ಕುಂದಾಪುರ:ಸಪ್ತಪದಿ ತುಳಿದು ದಂಪತಿಗಳಾಗಿ ಆದರ್ಶ ಜೀವನ ಕಟ್ಟಿಕೊಂಡಿದ್ದ ಹಿರಿಯ ದಂಪತಿಗಳು ಒಂದೇ ದಿನ ಮೊಕ್ಷವನ್ನು ಹೊಂದುವುದರ ಮೂಲಕ ಸಾವಿನಲ್ಲೂ ಜೊತೆಯಾಗಿ ಸಾಗಿದ ಅಪರೂಪದ ಘಟನೆ ಕೋಟ ಸಮೀಪದ ಬನ್ನಾಡಿ ಕಂಬಳಕಟ್ಟು ಎಂಬಲ್ಲಿ ನಡೆದಿದೆ.
ಕೋಟ ಕಂಬಳಕಟ್ಟು ಗುರಿಕಾರ ಮನೆ ಕೃಷ್ಣ ಪೂಜಾರಿ (58) ಮತ್ತು ಅವರ ಪತ್ನಿ ಮುತ್ತು ಪೂಜಾರ್ತಿ(53) ಎನ್ನುವ ದಂಪತಿಗಳು ಮರಣ ಹೊಂದುವಾಗಲೂ ಜೊತೆಯಾಗಿ ಇಹಲೋಕ ತ್ಯಜಿಸಿದ್ದಾರೆ.ಕಂಬಳಕಟ್ಟು ಗುರಿಕಾರ ಮನೆ ಕೃಷ್ಣ ಪೂಜಾರಿ ಬ್ರಹ್ಮಬೈದರ್ಕಳ ಕಂಬಳಾಭಿಮಾನಿಯಾಗಿ, ಕಂಬಳದ ಸ್ವಯಂಸೇವಕರಾಗಿ ನಿರಂತರ ಸೇವೆಮಾಡುತ್ತ, ಕೃಷಿರಾಗಿ ಗುರುತಿಸಿಕೊಂಡಿದ್ದರು.ಅವರ ಪತ್ನಿ ಮುತ್ತು ಪೂಜಾರ್ತಿ ಬನ್ನಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕಿ ಯಾಗಿದ್ದವರು.ಕೃಷ್ಣ ಪೂಜಾರಿ ಅವರ ಪತ್ನಿ ಮುತ್ತು ಪೂಜಾರ್ತಿ ಅವರು ಬುಧವಾರ ರಾತ್ರಿ ಅನಾರೋಗ್ಯದಿಂದ ಮೃತಪಟ್ಟಿದ್ದರು.ಮುತ್ತು ಪೂಜಾರ್ತಿಯವರ ಅಂತ್ಯಕ್ರಿಯೆ ಮುಗಿಸಿ ವಾಪಾಸ್ಸು ಬರುತ್ತಿದ್ದ ವೇಳೆ ಪತ್ನಿ ಕಳೆದುಕೊಂಡಿದ್ದ ದುಃಖದಲ್ಲಿದ್ದ ಅವರ ಪತಿ ಕೃಷ್ಣ ಪೂಜಾರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.ಮೃತ ದಂಪತಿಗಳು ಮೂವರು ಪುತ್ರಿ ಒರ್ವ ಪುತ್ರರನ್ನು ಅಗಲಿದ್ದಾರೆ.
ಕುಂದಾಪುರ:ಮಹಿಳಾ ಮೀನುಗಾರರ ವಿವಿಧೋದ್ದೇಶ ಸಹಕಾರಿ ಸಂಘ ಮರವಂತೆ,ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು,ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಉಡುಪಿ ಹಾಗೂ…
ಕುಂದಾಪುರ:ನೃತ್ಯ ಬಿಂಬ ಸಾಂಸ್ಕೃತಿಕ ಪ್ರತಿಷ್ಠಾನ ಬೆಂಗಳೂರು ಮತ್ತು ಕಲೆಗಳ ಉತ್ಸವ ಬೆಂಗಳೂರು ಅವರ ಜಂಟಿ ಆಶ್ರಯದಲ್ಲಿ ಉಡುಪಿ ಜಿಲ್ಲೆಯ ಪ್ರಸಿದ್ಧಕೊಲ್ಲೂರು…
ಕುಂದಾಪುರ:ಜೂನ್.21 ರಂದು ಸ್ಕೂಟರ್ನಲ್ಲಿ ಅಕ್ರಮವಾಗಿ ಗೋಮಾಂಸವನ್ನು ಸಾಗಾಟ ಮಾಡುತ್ತಿದ್ದ ಗಂಗೊಳ್ಳಿ ಮೀನು ಮಾರ್ಕೆಟ್ ಬಳಿ ನಿವಾಸಿ ಅಬ್ದುಲ್ ರಹೀಮ್ (35)…
ಬೈಂದೂರು:ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ವಾದ ಜಿಲ್ಲಾ ಸಮಿತಿ ವತಿಯಿಂದ ಬೈಂದೂರು ತಾಲೂಕು ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಭೀಮ…
ಮುಳ್ಳಿಕಟ್ಟೆ:ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ನಿವಾಸಿ ಆಯುರ್ವೇದ ವೈದ್ಯ ಡಾ.ಶ್ರೀನಿವಾಸ ಪೈ (62) ಹೃದಯಘಾತದಿಂದ ಸೋಮವಾರ ನಿಧನರಾದರು.ಅವರಿಗೆ ಪತ್ನಿ,ಮಗಳು,ತಂದೆ,ಇಬ್ಬರು…
ಕುಂದಾಪುರ:ದೂರದರ್ಶನ ಚಂದನ ಟಿವಿಯಲ್ಲಿ ಜೂನ್.16 ರ ಬೆಳಿಗ್ಗೆ 8 ಕ್ಕೆ ಯೋಗಾಚಾರ್ಯ ಸಂತೋಷ್ ಕುಮಾರ್ ಅವರಿಂದ ವ್ಯಾಯಾಮ ಮತ್ತು ಯೋಗಾಸನ…