ಕುಂದಾಪುರ

ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ವಯಿತಿಂದ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ,ಉದ್ಘಾಟನಾ ಕಾರ್ಯಕ್ರಮ

Share

Advertisement
Advertisement

ಕುಂದಾಪುರ:ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ವತಿಯಿಂದ ಸಮೃದ್ಧ ಜನಸೇವಾ ಚಾರಿಟೇಬಲ್ ಟ್ರಸ್ಟ್ ಬೈಂದೂರು ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಡುಪಿ ಜಿಲ್ಲೆ ಅವರ ಸಹಕಾರದೊಂದಿಗೆ ಉಡುಪಿ ಜಿಲ್ಲೆಯ 350 ಸರಕಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ 41,000 ಜೊತೆ ಶಾಲಾ ಸಮವಸ್ತ್ರ ವಿತರಣೆ ಮತ್ತು ಉದ್ಘಾಟನಾ ಕಾರ್ಯಕ್ರಮ ಬೈದೂರು-ಯಡ್ತರೆ ಜೆ.ಎನ್.ಆರ್ ಸಭಾಂಗಣದಲ್ಲಿ ಶನಿವಾರ ನಡೆಯಿತು.
ಮಾನ್ಯ ಸಭಾಪತಿಗಳು ಕರ್ನಾಟಕ ವಿಧಾನಸಭೆ ಯು.ಟಿ.ಖಾದರ್ ಅವರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿ ಮಾತನಾಡಿ,ಸಾಮಾನ್ಯ ಜನರ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ಕೊಡುವುದು ನಿಜವಾದ ದೇಶ ಪ್ರೇಮವಾಗಿದೆ.ಭಾರತ ದೇಶ ಬಲಿಷ್ಠವಾಗ ಬೇಕಾದರೆ ರಾಜಕಾರಣಿಗಳು,ಉದ್ಯಮಿಗಳು ಬಲಿಷ್ಠರಾಗುವುದಲ್ಲ.ಕ್ಲಾಸ್ ರೂಂನಲ್ಲಿರುವ ವಿದ್ಯಾರ್ಥಿಗಳು ಬಲಿಷ್ಠರಾದಾಗ ಮಾತ್ರ ಕನಸು ಸಾಕಾರಗೊಳ್ಳುತ್ತದೆ ಎಂದು ಹೇಳಿದರು.ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತನ್ನು ನೀಡುತ್ತಿರುವ ಡಾ.ಹೆಚ್.ಎಸ್ ಶೆಟ್ಟಿ ಅವರ ಸೇವಾ ಕಾರ್ಯ ಶ್ಲಾಘನಿಯವಾಗಿದ್ದು.ತಮ್ಮ ದುಡಿಮೆಯಲ್ಲಿನ ಒಂದು ಭಾಗವನ್ನು ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರಗಳಿಗೆ ಮೀಸಲು ಇಡುವುದರ ಮುಖೇನ ಎಲ್ಲರಿಗೂ ಪ್ರೇರಣ ಶಕ್ತಿಯಾಗಿದ್ದಾರೆ ಎಂದರು.
ಬಡತನದಿಂದ ಹುಟ್ಟುವುದು ತಪ್ಪಲ್ಲ,ಬಡತನದಿಂದ ಸಾಯುವುದು ತಪ್ಪು,ಶಿಕ್ಷಣದಿಂದ ಮಾತ್ರ ಬಡತನವನ್ನು ಹೊಗಲಾಡಿಸಲು ಸಾಧ್ಯವಾಗಿದ್ದು.ಹೆತ್ತವರು ಮಕ್ಕಳಿಗೆ ಶಿಕ್ಷಣವನ್ನು ನೀಡಲು ಎಲ್ಲಾ ರೀತಿಯಾ ತ್ಯಾಗಕ್ಕೂ ಸಿದ್ದರಾಗಬೇಕಿದೆ.ಸುಕ್ಷಿತ ಸಮಾಜ ನಿಮಾರ್ಣವಾಗಬೇಕಾದರೆ ಶಿಕ್ಷಣದ ಜತೆಗೆ ಮೌಲ್ಯವರ್ಧಿತ ಶಿಕ್ಷಣ ನೀಡುವುದು ಅಗತ್ಯವಾಗಿದೆ ಎಂದರು.ತಾಳ್ಮೆ ಸೌಹರ್ದತೆ ವಿಶ್ವಾಸದಿಂದ ಕೂಡಿದ ಬದುಕು ನಮ್ಮದಾಗಿರಬೇಕು.ದೇವರು ಕೊಟ್ಟಂತಹ ಜೀವನವನ್ನು ಸಂತೋಷದಿಂದ ಕಾಣಬೇಕೆಂದು ಹೇಳಿದರು.
ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಡಾ.ಹೆಚ್.ಎಸ್ ಶೆಟ್ಟಿ ಅವರು ಮಾತನಾಡಿ, ಸಾಮಾಜಿಕ ಕಾರ್ಯಗಳಿಗೆ ವಿನಿಯೋಗ ಮಾಡುವ ಉದ್ದೇಶದಿಂದ ದುಡಿಮೆಯ ಒಂದು ಭಾಗವನ್ನು ಮೀಸಲಿಡಲಾಗಿದ್ದು.2008 ರಲ್ಲಿ ಸಂಸ್ಥೆಯನ್ನು ಆರಂಭಿಸಿ 1800 ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ನೀಡುವಂತಹ ಕೆಲಸವನ್ನು ಮಾಡಿಕೊಂಡು ಬರಲಾಗುತ್ತಿದೆ.ಅದರ ಮುಂದುವರೆದ ಭಾಗದಂತೆ ಕಳೆದ ವರ್ಷ 48,000 ಸಾವಿರ ಜೊತೆ ಸಮವಸ್ತ್ರವನ್ನು ವಿದ್ಯಾರ್ಥಿಗಳಿಗೆ ನೀಡಲಾಗಿದ್ದು.ಈ ವರ್ಷ 41,000 ಜೊತೆ ಸಮವಸ್ತ್ರ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ ಎಂದು ಹೇಳಿದರು.ಸಾಮಾಜಿಕ ಕಾರ್ಯಗಳ ಜತೆಗೆ ವಿದ್ಯಾಸಂಸ್ಥೆಗಳನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಕಾರ್ಯಗಳನ್ನು ಮಾಡಲಾಗುತ್ತಿದೆ.ಸಂಸ್ಥೆ ಮೂಲಕ 7 ಕೋಟಿಗೂ ಅಧಿಕ ಹಣವನ್ನು ವಿನಿಯೋಗ ಮಾಡಲಾಗಿದೆ.3 ಕೋಟಿ.ರೂ ವೆಚ್ಚದಲ್ಲಿ ಬ್ರಹ್ಮವಾರದಲ್ಲಿ ಸರಕಾರಿ ಪಬ್ಲಿಕ್ ಸ್ಕೂಲನ್ನು ನಿರ್ಮಾಣ ಮಾಡಲಾಗುತ್ತಿದೆ.ಶೈಕ್ಷಣಿಕ ಕಾರ್ಯ ಚಟುವಟಿಕೆಗಳ ಜೆತೆಗೆ ವಿದ್ಯಾಪೆÇೀಷಕ ಪ್ರಶಸ್ತಿಯನ್ನು ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಕೊರಗ ಸಮುದಾಯ ಕುಟುಂಬಗಳಿಗೆ ನಿವೇಶನವನ್ನು ಕಟ್ಟಿಕೊಡುವ ಉದ್ದೇಶದಿಂದ 100 ಮನೆಗಳನ್ನು ನಿರ್ಮಿಸುವ ಕುರಿತು ಕಾರ್ಯಯೋಜನೆ ರೂಪಿಸಲಾಗಿದ್ದು.12 ರಿಂದ 13 ಲಕ್ಷ.ರೂ ವೆಚ್ಚದಲ್ಲಿ 15 ಮನೆಗಳನ್ನು ನಿರ್ಮಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.ಮುಂದಿನ 5 ವರ್ಷಗಳ ಒಳಗೆ ಉಳಿದ 85 ಮನೆಗಳನ್ನು ನಿರ್ಮಿಸಲಾಗುವುದು ಎಂದರು.150 ಸರಕಾರಿ ಶಾಲೆಗಳಲ್ಲಿ ಐ.ಐ.ಟಿ ಟ್ರೈನಿಂಗ್ ಕೋಚಿಂಗ್ ಕ್ಲಾಸ್ ಆರಂಭಿಸುವ ಯೋಜನೆಗೆ ಈಗಾಗಲೇ ಸಂಕಲ್ಪ ಮಾಡಲಾಗಿದ್ದು.ಮೊದಲ ಬಾರಿಗೆ ಉಡುಪಿ ಜಿಲ್ಲೆಯಲ್ಲಿ 20 ಸರಕಾರಿ ಶಾಲೆಗಳಲ್ಲಿ ಐಐಟಿ ಟ್ರೈನಿಂಗ್ ಕೋಚಿಂಗ್ ಕ್ಲಾಸ್ ತೆರೆಯಲಾಗುತ್ತದೆ.ಮುಂದಿನ ದಿನಗಳಲ್ಲಿ ಉಡುಪಿ,ಮಂಗಳೂರು,ಕಾರವಾರ ಜಿಲ್ಲೆಯಲ್ಲಿ ಕೋಚಿಂಗ್ ಕ್ಲಾಸ್ ತೆರೆಯಲಾಗುವುದು ಎಂದರು.ನಮಗೆ ಬೇಕಾದಷ್ಟನ್ನು ಬಳಕೆ ಮಾಡಿಕೊಂಡು ಮಿಕ್ಕುಳಿದ ಸಂಪತ್ತನ್ನು ಸಮಾಜಕ್ಕೆ ವಿನಿಯೋಗ ಮಾಡುವುದರಿಂದ ಸಂತೋಷವನ್ನು ಕಾಣಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.ಮುಂದಿನ ದಿನಗಳಲ್ಲಿ ಬೈಂದೂರು ಕ್ಷೇತ್ರದಲ್ಲಿ ಇನ್ನಷ್ಟು ಜನ ಸೇವೆ ಮಾಡಲಾಗುದೆಂದು ವಿಶ್ವಾಸದ ಮಾತ್ನು ಹೇಳಿದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಮಾತನಾಡಿ,ತಮ್ಮ ದುಡಿಮೆಯ ಒಂದು ಭಾಗವನ್ನು ಶಿಕ್ಷಣ ಕ್ಷೇತ್ರಕ್ಕೆ ವಿನಿಯೋಗ ಮಾಡುತ್ತಿರುವ ಹೆಚ್.ಎಸ್ ಶೆಟ್ಟಿ ಅವರ ಮನೋಭಾವ ಬಹಳಷ್ಟು ದೂರದೃಷ್ಟಿಯಿಂದ ಕೂಡಿರುವಂತಹದ್ದು ಆಗಿದೆ.ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡುವುದರಿಂದ ಸಮಾಜದಲ್ಲಿ ಸುಧಾರಣೆಗಳನ್ನು ತರಬಹುದು ಎನ್ನುವ ಅವರ ಆಲೋಚನೆ ಮಹಾತ್ವಕಾಂಕ್ಷೆಯಿಂದ ಕೂಡಿದೆ ಎಂದು ಅಭಿಪ್ರಾಯಪಟ್ಟರು.
ಉಡುಪಿ ಶಾಸಕ ಯಶ್‍ಪಾಲ್ ಸುವರ್ಣ ಮಾತನಾಡಿ,ಹೆಚ್.ಎಸ್ ಶೆಟ್ಟಿ ಅವರ ಚಿಂತನೆ ಕಲ್ಪನೆ ಅದ್ಭುತವಾದದ್ದು.ಬಲಿಷ್ಠ ರಾಷ್ಟ್ರ ನಿರ್ಮಾಣ ಶಿಕ್ಷಣದಿಂದ ಮಾತ್ರ ಸಾಧ್ಯವಿದೆ ಎಂದು ಅರಿತಿರುವ ಅವರ ಮನೋಭಾವ ಮಹತ್ವದಿಂದ ಕೂಡಿದೆ.ಸರಕಾರ ಮಾಡುವಂತಹ ಕೆಲಸ ಒಂದು ಸಂಸ್ಥೆಯಿಂದ ಆಗುತ್ತಿರುವುದು ಖುಷಿ ಸಂಗತಿ.ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಗುಣವನ್ನು ಹೊಂದಿರುವ ಹೆಚ್.ಎಸ್ ಶೆಟ್ಟಿ ಅವರಿಂದ ಇನ್ನಷ್ಟು ಕಾರ್ಯ ನೆರವೇರಲಿ ಎಂದು ಶುಭಹಾರೈಸಿದರು.
ಕಾಪು ಶಾಸಕ ಬಿ.ಎಸ್ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿ,ಮನುಷ್ಯ ಸಾಮಾಜಿಕ ಮನೋಭಾ ರೂಢಿಸಿಕೊಂಡು ಬೆಳೆದಾಗ ಮಾತ್ರ ಸಮಾಜ ಸುಧಾರಣೆ ಆಗಲಿದೆ.ವಿದ್ಯಾರ್ಥಿಗಳ ಬೆನ್ನು ತಟ್ಟಿ ಪ್ರೋತ್ಸಾಹಿಸುವ ಗುಣವನ್ನು ಹೊಂದಿರುವ ಹೆಚ್.ಎಸ್ ಶೆಟ್ಟಿ ಅವರ ಕಾರ್ಯ ಶ್ಲಾಘನಿಯವಾಗಿದೆ ಎಂದು ಪ್ರಶಂಸನೆಯನ್ನು ವ್ಯಕ್ತಪಡಿಸಿದರು.ಕುಂದಾಪುರ ಶಾಸಕ ಕಿರಣ್ ಕೊಡ್ಗಿ ಶುಭಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಮಾತನಾಡಿ,ವಿದ್ಯಾರ್ಥಿಗಳು ಮತ್ತು ಪ್ರೇರಕರು ಇಂದು ಒಂದೆಡೆ ಸೇರಿರುವುದು ಸಾರ್ಥಕ ಕ್ಷಣವಾಗಿದೆ.ಬೈಂದೂರು ಕ್ಷೇತ್ರದ ಅಭಿವೃದ್ಧಿಗೆ ಹೆಚ್.ಎಸ್ ಶೆಟ್ಟಿ ಅವರಿಂದ ಇನ್ನಷ್ಟು ಕೊಡುಗೆಗಳು ನೀಡುವಂತಾಗಲಿ ಎಂದು ಕೇಳಿಕೊಂಡರು.ಕೊರಗರಿಗೆ ಕಟ್ಟಿ ಕೊಡಲಿರುವ ಹೆಚ್ಚಿನ ಮನೆಗಳನ್ನು ಬೈಂದೂರು ಕ್ಷೇತ್ರದಲ್ಲಿ ನಿರ್ಮಿಸಿಕೊಡಬೇಕೆಂದು ವಿನಂತಿಸಿದರು.ಹೊರ ಜಿಲ್ಲೆಗಳಿಂದ ಉಡುಪಿ ಜಿಲ್ಲೆಗೆ ಶಿಕ್ಷಣ ಕಲಿಯಲು ಬರುತ್ತಿರುವ ವಿದ್ಯಾರ್ಥಿಗಳಿಗೆ ಉಳಿದು ಕೊಳ್ಳಲು ಹಾಸ್ಟೆಲ್ ಸಮಸ್ಯೆ ಬಹಳಷ್ಟಿದ್ದು.ಬೈಂದೂರು ಮತ್ತು ಕುಂದಾಪುರ ಕ್ಷೇತ್ರಕ್ಕೆ ಹೆಚ್ಚಿನ ಸರಕಾರಿ ಹಾಸ್ಟೆಲ್‍ಗಳನ್ನು ನಿರ್ಮಾಣ ಮಾಡಲು ಅನುದಾನ ನೀಡುವಲ್ಲಿ ಸಹಕರಿಸಬೇಕೆಂದು ಯು.ಟಿ ಖಾದರ್ ಬಳಿ ವಿನಂತಿಸಿಕೊಂಡರು.
ಕಂದಾವರ ರಘುರಾಮ ಶೆಟ್ಟಿ ಅವರಿಗೆ ವಿದ್ಯಾ ಪೋಷಕ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಸಮವಸ್ತ್ರವನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ದಿನೇಶ್ ಹೆಗ್ಡೆ ಮೊಳಹಳ್ಳಿ,ಉಡುಪಿ ಜಿಲ್ಲೆ ಶಿಕ್ಷಣ ಇಲಾಖೆ ಉಪನಿರ್ದೇಶಕ ಗನಪತಿ.ಕೆ,ಬೈಂದೂರು ಬಿಒ ನಾಗೇಶ್ ನಾಯ್ಕ್ ಉಪಸ್ಥಿತರಿದ್ದರು.ಸಮೃದ್ಧ ಜನಸೇವಾ ಚಾರಿಟೇಬಲ್ ಟ್ರ್‍ಸ್ಟ್ ಬೈಂದೂರು ಅಧ್ಯಕ್ಷ ಬಿ.ಎಸ್ ಸುರೇಶ ಶೆಟ್ಟಿ ಸ್ವಾಗತಿಸಿದರು.ಶಿಕ್ಷಕವೃಂದವರು,ಮಕ್ಕಳ ಪೋಷಕರು,ವಿದ್ಯಾರ್ಥಿಗಳು,ವಿದ್ಯಾಭಿಮಾನಿಗಳು ಭಾಗವಹಿಸಿದ್ದರು.

Advertisement
Advertisement
Advertisement

Share
Team Kundapur Times

Recent Posts

ಬ್ರಹ್ಮಾವರ ವಿದ್ಯಾ ಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಹೊಸ ವರ್ಷ ಆಚರಣೆ

ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಾಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರದಲ್ಲಿ ಹೊಸ ವರ್ಷ ಆಚರಣೆ ಅದ್ದೂರಿಯಾಗಿ ನಡೆಯಿತು.ಕಾಲೇಜಿನ ಸಂಸ್ಥಾಪಕರಾದ ಸುಬ್ರಹ್ಮಣ್ಯ ಅವರು ದೀಪ ಬೆಳಗಿಸುವುದರ…

5 hours ago

ಆದಿಶಕ್ತಿ ಎಂಟರ್‍ಪ್ರೈಸಸ್ ಹಾರ್ಡವೇರ್ ಶುಭಾರಂಭ

ಕುಂದಾಪುರ:ರತ್ನಮ್ಮ ಗ್ರೂಪ್ಸ್ ಪುನೀತ್ ಶೆಟ್ಟಿ ಮಾಲೀಕತ್ವದ ಆದಿಶಕ್ತಿ ಎಂಟರ್‍ಪ್ರೈಸ್ ಹಾರ್ಡವೇರ್ ಬೈಂದೂರು ತಾಲೂಕಿನ ಯರುಕೋಣೆ ಮುಖ್ಯ ರಸ್ತೆಯಲ್ಲಿನ ಮೂಕಾಂಬಿಕಾ ಕಾಂಪ್ಲೆಕ್ಸ್…

7 hours ago

ಹುಟ್ಟು ಹಬ್ಬ ಆಚರಣೆ,ಅಂಗನವಾಡಿ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ವಿತರಣೆ

ಕುಂದಾಪುರ:ಧಿಮಂತ ರಾಜಕಾರಣಿ ಹಾಗೂ ತಮ್ಮ ಸಾಮಾಜಿಕ ಕಾರ್ಯಗಳ ಮೂಲಕ ಮನೆ ಮಾತಾಗಿರುವ ದಿ ಆರ್.ಕೆ ಸಂಜೀವ ರಾವ್ ಖಂಬದಕೋಣೆ ಅವರ…

1 day ago

ರಸ್ತೆ ಅಪಘಾತದಲ್ಲಿ ಯಕ್ಷಗಾನ ಕಲಾವಿದ ಸಾವು

ಮಂಗಳೂರು:ಅರ್ಕುಳದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಟಿಪ್ಪರ್ ಅಡಿಗೆ ಸಿಲುಕಿ ಸಸಿಹಿತ್ಲು ಮೇಳದ ಕಲಾವಿದ ಪ್ರವಿತ್ ಆಚಾರ್ಯ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ…

2 days ago

ಅಂಪಾರು ಬಲಾಡಿ ಕಲ್ ತೋಡ್ಮಿ ಮನೆಯ ಕುಟುಂಬದವರ ಮೂಲ ನಾಗಬನದಲ್ಲಿ ಚತುಃಪವಿತ್ರ ನಾಗಮಂಡಲೋತ್ಸವ ಸಂಪನ್ನ

ಕುಂದಾಪುರ:ತಾಲೂಕು ಅಂಪಾರು ಗ್ರಾಮದ ಬಲಾಡಿ ಕಲ್ ತೋಡ್ಮಿ ಮನೆಯ ಕುಟುಂಬದವರ ಮೂಲ ನಾಗಬನದಲ್ಲಿ ಚತುಃಪವಿತ್ರ ನಾಗಮಂಡಲೋತ್ಸವ ವಿಜೃಂಭಣೆಯಿಂದ ನಡೆಯಿತುಶ್ರೀ ದೇವರಿಗೆ…

2 days ago

ಹುಂತನಗೋಳಿ ಅಮಾವಾಸ್ಯೆ ಜಾತ್ರಾ ಮಹೋತ್ಸವ ಸಂಪನ್ನ

ಕುಂದಾಪುರ:ಬೈಂದೂರು ತಾಲೂಕಿನ ಆಲೂರು ಗ್ರಾಮದ (ಹೇರೂರು) ಹುಂತನಗೋಳಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ಎಳ್ಳಮಾವಾಸ್ಯೆ ಜಾತ್ರಾ ಮಹೋತ್ಸವ…

3 days ago