ಕುಂದಾಪುರ

ಎಕ್ಸಲೆಂಟ್ ಮತ್ತು ಲಿಟ್ಲಸ್ಟಾರ್ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳಿಗೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದ ರ್ಯಾಂಕ್.

Share

ಕುಂದಾಪುರ:ಎಕ್ಸಲೆಂಟ್ ಮತ್ತು ಲಿಟ್ಲಸ್ಟಾರ್ ಆಂಗ್ಲ ಮಾಧ್ಯಮ ಶಾಲೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇಕಡ 100 ಫಲಿತಾಂಶವನ್ನು ದಾಖಲಿಸಿದೆ. ಪ್ರಥ್ವಿತಾ ಪಿ ಶೆಟ್ಟಿ ರಾಜ್ಯ ಮಟ್ಟದಲ್ಲಿ 5ನೇ ರ್ಯಾಂಕ್ ಗಳಿಸಿದ್ದು ಕುಂದಾಪುರ ತಾಲೂಕಿಗೆ ಪ್ರಥಮ 621(99.36%) ಅಂಕಗಳು, ಶಾಧನಾ ದೇವಾಡಿಗ ರಾಜ್ಯ ಮಟ್ಟದಲ್ಲಿ 10ನೆಯ ರ್ಯಾಂಕ್‍ಗಳಿಸಿದ್ದು , ಕುಂದಾಪುರ ತಾಲೂಕಿಗೆ 6ನೆಯ ಸ್ಥಾನ ಪಡೆದಿದ್ದು, 616(98.56%) ಅಂಕಗಳನ್ನು ಗಳಿಸಿರುತ್ತಾರೆ. ಅಲ್ಲದೆ ಬಸನಗೌಡ ಪಾಟೀಲ್ 610 (97.6), ಕೆ ಶ್ರೀಶಾ ಶೆಟ್ಟಿ 610(97.6), ನಿಝಾ 608 (97.28), ಸನ್ನಿಧಿ 606 (96.96), ಸುಶ್ಮಿತಾ ಸುಕಾಲಿ 605 (96.8), ದಿವಿತ್ ಕುಮಾರ್ ಶೆಟ್ಟಿ 602 (96.32), ಸೃಜನ್ ಜೆ ಶೆಟ್ಟಿ 601 (96.16), ಐಶ್ವರ್ಯ ಬಿ ಆಚಾರ್ಯ್ 591 (94.56), ಸನ್ಸಿತಾ 588 (94.08), ಸಂದೀಪ್ ರೆಡ್ಡಿ ವಿ 587 (93.92), ವಿದ್ಯಾಶ್ರೀ 585 (93.60), ಕೃತಿ ಕೆ ಶೆಟ್ಟಿ 582 (93.12), ಲತಿಕಾ 581 (92.96) ಅಂಕಗಳನ್ನು ಪಡೆದಿದ್ದಾರೆ.ಸಂಸ್ಥೆಯಲ್ಲಿ ಪರೀಕ್ಷೆ ಬರೆದ 79 ವಿದ್ಯಾರ್ಥಿಗಳಲ್ಲಿ ವಿಶಿಷ್ಟ ಶ್ರೇಣಿಯಲ್ಲಿ 38 ವಿದ್ಯಾರ್ಥಿಗಳು,ಪ್ರಥಮ ಶ್ರೇಣಿಯಲ್ಲಿ 40 ವಿದ್ಯಾರ್ಥಿಗಳು,ದ್ವಿತೀಯ ಶ್ರೇಣಿಯಲ್ಲಿ 01 ವಿದ್ಯಾರ್ಥಿಯು ತೇರ್ಗಡೆ ಹೊಂದಿರುತ್ತಾರೆ. ವಿದ್ಯಾರ್ಥಿಗಳ ಈ ಅಭೂತಪೂರ್ವ ಸಾಧನೆಗೆ ಎಮ್.ಎಮ್ ಹೆಗ್ಡೆ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷರಾದ ಎಮ್. ಮಹೇಶ್ ಹೆಗ್ಢೆ,ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿ,ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಖಜಾಂಚಿ ಭರತ್ ಶೆಟ್ಟಿ ಹಾಗೂ ಮುಖೋಪಾಧ್ಯಾಯರು ಸಂತಸ ವ್ಯಕ್ತಪಡಿಸುವುದರ ಮೂಲಕ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ.ವಿದ್ಯಾರ್ಥಿಗಳ ಅಪೂರ್ವ ಸಾಧನೆಗೆ ಕಾರಣಿಕರ್ತರಾದ ಅಧ್ಯಾಪಕ ವರ್ಗ ಶಾಲಾ ಸಿಬ್ಬಂದಿಗಳು ಮತ್ತು ಪೋಷಕರು ಹರ್ಷ ವ್ಯಕ್ತಪಡಿಸಿದ್ದಾರೆ.

“ನಮ್ಮ ಶಾಲೆಯ ಶಿಕ್ಷಕರು ಸಂಜೆ 6 ರ ತನಕ ನಮ್ಮ ಜೊತೆ ನಿಂತು ನಿರಂತರ ತರಬೇತಿ ನೀಡಿರುವುದು ಈ ಅಂಕ ಗಳಿಸಲು ಸಹಕಾರಿಯಾಯಿತು, ಮತ್ತು ನನ್ನ ಸಾಧನೆಗೆ ಬೆನ್ನೆಲುಬಾಗಿ ನಿಂತಿರುವ ಶಾಲೆಯ ಆಡಳಿತ ಮಂಡಳಿ, ಭೋದಕ,ಭೋದಕೇತರ ಸಿಬ್ಬಂಧಿ ವರ್ಗ ಮತ್ತು ಪೋಷಕರಿಗೆ ಚಿರರುಣಿಯಾಗಿದ್ದೇನೆ”
-ಪ್ರಥ್ವಿತಾ ಪಿ ಶೆಟ್ಟಿ ಎಸ್. ಎಸ್. ಎಲ್ ಸಿ. 2024ರ ಪರೀಕ್ಷೆಯಲ್ಲಿ ರಾಜ್ಯದಲ್ಲಿ 5ನೇ ರ್ಯಾಂಕ್ ಪಡೆದ ವಿದ್ಯಾರ್ಥಿ

Advertisement

Share
Team Kundapur Times

Recent Posts

ಲಾರಿಗೆ ಕಾರು ಡಿಕ್ಕಿ:ನೆಲಮಂಗಲ ಮೂಲದ ಇಬ್ಬರು ಸಾವು

ಕುಂದಾಪುರ:ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೈಂದೂರು ತಾಲೂಕಿನ ನಾವುಂದ ಮಸ್ಕಿಯಲ್ಲಿ…

4 days ago

ಏಪ್ರಿಲ್ 12 ರಂದು ಅರಾಟೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಏಕಪವಿತ್ರ ನಾಗಮಂಡಲೋತ್ಸವ

ಕುಂದಾಪುರ:ತಾಲೂಕಿನ ಹೊಸಾಡು ಗ್ರಾಮದ ಅರಾಟೆ ಚಿತ್ತೇರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಏಪ್ರಿಲ್ 12 ರ ಭಾನುವಾರ ದಂದು ನಡೆಯಲಿರುವ ಶ್ರೀ…

4 days ago

ಎಸ್ಐ ನಾಸೀರ್ ಹುಸೇನ್ ಕುಸಿದು ಬಿದ್ದು ಮೃತ್ಯು

ಕುಂದಾಪುರ:ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಕರ್ನಾಟಕ ಪೊಲೀಸ್ ರನ್ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ…

1 month ago

ನಿರ್ದೇಶಕರಾಗಿ ಸುರೇಂದ್ರ ಗುಡ್ಡೆಹೋಟೆಲ್ ಆಯ್ಕೆ

ಕುಂದಾಪುರ:ರಾಜ್ಯ ಸರಕಾರಿ ಶಿಕ್ಷಕರ ನೌಕರರ ಹಾಗೂ ಇಲಾಖೆಯಲ್ಲಿನ ಇತರರ ಗೃಹ ನಿರ್ಮಾಣ ಸಹಕಾರ ಸಂಘ (ನಿ) ಬೆಂಗಳೂರು ಅದರ ರಾಜ್ಯ…

1 month ago

ಧಾರ್ಮಿಕ ಮುಖಂಡ ಅಪ್ಪಣ್ಣ ಹೆಗ್ಡೆ ವಿಧಿವಶ

ಕುಂದಾಪುರ:ಮಾಜಿ ಎಂಎಲ್ಎ ಧಾರ್ಮಿಕ ಮುಖಂಡ ಅಜಾತಶತ್ರು ಅಪ್ಪಣ್ಣ ಹೆಗ್ಡೆ ಶನಿವಾರ ವಿಧಿವಶರಾಗಿದ್ದಾರೆ.ನೂರಕ್ಕೂ ಅಧಿಕ ನಾಗಮಂಡಲದ ನೇತೃತ್ವವನ್ನು ವಹಿಸಿಕೊಡಿದ್ದ ಅವರು, ಹಲವು…

2 months ago

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕಾಂಗ್ರೆಸ್ ಪಕ್ಷದ ಮುಖಂಡ ರಾಜು ದೇವಾಡಿಗ ತ್ರಾಸಿ ನಿಧನ

ಕುಂದಾಪುರ:ಕಾಂಗ್ರೆಸ್ ಪಕ್ಷದ ಮುಖಂಡರಾದ,ಪ್ರಬಲ ರಾಜಕಾರಣಿ,ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ ತ್ರಾಸಿ ಸೋಮವಾರ ನಿಧನರಾದರು.ಅವರು ಪತ್ನಿ ಮಕ್ಕಳು, ಬಂದು…

2 months ago