ಕುದಾಪುರ:ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ),ಜಿಲ್ಲಾ ಸಮಿತಿ ಉಡುಪಿ,ಕುಂದಾಪುರ ತಾಲೂಕು ಸಮಿತಿ ವತಿಯಿಂದ ಶೋಷಿತರ ಸ್ವಾಭಿಮಾನಿ ಸಮಾವೇಶ ಮತ್ತು ಆಲೂರು ಶಾಖೆ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಆಲೂರು ಮೂಕಾಂಬಿಕಾ ಸಭಾಭವನದಲ್ಲಿ ಸೋಮವಾರ ನಡೆಯಿತು.
ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಷ್ಪಾರ್ಚನೆ ಸಲ್ಲಿಸುವುದರ ಮುಖೇನ ಶೋಷಿತರ ಸಮಾವೇಶಕ್ಕೆ ಚಾಲನೆಯನ್ನು ನೀಡಲಾಯಿತು.
ವಕೀಲರಾದ ಮಂಜುನಾಥ ಗಿಳಿಯಾರ್ ಮತ್ತು ವಿಜಯ ಕುಮಾರ್ ಅವರನ್ನು ಆಲೂರು ಗ್ರಾಮ ಶಾಖೆ ವತಿಯಿಂದ ಸನ್ಮಾನಿಸಲಾಯಿತು.ಅಂಬೇಡ್ಕರ್ ಹೋರಾಟ ಕುರಿತಾದ ಧ್ವನಿ ಸುರುಳಿಯನ್ನು ಬಿಡುಗಡೆ ಮಾಡಲಾಯಿತು.ಸಮಾಜದ ಹಿರಿಯ ಮಹಿಳೆಯರನ್ನು ಗೌರವಿಸಲಾಯಿತು.
ಜಿಲ್ಲಾ ಸಮಿತಿ ಸದಸ್ಯ ಸುರೇಶ್ ಹಕ್ಲಾಡಿ ಅವರು ನೂತನವಾಗಿ ಆಯ್ಕೆಗೊಂಡಿರುವ ಆಲೂರು ಗ್ರಾಮ ಶಾಖೆ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು.ಪ್ರತಿಭಾನ್ವಿತ ವಿದ್ಯಾರ್ಥಿನಿ ಕು.ಸಮೀಕ್ಷಾ ಸವರನ್ನು ಅಭಿನಂದಿಸಲಾಯಿತು.
ಆಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್ ದೇವಾಡಿಗ ಅವರು ಶೋಷಿತರ ಸ್ವಾಭಿಮಾನಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ,ನ್ಯಾಯುತವಾಗಿ ಹೋರಾಟ ಮಾಡುವ ಸಂಘಟನೆಗಳ…ಹೋರಾಟಕ್ಕೆ ಎಲ್ಲಾ ಕಡೆ ನ್ಯಾಯ ದೊರಕುತ್ತದೆ.ಸಂಘಟಿತರಾಗಿ ಬದುಕುವುದರಿಂದ ಸವಾಲುಗಳನ್ನು ಸುಲಭವಾಗಿ ಎದುರಿಸಬಹುದು.ಸಂಘಟನೆಗಳ ಮುಖೇನ ಗ್ರಾಮದಲ್ಲಿ ವಾಸಮಾಡುವ ಸಮುದಾಯದ ಜನರ ಶೈಕ್ಷಣಿಕ ಮತ್ತು ಉದ್ಯೋಗ ಹಾಗೂ ಭೂಮಿಯನ್ನು ದಾಖಲಾತಿ ಮಾಡಿ.ಶೋಷಿತ ಕುಟುಂಬಕ್ಕೆ ಸಹಕಾರ ನೀಡುವಂತಹ ಕೆಲಸವನ್ನು ಮಾಡಬೇಕು.ಶೈಕ್ಷಣಿಕವಾಗಿ ಮುಂದು ವರೆದಾಗ ಮಾತ್ರ ಸರಕಾರಿ ಸೌಲಭ್ಯಗಳನ್ನು ಮತ್ತು ಮೀಸಲಾತಿ ಪ್ರಯೋಜನೆಗಳನ್ನು ಪಡೆದು ಕೊಳ್ಳಲು ಸಾಧ್ಯವಾಗುತ್ತದೆ.ಇಲಾಖೆ ಮತ್ತು ಪಂಚಾಯಿತಿ ಮಟ್ಟದಲ್ಲಿ ಸಿಗುವ ಸೌಲಭ್ಯಗಳನ್ನು ಸಮುದಾಯದ ಜನರಿಗೆ ಮುಟ್ಟಿಸುವ ಕುರಿತು ಎಲ್ಲಾ ರೀತಿಯಲ್ಲೂ ಸಹಕಾರ ನೀಡುವುದಾಗಿ ಭರವಸೆಯನ್ನು ನೀಡಿದರು.
ಜಿಲ್ಲಾ ಸಮಿತಿ ಸಂಚಾಲಕ ವಕೀಲರಾದ ಟಿ.ಮಂಜುನಾಥ ಗಿಳಿಯಾರು ಅವರು ಮಾತನಾಡಿ,ಗ್ರಾಮೀಣ ಭಾಗದ ಜನರಿಗೆ ಸ್ವಾಭಿಮಾನಿ ಬದುಕನ್ನು ಕಟ್ಟಿಕೊಳ್ಳಲು ಹಾಗೂ ಅನ್ಯಾಯದ ವಿರುದ್ಧ ಹೋರಾಟವನ್ನು ಮಾಡಲು ಸಂಘಟನೆಗಳ ಪಾತ್ರ ಬಹಳಷ್ಟು ಮುಖ್ಯವಾಗಿರುತ್ತದೆ.ಶೋಷಿತ ಸಮಾಜವು ನ್ಯಾಯವನ್ನು ದೊರಕಿಸಿಕೊಳ್ಳಲು ಹೋರಾಟದ ಮಾಡಬೇಕಾದ ಪರಿಸ್ಥಿತಿ ಎದುರಾಗಿದ್ದ ಕಾರಣದಿಂದಲೆ ಚಳುವಳಿಗಳನ್ನು ಮಾಡಬೇಕಾದ ಪರಿಸ್ಥಿತಿ ಇದೆ ಎಂದರು.
ಜಿಲ್ಲಾ ಸಮಿತಿ ಪ್ರದಾನ ಸಂಚಾಲಕರಾದ ಸುಂದರ್ ಮಾಸ್ತರ್ ಮಾತನಾಡಿ,ಅತ್ಯಂತ ಕಟ್ಟಕಡೆಯ ಗ್ರಾಮವಾದ ಆಲೂರಿನಲ್ಲಿ ಜ್ವಲಂತ ಸಮಸ್ಯೆಗಳು ಜನರನ್ನು ಇಂದಿಗೂ ಕಾಡುತ್ತಿದೆ.ಭೂಮಿ ಹಕ್ಕಿಗಾಗಿ ಹಾಗೂ ನ್ಯಾಯಕ್ಕಾಗಿ ಹೋರಾಟ ಮಾಡಬೇಕಾದಂತಹ ಪರಿಸ್ಥಿತಿ ಎದುರಾಗಿದ್ದರಿಂದ ಜನರನ್ನು ಸಂಘಟನಾತ್ಮಕವಾಗಿ ಒಗ್ಗೂಡಿಸಿ ನ್ಯಾಯದ ಪರ ಮತ್ತು ಜನಪರ ಕೆಲಸಗಳನ್ನು ಮಾಡಲಾಗುವುದು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ತಾಲೂಕು ಸಮಿತಿ ಸಂಚಾಲಕ ರಾಜು ಕೆ.ಸಿ ಬೆಟ್ಟಿನಮನೆ ಮಾತನಾಡಿ,ರಾಜಕೀಯ ಪಕ್ಷಗಳ ವೈಭವೀಕರಣವನ್ನು ಸಂಘಟನೆಗಳ ಮುಖೇನ ಮಾಡದೆ.ಸಂಘಟನೆಗಳ ದೈಯೋದ್ದೇಶಕ್ಕೆ ತಕ್ಕಂತೆ ನಡೆದುಕೊಳ್ಳಬೇಕೆಂದು ಕಿವಿ ಮಾತನ್ನು ಹೇಳಿದರು.ಸಮಾಜಕ್ಕೆ ಏನೆ ಪ್ರತಿಫಲ ಸಿಕ್ಕಿದ್ದರು ಅದು ಅಂಬೇಡ್ಕರ್ ಅವರು ಕೊಟ್ಟಂತಹ ಕೊಡುಗೆ ಆಗಿದೆ ಎಂದರು.
ಆಲೂರು ಪಂಚಾಯಿತಿ ಉಪಾಧ್ಯಕ್ಷೆ ಸಿಂಗಾರಿ,ಜಿಲ್ಲಾ ಸಮಿತಿ ಸಂಚಾಲಕ ಶ್ಯಾಮರಾಜ್ ಬಿರ್ತಿ,ಜಿಲ್ಲಾ ಸಂಘಟನಾ ಸಂಚಾಲಕ ಶ್ಯಾಮಸುಂದರ್ ತೆಕ್ಕಟ್ಟೆ,ತಾಲೂಕು ಮಹಿಳಾ ಸಮಿತಿ ಸಂಚಾಲಕಿ ಗೀತಾ ಸುರೇಶ ಕುಮಾರ್,ಜಿಲ್ಲಾ ಸಮಿತಿ ಸದಸ್ಯ ಸುರೇಶ್ ಹಕ್ಲಾಡಿ, ಮಂಜುನಾಥ ಹಳಗೇರಿ,ಶ್ರೀಕಾಂತ್ ಹಿಜಾಣ,ಗೋವಿಂದ ಹಳಗೇರಿ,ಚಂದ್ರ ಕೊರ್ಗಿ, ಪ್ರಭಾಕರ ಅಮಾಸೆಬೈಲು,ಚಂದ್ರ ಉಳ್ಳೂರು,ಶ್ರೀಧರ ಮೊಳಹಳ್ಳಿ,ಶ್ರೀನಿವಾಸ ಮೊಳಹಳ್ಳಿ,ಸುರೇಶ್ ಕುಮಾರ್ ಬೈಂದೂರು,ಶಿವರಾಜ್ ಬೈಂದೂರು,ಕುಮಾರ ಕೋಟ,ರಮೇಶ್ ಮರವಂತೆ,ಸುರೇಶ್ ಬಾರ್ಕೂರು,ಆಲೂರು ಗ್ರಾಮ ಶಾಖೆ ಸಂಚಾಲಕ ಕುಷ್ಠ ಹರ್ಕೂರು,ಕೋಶಾಧಿಕಾರಿ ಅಣ್ಣಪ್ಪ ಹರ್ಕೂರು ಮತ್ತು ಪದಾಧಿಕಾರಿಗಳು ಹಾಗೂ ವಿವಿಧ ಗ್ರಾಮ ಶಾಖೆಗಳ ಪದಾಧಿಕಾರಿಗಳು,ಸಮಾಜ ಬಾಂಧವರು ಉಪಸ್ಥಿತರಿದ್ದರು.ಭಾಸ್ಕರ ಕುಂಟೋಳಿ ಸ್ವಾಗತಿಸಿದರು.ರವಿ ಬನ್ನಾಡಿ ನಿರೂಪಿಸಿದರು.ಮಂಜುನಾಥ ನಾಗೂರು ವಂದಿಸಿದರು.
ವರದಿ-ಜಗದೀಶ್
ನಿಮ್ಮ ಸುದ್ದಿಗಳನ್ನು ನಮ್ಮ ಜಾಲಾತಾಣದಲ್ಲಿ ಪ್ರಕಟಿಸಲು ಸಂಪರ್ಕಸಿ-9916284048
ಕುಂದಾಪುರ:ಸರಕಾರದ ಅಧ್ಯಯನದ ವರದಿ ಪ್ರಕಾರ ಶೇ.50 ರಷ್ಟು ಗರ್ಭಿಣಿ ಮಹಿಳೆಯರಲ್ಲಿ ಹಾಗೂ ಶೇ.60 ರಷ್ಟು ಮಕ್ಕಳಲ್ಲಿ ಮತ್ತು ಶೇ.60 ರಷ್ಟು…
ಕುಂದಾಪುರ:ಸಾಮಾಜಿಕ ಜಾಲಾತಾಣದಲ್ಲಿ ನಕಲಿ ಖಾತೆ ಸೃಷ್ಟಿಸಿ,ಬೈಂದೂರು ಕ್ಷೇತ್ರದ ಶಾಸಕರ ವಿರುದ್ಧ ಸುಳ್ಳು ಸುದ್ದಿ ಹರಡಿಸಿ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಾನೂನು…
ಕುಂದಾಪುರ: ಮಾರಿಷಸ್ ದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದ ಸುಳ್ಯದ ಯುವಕನೋರ್ವ ಅಲ್ಲಿನ ಜಲಪಾತ ವೀಕ್ಷಣೆಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ…
ಕುಂದಾಪುರ:ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಹೊಸಹಿತ್ಲು ಸಮೀಪ ಸಮುದ್ರದಲ್ಲಿ ಈಜಲು ಹೋಗಿದ್ದ ನಾಲ್ವರು ವಿದ್ಯಾರ್ಥಿಗಳ ಪೈಕಿ ಮೂವರು ವಿದ್ಯಾರ್ಥಿಗಳು ಸಮುದ್ರ…
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಕಾಲೇಜು ಬ್ರಹ್ಮಾವರದಲ್ಲಿ ಕನ್ನಡ ಭಾμÁ ವಿಭಾಗದ ವತಿಯಿಂದ ಕನ್ನಡ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಸರಕಾರಿ ಪ್ರಥಮ…
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಕಾಲೇಜಿನಲ್ಲಿ ಹಿಂದಿ ಭಾಷಾ ವಿಭಾಗದ ವತಿಯಿಂದ ಹಿಂದಿ ದಿವಸ್ 'ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಪೂರ್ಣ ಪ್ರಜ್ಞಾ…