ಕುಂದಾಪುರ:ವಲಯ ನಾಡದೋಣಿ ಮೀನುಗಾರರ ಸಂಘ ಉಪ್ಪುಂದ ವತಿಯಿಂದ ಮರವಂತೆ ಶ್ರೀ ಮಹಾರಾಜ ವರಾಹ ಸ್ವಾಮಿ ದೇವಸ್ಥಾನದ ಬೆಳ್ಳಿ ರಥ ನಿರ್ಮಾಣಕ್ಕೆ 10,00,101 ರೂ ಮೊತ್ತದ ಚೆಕ್‍ನ್ನು ಶುಕ್ರವಾರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಹಸ್ತಾಂತರಿಸಲಾಯಿತು.
ಸಂಘದ ಅಧ್ಯಕ್ಷ ಉಪ್ಪುಂದ ಆನಂದ ಖಾರ್ವಿ ಮಾತನಾಡಿ, ಮೀನುಗಾರರು ಈ ಹಿಂದೆ ದೇವಸ್ಥಾನಕ್ಕೆ ಉಪ್ಪುಂದ ರಥವನ್ನು ನೀಡಿದ್ದು ಶ್ರೀ ದೇವರಲ್ಲಿ ಮೀನುಗಾರಿಕಾ ಉದ್ಯೋಗದಲ್ಲಿ ಸಮೃದ್ಧಿಯನ್ನು ಕರುಣಿಸುವ ಸಲುವಾಗಿ ಪ್ರಾರ್ಥಿಸಿದಂತೆ ಬೆಳ್ಳಿ ರಥದ ನಿರ್ಮಾಣಕ್ಕೆ ಸಂಘದ ಮೀನುಗಾರರ ವತಿಯಿಂದ ಈ ಕೊಡುಗೆ ನೀಡಲಾಗಿದೆ ಎಂದು ಹೇಳಿದರು.
ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಉಪ್ಪುಂದ ಆನಂದ ಖಾರ್ವಿ ಮತ್ತು ನೂತನ ಅಧ್ಯಕ್ಷ ಅಳ್ವೆಕೋಡಿ ನಾಗೇಶ ಖಾರ್ವಿ ಚೆಕ್‍ನ್ನು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಸತೀಶ್ ನಾಯ್ಕ ಅವರಿಗೆ ಹಸ್ತಾಂತರಿಸಿದರು.ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘ ಉಪ್ಪುಂದದ ಕಾರ್ಯದರ್ಶಿ ಪುರುಷೋತ್ತಮ ಖಾರ್ವಿ,ಕೋಶಾಕಾರಿ ಅಣ್ಣಯ್ಯ ಖಾರ್ವಿ,ಕಾರ್ಯಕಾರಿ ಮಂಡಳಿ ರಾಮ ಖಾರ್ವಿ,ಭಾಸ್ಕರ ಖಾರ್ವಿ,ಸುಬ್ರಹ್ಮಣ್ಯ ಖಾರ್ವಿ ಮತ್ತಿತರರು ಉಪಸ್ಥಿರಿದ್ದರು.
ಕುಂದಾಪುರ:ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೈಂದೂರು ತಾಲೂಕಿನ ನಾವುಂದ ಮಸ್ಕಿಯಲ್ಲಿ…
ಕುಂದಾಪುರ:ತಾಲೂಕಿನ ಹೊಸಾಡು ಗ್ರಾಮದ ಅರಾಟೆ ಚಿತ್ತೇರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಏಪ್ರಿಲ್ 12 ರ ಭಾನುವಾರ ದಂದು ನಡೆಯಲಿರುವ ಶ್ರೀ…
ಕುಂದಾಪುರ:ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಕರ್ನಾಟಕ ಪೊಲೀಸ್ ರನ್ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ…
ಕುಂದಾಪುರ:ರಾಜ್ಯ ಸರಕಾರಿ ಶಿಕ್ಷಕರ ನೌಕರರ ಹಾಗೂ ಇಲಾಖೆಯಲ್ಲಿನ ಇತರರ ಗೃಹ ನಿರ್ಮಾಣ ಸಹಕಾರ ಸಂಘ (ನಿ) ಬೆಂಗಳೂರು ಅದರ ರಾಜ್ಯ…
ಕುಂದಾಪುರ:ಮಾಜಿ ಎಂಎಲ್ಎ ಧಾರ್ಮಿಕ ಮುಖಂಡ ಅಜಾತಶತ್ರು ಅಪ್ಪಣ್ಣ ಹೆಗ್ಡೆ ಶನಿವಾರ ವಿಧಿವಶರಾಗಿದ್ದಾರೆ.ನೂರಕ್ಕೂ ಅಧಿಕ ನಾಗಮಂಡಲದ ನೇತೃತ್ವವನ್ನು ವಹಿಸಿಕೊಡಿದ್ದ ಅವರು, ಹಲವು…
ಕುಂದಾಪುರ:ಕಾಂಗ್ರೆಸ್ ಪಕ್ಷದ ಮುಖಂಡರಾದ,ಪ್ರಬಲ ರಾಜಕಾರಣಿ,ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ ತ್ರಾಸಿ ಸೋಮವಾರ ನಿಧನರಾದರು.ಅವರು ಪತ್ನಿ ಮಕ್ಕಳು, ಬಂದು…