ಮಂಗಳೂರು:ಸರಣಿ ರಜೆ ಹಿನ್ನಲೆಯಲ್ಲಿ ರಾಜ್ಯದ ಪ್ರಮುಖ ಯಾತ್ರಾ ಕ್ಷೇತ್ರವಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಕ್ತ ಸಮೂಹವೆ ಭಾನುವಾರ ಕಂಡು ಬಂದಿದೆ.
ಶುಕ್ರವಾರ,ಶನಿವಾರ ಹಾಗೂ ಭಾನುವಾರ ಸರಣಿಯಾಗಿ ಸರಕಾರಿ ರಜೆಗಳಿದ್ದ ಹಿನ್ನಲೆಯಲ್ಲಿ ಮೂರು ದಿನಗಳಲ್ಲೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕ್ಷೇತ್ರಕ್ಕೆ ಆಗಮಿಸಿದ್ದರು.ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ರಥಬೀದಿ,ಹೊರಾಂಗಣ, ಪೇಟೆಯಲ್ಲಿ ಭಕ್ತರ ದಟ್ಟಣೆ ಹೆಚ್ಚಿತ್ತು ಹಾಗೂ ಪೇಟೆಯಲ್ಲಿ ವಾಹನ ಓಡಾಟವೂ ಅಧಿಕವಾಗಿತ್ತು.ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರಕ್ಕೆ ಆಗಮಿಸಿದ್ದರು ಶ್ರೀ ದೇವರ ದರುಶನಕ್ಕೆ ಹಾಗೂ ಅನ್ನ ಪ್ರಸಾದ ಸ್ವೀಕರಿಸಲು ಯಾವುದೇ ರೀತಿಯ ಸಮಸ್ಯೆ ಆಗದಂತೆ ವ್ಯವಸ್ಥೆ ಮಾಡಲಾಯಿತು.ದೇವಸ್ಥಾನದ ಸಿಬ್ಬಂದಿಗಳು ಭಕ್ತರಿಗೆ ಸೂಕ್ತ ನಿರ್ದೇಶನ ನೀಡುವ ಮೂಲಕ ಸಹಕರಿಸಿದರು.
ಕುಂದಾಪುರ:ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಜಿಲ್ಲಾ ಸಮಿತಿ ಉಡುಪಿ ವತಿಯಿಂದ ನವಚೇತನ ಸಮಾವೇಶ ಹಾಗೂ ಕುಂದಾಪುರ ತಾಲೂಕು…
ಉಡುಪಿ:ನೀಲಾವರದಲ್ಲಿ ಮನೆಗೆ ಸಿಡಿಲು ಬಡಿದ ಪರಿಣಾಮ ಮನೆಯಲ್ಲಿನ ಎಲೆಕ್ಟ್ರಾನಿಕ್ ಉಪಕರಣಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿ ಹೋಗಿದ್ದು ಲಕ್ಷಾಂತರ ರೂಪಾಯಿ ನಷ್ಟ…
ಮಂಗಳೂರು:ಫೆಂಗಲ್ ಚಂಡಮಾರುತದ ಹಿನ್ನೆಲೆಯಲ್ಲಿ ದ.ಕ ಜಿಲ್ಲೆಯಲ್ಲಿ ಸೋಮವಾರ ಭಾರಿ ಮಳೆಯಾಗಿದೆ.ಹವಾಮಾನ ವೈಪರಿತ್ಯ ದಿಂದಾಗಿ ಏಕಾಏಕಿ ಸುರಿದ ವರುಣನ ಅಬ್ಬರಕ್ಕೆ ಜಿಲ್ಲೆಯ…
ಕುಂದಾಪುರ: ಕೃಷಿಕರಾದ ನಾವುಂದ ಕಾರಂತರ ಹಿತ್ತಲು ಸೂರ ಪೂಜಾರಿಯವರ ಮನೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ಭತ್ತವನ್ನು ಶೇಕರಿಸಿಡುವ ಕುಂದಾಪುರದ ಆಡು ಭಾಷೆಯಲ್ಲಿ…
https://youtu.be/Nuq2NNGkcP4?si=GBDHfmSHQBwcQO7R ಕುಂದಾಪುರ:ಬೆಳ್ವೆ ಸಮೀಪದ ಗೊಮ್ಮೋಲ್ಚರ್ಚ್ ಹಿಂಭಾಗದಿಂದಒಳ್ಳೆ ಹೊಂಡ ಕಜ್ಕೆ ಸಂತೆಕಟ್ಟೆ ಸಂಪರ್ಕದ ಒಳ್ಳೆ ಹೊಂಡ ಬಳಿಕಿಂಡಿ ಅಣೆಕಟ್ಟಿನ ಮೇಲ್ಭಾಗದಲ್ಲಿ ಮಧ್ಯಾಹ್ನದ…
https://youtu.be/Nuq2NNGkcP4?si=GBDHfmSHQBwcQO7R ಕುಂದಾಪುರ:2000 ಇಸವಿಯಲ್ಲಿ ಆರಂಭಗೊಂಡಿರುವ ಡಾನ್ ಬಾಸ್ಕೊ ತ್ರಾಸಿ-ಹೊಸಾಡು ಸಂಸ್ಥೆಗೆ 25 ವರ್ಷ ತುಂಬಿರುವುದರಿಂದ ಸಂಸ್ಥೆಯ ರಜತ ಮಹೋತ್ಸವ ಕಾರ್ಯಕ್ರಮವನ್ನು…