ಕುಂದಾಪುರ:ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘ ನಾವುಂದ ಅದರ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ನಾವುಂದ ಶ್ರೀ ಮಹಾಗಣಪತಿ ಮಾಂಗಲ್ಯ ಮಂಟಪದಲ್ಲಿ ಶುಕ್ರವಾರ ನಡೆಯಿತು.
ವಾರ್ಷಿಕ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷ ರಾಜು ಎಸ್.ರಾಜು ಪೂಜಾರಿ ಮಾತನಾಡಿ,ಸಂಘದ ಸದಸ್ಯರ ಮಹಿಳೆಯರಿಗೆ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ಆರ್ಥಿಕ ಶಕ್ತಿ ನೀಡಿರುವುದರ ಜತೆಗೆ ರೈತರನ್ನು ಉತ್ತೇಜಿಸುವ ದೃಷ್ಟಿಯಿಂದ ಕೃಷಿ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಸಾಲ ಸೌಲಭ್ಯವನ್ನು ನೀಡಲಾಗಿದೆ.ಶೈಕ್ಷಣಿಕ ಸೇವೆ,ಆರೋಗ್ಯ ಮಾಹಿತಿ ಕಾರ್ಯಕ್ರಮ ಆಯೋಜನೆ ಮತ್ತು ಸಾಮಾಜಿಕ ಕೆಲಸ ಕಾರ್ಯಗಳನ್ನು ಮಾಡುತ್ತಾ ಬರಲಾಗುತ್ತಿದ್ದು.ನಮ್ಮ ಸಂಘವು ವರ್ಷ ದಿಂದ ವರ್ಷಕ್ಕೆ ಗುರಿ ಮೀರಿದ ಸಾಧನೆ ಮಾಡಿರುವ ಕುರಿತು ಅಂಕಿ ಅಂಶಗಳ ಬಗ್ಗೆ ನಿಮಗೆಲ್ಲಾ ತಿಳಿದ ವಿಷಯವಾಗಿದೆ ಎಂದರು.
ಸಂಘದ ಅಭಿವೃದ್ಧಿಗೆ ಕಾಲ ಕಾಲಕ್ಕೆ ಸಲಹೆ ಸೂಚನೆಗಳನ್ನು ನೀಡುತ್ತಿರುವ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಅದರ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಹಾಗೂ ಜಿಲ್ಲಾ,ತಾಲೂಕು ಅಧಿಕಾರಿಗಳ ಸಹಕಾರ ಅತ್ಯಮೂಲ್ಯವಾದದ್ದು.ಗುರಿ ಮೀರಿದ ಸಾಧನೆ ಮಾಡುವಲ್ಲಿ ಸಂಘದ ನಿರ್ದೇಶಕರ ಮಂಡಳಿ ಸಿಬ್ಬಂದಿ ವರ್ಗ,ಗ್ರಾಹಕರು,ಸರ್ವ ಸದಸ್ಯರು,ಠೇವಣಿದಾರರ ಸಹಕಾರ ಸದಾ ಕಾಲ ಸ್ಮರಿಸುವಂತಹದ್ದು ಎಂದು ಹೇಳಿದರು.
2023-24ನೇ ಸಾಲಿನಲ್ಲಿ ಸಂಘವು 2,27,22,313.ರೂ ಪಾಲು ಬಂಡವಾಳ ಹೊಂದಿದ್ದು,66,64,45,991.ರೂ ಠೇವಣಾತಿ ಹೊರಬಾಕಿ ಇದೆ ಹಾಗೂ 58,86,43,511.ರೂ ಸಾಲ ಹೊರ ಬಾಕಿ ಇದೆ.5,33,67,722.ರೂ ಸಂಘವು ನಿಧಿಯನ್ನು ಹೊಂದಿದ್ದು.ವಿವಿಧ ಸ್ತರಗಳಲ್ಲಿ 29,52,33,900.ರೂ ಹೂಡಿಕೆಯನ್ನು ಮಾಡಲಾಗಿದೆ.ಪ್ರಸ್ತುತ ಸಾಲಿನಲ್ಲಿ ಸಂಘವು 1,55,09,557.37 ಪೈಸೆ.ರೂ ಲಾಭಾಂಶ ಗಳಿಸಿದ್ದು.324.91 ಕೋಟಿ.ರೂ ವಾರ್ಷಿಕ ವಹಿವಾಟನ್ನು ನಡೆಸಿದೆ ಎಂದರು.ಲಾಭಾಂಶದಲ್ಲಿ ಸಂಘದ ಸದಸ್ಯರಿಗೆ ಶೇ.14 ಡಿವಿಡೆಂಟ್ ಘೋಷಣೆ ಮಾಡಿದರು.
ಸಂಘದ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ ಅಳ್ವೆಗದ್ದೆ ವಾರ್ಷಿಕ ವರದಿಯನ್ನು ಮಂಡಿಸಿದರು.ಉಪಾಧ್ಯಕ್ಷ ಎಂ ಚಂದ್ರಶೀಲ ಶೆಟ್ಟಿ,ನಿರ್ದೇಶಕರುಗಳಾದ ವಾಸು ಪೂಜಾರಿ,ಭೋಜ ನಾಯ್ಕ,ಜಗದೀಶ ಪಿ ಪೂಜಾರಿ,ನರಸಿಂಹ ದೇವಾಡಿಗ,ರಾಮಕೃಷ್ಣ ಖಾರ್ವಿ,ಪ್ರಕಾಶ ದೇವಾಡಿಗ,ಎಂ ಅಣ್ಣಪ್ಪ ಬಿಲ್ಲವ,ನಾರಾಯಣ ಶೆಟ್ಟಿ,ರಾಮ,ನಾಗಮ್ಮ,ಸರೋಜ ಆರ್ ಗಾಣಿಗ ಹಾಗೂ ಜಿಲ್ಲಾ ಬ್ಯಾಂಕಿನ ಪ್ರತಿನಿಧಿ ಶಿವರಾಮ ಉಪಸ್ಥಿರತಿದ್ದರು.ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ಸಂಘ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.ಲೆಫ್ಟಿನೆಂಟ್ ಭರತ್ ದೇವಾಡಿಗ,ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರ್ಯಾಂಕ್ ಗಳಿಸಿದ ಪ್ರಗತಿ ಉದಯ ಕುಮಾರ್ ಮರವಂತೆ ಅವರನ್ನು ಸನ್ಮಾನಿಸಲಾಯಿತು.ವಿನಾಯಕ ರಾವ್ ಸ್ವಾಗತಿಸಿದರು.ಸೋಮಯ್ಯ ಬಿಲ್ಲವ ನಿರೂಪಿಸಿದರು.ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ ಅಳ್ವೆಗದ್ದೆ ವಂದಿಸಿದರು.ಸಂಘದ ಸಿಬ್ಬಂದಿಗಳು ಹಾಜರಿದ್ದರು.
ವರದಿ-ಜಗದೀಶ ದೇವಾಡಿಗ
ನಿಮ್ಮ ಸುದ್ದಿಗಳನ್ನು ನಮ್ಮ ಜಾಲಾತಾಣದಲ್ಲಿ ಪ್ರಕಟಿಸಲು ಸಂಪರ್ಕಿಸಿ-9916284048
ಕುಂದಾಪುರ:ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಜಿಲ್ಲಾ ಸಮಿತಿ ಉಡುಪಿ ವತಿಯಿಂದ ನವಚೇತನ ಸಮಾವೇಶ ಹಾಗೂ ಕುಂದಾಪುರ ತಾಲೂಕು…
ಉಡುಪಿ:ನೀಲಾವರದಲ್ಲಿ ಮನೆಗೆ ಸಿಡಿಲು ಬಡಿದ ಪರಿಣಾಮ ಮನೆಯಲ್ಲಿನ ಎಲೆಕ್ಟ್ರಾನಿಕ್ ಉಪಕರಣಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿ ಹೋಗಿದ್ದು ಲಕ್ಷಾಂತರ ರೂಪಾಯಿ ನಷ್ಟ…
ಮಂಗಳೂರು:ಫೆಂಗಲ್ ಚಂಡಮಾರುತದ ಹಿನ್ನೆಲೆಯಲ್ಲಿ ದ.ಕ ಜಿಲ್ಲೆಯಲ್ಲಿ ಸೋಮವಾರ ಭಾರಿ ಮಳೆಯಾಗಿದೆ.ಹವಾಮಾನ ವೈಪರಿತ್ಯ ದಿಂದಾಗಿ ಏಕಾಏಕಿ ಸುರಿದ ವರುಣನ ಅಬ್ಬರಕ್ಕೆ ಜಿಲ್ಲೆಯ…
ಕುಂದಾಪುರ: ಕೃಷಿಕರಾದ ನಾವುಂದ ಕಾರಂತರ ಹಿತ್ತಲು ಸೂರ ಪೂಜಾರಿಯವರ ಮನೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ಭತ್ತವನ್ನು ಶೇಕರಿಸಿಡುವ ಕುಂದಾಪುರದ ಆಡು ಭಾಷೆಯಲ್ಲಿ…
https://youtu.be/Nuq2NNGkcP4?si=GBDHfmSHQBwcQO7R ಕುಂದಾಪುರ:ಬೆಳ್ವೆ ಸಮೀಪದ ಗೊಮ್ಮೋಲ್ಚರ್ಚ್ ಹಿಂಭಾಗದಿಂದಒಳ್ಳೆ ಹೊಂಡ ಕಜ್ಕೆ ಸಂತೆಕಟ್ಟೆ ಸಂಪರ್ಕದ ಒಳ್ಳೆ ಹೊಂಡ ಬಳಿಕಿಂಡಿ ಅಣೆಕಟ್ಟಿನ ಮೇಲ್ಭಾಗದಲ್ಲಿ ಮಧ್ಯಾಹ್ನದ…
https://youtu.be/Nuq2NNGkcP4?si=GBDHfmSHQBwcQO7R ಕುಂದಾಪುರ:2000 ಇಸವಿಯಲ್ಲಿ ಆರಂಭಗೊಂಡಿರುವ ಡಾನ್ ಬಾಸ್ಕೊ ತ್ರಾಸಿ-ಹೊಸಾಡು ಸಂಸ್ಥೆಗೆ 25 ವರ್ಷ ತುಂಬಿರುವುದರಿಂದ ಸಂಸ್ಥೆಯ ರಜತ ಮಹೋತ್ಸವ ಕಾರ್ಯಕ್ರಮವನ್ನು…