ಕುಂದಾಪುರ:ಬೈಂದೂರು ತಾಲೂಕಿನ ಪ್ರಸಿದ್ಧ ಶ್ರೀ ಅಗಸ್ತೇಶ್ವರ ಶ್ರೀ ಮಹಾಗಣಪತಿ ಶ್ರೀ ವಿಶಾಲಾಕ್ಷಿ ಅಮ್ಮನವರ ದೇವಸ್ಥಾನ ಕಿರಿಮಂಜೇಶ್ವರದಲ್ಲಿ ಶ್ರೀ ಗಣೇಶ ಚತುರ್ಥಿ ಉತ್ಸವ ಕಾರ್ಯಕ್ರಮ ಸಂಭ್ರಮದಿಂದ ಶನಿವಾರ ನಡೆಯಿತು.
ಶ್ರೀ ಗಣೇಶ ಚತುರ್ಥಿ ಉತ್ಸವದ ಅಂಗವಾಗಿ ಶ್ರೀ ಮಹಾಗಣಪತಿ ದೇವರಿಗೆ 108 ಕಾಯಿ ಗಣಹವನ,ಸಹಸ್ರ ದೂರ್ವಾರ್ಚನೆ,ರಂಗಪೂಜೆ,ಅಲಂಕಾರ ಪೂಜೆ,ಮೋದಕ ನೈವೇದ್ಯ ಸೇವೆ ಹಣ್ಣುಕಾಯಿ ಮತ್ತು ಮಂಗಳಾರತಿ ಸೇವೆ.ಮಹಾಮಂಗಳಾರತಿ ಸೇವೆ ಹಾಗೂ ಕಡುಬು ಸೇವೆ ಮತ್ತು ಅನ್ನದಾನ ಸೇವೆಯನ್ನು ಸಮರ್ಪಿಸಲಾಯಿತು.ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಶ್ರೀ ಕ್ಷೇತ್ರಕ್ಕೆ ಶ್ರೀದೇವರ ಪ್ರಸಾದವನ್ನು ಸ್ವೀಕರಿಸಿದರು.
ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಅವರು ಶ್ರೀ ಕ್ಷೇತ್ರಕ್ಕೆ ಆಗಮಿಸಿ ಶ್ರೀ ದೇವರ ದರ್ಶನ ಪಡೆದು ಮಾತನಾಡಿ,ವಿಘ್ನ ನಿವಾರಕನ ಆರಾಧನೆಯನ್ನು ಭಕ್ತಿಯಿಂದ ಜನರು ಆಚರಿಸುತ್ತಿದ್ದು ಶ್ರೀ ಮಹಾಗಣಪತಿ ದೇವರು ಎಲ್ಲರಿಗೂ ಒಳಿತನ್ನು ಮಾಡಲಿ ಎಂದು ಶುಭಹಾರೈಸಿದರು.
ಅನ್ನದಾನ ಸೇವಾ ಕರ್ತರಾದ ಸತೀಶ ಕೊಠಾರಿ ಮಾತನಾಡಿ,ಸಮುದ್ರ ತೀರದಲ್ಲಿ ನೆಲೆಸಿರುವ ಇವೊಂದು ದೇವಾಲಯವು ಚರಿತ್ರೆಯಲ್ಲಿ ಅದ್ಭುತತೆಯನ್ನು ಪಡೆದುಕೊಂಡಿದೆ.ಶ್ರೀ ದೇವರು ಕೊಟ್ಟಂತಹ ಒಂದು ಸುವರ್ಣ ಅವಕಾಶದಿಂದ ಕೈಲಾದ ಮಟ್ಟಿಗೆ ದೇವರ ಸೇವೆಯನ್ನು ಮಾಡುತ್ತಿದ್ದೇನೆ.ಅನ್ನದಾನ ಸೇವೆ ಎನ್ನುವುದು ನನಗೆ ಬಹಳಷ್ಟು ಖುಷಿ ಕೊಡುವಂತಹ ಸಂಗತಿ ಎಂದು ಹೇಳಿದರು.
ಶ್ರೀ ಅಗಸ್ತೇಶ್ವರ ದೇವಸ್ಥಾನ ಕಿರಿಮಂಜೇಶ್ವರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಐತಾಳ್ ಮಾತನಾಡಿ,ದೇವಾಲಯದಲ್ಲಿ ಚೌತಿ ಉತ್ಸವವನ್ನು ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಧಿವತ್ತನಾಗಿ ನಡೆಸಿಕೊಂಡು ಬರಲಾಗುತ್ತಿದ್ದು.ಅನ್ನದಾನ ಸೇವೆ ಸಹಿತ ಭಜನೆ ಸೇವೆ,ನಾರಿಕೇಳ ಗಣಯಾಗವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ದೇವಸ್ಥಾನದ ಅರ್ಚಕರು ದೇವಳದ ಇತಿಹಾಸದ ಬಗ್ಗೆ ಮಾಹಿತಿಯನ್ನು ನೀಡಿದರು ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರು,ಗ್ರಾಮಸ್ಥರು,ಭಕ್ತರು ಉಪಸ್ಥಿತರಿದ್ದರು.
ಕುಂದಾಪುರ:ಸರಕಾರದ ಅಧ್ಯಯನದ ವರದಿ ಪ್ರಕಾರ ಶೇ.50 ರಷ್ಟು ಗರ್ಭಿಣಿ ಮಹಿಳೆಯರಲ್ಲಿ ಹಾಗೂ ಶೇ.60 ರಷ್ಟು ಮಕ್ಕಳಲ್ಲಿ ಮತ್ತು ಶೇ.60 ರಷ್ಟು…
ಕುಂದಾಪುರ:ಸಾಮಾಜಿಕ ಜಾಲಾತಾಣದಲ್ಲಿ ನಕಲಿ ಖಾತೆ ಸೃಷ್ಟಿಸಿ,ಬೈಂದೂರು ಕ್ಷೇತ್ರದ ಶಾಸಕರ ವಿರುದ್ಧ ಸುಳ್ಳು ಸುದ್ದಿ ಹರಡಿಸಿ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಾನೂನು…
ಕುಂದಾಪುರ: ಮಾರಿಷಸ್ ದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದ ಸುಳ್ಯದ ಯುವಕನೋರ್ವ ಅಲ್ಲಿನ ಜಲಪಾತ ವೀಕ್ಷಣೆಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ…
ಕುಂದಾಪುರ:ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಹೊಸಹಿತ್ಲು ಸಮೀಪ ಸಮುದ್ರದಲ್ಲಿ ಈಜಲು ಹೋಗಿದ್ದ ನಾಲ್ವರು ವಿದ್ಯಾರ್ಥಿಗಳ ಪೈಕಿ ಮೂವರು ವಿದ್ಯಾರ್ಥಿಗಳು ಸಮುದ್ರ…
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಕಾಲೇಜು ಬ್ರಹ್ಮಾವರದಲ್ಲಿ ಕನ್ನಡ ಭಾμÁ ವಿಭಾಗದ ವತಿಯಿಂದ ಕನ್ನಡ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಸರಕಾರಿ ಪ್ರಥಮ…
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಕಾಲೇಜಿನಲ್ಲಿ ಹಿಂದಿ ಭಾಷಾ ವಿಭಾಗದ ವತಿಯಿಂದ ಹಿಂದಿ ದಿವಸ್ 'ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಪೂರ್ಣ ಪ್ರಜ್ಞಾ…