ಕಾರವಾರ:ಕಾಳಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಕಾರವಾರ ಮತ್ತು ಗೋವಾಕ್ಕೆ ಸಂಪರ್ಕಿಸುವ ಸುಮಾರು 40 ವರ್ಷಕ್ಕೂ ಹಳೆಯದಾದ ಕಾಳಿ ಸೇತುವೆ ಮಂಗಳವಾರ ಮಧ್ಯ ರಾತ್ರಿ 1 ಗಂಟೆ ಸುಮಾರಿಗೆ ಏಕಾಏಕಿ ಕುಸಿದು ಬಿದ್ದಿದೆ.ದೇಶಾದ್ಯಂತ ಸೇತುವೆ ಮುರಿದು ಬೀಳುವ ದುರ್ಘಟನೆ ಮುಂದುವರೆದಿದ್ದು ಜನರು ಆತಂಕಿತರಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ಕೋಡಿಭಾಗ್ ಬಳಿ ಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬೃಹತ್ ಸೇತುವೆ ಯಾವುದೆ ರೀತಿಯ ಮುನ್ಸೂಚನೆ ಸಿಗದೆ ಇರುವ ರೀತಿಯಲ್ಲಿ ನದಿಗೆ ರಾತ್ರೋರಾತ್ರಿ ಉರುಳಿ ಬಿದ್ದಿದೆ.ಈ ವೇಳೆ ಸೇತುವೆ ಮೇಲೆ ಸಾಗುತ್ತಿದ್ದ ಟ್ರಕ್ ನದಿಗೆ ಬಿದ್ದಿದೆ.ಟ್ರಕ್ ಚಲಾಯಿಸುತ್ತಿದ್ದ ತಮಿಳುನಾಡು ಮೂಲದ ಚಾಲಕ ಬಾಲ್ ಮುರುಗನ್ (37) ಟ್ರಕ್ ಮುಂಭಾಗದ ಗಾಜನ್ನು ಒಡೆದು ಲಾರಿ ಕ್ಯಾಬಿನ್ ಮೇಲೆ ಕುಳಿತು ರಕ್ಷಣೆ ಮಾಡುವಂತೆ ಕೂಗಿ ಕೊಂಡಿದ್ದರು.ಬೀಟ್ ಪೊಲೀಸ್ ಕಾರ್ಯಚರಣೆ ಮಾಡುತ್ತಿದ್ದ ಪೊಲೀಸರು ಲಾರಿ ಚಾಲಕನನ್ನು ರಕ್ಷಿಸಿದ್ದಾರೆ.ಚಾಲಕ ಪ್ರಾಣಾಪಯದಿಂದ ಪಾರಾಗಿದ್ದಾರೆ.ರಾತ್ರಿ ಸಮಯದಲ್ಲಿ ದುರ್ಘಟನೆ ನಡೆದಿದ್ದರಿಂದ ಹೆಚ್ಚಿನ ಅಪಾಯ ತಪ್ಪಿದೆ.ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ನಿರ್ವಹಿಸುತ್ತಿದ್ದ ಐಆರ್‍ಬಿ ಕಂಪನಿ ಒಂದು ಹೊಸ ಸೇತುವೆಯನ್ನು ಮಾತ್ರ ನಿರ್ಮಿಸಿದ್ದು.ಇನ್ನೊಂದು ಮಾರ್ಗದಲ್ಲಿ ಹಳೆ ಸೇತುವೆಯನ್ನೆ ಬಳಕೆ ಮಾಡಿಕೊಂಡಿತ್ತು.ಸೇತುವೆಯ ಗುಣಮಟ್ಟವನ್ನು ಸರಿಯಾದ ರೀತಿಯಲ್ಲಿ ಪರೀಕ್ಷಿಸದೆ ಕಾರಣದಿಂದಾಗಿ ಇವೊಂದು ಘಟನೆ ನಡೆದಿದೆ ಎಂದು ಜನರು ದೂರಿದ್ದಾರೆ.
oplus_2 ಮುಳ್ಳಿಕಟ್ಟೆ:ಲಯನ್ಸ್ ಕ್ಲಬ್ ಹಕ್ಲಾಡಿ ಚೆನ್ನಕೇಶವ ಜೋನ್ 2 ರೀಜನ್ 6 ಡಿಸ್ಟ್ರಿಕ್ಟ್ 317 ಸಿವತಿಯಿಂದ ಲಯನ್ ಆಸರೆ ಯೋಜನೆ…
ಕುಂದಾಪುರ:ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ ಆಂಡ್ ಆರ್‌ಚೀಟಿಕ್ಸ್ (ಸಿವಿಲ್ ಎಂಜಿನಿಯರ್ ಮತ್ತು ವಾಸ್ತುಶಿಲ್ಪಿಗಳ ಸಲಹಾ ಸಂಘ) ಕುಂದಾಪುರ ಇದರ…
ಉಡುಪಿ:ಕಾಪು ನಲ್ಲಿ ಗೂಡ್ಸ್ ಟೆಂಪೋ ಪಲ್ಟಿ ಹೊಡೆದ ಪರಿಣಾಮ ದುರ್ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ ಘಟನೆ ಭಾನುವಾರ ನಡೆದಿದೆ.ಅಪಘಾತದ ತೀವ್ರತೆಗೆ ಗೂಡ್ಸ್…
ಕುಂದಾಪುರ:ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಿಕ್ಷಣದ ಮುಖ್ಯ ವಾಹಿನಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿರುವ ರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿ ಕುಂದಾಪುರ ತಾಲೂಕಿನ…
ಕುಂದಾಪುರ:ತಾಲೂಕಿನ ತ್ರಾಸಿ ರಾಷ್ಟ್ರೀಯ ಹೆದ್ದಾರಿ 66 ರ ಫ್ಲೈಓವರ್ ಸಮೀಪ ರಸ್ತೆ ಬದಿಯಲ್ಲಿ ನಿಂತ್ತಿದ್ದ ಲಾರಿಯಲ್ಲಿ ಲಾರಿ ಚಾಲಕನ ಶವ…
ಕುಂದಾಪುರ:ಶಯೋಮಿ ಇಂಡಿಯಾ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ನ ಸಿ.ಎಸ್.ಆರ್ ಸಹಕಾರದೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಸಾಹಸ್ ತಂಡ ಮತ್ತು ಕ್ಲೀನ್ ಕಿನಾರ…