ಕುಂದಾಪುರ:ಇಂದು ನಾವು ಇರ್ತಿವಿ ನಾಳೆ ಹೋಗ್ತೀವಿ ಆದರೆ ನಮ್ಮ ಹೆಸರು ಮತ್ತು ಮಾಡಿದ ಕೆಲಸವು ಜೀವಂತ ಇರಬೇಕು ಅನ್ನುತ್ತಾರೆ…*
11 ವರ್ಷಗಳಿಂದ ದೇಶ ಸೇವೆಯೇ ಈಶಾ ಸೇವೆ ಎಂದು ತನ್ನ ಜೀವನವನ್ನೇ ದೇಶ ಧರ್ಮಕ್ಕಾಗಿ ಸಮರ್ಪಿಸುತ್ತ ಸವೆಯುತ್ತ ರಾಷ್ಟ್ರೀಯ ಸ್ವಯಂ ಸೇವಕನಾಗಿ ರಾಜ್ಯದ ಜಿಲ್ಲೆ ತಾಲೂಕು ಊರೂರು ಕೇರಿ ಅಲೆಯುತ್ತಾ ನಮ್ಮ ಹಿಂದು ಸಮಾಜ ಜಾಗ್ರತಗೊಳಿಸುತ್ತ ನಿರಂತರ ಜನರ ಸೇವೆ ಮಾಡುತ್ತಾ ಬಂದಿದ್ದಾರೆ…
ಇಂತಹ ಒಬ್ಬ ನಮ್ಮೂರಿನ ಸಮಾಜ ಸೇವಕನನ್ನು ಅವರ ಸೇವೆಯನ್ನು ನಾವು ಗುರುತಿಸಲೇಬೇಕೆಂಬ ಉದ್ದೇಶದಿಂದ ಅವರ ಈ ಕಿರುಪರಿಚಯ👇
ಸರಕಾರಿ ಶಾಲೆಯಲ್ಲಿ ಕಲಿತವನು ಮಾತ್ರ ಪರಿಪೂರ್ಣ ಉತ್ತಮ ಸಾಮಾಜಿಕ ಕಾರ್ಯಕರ್ತನಾಗಬಲ್ಲ ಯಾಕೆಂದರೆ ಅವನು ಮಾತ್ರ ಸಮಾಜದ ಅಳ ಅಗಲ ಕಷ್ಟ ಸುಖ ನೋವು ನಲಿವುಗಳನ್ನು ಸಮಾಜದ ಚಿತ್ರಣವನ್ನು ಅರಿತುಕೊಂಡಿರುತ್ತಾನೆ ಎಂಬುದಕ್ಕೆ ನಮ್ಮ ಗಿರೀಶ್ ರೇ ಉತ್ತಮ ಉದಾಹರಣೆ.
ಎಲ್ಲವೂ ಉಚಿತವಾಗಿ ಕೊಟ್ಟು ವಿದ್ಯೆ ಕಲಿಸಿದ ದೇಶಕ್ಕೆ ತಾನು ಏನಾದರೂ ಋಣ ತೀರಿಸಬೇಕೆಂಬ ತುಡಿತ ಅವರಲ್ಲಿದೆ.
ಹಲವು ವರ್ಷಗಳಿಂದ ನಮ್ಮ ಶಾಲೆ ಉಳಿವಿನ ಹೋರಾಟಕ್ಕೆ ನಾವುಗಳು ಬಹಳಷ್ಟು ಶ್ರಮಿಸಿದ್ದೇವೆ ಈ ಹೋರಾಟಕ್ಕೆ ನಮ್ಮ ಆತ್ಮೀಯ ಗಿರೀಶ್ ರವರ ಆಗಮನದಿಂದ ಅವರ ಅರ್ಥಿಕ ಸಹಕಾರದಿಂದ ನಮಗೆ ಆನೆ ಬಲಬಂದಂತಾಗಿದೆ.
ಆರಂಭದಲ್ಲಿ ಕಂಚುಗೋಡಿನ ನಮ್ಮ ಶಾಲೆ ವೇದಿಕೆಯಲ್ಲಿ ಗಿರೀಶ್ ಕೊಡಪಾಡಿ ಹೇಳಿದಾಗೆ, “ಹೆತ್ತ ತಾಯಿ, ಹೊತ್ತ ಭೂಮಿ, ಕಲಿತ ಶಾಲೆಯ ಋಣ ತೀರಿಸಲು ಸಾಧ್ಯವಿಲ್ಲ ಆದರೆ ನನ್ನ ಶಾಲೆಗೆ ನನ್ನಿಂದ ಎಷ್ಟು ಸಾಧ್ಯವೋ ಅಷ್ಟು ಸಹಕರ ಸಹಾಯ ಶಕ್ತಿಮಿರಿ ಪ್ರಯತ್ನಿಸುತ್ತೇನೆ ಎಂದು ಹೇಳಿದ ಕ್ಷಣದಿಂದಲೇ ಮಾತಿಗೆ ತಪ್ಪದೇ ಬರೀ ಆಶ್ವಾಸನೆ ಆಗದೆ ಆರಂಭದಲ್ಲಿ ಗಿರೀಶ್ ರವರು ತನ್ನ ಶಾಲಾ ಮಕ್ಕಳಿಗೆ ಪೆನ್ನು ಪುಸ್ತಕ ಕಲಿಕೆ ಸಾಮಾಗ್ರಿಗಳನ್ನು ನೀಡಿದರು.
ನಂತರ ಮತ್ತೆ ತನ್ನಿಂದ ಮತ್ತು ತನ್ನ ಪರಿಚಯಸ್ಥ ಉದ್ಯಮಿ ಮತ್ತು ಶಾಸಕರಿಂದ ಅವರ ಬೆನ್ನುಬೀಡದೇ ನಮ್ಮ ಕಂಚುಗೋಡು ಶಾಲೆ ಮಕ್ಕಳಿಗೆ ಸ್ಮಾರ್ಟ್ ಕ್ಲಾಸಿಗಾಗಿ ಎರಡು ಕಂಪ್ಯೂಟರ್ ಮತ್ತು ಸಲಕರಣೆಗಳು, ಕಂಚುಗೋಡು ಅಂಗನವಾಡಿ ಸೇರಿ ಒಟ್ಟು ನಾಲ್ಕು ಅಂಗನವಾಡಿ ಮತ್ತು ಕಂಚುಗೋಡು ಶಾಲಾ ಮಕ್ಕಳಿಗೆ ಉತ್ತಮ ಗುಣಮಟ್ಟದ 200 ಶಾಲಾ ಬ್ಯಾಗ್ ಕೊಟ್ಟಿದ್ದಾರೆ, 80 ಮಕ್ಕಳಿಗೆ ಸ್ಪೋರ್ಟ್ಸ್ ಟೀ-ಶಾರ್ಟ್ ಚಡ್ಡಿ ಮತ್ತು 25 ಸಾವಿರದ ಮೌಲ್ಯದ ಕ್ರೀಡಾ ಸಾಮಾಗ್ರಿಗಳು ನೀಡಿದ್ದಾರೆ ಮತ್ತು ಬೆಂಗಳೂರಿನಿಂದ ಆತ್ಮೀಯ ಶಾಸಕರಿಂದ ರೂ.5 ಲಕ್ಷ ತಂದು ಮೇಲ್ಚಾವಣಿ ಕಟ್ಟಡವನ್ನು ಕೂಡ ನಿರ್ಮಿಸಿಕೊಟ್ಟಿದ್ದಾರೆ ಅದು ನಾಳೆ ಶಾಸಕರಿಂದ ಅಥವಾ ಇವರಿಂದಲೇ ಉದ್ಘಾಟನೆಯಿದೆ ಹಾಗೇ ಮುಂದೆ ನಮ್ಮ ಕನಸಿನ ಕೂಸು ಶಾಲೆ ಆವರಣ ಗೋಡೆ ಮತ್ತು ಶಾಲಾ ವಾಹನವನ್ನು ತೆಗೆಸಿಕೊಡುವ ಜವಾಬ್ದಾರಿ ನನ್ನದು ಎಂದು ಭರವಸೆ ನೀಡಿದ್ದಾರೆ ಹೇಳಿದ್ದನ್ನು ಮಾಡಿಯೇ ತಿರುತ್ತಾರೆ ಎಂಬ ನಂಬಿಕೆ ನಮಗಿದೆ, ಇಷ್ಟೇ ಅಲ್ಲದೇ ಮುಂದೆ ಇನ್ನೂ ಹೆಚ್ಚಿನ ಸಹಾಯ ಮಾಡುತ್ತೇನೆ ಜೊತೆಗಿರುತ್ತೇನೆ ಎಂದು ಹೇಳಿದ್ದು ನಮಗೆಲ್ಲರಿಗೂ ತುಂಬಾ ಸಂತೋಷವಾಗಿದೆ…
ಇದಕ್ಕಿಂತ ಹಿಂದೆ ಕೂಡ ತನ್ನೂರಿಗೆ ಕೊಡಪಾಡಿ ಶಾಲೆಗೆ ವಿವೇಕ ಕೊಠಡಿ, ಭಾಸ್ಕರ ಪೈ ಶಾಲೆಗೆ ರೋಡ್, ಕೊಡಪಾಡಿಯಿಂದ ಗುಹೇಶ್ವರ ರೋಡ್, ಗುಹೇಶ್ವರ ಭಧ್ರಕಾಳಿ ಅಮ್ಮನವರ ದೇವಸ್ಥಾನಕ್ಕೆ 25 ಲಕ್ಷ ಅನುದಾನ ತೆಗೆಸಿಕೊಟ್ಟಿದ್ದಾರೆ. ಹೇಳಿದರೆ ಅನುದಾನದ ಸರಮಾಲೆ ಬಹಳಷ್ಟಿದೆ, ಅಂಗವಿಕಲ ಅಶಕ್ತನಿಗೆ ಹೊಲಿಗೆ ಯಂತ್ರ ನೀಡಿದ್ದು ತನ್ನ ಹೃದಯ ವೈಶಾಲ್ಯತೆ ತೋರುತ್ತದೆ ಹೀಗೆಯೇ ನಮಗೆ ಗೊತ್ತಿಲ್ಲದೇ ತೆರೆಯಮರೆಯಲ್ಲಿ ನಿಂತು ತನ್ನ ಊರಿಗೆ ಶಾಲೆಗೆ ಮಾಡಿದ ದೊಡ್ಡಮಟ್ಟದ ಅರ್ಥಿಕ ಸಹಾಯ ಕೆಲಸಗಳು ಬಹಳಷ್ಟಿದೆ…!!
*ಇಂತಹ ಒಬ್ಬ ಸಮಾಜ ಸೇವಕ ಶಾಲೆಗೊಬ್ಬ ಊರಿಗೊಬ್ಬರು ಇರಲಿ ನೀವು ಇನ್ನೂ ಉತ್ತರೊತ್ತರಕ್ಕೆ ಬೆಳೆದು ಊರಿಗೆ ಬೆಳಕಾಗಲಿ ಶ್ರೀ ದೇವರು ನಿಮಗೆ ಆಯುರಾರೋಗ್ಯ ಐಶ್ವರ್ಯ ಕೊಟ್ಟು ಆಶೀರ್ವದಿಸಲಿ ಎಂದು ಆಶೀಸುತ್ತೇನೆ.
*- ಹೆಬ್ಬುಲಿ ರಮ್ಮಿ*
ಕುಂದಾಪುರ:ಮಹಿಳಾ ಮೀನುಗಾರರ ವಿವಿಧೋದ್ದೇಶ ಸಹಕಾರಿ ಸಂಘ ಮರವಂತೆ,ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು,ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಉಡುಪಿ ಹಾಗೂ…
ಕುಂದಾಪುರ:ನೃತ್ಯ ಬಿಂಬ ಸಾಂಸ್ಕೃತಿಕ ಪ್ರತಿಷ್ಠಾನ ಬೆಂಗಳೂರು ಮತ್ತು ಕಲೆಗಳ ಉತ್ಸವ ಬೆಂಗಳೂರು ಅವರ ಜಂಟಿ ಆಶ್ರಯದಲ್ಲಿ ಉಡುಪಿ ಜಿಲ್ಲೆಯ ಪ್ರಸಿದ್ಧಕೊಲ್ಲೂರು…
ಕುಂದಾಪುರ:ಜೂನ್.21 ರಂದು ಸ್ಕೂಟರ್‍ನಲ್ಲಿ ಅಕ್ರಮವಾಗಿ ಗೋಮಾಂಸವನ್ನು ಸಾಗಾಟ ಮಾಡುತ್ತಿದ್ದ ಗಂಗೊಳ್ಳಿ ಮೀನು ಮಾರ್ಕೆಟ್ ಬಳಿ ನಿವಾಸಿ ಅಬ್ದುಲ್ ರಹೀಮ್ (35)…
ಬೈಂದೂರು:ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್‍ವಾದ ಜಿಲ್ಲಾ ಸಮಿತಿ ವತಿಯಿಂದ ಬೈಂದೂರು ತಾಲೂಕು ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಭೀಮ…
ಮುಳ್ಳಿಕಟ್ಟೆ:ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ನಿವಾಸಿ ಆಯುರ್ವೇದ ವೈದ್ಯ ಡಾ.ಶ್ರೀನಿವಾಸ ಪೈ (62) ಹೃದಯಘಾತದಿಂದ ಸೋಮವಾರ ನಿಧನರಾದರು.ಅವರಿಗೆ ಪತ್ನಿ,ಮಗಳು,ತಂದೆ,ಇಬ್ಬರು…
ಕುಂದಾಪುರ:ದೂರದರ್ಶನ ಚಂದನ ಟಿವಿಯಲ್ಲಿ ಜೂನ್.16 ರ ಬೆಳಿಗ್ಗೆ 8 ಕ್ಕೆ ಯೋಗಾಚಾರ್ಯ ಸಂತೋಷ್ ಕುಮಾರ್ ಅವರಿಂದ ವ್ಯಾಯಾಮ ಮತ್ತು ಯೋಗಾಸನ…