ಕುಂದಾಪುರ

ಶಂಕರ ಜಯಂತಿ ಕಾರ್ಯಕ್ರಮ

Share

ಕುಂದಾಪುರ:ಕರ್ನಾಟಕ ಸರಕಾರ ಹಿಂದೂ ಧಾರ್ಮಿಕ ದತ್ತಿ ಇಲಾಖೆ,ಕುಂದೇಶ್ವರ ದೇವಸ್ಥಾನ ಕುಂದಾಪುರ ಮತ್ತು ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ಅವರ ಸಹಭಾಗಿತ್ವದಲ್ಲಿ ಶಂಕರ ಜಯಂತಿ ಕಾರ್ಯಕ್ರಮ ಕುಂದೇಶ್ವರ ದೇವಸ್ಥಾನದಲ್ಲಿ ಭಾನುವಾರ ನಡೆಯಿತು.
ವಿದ್ವಾನ್ ಮಾಧವ ಮಂಜರು ಉಳ್ಳೂರು ಅಧ್ಯಕ್ಷತೆಯನ್ನು ವಹಿಸಿದ್ದರು.ವೇದಮೂರ್ತಿ ಲೋಕೇಶ್ ಅಡಿಗ ಪ್ರಾಂತೀಯ ಧರ್ಮ ಅಧಿಕಾರಿಗಳು ಶ್ರೀ ಶಾರದಾ ಪೀಠಂ ಶೃಂಗೇರಿ ಮತ್ತು ನಾಗ ಪಾತ್ರಿಗಳು ನಾವುಂದ ಬಡಾಕೆರೆ ಉಪಸ್ಥಿತರಿದ್ದರು.
ವೆಂಕಟ್ರಮಣರಾವ್,ಕುಮಾರಿ ಸನ್ನಿಧಿ ಅಡಿಗ ಬಡಾಕೆರೆ ಮತ್ತು ಕುಮಾರಿ ಸಾನಿಧ್ಯ ಮೈಯ ಉಪ್ಪುಂದ ಅವರು ಶಂಕರಾಚಾರ್ಯರ ಬಗ್ಗೆ ವಿವರಿಸಿದರು.ವಿದ್ವಾನ್ ಮಾಧವ ಅಡಿಗ ಉಳ್ಳೂರು ಆವರು ಶಂಕರಾಚಾರ್ಯರ ಬಗ್ಗೆ ಹಾಗೂ ಆತ್ಮ ಪರಮಾತ್ಮ ಮತ್ತು ಬ್ರಹ್ಮ ಸತ್ಯ ಜಗನ್ಮಿತ್ಯ ವಿಷಯಗಳ ಬಗ್ಗೆ ವಿಸ್ತಾರವಾಗಿ ಮಾಹಿತಿ ನೀಡಿದರು.
ವೇದ ಮೂರ್ತಿ ವಿಘ್ನೇಶ
ಮಂಜರು ಪೂಜೆಯನ್ನು ನೆರವೇರಿಸಿದರು.
ವಿದ್ವಾನ್ ಮಹೇಶ್ ಹೆಗಡೆ ದಾಂಡೇಲಿ ನಿರೂಪಿಸಿದರು.
ಲಕ್ಷ್ಮೀಶ ಅಡಿಗ ಸ್ವಾಗತಿಸಿದರು. ನಾಗೇಂದ್ರ ಅಡಿಗ ವಂದಿಸಿದರು.ಶ್ರುತಿಲಯ ಸಂಗೀತ ಶಾಲೆಯ ವಿದುಷಿ ನಳಿನಿರಾವ್ ಮತ್ತು ಸಂಗಡಿಗರಿಂದ ಹಾಗೂ ಬಡಾಕೆರೆ ಶ್ರೀ ಶಾರದಾ ಸದ್ವಿದ್ಯಾ ಕುಮಾರಿ ಶಿಬಿರದ ವಿದ್ಯಾರ್ಥಿನಿಯವರಿಂದ ಶಂಕರಾಚಾರ್ಯರ ಕೃತಿ ಪಠಣದೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು.

Advertisement

Share
Team Kundapur Times

Recent Posts

ಧಾರ್ಮಿಕ ಮುಖಂಡ ಅಪ್ಪಣ್ಣ ಹೆಗ್ಡೆ ವಿಧಿವಶ

ಕುಂದಾಪುರ:ಮಾಜಿ ಎಂಎಲ್ಎ ಧಾರ್ಮಿಕ ಮುಖಂಡ ಅಜಾತಶತ್ರು ಅಪ್ಪಣ್ಣ ಹೆಗ್ಡೆ ಶನಿವಾರ ವಿಧಿವಶರಾಗಿದ್ದಾರೆ.ನೂರಕ್ಕೂ ಅಧಿಕ ನಾಗಮಂಡಲದ ನೇತೃತ್ವವನ್ನು ವಹಿಸಿಕೊಡಿದ್ದ ಅವರು, ಹಲವು…

1 week ago

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕಾಂಗ್ರೆಸ್ ಪಕ್ಷದ ಮುಖಂಡ ರಾಜು ದೇವಾಡಿಗ ತ್ರಾಸಿ ನಿಧನ

ಕುಂದಾಪುರ:ಕಾಂಗ್ರೆಸ್ ಪಕ್ಷದ ಮುಖಂಡರಾದ,ಪ್ರಬಲ ರಾಜಕಾರಣಿ,ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ ತ್ರಾಸಿ ಸೋಮವಾರ ನಿಧನರಾದರು.ಅವರು ಪತ್ನಿ ಮಕ್ಕಳು, ಬಂದು…

2 weeks ago

ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆ:ಸಹೋದರರು ಸಾಧನೆ

ಕುಂದಾಪುರ:ಪುದುಚೇರಿಯಲ್ಲಿ ನಡೆದ 21 ನೇ ರಾಷ್ಟ್ರ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿಥ್ಮೆಟಿಕ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿದ ಹಟ್ಟಿಯಂಗಡಿ ಸಿದ್ಧಿ ವಿನಾಯಕ…

3 weeks ago

ಸಾಧಕ ವಿದ್ಯಾರ್ಥಿ ವೈಷ್ಣವಿಗೆ ಗೌರವದ ಸನ್ಮಾನ

ಕುಂದಾಪುರ:2025 ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ತಾಲೂಕು ಮಟ್ಟದಲ್ಲಿ ಅತಿ ಹೆಚ್ಚು ಅಂಕ ಹಾಗೂ ರಾಜ್ಯ ಮಟ್ಟದಲ್ಲಿ 7ನೇ ರ್ಯಾಂಕ್…

3 weeks ago

ಹೊಸಾಡು ಸೇನಾಪುರ ಗ್ರಾಮೋತ್ಸವ ಶಾಸಕ ಗಂಟಿಹೊಳೆ ಉದ್ಘಾಟನೆ

ಕುಂದಾಪುರ:ಗ್ರಾಮ ಪಂಚಾಯಿತಿ ಹೊಸಾಡು,ಆರೋಗ್ಯ ಇಲಾಖೆ,ಕೃಷಿ ಇಲಾಖೆ,ಅರಣ್ಯ ಇಲಾಖೆ,ಆರಕ್ಷಕ ಠಾಣೆ ಗಂಗೊಳ್ಳಿ,ಪಶು ಸಂಪಗೋನಾ ಮತ್ತು ತೋಟಗಾರಿಕಾ ಹಾಗೂ ಮೆಸ್ಕಾಂ,ಶಿಕ್ಷಣ ಇಲಾಖೆ,ಆಯುಷ್ ಮತ್ತು…

4 weeks ago

ಶ್ರೀ ಮೂಕಾಂಬಿಕಾ ಭತ್ತ ಬೆಳೆಗಾರರ ಒಕ್ಕೂಟ ಬೈಂದೂರು ವಾರ್ಷಿಕ ಮಹಾಸಭೆ:2.5 ಕೋಟಿ ರೂ ವ್ಯವಾಹಾರ:ಒಟ್ಟು 1.81 ಲಕ್ಷ ರೂ. ನಿವ್ವಳ ಲಾಭ

ಕುಂದಾಪುರ:ಗ್ರಾಮೀಣ ಪ್ರದೇಶದ ಕೃಷಿಕರಿಗೆ ಅನುಕೂಲವಾಗುವ ಉದ್ದೇಶದಿಂದ ಕಳೆದ ಹನ್ನೊಂದು ವರ್ಷಗಳ ಹಿಂದೆ ಶ್ರೀ ಮೂಕಾಂಬಿಕಾ ಭತ್ತ ಬೆಳೆಗಾರರ ಒಕ್ಕೂಟವನ್ನು ಹುಟ್ಟು…

4 weeks ago