ಪ್ರಮುಖ

ಚಂದನ್ ಮೋಟಾರ್ ಪ್ಯೂಯೆಲ್ಸ್ ಹೆಮ್ಮಾಡಿಯಲ್ಲಿ ಶುಭಾರಂಭ

Share

ಕುಂದಾಪುರ:ತಾಲೂಕಿನ ಹೆಮ್ಮಾಡಿ ಜಾಲಾಡಿ ರಾಷ್ಟ್ರೀಯ ಹೆದ್ದಾರಿ 66 ರ ಪಕ್ಕದಲ್ಲಿ ನೂತನವಾಗಿ ಆರಂಭಗೊಂಡಿರುವ ಇಂಡಿಯನ್ ಆಯಿಲ್ ರಿಟೈಲ್ ಔಟ್‍ಲೆಟ್ ಚಂದನ್ ಮೋಟಾರ್ ಪ್ಯೂಯೆಲ್ಸ್ ಶುಭಾರಂಭ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶುಕ್ರವಾರ ನಡೆಯಿತು.ಜಾಲಾಡಿಯಲ್ಲಿ ನೂತನವಾಗಿ ಆರಂಭಗೊಂಡಿರುವ ಚಂದನ್ ಪ್ಯೂಯೆಲ್ಸ್ ನಿಂದ ಪರಿಸರದ ಅಕ್ಕಪಕ್ಕದ ಗ್ರಾಮದ ಜನರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾದು ಹೋಗುವ ವಾಹನ ಸವಾರರಿಗೆ ಬಹಳಷ್ಟು ಅನುಕೂಲಕರವಾಗಲಿದೆ.
ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಸುಸಜ್ಜಿತವಾದ ರೀತಿಯಲ್ಲಿ ನಿರ್ಮಾಣಗೊಂಡಿರುವ ಚಂದನ್ ಪ್ಯೂಯೆಲ್ಸ್ ಆಕರ್ಷಕವಾಗಿದ್ದು ವಾಹನ ನಿಲುಗಡೆ ಮಾಡಲು ವಿಸ್ತಾರವಾದ ಸ್ಥಳಾವಕಾಶವನ್ನು ಹೊಂದಿದೆ.ಭಾರತದಲ್ಲೆ ಅತ್ಯಂತ ಜನಪ್ರಿಯ ಮತ್ತು ಗುಣಮಟ್ಟದ ತೈಲವನ್ನು ನೀಡುತ್ತಿರುವ ಇಂಡಿಯನ್ ಆಯಿಲ್ ರಿಟೈಲ್ ಔಟ್ ಲೆಟ್ ಗ್ರಾಮೀಣ ಪ್ರದೇಶದಲ್ಲಿ ಸ್ಥಾಪನೆ ಆಗಿರುವುದರಿಂದ ಉತ್ತಮ ಗುಣ ಮಟ್ಟದ ಡಿಸೇಲ್,ಪೆಟ್ರೋಲ್ ವಾಹನ ಮಾಲೀಕರಿಗೆ ದೊರಕಲಿದೆ.
ಚಂದನ್ ಪ್ಯೂಯೆಲ್ಸ್ ಮಾಲೀಕರಾದ ನಾರಾಯಣ ಎಂ ಚಂದನ್ ಅವರು ಸ್ವಾಗತಿಸಿ ಮಾತನಾಡಿ,ಹೆಮ್ಮಾಡಿ ಜಾಲಾಡಿ ಪರಿಸರದಲ್ಲಿ ನೂತನವಾಗಿ ಚಂದನ್ ಪ್ಯೂಯೆಲ್ಸ್ ಎಂಬ ಹೆಸರಿನೊಂದಿಗೆ ನೂತನವಾಗಿ ಪೆಟ್ರೋಲ್ ಬಂಕ್ ಸ್ಥಾಪನೆ ಮಾಡಲಾಗಿದೆ.ನಮ್ಮ ಉದ್ಯಮಕ್ಕೆ ಗ್ರಾಮಸ್ಥರು ಮತ್ತು ಪರಿಸರದ ಜನರು ಸಹಕಾರ ಮತ್ತು ಪ್ರೋತ್ಸಾಹ ನೀಡಬೇಕೆಂದು ಕೇಳಿಕೊಂಡರು.
ಹಟ್ಟಿಯಂಗಡಿ ಶ್ರೀಸಿದ್ಧಿವಿನಾಯಕ ದೇವಸ್ಥಾನ ಧರ್ಮದರ್ಶಿ ವೇದ ಮೂರ್ತಿ ಹೆಚ್.ಬಾಲಚಂದ್ರ ಭಟ್ ಅವರು ಚಂದನ್ ಮೋಟರ್ ಪ್ಯೂಯೆಲ್ಸ್ ಕಛೇರಿಯನ್ನು ಉದ್ಘಾಟಿಸಿ ಮಾತನಾಡಿ,ಯಾವುದೇ ಒಂದು ಒಳ್ಳೆ ಕೆಲಸವನ್ನು ಆರಂಭಿಸಲು ಶುಭಹಾರೈಕೆ ಮುಖ್ಯವಾಗಿರುತ್ತದೆ.ಯಾವಾಗಲೂ ಒಳ್ಳೆ ಮಾತುಗಳನ್ನು ಹೇಳಿದರೆ ಒಳ್ಳೆಯದು ಆಗುತ್ತದೆ ಎನ್ನುವ ಮಾತಿದೆ.ಹಿರಿಯರ ಆಶೀರ್ವಾದ ನಮ್ಮ ಜತೆ ಇದ್ದರೆ ನಾವು ಮಾಡವ ಕೆಲಸ ಕಾರ್ಯಗಳು ಯಶಸ್ಸಿನಿಂದ ಸಾಗಲಿದೆ ಎಂದು ಹೇಳಿದರು.ಒಂದು ವ್ಯವಸ್ಥೆಯನ್ನು ಆರಂಭಿಸುವ ಮುನ್ನ ಸುತ್ತಲಿನ ಪರಿಸರವನ್ನು ನೋಡಿಕೊಂಡು ಮಾಡುವುದು ಬಹಳ ಮುಖ್ಯವಾಗಿದ್ದು ಆ ನಿಟ್ಟಿನಲ್ಲಿ ನಾರಾಯಣ ಎಂ ಚಂದನ್ ಅವರ ಆಲೋಚನೆ ಪೂರಕವಾಗಿದೆ.ವ್ಯವಹಾರದಲ್ಲಿ ಯಶಸ್ಸು ಗಳಿಸಲು ಪರಿಶ್ರಮ ಮುಖ್ಯವಾಗಿದೆ ನವ ಉದ್ಯಮಕ್ಕೆ ಶುಭವಾಗಲಿ ಎಂದು ಶುಭವನ್ನು ಹಾರೈಸಿದರು.
ಮನಿಷಾ ಕೆಟರರ್ಸ್ ಮುಂಬೈ ವಾಮನ ಎಸ್.ಶೆಟ್ಟಿ ಅವರು ಚಂದನ್ ಪ್ಯೂಯೆಲ್ ಸ್ಟೇಷನ್ ಉದ್ಘಾಟಿಸಿ ಮಾತನಾಡಿ,ಒಡನಾಡಿಯಾಗಿರುವ ಸಹದ್ಯೋಗಿ ನಾರಾಯಣ ಚೆಂದನ ಅವರು ನಿರ್ಮಿಸಿರುವ ಪೆಟ್ರೋಲ್ ಬಂಕ್ ಯಶಸ್ವಿಯಾಗಿ ನಡೆಯಲಿ ಎಂದು ಶುಭಹಾರೈಸಿದರು.
ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಿನ್ಮಯಿ ಆಸ್ಪತ್ರೆ ಡಾ.ಉಮೇಶ್ ಪುತ್ರನ್ ಅವರು ಮಾತನಾಡಿ,ಯಾವುದೆ ಒಂದು ಉದ್ಯಮದ ಬೆಳವಣಿಗೆ ಎನ್ನುವುದು ಉದ್ಯಮಿಗಳಿಗೆ ಮಾತ್ರ ತಿಳಿದಿರುತ್ತದೆ.ಒಂದು ಉದ್ಯಮ ಯಶಸ್ವಿಯಾಗಿ ಮುಂದುವರೆಯಲು ಪರಿಶ್ರಮ ಅತಿಮುಖ್ಯವಾಗಿದೆ.ಗ್ರಾಮೀಣ ಪ್ರದೇಶದಲ್ಲಿ ಓದಿ ಮುಂಬೈ ನಗರಕ್ಕೆ ತೆರಳಿ ಕೆಲಸವನ್ನು ಮಾಡಿಕೊಂಡು ಉದ್ಯಮವನ್ನು ಆರಂಭಿಸಿ ಯಶಸ್ಸನ್ನು ಕಂಡಿರುವ ನಾರಾಯಣ ಚಂದನ್ ಅವರಿಗೆ ಉದ್ಯಮ ಕ್ಷೇತ್ರ ಹೊತಲ್ಲ.ಹೊಸ ಉದ್ಯಮದಲ್ಲಿ ಅವರು ಯಶಸ್ಸನ್ನು ಕಾಣಲಿದ್ದಾರೆ ಎಂದು ಶುಭಹಾರೈಸಿದರು.
ರಮೇಶ ಮೊಗವೀರ ಮಾತನಾಡಿ,ಶುಭ ಸಂದರ್ಭದಲ್ಲಿ ಚಂದನ್ ಪ್ಯೂಯೆಲ್ ಎನ್ನುವ ನೂತನ ಘಟಕವನ್ನು ಆರಂಭಿಸಾಗಿದೆ.ಮುಂದಿನ ದಿನಗಳಲ್ಲಿ ಅನೇಕ ಶಾಖೆಗಳನ್ನು ಹೊಂದುವಂತೆ ಆಗಲಿ ಎಂದು ಆಶೀರ್ವಜಿಸಿದರು.
ಇಂಡಿಯನ್ ಆಯಿಲ್ ವರುಣ್ ಮಾತನಾಡಿ,ಭಾರತದಲ್ಲಿ ಅತ್ಯಂತ ದೊಡ್ಡ ಮಾರುಕಟ್ಟೆಯನ್ನು ಹೊಂದಿರುವ ಇಂಡಿಯನ್ ಆಯಿಲ್ ಔಟ್‍ಲೆಟ್ ಗ್ರಾಮೀಣ ಪ್ರದೇಶದಲ್ಲಿಯೂ ಆರಂಭಗೊಂಡಿರುವುದರಿಂದ ಜನರಿಗೆ ಉತ್ತಮವಾದ ಸೇವೆ ಸಿಗಲಿದೆ ಎಂದರು.ಎಲ್ಲರೂ ಬಂಕ್‍ಗೆ ಭೇಟಿ ನೀಡಬೇಕೆಂದು ವಿನಂತಿಸಿಕೊಂಡರು.
ಮಹಲಸಾ ಎಂಟರ್‍ಪ್ರೈಸಸ್ ಕುಂದಾಪುರ ಕೆ.ಪ್ರಭಾಕರ ಪ್ರಭು ಅವರು ಡಿಸೇಲ್ ಪ್ಯೂವೆಲ್ ಸ್ಟೇಷನ್ ಉದ್ಘಾಟಿಸಿ ಶುಭಹಾರೈಸಿದರು.ಇಂದಿರಾ ನಾರಾಯಣ ಚಂದನ್,ಉದಯ ಕುಮಾರ್ ಹಟ್ಟಿಯಂಗಡಿ,ಗುಜ್ಜಾಡಿ ಮಂಜು ನಾಯ್ಕ,ಎಚ್.ರಾಮ ನಾಯ್ಕ್,ಧನುಷ್,ಕೃಷ್ಣ ಗುಲ್ವಾಡಿ,ಭಾಸ್ಕರ ಗುಜ್ಜಾಡಿ,ಸುಮತಿ ಮೊಗವೀರ,ಭಾಸ್ಕರ ಗಂಗೊಳ್ಳಿ,ಸುಮನ ಗಣೇಶ ನಾಯ್ಕ್,ನಾರಾಣ ಚಂದನ್ ಅವರ ಹಿತೈಷಿಗಳು,ಕುಟುಂಬಸ್ಥರು,ಸ್ನೇಹಿತ ವರ್ಗದವರು ಉಪಸ್ಥಿತರಿದ್ದರು.ಪ್ರತಿಮಾ ರಾಘವೇಂದ್ರ ಪ್ರಾರ್ಥಿಸಿದರು.ಪತ್ರಕರ್ತ ಯು.ಎಸ್ ಶೆಣೈ ನಿರೂಪಿಸಿದರು.ರಮೇಶ್ ಮೊಗವೀರ ವಂದಿಸಿದರು.
ವರದಿ-ಜಗದೀಶ
ಸುದ್ದಿ ಮತ್ತು ಜಾಹೀರಾತುಗಳನ್ನು ನಮ್ಮ ಜಾಲಾತಾಣದಲ್ಲಿ ಪ್ರಕಟಿಸಲು ಸಂಪರ್ಕಿಸಿ-9916284048

Advertisement

Share
Team Kundapur Times

Recent Posts

ಲಾರಿಗೆ ಕಾರು ಡಿಕ್ಕಿ:ನೆಲಮಂಗಲ ಮೂಲದ ಇಬ್ಬರು ಸಾವು

ಕುಂದಾಪುರ:ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೈಂದೂರು ತಾಲೂಕಿನ ನಾವುಂದ ಮಸ್ಕಿಯಲ್ಲಿ…

4 days ago

ಏಪ್ರಿಲ್ 12 ರಂದು ಅರಾಟೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಏಕಪವಿತ್ರ ನಾಗಮಂಡಲೋತ್ಸವ

ಕುಂದಾಪುರ:ತಾಲೂಕಿನ ಹೊಸಾಡು ಗ್ರಾಮದ ಅರಾಟೆ ಚಿತ್ತೇರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಏಪ್ರಿಲ್ 12 ರ ಭಾನುವಾರ ದಂದು ನಡೆಯಲಿರುವ ಶ್ರೀ…

4 days ago

ಎಸ್ಐ ನಾಸೀರ್ ಹುಸೇನ್ ಕುಸಿದು ಬಿದ್ದು ಮೃತ್ಯು

ಕುಂದಾಪುರ:ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಕರ್ನಾಟಕ ಪೊಲೀಸ್ ರನ್ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ…

1 month ago

ನಿರ್ದೇಶಕರಾಗಿ ಸುರೇಂದ್ರ ಗುಡ್ಡೆಹೋಟೆಲ್ ಆಯ್ಕೆ

ಕುಂದಾಪುರ:ರಾಜ್ಯ ಸರಕಾರಿ ಶಿಕ್ಷಕರ ನೌಕರರ ಹಾಗೂ ಇಲಾಖೆಯಲ್ಲಿನ ಇತರರ ಗೃಹ ನಿರ್ಮಾಣ ಸಹಕಾರ ಸಂಘ (ನಿ) ಬೆಂಗಳೂರು ಅದರ ರಾಜ್ಯ…

1 month ago

ಧಾರ್ಮಿಕ ಮುಖಂಡ ಅಪ್ಪಣ್ಣ ಹೆಗ್ಡೆ ವಿಧಿವಶ

ಕುಂದಾಪುರ:ಮಾಜಿ ಎಂಎಲ್ಎ ಧಾರ್ಮಿಕ ಮುಖಂಡ ಅಜಾತಶತ್ರು ಅಪ್ಪಣ್ಣ ಹೆಗ್ಡೆ ಶನಿವಾರ ವಿಧಿವಶರಾಗಿದ್ದಾರೆ.ನೂರಕ್ಕೂ ಅಧಿಕ ನಾಗಮಂಡಲದ ನೇತೃತ್ವವನ್ನು ವಹಿಸಿಕೊಡಿದ್ದ ಅವರು, ಹಲವು…

2 months ago

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕಾಂಗ್ರೆಸ್ ಪಕ್ಷದ ಮುಖಂಡ ರಾಜು ದೇವಾಡಿಗ ತ್ರಾಸಿ ನಿಧನ

ಕುಂದಾಪುರ:ಕಾಂಗ್ರೆಸ್ ಪಕ್ಷದ ಮುಖಂಡರಾದ,ಪ್ರಬಲ ರಾಜಕಾರಣಿ,ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ ತ್ರಾಸಿ ಸೋಮವಾರ ನಿಧನರಾದರು.ಅವರು ಪತ್ನಿ ಮಕ್ಕಳು, ಬಂದು…

2 months ago