿರ್ದೇಶಕರಾದ ಎಮ್. ಸಂಜೀವ ದೇವಾಡಿಗ ತಲ್ಲೂರು,ಬಾಬು ದೇವಾಡಿಗ ಹೆಮ್ಮಾಡಿ,ಬಸವ ದೇವಾಡಿಗ ಉಪ್ಪಿನ ಕುದ್ರು,ಕುಷ್ಟ ದೇವಾಡಿಗ ಹಟ್ಟಿಯಂಗಡಿ, ರಾಜೇಶ್ ದೇವಾಡಿಗ ತ್ರಾಸಿ,ಶಾರದಾ ದೇವಾಡಿಗ ನಾಗೂರು,ಶೀಲಾವತಿ ದೇವಾಡಿಗ ಪಡುಕೋಣೆ, ಜಯಂತಿ ದೇವಾಡಿಗ ಬಡಾಕೆರೆ,ಸುಮ ದೇವಾಡಿಗ ಹೆಮ್ಮಾಡಿ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ವಿಶಾಲ ದೇವಾಡಿಗ
ಸ್ವಾಗತಿಸಿದರು.ದೀಪಿಕಾ ಎನ್ ದೇವಾಡಿಗ ನಿರೂಪಿಸಿದರು.ಶೀಲಾವತಿ ದೇವಾಡಿಗ ವಂದಿಸಿದರು.
oplus_2 ಮುಳ್ಳಿಕಟ್ಟೆ:ಲಯನ್ಸ್ ಕ್ಲಬ್ ಹಕ್ಲಾಡಿ ಚೆನ್ನಕೇಶವ ಜೋನ್ 2 ರೀಜನ್ 6 ಡಿಸ್ಟ್ರಿಕ್ಟ್ 317 ಸಿವತಿಯಿಂದ ಲಯನ್ ಆಸರೆ ಯೋಜನೆ…
ಕುಂದಾಪುರ:ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ ಆಂಡ್ ಆರ್‌ಚೀಟಿಕ್ಸ್ (ಸಿವಿಲ್ ಎಂಜಿನಿಯರ್ ಮತ್ತು ವಾಸ್ತುಶಿಲ್ಪಿಗಳ ಸಲಹಾ ಸಂಘ) ಕುಂದಾಪುರ ಇದರ…
ಉಡುಪಿ:ಕಾಪು ನಲ್ಲಿ ಗೂಡ್ಸ್ ಟೆಂಪೋ ಪಲ್ಟಿ ಹೊಡೆದ ಪರಿಣಾಮ ದುರ್ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ ಘಟನೆ ಭಾನುವಾರ ನಡೆದಿದೆ.ಅಪಘಾತದ ತೀವ್ರತೆಗೆ ಗೂಡ್ಸ್…
ಕುಂದಾಪುರ:ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಿಕ್ಷಣದ ಮುಖ್ಯ ವಾಹಿನಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿರುವ ರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿ ಕುಂದಾಪುರ ತಾಲೂಕಿನ…
ಕುಂದಾಪುರ:ತಾಲೂಕಿನ ತ್ರಾಸಿ ರಾಷ್ಟ್ರೀಯ ಹೆದ್ದಾರಿ 66 ರ ಫ್ಲೈಓವರ್ ಸಮೀಪ ರಸ್ತೆ ಬದಿಯಲ್ಲಿ ನಿಂತ್ತಿದ್ದ ಲಾರಿಯಲ್ಲಿ ಲಾರಿ ಚಾಲಕನ ಶವ…
ಕುಂದಾಪುರ:ಶಯೋಮಿ ಇಂಡಿಯಾ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ನ ಸಿ.ಎಸ್.ಆರ್ ಸಹಕಾರದೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಸಾಹಸ್ ತಂಡ ಮತ್ತು ಕ್ಲೀನ್ ಕಿನಾರ…