ಕುಂದಾಪುರ:ವಿದ್ಯಾರ್ಥಿಗಳ ಪ್ರಸ್ತುತ ದಾಖಲೆಗಳನ್ನು ಪಡೆದುಕೊಳ್ಳುವುದರ ಮೂಲಕ ಅಥವಾ ಓ.ಟಿ. ಮುಖಾಂತರ ಜಾತಿ ಪ್ರಮಾಣ ಪತ್ರವನ್ನು ನೀಡುವ ಕುರಿತು ಮನವಿ ಪತ್ರವನ್ನು ಬೈಂದೂರು ಬಂಟರ ಸಂಘದ ವತಿಯಿಂದ ಬೈಂದೂರು ತಹಶೀಲ್ದಾರ್ ಗೆ ಮನವಿಯನ್ನು ಸಲ್ಲಿಸಲಾಯಿತು.
ಬೈಂದೂರು ಬಂಟ ಸಂಘದ ಅಧ್ಯಕ್ಷರಾದ ಶಶಿಧರ್ ಶೆಟ್ಟಿ ಸಾಲ್ಗೆದೆ ಅವರು ಮಾತಮಾಡಿ,
ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಹಿಂದಿನಿಂದಲೂ ಬಂಟರ ಯಾನೆ ನಾಡವ ಎಂಬುವುದು ಎರಡು ಒಂದೇ ಆಗಿರುತ್ತದೆ. ಅದೇ ರೀತಿ ಕಳೆದ ಐವತ್ತು ವರ್ಷದ ಹಿಂದೆ ಹಿಂದೂ ನಾಡವ ಅಥವಾ ನಾಡವ ಎಂಬುದಾಗಿ ಕೆಲವೊಂದು ದಾಖಲೆಗಳಲ್ಲಿ ನಮೂದಾಗಿರುತ್ತದೆ. ಅದೇ ರೀತಿ 1925ರ ನಂತರದ ದಿನಗಳಲ್ಲಿ ಹಿಂದೂ ನಾಡವ ಬದಲಿಗೆ ಹಿಂದೂ ಬಂಟ ಎಂದು ಎಲ್ಲಾ ದಾಖಲೆಗಳಲ್ಲಿ ನಮೂದಾಗಿರುತ್ತದೆ. ಆದ್ದರಿಂದ ಬಂಟಿ ಯಾನೆ ನಾಡವ ಎನ್ನುವುದು ಒಂದೇ ಆಗಿರುತ್ತದೆ. ಕೆಲವೊಂದು ಕುಟುಂಬದಲ್ಲಿ ಅನಕ್ಷರಸ್ಥರಿರುವುದರಿಂದ ಮತ್ತು ಕೆಲವೊಂದು ದಾಖಲೆಗಳಲ್ಲಿ ನಾಡವ ಎನ್ನುವುದು ನಮೂದಾಗಿದ್ದು ಮತ್ತು ಬಂಟ ಅಥವಾ ನಾಡವ ಎನ್ನುವುದರ ಬಗ್ಗೆ ಈಗಲೂ ಕೂಡ ಅವರಲ್ಲಿರುವ ಶಾಲಾ ದಾಖಲೆಗಳಲ್ಲಿ ನಮೂದಾಗಿರುವುದಿಲ್ಲ. ನಾವು ತಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ, ನಾಡವ ಯಾನೆ ಬಂಟ ಅಥವಾ ಹಿಂದೂ ನಾಡವ ಅಥವಾ ಹಿಂದೂ ಬಂಟ ಇವೆಲ್ಲವೂ 3ಬಿಯ ಅಡಿಯಲ್ಲಿ ಬರುವುದರಿಂದ ಸದ್ದಿ ವಿಚಾರವನ್ನು ಗಣನೆಗೆ ತೆಗೆದುಕೊಂಡು ಜಾತಿ ಪ್ರಮಾಣ ಪತ್ರವನ್ನು ನೀಡಬೇಕಾಗಿ ಕೇಳಿಕೊಳ್ಳುವುದು ಎಂದರು.
ಶಿರೂರು ಬಂಟರ ಸಂಘ ಮಾಜಿ ಅಧ್ಯಕ್ಷರು ಪುಷ್ಪರಾಜ್ ಶೆಟ್ಟಿ ಅವರು ಮಾತನಾಡಿ,
ಪ್ರಸ್ತುತ ಶಾಲಾ ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಪಡೆಯಲು ಹಾಗೂ ಉದ್ಯೋಗವನ್ನು ಪಡೆಯಲು ಜಾತಿ ಪ್ರಮಾಣ ಪತ್ರ ಅಗತ್ಯವಿರುವುದರಿಂದ ಸಂಬಂಧಪಟ್ಟ ಕಛೇರಿಗಳಲ್ಲಿ ಜಾತಿ ಪ್ರಮಾಣ ಪತ್ರವನ್ನು ನೀಡಲು ತಿಳಿಸಿದರೇ ತಂದೆಯ ಶಾಲಾ ದಾಖಲಾತಿ ಮತ್ತು ಜಾತಿ ಪ್ರಮಾಣ ಪತ್ರ ಕೇಳುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ತುಂಬಾ ಸಮಸ್ಯೆಯಾಗಿ ಜಾತಿ ಪ್ರಮಾಣ ಪತ್ರ ಸಿಗುತ್ತಿಲ್ಲ ತಮ್ಮಲ್ಲಿ ತಿಳಿಸುವುದೆನೆಂದರೆ, ಬಂಟ ಯಾನೆ ನಾಡವ ಎನ್ನುವುದು ಎರಡು ಒಂದೇ ಜಾತಿ ಆಗಿರುತ್ತದೆ. ಕಳೆದ ಒಂದು ವರ್ಷದ ಹಿಂದೆ ಓಟಿಸಿ, ಮುಖಾಂತರ ಅಂದರೆ ಕುಟುಂಬದ ಪಡಿತರ ಚೀಟಿಯನ್ನು ಗಣನೆಗೆ ತೆಗೆದುಕೊಂಡು ಜಾತಿ ಪ್ರಮಾಣ ಪತ್ರವನ್ನು ತಮ್ಮ ಕಛೇರಿಯಲ್ಲ ಮತ್ತು ಗ್ರಾಮ ಒಂದರಲ್ಲಿ ಕೂಡ ನೀಡುತ್ತಿದ್ದು, ಅಲ್ಲದೇ ಬಂಟ ಯಾನೆ ನಾಡವ ಎನ್ನುವುದರ ಬಗ್ಗೆ ಸಂಬಂಧಪಟ್ಟ ಪಂಚಾಯತ್‌ನಲ್ಲಿ ಕುಟುಂಬದ ದಾಖಲೆಗಳನ್ನು ಪಡೆದುಕೊಂಡು ಸಾಕ್ಷಿದಾರರ ಮಹಜರನ್ನು ಮಾಡಿಕೊಂಡು ಸಹಾ ಜಾತಿ ಪ್ರಮಾಣ ಪತ್ರವನ್ನು ನಮ್ಮ ಈ ಭಾಗದಲ್ಲಿ ಮತ್ತು ಕುಂದಾಪುರದಲ್ಲಿ ಕೂಡಾ ನೀಡುತ್ತಿದ್ದಾರೆ.
ಉಪಾಧ್ಯಕ್ಷರಾದ ಗೋಕುಲ್ ಶೆಟ್ಟಿ ಉಪ್ಪುಂದ ಅವರು ಮಾತನಾಡಿ,
ಈಗಾಗಲೇ ಈ ರೀತಿಯಾಗಿ ದಾಖಲೆಯನ್ನು ಪಡೆದುಕೊಂಡು ಜಾತಿ ಪ್ರಮಾಣ ಪತ್ರವನ್ನು ನೀಡಿರುವ ತಮ್ಮ ಕಛೇರಿಯಲ್ಲಿ ಪ್ರಸ್ತುತ ವಿದ್ಯಾರ್ಥಿಗಳಿಗೆ ಜಾತಿ ಪ್ರಮಾಣ ಪತ್ರಕ್ಕೆ ಅರ್ಜಿ ನೀಡಿದರೆ ತಂದೆಯ ದಾಖಲೆಯನ್ನು ನೀಡಿದರೇ ಮಾತ್ರ ಜಾತಿ ಪ್ರಮಾಣ ಪತ್ರ ನೀಡುವುದಾಗಿ ತಿಳಿಸಿದ್ದಿರಿ. ಆದರೆ ತಂದೆಯ ದಾಖಲೆಗಳಲ್ಲಿ ನಾಡವ ಎಂದೂ ನಮೂದಾಗಿದ್ದರೂ ಕೂಡ ಅದನ್ನು ಗಣನೆಗೆ ತೆಗೆದುಕೊಳ್ಳದೇ ಇರುವುದು ಶಾಲಾ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತದೆ. ಆದ್ದರಿಂದ ತಮ್ಮಲ್ಲಿ ಮೂಲಕ ಕೇಳಿಕೊಳ್ಳುವುದೇನೆಂದರೆ, ಪ್ರಸ್ತುತ ಶಾಲಾ ಮಕ್ಕಳ ಆಧಾರ್ ಕಾರ್ಡ್, ಪಡಿತರ ಚೀಟಿ, ಜನನ ಪ್ರಮಾಣ ಪತ್ರವನ್ನು ತೆಗೆದುಕೊಂಡು ಜಾತಿ ಪ್ರಮಾಣ ಪತ್ರವನ್ನು ನೀಡಬೇಕು ಅಥವಾ ಒಂದು ವರ್ಷದ ಹಿಂದೆ ಇರುವ ಓ.ಟಿ.ಸಿ. ಮುಖಾಂತರ ಜಾತಿ ಪ್ರಮಾಣ ಪತ್ರವನ್ನು ನೀಡಿದರೆ ವಿದ್ಯಾರ್ಥಿಗಳಿಗೆ ಜಾತಿ ಪ್ರಮಾಣ ಪತ್ರವನ್ನು ಪಡೆದುಕೊಳ್ಳಲು ಅನುಕೂಲವಾಗುತ್ತದೆ. ಶಿಕ್ಷಣವನ್ನು ಪಡೆದು ಉನ್ನತ ಉದ್ಯೋಗಕ್ಕೆ ಹೋಗುತ್ತಿರುವ ವಿದ್ಯಾರ್ಥಿಗಳಿಗೆ ಜಾತಿ ಪ್ರಮಾಣ ಪತ್ರವನ್ನು ಪಡೆದುಕೊಳ್ಳಲು ಈ ರೀತಿಯಲ್ಲಿ ಸಣ್ಣ ಪುಟ್ಟ ಸಮಸ್ಯೆಯಾದರೆ ವಿದ್ಯಾರ್ಥಿಗಳ ಉಜ್ವಲ ಭವಿಷ್ಯವನ್ನು ರೂಪಿಸಲು ಹೇಗೆ ಸಾಧ್ಯ? ಆದ್ದರಿಂದ ತಾವು ನಾಡವ, ಬಂಟ ಯಾನೆ ನಾಡವ, ಹಿಂದೂ ಬಂಟ, ಹಿಂದೂ ನಾಡವ ಈ ರೀತಿಯಲ್ಲಿ ಯಾವುದೇ ದಾಖಲೆಯನ್ನು ನೀಡಿದ್ದರೆ ಅಥವಾ ಮೇಲೆ ತಿಳಿಸಿದಂತೆ ವಿದ್ಯಾರ್ಥಿಗಳ ಮತ್ತು ಕುಟುಂಬದ ದಾಖಲೆಗಳನ್ನು ಪರಿಶೀಲಿಸಿ ಬಂಟ ಅಥವಾ ನಾಡವ ಬಂಟ ಪ್ರಕಾರ 3ಬಿ ರಲ್ಲಿ ಜಾತಿ ಪ್ರಮಾಣ ಪತ್ರವನ್ನು ನೀಡಬೇಕಾಗಿ
ನೀವು ತಿಳಿಸುವ ಹಾಗೇ ತಂದೆಯ ಜಾತಿ ಪ್ರಮಾಣ ಪತ್ರದಲ್ಲಿ ನಾಡವ ಎಂದು ನಮೂದಾಗಿದ್ದರೆ ಹಾಗೂ ಇನ್ನು ಕೆಲವರ ದಾಖಲೆಗಳಲ್ಲಿ ಬಂಟ ಅಥವಾ ನಾಡವ ಎನ್ನುವುದು ನಮೂದಾಗದೇ ಇರುವುದರಿಂದ ಈ ರೀತಿಯ ದಾಖಲೆಗಳನ್ನು ಪ್ರಸ್ತುತ ವಿದ್ಯಾರ್ಥಿಗಳಿಗೆ ನೀಡಲು ಸಾಧ್ಯವಿಲ್ಲ. ಆದ್ದರಿಂದ ಮೇಲೆ ತಿಳಿಸಿದ ರೀತಿಯಲ್ಲಿ ಜಾತಿ ಪ್ರಮಾಣ ಪತ್ರವನ್ನು ವಿದ್ಯಾರ್ಥಿಗಳಿಗೆ ನೀಡಿದರೆ ಅವರವರ ಭವಿಷ್ಯವನ್ನು ನೋಡಿಕೊಳ್ಳಲು ಸಹಾಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ
ನಿಕಟ ಪೂರ್ವ ಅಧ್ಯಕ್ಷರಾದ ಜಗನ್ನಾಥ್ ಶೆಟ್ಟಿ ನಾಕಟ್ಟೆ,
ಜೊತೆ ಕಾರ್ಯದರ್ಶಿ ಜಯರಾಮ್ ಶೆಟ್ಟಿ ಗಂಟಿಹೊಳೆ,ಮನೋಹರ್ ಶೆಟ್ಟಿ ಉಪ್ಪುಂದ,
N.ದಿವಾಕರ್ ಶೆಟ್ಟಿ ನೆಲ್ಯಾಡಿ, ಜಯರಾಮ್ ಶೆಟ್ಟಿ ಬಿಜೂರು ವಿದ್ಯಾರ್ಥಿ ವೇತನ ಸಮಿತಿ ಸಂಚಾಲಕರು,ಸಂತೋಷ ಕುಮಾರ್ ಶೆಟ್ಟಿ ಸಂಘಟನಾ ಕಾರ್ಯದರ್ಶಿ, ಶಾಮ್ ಶೆಟ್ಟಿ ನಾಕಟ್ಟೆ,ನಿತಿನ್ ಬಿ ಶೆಟ್ಟಿ ಕಾರ್ಯದರ್ಶಿ,ಚಂದ್ರಶೀಲ ಶೆಟ್ಟಿ ನಾವುಂದ ಉಪಸ್ಥಿತರಿದ್ದರು.
ಕುಂದಾಪುರ:ಮಹಿಳಾ ಮೀನುಗಾರರ ವಿವಿಧೋದ್ದೇಶ ಸಹಕಾರಿ ಸಂಘ ಮರವಂತೆ,ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು,ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಉಡುಪಿ ಹಾಗೂ…
ಕುಂದಾಪುರ:ನೃತ್ಯ ಬಿಂಬ ಸಾಂಸ್ಕೃತಿಕ ಪ್ರತಿಷ್ಠಾನ ಬೆಂಗಳೂರು ಮತ್ತು ಕಲೆಗಳ ಉತ್ಸವ ಬೆಂಗಳೂರು ಅವರ ಜಂಟಿ ಆಶ್ರಯದಲ್ಲಿ ಉಡುಪಿ ಜಿಲ್ಲೆಯ ಪ್ರಸಿದ್ಧಕೊಲ್ಲೂರು…
ಕುಂದಾಪುರ:ಜೂನ್.21 ರಂದು ಸ್ಕೂಟರ್‍ನಲ್ಲಿ ಅಕ್ರಮವಾಗಿ ಗೋಮಾಂಸವನ್ನು ಸಾಗಾಟ ಮಾಡುತ್ತಿದ್ದ ಗಂಗೊಳ್ಳಿ ಮೀನು ಮಾರ್ಕೆಟ್ ಬಳಿ ನಿವಾಸಿ ಅಬ್ದುಲ್ ರಹೀಮ್ (35)…
ಬೈಂದೂರು:ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್‍ವಾದ ಜಿಲ್ಲಾ ಸಮಿತಿ ವತಿಯಿಂದ ಬೈಂದೂರು ತಾಲೂಕು ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಭೀಮ…
ಮುಳ್ಳಿಕಟ್ಟೆ:ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ನಿವಾಸಿ ಆಯುರ್ವೇದ ವೈದ್ಯ ಡಾ.ಶ್ರೀನಿವಾಸ ಪೈ (62) ಹೃದಯಘಾತದಿಂದ ಸೋಮವಾರ ನಿಧನರಾದರು.ಅವರಿಗೆ ಪತ್ನಿ,ಮಗಳು,ತಂದೆ,ಇಬ್ಬರು…
ಕುಂದಾಪುರ:ದೂರದರ್ಶನ ಚಂದನ ಟಿವಿಯಲ್ಲಿ ಜೂನ್.16 ರ ಬೆಳಿಗ್ಗೆ 8 ಕ್ಕೆ ಯೋಗಾಚಾರ್ಯ ಸಂತೋಷ್ ಕುಮಾರ್ ಅವರಿಂದ ವ್ಯಾಯಾಮ ಮತ್ತು ಯೋಗಾಸನ…