ಕುಂದಾಪುರ:ಬೈಂದೂರು ತಾಲೂಕಿನ ಪ್ರಸಿದ್ಧ ಮರವಂತೆ ಮಹಾರಾಜ ಸ್ವಾಮಿ ಶ್ರೀ ವರಾಹ ದೇವರಿಗೆ ಬೆಳ್ಳಿ ರಥವನ್ನು ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಭಾನುವಾರ ಸಮರ್ಪಣೆ ಮಾಡಲಾಯಿತು.
ಬೆಳ್ಳಿರಥ ಸಮರ್ಪಣೆ ಕಾರ್ಯಕ್ರಮದ ಅಂಗವಾಗಿ ಶ್ರೀ ದೇವರಿಗೆ ಹೂವಿನ ಅಲಂಕಾರ ಪೂಜೆ,ಹಣ್ಣುಕಾಯಿ ಮತ್ತು ಮಂಗಳಾರತಿ ಸೇವೆ ಹಾಗೂ ಅನ್ನದಾನ ಸೇವೆಯನ್ನು ಸಲ್ಲಿಸಲಾಯಿತು.
ಸಹಸ್ರಾರು ಭಕ್ತರು ಶ್ರೀ ಕ್ಷೇತ್ರಕ್ಕೆ ಆಗಮಿಸಿ ಶ್ರೀದೇವರ ದರ್ಶನ ಪಡೆದರು.ಬೆಳ್ಳಿ ರಥ ಬೃಹತ್ ಪುರಮೆರವಣಿಗೆ ಶ್ರೀರಾಮ ದೇವಸ್ಥಾನದಿಂದ ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನದ ವರೆಗೆ ವಿಜೃಂಭಣೆಯಿಂದ ನಡೆಯಿತು.ಶ್ರೀ ರಾಮ ದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸುವುದರ ಮುಖೇನ ಮೆರವಣಿಗೆಗೆ ಚಾಲನೆಯನ್ನು ನೀಡಲಾಯಿತು.ಮಹಿಳೆಯರು ಮತ್ತು ಪುರುಷರು ಸಮವಸ್ತ್ರ ಧರಿಸಿ ಮೆರವಣಿಗೆಯಲ್ಲಿ ಹೆಜ್ಜೆಯನ್ನು ಹಾಕಿದರು.ಭಜನೆ ಕುಣಿತ,ಚಂಡೆ ವಾದನ ಮೆರವಣಿಗೆ ಸೊಬಗನ್ನು ಹೆಚ್ಚಿಸಿತು.
ಶ್ರೀ ಆದಿನಾರಾಯಣ ಸ್ವಾಮೀಯು ಶ್ರೀ ವರಾಹ,ಶ್ರೀ ವಿಷ್ಣು,ಶ್ರೀ ನಾರಸಿಂಹ ಸ್ವಾಮೀಯ ರೂಪದಲ್ಲಿ ನೆಲೆನಿಂತು ಸಹಸ್ರವರ್ಷಗಳಿಂದ ಭಕ್ತರ ಇμÁ್ಟರ್ಥ ನೆರವೇರಿಸುತ್ತಿರುವ ಪ್ರಸಿದ್ಧ ಕ್ಷೇತ್ರವೇ ಮಹಾರಾಜ ಸ್ವಾಮೀ ಶ್ರೀ ವರಾಹ ದೇವಸ್ಥಾನ ಮರವಂತೆ.ಶ್ರೀ ಕ್ಷೇತ್ರದ ಪರಂಪರೆಯ ಉತ್ಸವಾದಿಗಳಲ್ಲಿ ಪ್ರಮುಖವಾದ ಪ್ರಾಕಾರ ರಥೋತ್ಸವಕ್ಕೆ ಈ ಹಿಂದೆ ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘ ಮತ್ತು ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸಂಘ ಗಂಗೂಳ್ಳಿ ಅವರು ಜಂಟಿಯಾಗಿ ಪುಷ್ಪರಥವನ್ನು ಶ್ರೀ ಭಗವಂತನಿಗೆ ಸಮರ್ಪಿಸಿದ್ದು,ಅನುಚಾನವಾಗಿ ಪ್ರಾಕಾರ ರಥೋತ್ಸವ ನೆರವೇರಿಕೊಂಡು ಬಂದಿರುತ್ತದೆ. ಈಗಿನ ವ್ಯವಸ್ಥಾಪನಾ ಸಮಿತಿಯು ಕಾಷ್ಠ ರಥವೇರುತ್ತಿರುವ ಭಗವಂತನನ್ನು ರಜತ ರಥವೇರಿಸಬೇಕೆಂಬ ಅಪೇಕ್ಷೆಯಿಂದ ರಜತ ರಥ ನಿರ್ಮಾಣದ ಸಂಕಲ್ಪದೊಂದಿಗೆ ಹಲವು ಭಕ್ತರನ್ನು ಸಂಪರ್ಕಿಸಿ,ಸರ್ವಭಕ್ತರ ಸಹಕಾರದೊಂದಿಗೆ ರಜತ ರಥ ನಿರ್ಮಾಣಗೊಂಡು ಬೆಳ್ಳಿ ರಥ ಸಮರ್ಪಣೆ ಕಾರ್ಯಕ್ರಮ ವಿಜೃಂಭಣೆಯಿಂದ ಭಾನುವಾರ ಸಂಪನ್ನಗೊಂಡಿದೆ.
ಶ್ರೀ ಆದಿಶಕ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ ಶ್ರೀ ಕ್ಷೇತ್ರ ಹೊರನಾಡು ಧರ್ಮಕರ್ತರು ಪೂಜ್ಯ ಶ್ರೀ ಜಿ.ಭೀಮೇಶ್ವರ ಜೋಷಿ ಅವರು ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ಮರವಂತೆ ವರಾಹ ಸ್ವಾಮಿ ಕ್ಷೇತ್ರಕ್ಕೂ ಜಗನ್ಮಾತೆ ಸನ್ನಿಧಾನಕ್ಕೂ ಅವಿನಾಭವ ಸಂಬಂಧ ಇದೆ.ವಿಷ್ಣುವಿನ ದಶಾವಾತರಗಳಲ್ಲಿ ಪ್ರಮುಖ ಮೂರು ಅವತಾರಗಳು ಇಲ್ಲಿ ನೆಲೆಗೊಂಡಿರುವುದು ಇಲ್ಲಿನ ಜನರ ಭಾಗ್ಯವಾಗಿದೆ.ಒಂದೆ ಕಡೆಯಲ್ಲಿ ದೇವರ ಮೂರು ಅವಾತರಗಳನ್ನು ನೋಡಿ ಕಣ್ಣ್ತುಂಬಿಕೊಳ್ಳಲು ಅವಕಾಶ ಇರುವುದು ಮರವಂತೆ ಕ್ಷೇತ್ರದಲ್ಲಿ ಮಾತ್ರ ಎಂದು ಹೇಳಿದರು.ಶ್ರೀ ದೇವರು ಸಮಸ್ತ ಭೂಮಂಡಲಕ್ಕೆ ಒಳಿತನ್ನು ಮಾಡಲಿ ಎಂದು ಶುಭಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಭಾರತೀಯ ಸಂಸ್ಕೃತಿ ಪ್ರತಿಷ್ಠಾನ ಉಡುಪಿ ಅಧ್ಯಕ್ಷರಾದ ರಾಜಶೇಖರ್ ಹೆಬ್ಬಾರ್ ಮಾತನಾಡಿ,ಭಗವಂತನ ಇಚ್ಚೆ ಅಂತೆ ರಜತ ಸಮರ್ಪಣೆ ಕಾರ್ಯ ವ್ಯವಸ್ಥಿತವಾಗಿದೆ ನಡೆದಿದೆ.ಇದೊಂದು ಆವಿಸ್ಮರಣೀಯ ಸಂದರ್ಭವಾಗಿದ್ದು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಕಾರ್ಯ ಮೆಚ್ಚುವಂತಹದ್ದು ಎಂದು ಬಣ್ಣಿಸಿದರು.
ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಮಾತನಾಡಿ,ಕೃಷಿ,ಮೀನುಗಾರಿಕೆ ಚಟುವಟಿಕೆಗೆ ಸೇರಿದಂತೆ ಶುಭಕಾರ್ಯಗಳಿಗೆ ಮೊದಲು ಪೂಜೆಯನ್ನು ಕೊಡುವುದು ಇಲ್ಲಿನ ವಾಡಿಕೆ ಆಗಿದೆ.ಮೀನುಗಾರರು ಹಾಗೂ ಭಕ್ತರ ಸಹಕಾರದಿಂದ ದೇವರಿಗೆ ಬೆಳ್ಳಿ ರಥ ಸಮರ್ಪಣೆ ಮಾಡಿರುವುದು ಬಹಳಷ್ಟು ಖುಷಿ ಕೊಟ್ಟಿದೆ ಎಲ್ಲರಿಗೂ ಒಳಿತನ್ನು ಕರುಣಿಸಲಿ ಎಂದು ಶುಭಹಾರೈಸಿದರು.
ಮಹಾರಜ ಸ್ವಾಮಿ ಶ್ರೀವರಾಹ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ ಎಂ ನಾಯಕ್ ಮಾತನಾಡಿ,ಮಳೆ ದೇವರು ಎಂದು ಪ್ರಸಿದ್ಧಿ ಪಡೆದಿರುವ ಶ್ರೀ ವರಾಹ ದೇವರ ದೇವತಾ ಕಾರ್ಯ ಊರಿನವರು ಮತ್ತು ದಾನಿಗಳು,ಸಮಿತಿ ಸದಸ್ಯರು ಹಾಗೂ ನಾಡದೋಣಿ ಮೀನುಗಾರರ ಸಹಕಾರದಿಂದ ದೇವರಿಗೆ ರಜತ ರಥ ಸಮರ್ಪಣೆ ಮಾಡಲಾಗಿದೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಮರವಂತೆ ಪಂಚಾಯಿತಿ ಅಧ್ಯಕ್ಷ ಲೋಕೇಶ್ ಖಾರ್ವಿ,ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಜು ಪೂಜಾರಿ,ನಿತಿನ್ ನಾರಾಯಣ,ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ನಾಗೇಶ ಖಾರ್ವಿ ಅಳಿವೆಕೋಡಿ,ಕರಾವಳಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸಂಘ ಗಂಗೊಳ್ಳಿ ವಲಯ ಅಧ್ಯಕ್ಷ ಯಶವಂತ ಗಂಗೊಳ್ಳಿ,ನಾಗಲಕ್ಷ್ಮೀ ಸತೀಶ್ ಕೊಠಾರಿ ನಾಯ್ಕನಕಟ್ಟೆ,ರಜತ ರಥ ಶಿಲ್ಪಿ ಜಕ್ಕಣಾಚಾರ್ಯ ಶ್ರೀ ಕಾಳಿಕಾಂಬ ಶಿಲ್ಪಕಲೆ ಬೆಳಗೂರು,ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಸತೀಶ್ ಎಂ ನಾಯಕ್ ಸ್ವಾಗತಿಸಿದರು.ಸುಬ್ರಹ್ಮಣ್ಯ ಆಚಾರ್ಯ ನಿರೂಪಿಸಿದರು.ಅನಿತಾ ಆರ್.ಕೆ ವಂದಿಸಿದರು
ಮುಳ್ಳಿಕಟ್ಟೆ:ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ಜಾಜಿಮಕ್ಕಿ ನಿವಾಸಿಯಾಗಿರುವ ಹವ್ಯಾಸಿ ಯಕ್ಷಗಾನ ಕಲಾವಿದ ಯಕ್ಷ ಪೋಷಕ,ಖ್ಯಾತ ದಾರು ಶಿಲ್ಪಿ ರವೀಂದ್ರ…
ಕುಂದಾಪುರ:ದೇಶದ ಭದ್ರತೆ ಹಿತದೃಷ್ಠಿಯಿಂದ ನೌಕಪಡೆ,ಕಸ್ಟಮ್ಸ್ ಇಲಾಖೆ,ಕರಾವಳಿ ಕಾವಲು ಲೀಸ್ ಪಡೆ ಸೇರಿದಂತೆ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಬುಧವಾರದಿಂದ 2 ದಿನಗಳ…
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿನ ಬಿ.ಸಿ.ಎ ವಿಭಾಗದ ವತಿಯಿಂದ ಎಲೆವೆಂಶಿಯಾ 2ಕೆ24 ಫೆಸ್ಟ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.ರೋಬೊಸಾಫ್ಟ್…
ಉಡುಪಿ:ಜಿಲ್ಲೆಯ ಹೆಬ್ರಿ ತಾಲೂಕಿನ ಹೆಬ್ರಿ ಕಬ್ವಿನಾಲೆ ಸೀತಂಬೈಲುವಿನಲ್ಲಿ ಸೋಮವಾರ ರಾತ್ರಿ ಎ ಎನ್ ಎಫ್ ಹಾಗೂ ನಕ್ಸಲರ ನಡುವೆ ನಡೆದ…
ಕುಂದಾಪುರ:ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕುಂದಾಪುರ,ಕರ್ನಾಟಕ ಪ್ರೌಢ ಶಾಲಾ ಸಹಶಿಕ್ಷಕರ ಸಂಘ ಕುಂದಾಪುರ ತಾಲೂಕು ಘಟಕ…
ಮುಳ್ಳಿಕಟ್ಟೆ:ಕುಂದಾಪುರ ದಿಂದ ಅರಾಟೆಗೆ ಸಾಗುತ್ತಿದ್ದ ಆಟೋ ರಿಕ್ಷಾಕ್ಕೆ ಮುಳ್ಳಿಕಟ್ಟೆ ಸರ್ಕಲ್ ನಲ್ಲಿ ತ್ರಾಸಿ ಕಡೆಯಿಂದ ಕುಂದಾಪುರ ಕಡೆಗೆ ಸಾಗುತ್ತಿದ್ದ ಕಾರು…