ಕುಂದಾಪುರ:ಸಮೃದ್ಧ ಬೈಂದೂರು ವತಿಯಿಂದ ಕೇಂದ್ರ ಸರ್ಕಾರದ ಅಂಗ ಸಂಸ್ಥೆಯಾದ ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಗಮ(ಅಂತಾರಾಷ್ಟ್ರೀಯ) ಹಾಗೂ ಅಜಿನುರಹಾ ಸಂಸ್ಥೆಯ ಸಹಭಾಗಿತ್ವದಲ್ಲಿ ಆಗಸ್ಟ್ 31ರಂದು ಬೈಂದೂರಿನ ಜೆ.ಎನ್.ಆರ್. ಅಡಿಟೋರಿಯಂನಲ್ಲಿ ಅಂತಾರಾಷ್ಟ್ರೀಯ ಉದ್ಯೋಗ ಮೇಳ ನಡೆಯಲಿದೆ.
ವಿದೇಶದಲ್ಲಿ ಉದ್ಯೋಗ ಬಯಸುವವರಿಗೆ ಸುವರ್ಣಾವಕಾಶವನ್ನು ಕಲ್ಪಿಸಲಾಗಿದ್ದು.ಉಚಿತ ತರಬೇತಿ,ಉಚಿತ ವಸತಿ ವ್ಯವಸ್ಥೆ,ಊಟ,ಉಪಹಾರದ ಜತೆಗೆ ವೀಸಾ ಹಾಗೂ ವಿಮಾನ ಟಿಕೆಟ್ ಕೂಡ ಆಯ್ಕೆಯಾದ ಅಭ್ಯರ್ಥಿಗಳಿಗೆ ಉಚಿತವಾಗಿ ಸಿಗಲಿದೆ.ವಿದೇಶಿ ಭಾಷೆ ಕಲಿತು, ವಿದೇಶದಲ್ಲಿ ಉದ್ಯೋಗ ಮಾಡಬಹುದು. ಇಂತಹದ್ದೊಂದು ಅವಕಾಶ ಬೈಂದೂರಿಗೆ ಇದೇ ಮೊದಲ ಬಾರಿಗೆ ದೊರಕಲಿದ್ದು ಯುವಕ ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗ ಪಡಿಸಿಕೊಳ್ಳುವಂತೆ ಸಮೃದ್ಧ ಬೈಂದೂರು ಸೇವಾ ಟ್ರಸ್ಟ್ ಕೋರಿ ಕೊಂಡಿದೆ.
ಇದೊಂದು ಅಂತಾರಾಷ್ಟ್ರೀಯ ಉದ್ಯೋಗ ಮೇಳವಾಗಿದ್ದು ಜಪಾನ್,ಮಲೇಷಿಯಾ, ಜರ್ಮನ್,ಕ್ರೋವೆಷಿಯಾ, ಗಲ್ಫ್ ರಾಷ್ಟ್ರಗಳ ವಿವಿಧ ಕಂಪೆನಿಗಳು ಭಾಗವಹಿಸಲಿವೆ. ವಿದ್ಯಾರ್ಥಿಗಳು, ಪದವೀಧರರು,ಪಿಯುಸಿ ಓದಿರುವರು ಹೀಗೆ ಎಲ್ಲ ವರ್ಗದವರಿಗೂ ವಿದೇಶದಲ್ಲಿ ಉದ್ಯೋಗಾವಕಾಶ ಪಡೆಯಬಹುದಾದ ವ್ಯವಸ್ಥೆ ಇದರಲಿಲ್ಲದೆ.ಪದವಿ, ಸ್ನಾತಕೋತ್ತರ ಪದವಿ,ತಾಂತ್ರಿಕ ಕೋರ್ಸ್,ತಾಂತ್ರಿಕೇತರ ಕೋರ್ಸ್ ಹೀಗೆ ವಿದ್ಯಾರ್ಹತೆಗೆ ಅನುಗುಣವಾಗಿ ವಿವಿಧ ಉದ್ಯೋಗಳು ಲಭ್ಯವಿದೆ. ಕೇಂದ್ರ ಸರ್ಕಾರದ ಅಧೀನ ಸಂಸ್ಥೆಯ ಮೂಲಕವೇ ಇದು ನಡೆಯುವುದರಿಂದ ಸಂಪೂರ್ಣ ನಿರ್ವಹಣೆಯನ್ನು ಎನ್‌ಎಸ್‌ಡಿಸಿಐ ಮಾಡಲಿದೆ.
ಉದ್ಯೋಗ ಮೇಳಕ್ಕೆ ನೋಂದಾಯಿಸಿಕೊಳ್ಳಲು ಆಗಸ್ಟ್ 28 ಕೊನೆಯ ದಿನ. ಲಿಂಕ್
https://forms.office.com/r/T73nGPz24h ಮೂಲಕ ನೋಂದಾಯಿಸಿಕೊಳ್ಳಬಹುದು. ಮಾಹಿತಿಗೆ 7901302000, 9778417835 ಅಥವಾ 7204166276 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಸಮೃದ್ಧ ಬೈಂದೂರು ಟ್ರಸ್ಟ್‌ನ ಪ್ರಕಟನೆ ತಿಳಿಸಿದೆ.
ಏನೇನು ಉದ್ಯೋಗಾವಕಾಶ
ನರ್ಸಿಂಗ್ ಕೇರ್, ಬಿಲ್ಡಿಂಗ್ ಕ್ಲೀನಿಂಗ್ ಮ್ಯಾನೇಜ್ಮೆಂಟ್, ಕೈಗಾರಿಕ ಉತ್ಪನ್ನ ಸಿದ್ಧಡಿಸುವುದು, ನಿರ್ಮಾಣ ವಲಯ, ಏವಿಯೇಷನ್, ಕೃಷಿ, ಮೀನುಗಾರಿಕೆ ಮತ್ತು ಸಂಬಂಧಿತ ಉದ್ಯೋಗ, ಆಹಾರ ಪೂರೈಕೆ, ರೈಲ್ವೇ ಟ್ರಾನ್ಸ್‌ಪೋರ್ಟ್, ಫಾರೆಸ್ಟ್ರೀ ಹೀಗೆ ಹಲವು ಉದ್ಯೋಗಾವಕಾಶವಿದೆ.
ಕುಂದಾಪುರ:ಮಹಿಳಾ ಮೀನುಗಾರರ ವಿವಿಧೋದ್ದೇಶ ಸಹಕಾರಿ ಸಂಘ ಮರವಂತೆ,ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು,ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಉಡುಪಿ ಹಾಗೂ…
ಕುಂದಾಪುರ:ನೃತ್ಯ ಬಿಂಬ ಸಾಂಸ್ಕೃತಿಕ ಪ್ರತಿಷ್ಠಾನ ಬೆಂಗಳೂರು ಮತ್ತು ಕಲೆಗಳ ಉತ್ಸವ ಬೆಂಗಳೂರು ಅವರ ಜಂಟಿ ಆಶ್ರಯದಲ್ಲಿ ಉಡುಪಿ ಜಿಲ್ಲೆಯ ಪ್ರಸಿದ್ಧಕೊಲ್ಲೂರು…
ಕುಂದಾಪುರ:ಜೂನ್.21 ರಂದು ಸ್ಕೂಟರ್‍ನಲ್ಲಿ ಅಕ್ರಮವಾಗಿ ಗೋಮಾಂಸವನ್ನು ಸಾಗಾಟ ಮಾಡುತ್ತಿದ್ದ ಗಂಗೊಳ್ಳಿ ಮೀನು ಮಾರ್ಕೆಟ್ ಬಳಿ ನಿವಾಸಿ ಅಬ್ದುಲ್ ರಹೀಮ್ (35)…
ಬೈಂದೂರು:ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್‍ವಾದ ಜಿಲ್ಲಾ ಸಮಿತಿ ವತಿಯಿಂದ ಬೈಂದೂರು ತಾಲೂಕು ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಭೀಮ…
ಮುಳ್ಳಿಕಟ್ಟೆ:ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ನಿವಾಸಿ ಆಯುರ್ವೇದ ವೈದ್ಯ ಡಾ.ಶ್ರೀನಿವಾಸ ಪೈ (62) ಹೃದಯಘಾತದಿಂದ ಸೋಮವಾರ ನಿಧನರಾದರು.ಅವರಿಗೆ ಪತ್ನಿ,ಮಗಳು,ತಂದೆ,ಇಬ್ಬರು…
ಕುಂದಾಪುರ:ದೂರದರ್ಶನ ಚಂದನ ಟಿವಿಯಲ್ಲಿ ಜೂನ್.16 ರ ಬೆಳಿಗ್ಗೆ 8 ಕ್ಕೆ ಯೋಗಾಚಾರ್ಯ ಸಂತೋಷ್ ಕುಮಾರ್ ಅವರಿಂದ ವ್ಯಾಯಾಮ ಮತ್ತು ಯೋಗಾಸನ…