ಕುಂದಾಪುರ:ಕೆಡಿಸಿ ಕಾಂಗೆನ್ ಡಿಸ್ಟ್ರಿಬ್ಯೂಟರ್ಸ್ ಸೆಂಟರ್ ಕೋಟೇಶ್ವರದಲ್ಲಿ ಶುಕ್ರವಾರ ಶುಭಾರಂಭಗೊಂಡಿದೆ.ಜಪಾನ್ ದೇಶದ ಕಾಂಗೆನ್ ಸಂಸ್ಥೆ ವಿಶ್ವದ ಸುಮಾರು 165 ದೇಶಗಳಲ್ಲಿ ಕಾರ್ಯಚರಿಸುತ್ತಿದೆ.ಸೇವೆಯಲ್ಲಿ ಉತ್ತಮ ದರ್ಜೆಯನ್ನು ಹೊಂದಿರುವ ಕೆಡಿಸಿ ಕಾಂಗೆನ್ ಸಂಸ್ಥೆ ಭಾರತದ ನಾನಾ ರಾಜ್ಯಗಳಲ್ಲಿ ತನ್ನ ಸಂಸ್ಥೆಯನ್ನು ಹೊಂದಿದ್ದು ಜನ ಪ್ರೀತಿಗೆ ಪಾತ್ರವಾಗಿದೆ.ವಾಸುದೇವ ಹೊಳ್ಳ ಅವರ ನೇತೃತ್ವದಲ್ಲಿ ಕಾಂಗೆನ್ ಡಿಸ್ಟ್ರಿಬ್ಯೂಟರ್ಸ್ ಸೆಂಟರ್ ಕೋಟೇಶ್ವರದಲ್ಲಿ ಶುಭಾರಂಭಗೊಂಡಿದ್ದು ಕಾಂಗೆನ್ ವಾಟರ್ ಮೆಷಿನ್ ಅನ್ನು ಪಡೆದುಕೊಳ್ಳಲು ಗ್ರಾಹಕರು ಅವರನ್ನು ಸಂಪರ್ಕಿಸಬಹುದು.
ಕಾಂಗೆನ್ ಡಿಸ್ಟ್ರಿಬ್ಯೂಟರ್ಸ್ ಕೋಟೇಶ್ವರ ವಾಸುದೇವ ಹೊಳ್ಳ ಅವರು ಮಾತನಾಡಿ,ವಿಶ್ವಾದ್ಯಂತ ಜನಪ್ರಿಯಗೊಂಡಿರುವ ಕಾಂಗೆನ್ ವಾಟರ್‍ನ್ನು ಸ್ವತ ತಾನು ಬಳಕೆ ಮಾಡಿದ್ದು ನೂರಕ್ಕೆ ನೂರಷ್ಟು ಫಲಿತಾಂಶ ಇದೆ.ಜನರಿಗೆ ಗುಣಮಟ್ಟದ ಸೇವೆಯನ್ನು ನೀಡಬೇಕು ಎನ್ನುವ ಉದ್ದೇಶದಿಂದ ಕೋಟೇಶ್ವರದಲ್ಲಿ ಕಾಂಗೆನ್ ಡಿಸ್ಟ್ರಿಬ್ಯೂಟರ್ಸ್ ಸೆಂಟರ್ ಆರಂಭಿಸಲಾಗಿದೆ.ಕಛೇರಿಯಲ್ಲಿ ಪ್ರತಿ ಬುಧವಾರ ಕಾಂಗೆನ್ ವಾಟರ್ ಬಳಕೆ ಮತ್ತು ಪ್ರಯೋಜನಾ ಗುರಿತು ಮಾಹಿತಿ ಕಾರ್ಯಕ್ರಮವನ್ನು ಮಾಡಲಾಗುತ್ತದೆ.ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ಡಾ.ಶ್ರೀದೇವಿ ಕಟ್ಟೆ ಚಿನ್ಮಯಿ ಆಸ್ಪತ್ರೆ ಕುಂದಾಪುರ ಅವರು ಕಾಂಗೆನ್ ವಾಟರ್ ಕಚೇರಿಯನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿ,ಒಳ್ಳೆ ಉದ್ದೇಶದೊಂದಿಗೆ ಆರಂಭಿಸಿರುವ ಇವೊಂದು ಉದ್ಯಮವು ಉತ್ತರೋತ್ತರವಾಗಿ ಬೆಳೆಯಲಿ ಎಂದು ಶುಭಾಹಾರೈಸಿದರು.
ರಾಜೇಶ್ ನಾಯರ್ ಅವರು ಕಾಂಗೆನ್ ವಾಟರ್ ಪ್ರಯೋಜನತೆ ಕುರಿತು ವಿವರಿಸಿ ಮಾತನಾಡಿ,ಎಲ್ಲಾ ಕಾಯಿಲೆಗಳಿಗೆ ನೀರು ಮದ್ದಾಗಿದೆ.ಶುದ್ಧವಾದ ನೀರನ್ನು ಕುಡಿಯುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಹೇಳಿದರು.ಆರೋಗ್ಯ ರಕ್ಷಣೆ ನಮ್ಮ ಜವಾಬ್ದಾರಿ ಆಗಿದೆ.ನಮ್ಮ ಜೀವನದ ಕ್ರಮದಿಂದ ಉತ್ತಮ ಆರೋಗ್ಯವನ್ನು ಹೊಂದಬಹುದು ಎಂದು ಹೇಳಿದರು.
ಗಣೆಶ್ ಅವರು ಪ್ರಾತ್ಯಾಕ್ಷತೆ ಮೂಲಕ ಕಾಂಗೆನ್ ವಾಟರ್ ಕುರಿತು ಮಾಹಿತಿ ನೀಡಿ ಮಾತನಾಡಿ,ಜಗತ್ತಿನಲ್ಲೆ ಅತ್ಯಂತ ಆರೋಗ್ಯ ಪೂರ್ಣತೆಯಿಂದ ಕೂಡಿದ ಕಾಂಗೆನ್ ವಾಟರ್ ಸಂಸ್ಥೆ ಕೋಟೇಶ್ವರದಲ್ಲಿ ಆರಂಭಗೊಂಡಿದ್ದು ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.ಉಲ್ಲಾಸ್ ಹೊಳ್ಳ ಮತ್ತಿತರರು ಉಪಸ್ಥಿತರಿದ್ದರು.
ವರದಿ-ಜಗದೀಶ
ಸುದ್ದಿ ಮತ್ತು ಜಾಹೀರಾತು ಪ್ರಕಟಿಸಲು ಸಂಪರ್ಕಿಸಿ-9141825696
ಉಡುಪಿ:ಕಾಪು ನಲ್ಲಿ ಗೂಡ್ಸ್ ಟೆಂಪೋ ಪಲ್ಟಿ ಹೊಡೆದ ಪರಿಣಾಮ ದುರ್ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ ಘಟನೆ ಭಾನುವಾರ ನಡೆದಿದೆ.ಅಪಘಾತದ ತೀವ್ರತೆಗೆ ಗೂಡ್ಸ್…
ಕುಂದಾಪುರ:ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಿಕ್ಷಣದ ಮುಖ್ಯ ವಾಹಿನಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿರುವ ರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿ ಕುಂದಾಪುರ ತಾಲೂಕಿನ…
ಕುಂದಾಪುರ:ತಾಲೂಕಿನ ತ್ರಾಸಿ ರಾಷ್ಟ್ರೀಯ ಹೆದ್ದಾರಿ 66 ರ ಫ್ಲೈಓವರ್ ಸಮೀಪ ರಸ್ತೆ ಬದಿಯಲ್ಲಿ ನಿಂತ್ತಿದ್ದ ಲಾರಿಯಲ್ಲಿ ಲಾರಿ ಚಾಲಕನ ಶವ…
ಕುಂದಾಪುರ:ಶಯೋಮಿ ಇಂಡಿಯಾ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ನ ಸಿ.ಎಸ್.ಆರ್ ಸಹಕಾರದೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಸಾಹಸ್ ತಂಡ ಮತ್ತು ಕ್ಲೀನ್ ಕಿನಾರ…
ಬ್ರಹ್ಮಾವರ:ರೆಡ್ ಕ್ರಾಸ್ ವಿಭಾಗದ ವತಿಯಿಂದ ಬ್ರಹ್ಮಾವರ ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ನಶ ಮುಕ್ತ ಭಾರತ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳಿಗೆ…
ಕುಂದಾಪುರ:ಐಡಿಯಲ್ ಪ್ಲೇ ಆಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ಮೂಡುಬಿದ್ರೆ ಆಳ್ವಾಸ್ ಪಿಯು ಕ್ಯಾಂಪಸ್‍ನಲ್ಲಿ ನಡೆದ 20ನೇ ರಾಜ್ಯ ಮಟ್ಟದ…