ಕುಂದಾಪುರ:ಜೋಗಿ ಮನೆ ಟ್ರಸ್ಟ್ ಹಳಗೇರಿ ತಂಕಬೆಟ್ಟು ,ಜೆ.ಸಿ.ಐ.ಉಪ್ಪುಂದ ಹಾಗೂ ಆಯುಷ್ಮಾನ್ ಆರೋಗ್ಯ ಮಂದಿರ (ಆಯುಷ್) ಸರಕಾರಿ ಆಯುರ್ವೇದ ಚಿಕಿತ್ಸಾಲಯ ಕಾಲ್ತೋಡು ಅವರ ಸಂಯುಕ್ತ ಆಶ್ರಯದಲ್ಲಿ 10 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಆಯೋಜಿಸಿದ 10 ದಿನಗಳ ಉಚಿತ ಯೋಗ ತರಬೇತಿಯ ಸಮಾರೋಪ ಸಮಾರಂಭ ಹಳಗೇರಿ ಜೋಗಿ ಮನೆ ವಠಾರದಲ್ಲಿ ನಡೆಯಿತು.
ಸಿದ್ಧಪೀಠ ಕೊಡಾಚಾದ್ರಿ ಪ್ರಧಾನ ಕಾರ್ಯದರ್ಶಿ
ಡಾ.ಕೇಶವ ಕೋಟೇಶ್ವರ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ.ಯೋಗ ತರಬೇತಿ ಶಿಬಿರದಂತಹ ಕಾರ್ಯಕ್ರಮಗಳು ಎಲ್ಲಾ ಪರಿಸರದಲ್ಲಿ ನಡೆಯಬೇಕು.ಸಮಾಜ ಸೇವೆ ಮಾಡುವಂತಹ ಮನೋಭಾವವನ್ನು ಎಲ್ಲರೂ ಬೆಳೆಸಿಕೊಳ್ಳುವುದರಿಂದ ಸಮಾಜ ಸುಧಾರಣೆಯನ್ನು ಮಾಡಬಹುದಾಗಿದೆ ಎಂದು ಹೇಳಿದರು.
ಯೋಗ ತರಬೇತುದಾರರಾದ ಶೇಖರ್ ಶೆಟ್ಟಿ ಅವರು ಯೋಗದ ಮಹತ್ವ ಕುರಿತು ಮಾತನಾಡಿ,ಭಾರತೀಯ ಪರಂಪರೆಯಿಂದ ನಡೆದುಬಂದಂತಹ ಯೋಗಕ್ಕೆ ಇಂದು ವಿಶ್ವ ಮಟ್ಟದಲ್ಲಿ ಮನ್ನಣೆ ದೊರೆತಿದೆ ಎಂದು ಹೇಳಿದರು.ನಿತ್ಯವೂ ಯೋಗ ಮಾಡುವುದರಿಂದ ದೈಹಿಕ ಆರೋಗ್ಯ ಕಾಪಾಡಿಕೊಳ್ಳುವುದರ ಜತೆಗೆ ಮಾನಸಿಕವಾಗಿ ನೆಮ್ಮದಿ ಜೀವನ ಕಾಣಬಹುದಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜೋಗಿ ಮನೆ ಟ್ರಸ್ಟ್ ಅಧ್ಯಕ್ಷರಾದ ವಸಂತ ಜೋಗಿ ಅವರು ಮಾತನಾಡಿ,ಗ್ರಾಮೀಣ ಪ್ರದೇಶದಲ್ಲಿ ಯೋಗ ಶಿಬಿರಗಳನ್ನು ಆಯೋಜನೆ ಮಾಡುವುದರಿಂದ ಹಳ್ಳಿ ಭಾಗದ ಜನರಿಗೆ ಬಹಳಷ್ಟು ಪ್ರಯೋಜನ ವಾಗಲಿದೆ.ಯೋಗ ಶಿಬಿರಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದರು.
ಆಯುಷ್ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಕಾಲ್ತೋಡು ಡಾ.ವೀಣಾ ಕಾರಂತ ಅವರು ಮಾತನಾಡಿ,ನಮ್ಮ ಸುತ್ತಲಿನ ಜನರಿಗೆ ಅನುಕೂರಕರ ಚಟುವಟಿಕೆಗಳನ್ನು ಮಾಡಿಕೊಂಡಿರುವುದರಿಂದ ಜನರ ಜೀವನ ಕ್ರಮ ಸುಧಾರಿಸುವುದರ ಜೊತೆಗೆ ಆದರ್ಶ ವ್ಯಕ್ತಿಯಾಗಿ ಬದುಕುಕಲು ಸಹಕಾರಿ ಆಗುತ್ತದೆ ಎಂದರು.
ಡಾ.ಸುರೇಶ್ ಕೆ.ಎನ್.ಅಧ್ಯಕ್ಷ ರು ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಘಟಕ ತೀರ್ಥಹಳ್ಳಿ,S.S.L.C ಯಲ್ಲಿ ಹೆಚ್ಚಿನ ಅಂಕ ಗಳಿಸಿದ ಜೋಗಿ ಕುಟುಂಬದ ಕುಮಾರಿ ಕನ್ನಿಕಾ ಜೋಗಿ ಹಾಗೂ ಸರಕಾರಿ ಆಯುರ್ವೇದ ಚಿಕಿತ್ಸಾಲಯದ ವೈದ್ಯಾಧಿಕಾರಿಗಳಾದ ಡಾ.ವೀಣಾ ಕಾರಂತರವರನ್ನು ಸನ್ಮಾನಿಸಲಾಯಿತು. ತರಬೇತಿಯಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ಹಾಗೂ ಆಯುರ್ವೇದ, ಆಹಾರ,ಯೋಗ ಮಾಹಿತಿ ಐಯನ್ನೊಳಗೊಂಡ ಪುಸ್ತಕಗಳನ್ನು ವಿತರಿಸಲಾಯಿತು.JCI ಉಪ್ಪುಂದ ಇದರ ಅಧ್ಯಕ್ಷ ಮಂಜುನಾಥ ದೇವಾಡಿಗ, ಉದಯ ಡಿ.ಆರ್, ಪುರುಷೋತ್ತಮ ದಾಸ್ ಉಪ್ಪುಂದ
ಉಪಸ್ಥಿತರಿದ್ದರು.
ಶ್ವೇತಾ ಜೋಗಿ ಪ್ರಾರ್ಥಿಸಿದರು.ರಾಜೇಶ್ ಜೋಗಿ ಬಂಟಕಲ್ಲು ಸ್ವಾಗತಿಸಿದರು.
ಸಂತೋಷ ಮೊಗವೀರ ನಿರೂಪಿಸಿದರು.ಮಂಜುನಾಥ ಕೊಡೇರಿ ವಂದಿಸಿದರು.
ಕುಂದಾಪುರ:ದೇಶದ ಭದ್ರತೆ ಹಿತದೃಷ್ಠಿಯಿಂದ ನೌಕಪಡೆ,ಕಸ್ಟಮ್ಸ್ ಇಲಾಖೆ,ಕರಾವಳಿ ಕಾವಲು ಲೀಸ್ ಪಡೆ ಸೇರಿದಂತೆ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಬುಧವಾರದಿಂದ 2 ದಿನಗಳ…
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿನ ಬಿ.ಸಿ.ಎ ವಿಭಾಗದ ವತಿಯಿಂದ ಎಲೆವೆಂಶಿಯಾ 2ಕೆ24 ಫೆಸ್ಟ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.ರೋಬೊಸಾಫ್ಟ್…
ಉಡುಪಿ:ಜಿಲ್ಲೆಯ ಹೆಬ್ರಿ ತಾಲೂಕಿನ ಹೆಬ್ರಿ ಕಬ್ವಿನಾಲೆ ಸೀತಂಬೈಲುವಿನಲ್ಲಿ ಸೋಮವಾರ ರಾತ್ರಿ ಎ ಎನ್ ಎಫ್ ಹಾಗೂ ನಕ್ಸಲರ ನಡುವೆ ನಡೆದ…
ಕುಂದಾಪುರ:ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕುಂದಾಪುರ,ಕರ್ನಾಟಕ ಪ್ರೌಢ ಶಾಲಾ ಸಹಶಿಕ್ಷಕರ ಸಂಘ ಕುಂದಾಪುರ ತಾಲೂಕು ಘಟಕ…
ಮುಳ್ಳಿಕಟ್ಟೆ:ಕುಂದಾಪುರ ದಿಂದ ಅರಾಟೆಗೆ ಸಾಗುತ್ತಿದ್ದ ಆಟೋ ರಿಕ್ಷಾಕ್ಕೆ ಮುಳ್ಳಿಕಟ್ಟೆ ಸರ್ಕಲ್ ನಲ್ಲಿ ತ್ರಾಸಿ ಕಡೆಯಿಂದ ಕುಂದಾಪುರ ಕಡೆಗೆ ಸಾಗುತ್ತಿದ್ದ ಕಾರು…
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಮತ್ತು ಕುಂದಾಪುರ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ರಕ್ತದಾನ ಶಿಬಿರ ಕಾರ್ಯಕ್ರಮ…