ಕುಂದಾಪುರ:ವಿದ್ಯಾಲಕ್ಷ್ಮೀ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಬ್ರಹ್ಮವಾರ ಕಾಲೇಜಿನಲ್ಲಿ ಸಾಂಪ್ರದಾಯಿಕ ದಿನಾಚರಣೆ ಕಾರ್ಯಕ್ರಮ ಮಂಗಳವಾರ ನಡೆಯಿತು.ಕಾಲೇಜಿನಲ್ಲಿ ನಡೆದ ಸಾಂಪ್ರದಾಯಿಕ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳು ಭಾರತೀಯ ಸಂಸ್ಕøತಿಯ ಧಿರಿಸನ್ನು ತೊಟ್ಟು ಸಂಭ್ರಮಿಸಿದರು.ಪುರಾತನ ವಸ್ತುಗಳನ್ನು ವಸ್ತು ಪ್ರದರ್ಶನ ಮಾಡಲಾಯಿತು.ಆಕರ್ಷಕ ಶೈಲಿಯ ವಸ್ತುಗಳು ನೋಡುಗರ ಮನ ಸೆಳೆಯಿತು.ವಿದ್ಯಾರ್ಥಿಗಳಿಂದ ಭರತ ನಾಟ್ಯ,ಯಕ್ಷಗಾನ ಕಾರ್ಯಕ್ರಮ ಜರುಗಿತು.ಮಕರ ಸಂಕ್ರಾತಿ ಮಹತ್ವ,ತುಳಸಿ ಕಟ್ಟೆ ವಿಶೇಷತೆ ಹಾಗೂ ಗ್ರಾಮೀಣ ಪ್ರದೇಶದ ಜನರ ಜೀವನ ಪದ್ದತಿ,ತಿಂಡಿ ತಿನಿಸುಗಳು ಬಗ್ಗೆ ವಿದ್ಯಾರ್ಥಿಗಳು ವಿವರಿಸಿದರು.
ಕಾಲೇಜಿನ ಸಂಸ್ಥಾಪಕ ಅಧ್ಯಕ್ಷರಾದ ಸುಬ್ರಹ್ಮಣ್ಯ ಅವರು ಸಾಂಪ್ರದಾಯಿಕ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,ಭಾರತದ ಸಂಸ್ಕøತಿ ಪರಂಪರೆಯನ್ನು ವಿಶ್ವವೆ ಕೊಂಡಾಡುತ್ತಿದೆ.ನಮ್ಮ ದೇಶದ ಸಂಸ್ಕೃತಿ,ಬದುಕಿನ ಶೈಲಿ,ಆಚಾರ ಮತ್ತು ವಿಚಾರವನ್ನು ಇಂದಿನ ಯುವ ಪೀಳಿಗೆಯ ಜನರು ಅಳವಡಿಸಿಕೊಂಡು ಮುಂದಿನ ಪೀಳಿಗೆಗೆ ವರ್ಗಾಯಿಸಬೇಕಾಗಿದೆ ಎಂದರು.ನಮ್ಮ ಸಂಸ್ಕೃತಿಯನ್ನು ಮೆಲುಕ ಹಾಕುವ ದೃಷ್ಟಿಯಿಂದ ನಮ್ಮ ವಿದ್ಯಾಸಂಸ್ಥೆಯಲ್ಲಿ ಸಾಂಪ್ರದಾಯಿಕ ದಿನಾವರಣೆಯನ್ನು ಆಚರಿಸಲಾಗಿದೆ.ವಿದ್ಯಾಭ್ಯಾಸದ ಜತೆಗೆ ಪಠ್ಯೇತರ ಚಟುವಟಿಕೆ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಹೆಮ್ಮಾಡಿ ಜನತಾ ಕಾಲೇಜಿನ ಕನ್ನಡ ಉಪನ್ಯಾಸಕರಾದ ಉದಯ ನಾಯ್ಕ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ಜಾಗತಿಕ ರಂಗದಲ್ಲಿ ವಿದ್ಯೆಗೆ ಬಹಳಷ್ಟು ಪ್ರಾಮುಖ್ಯತೆ ಇದೆ,ವಿದ್ಯೆ ಇಲ್ಲದೆ ಬದುಕು ನಡೆಸುವುದು ಕಷ್ಟ ಎನ್ನುವಷ್ಟರ ಮಟ್ಟಿಗೆ ಬಂದು ತಲುಪಿದೆ.ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ರಾಷ್ಟ್ರ ನಮ್ಮ ದೇಶವಾಗಿದೆ.ಭಾರತೀಯ ಸಂಪ್ರದಾಯ ಉಳಿವುವಲ್ಲಿ ವಿದ್ಯಾರ್ಥಿಗಳ ಪಾತ್ರ ದೊಡ್ಡದು.ಪಾಶ್ಚಿಮಾತ್ಯ ಸಂಸ್ಕøತಿಗೆ ಮಾರು ಹೋಗದೆ ನಮ್ಮ ಬದುಕು ನಮ್ಮ ಜೀವನ ಅಚ್ಚುಕಟ್ಟಾಗಿ ರೂಪಗೊಳ್ಳಲು ಭಾರತೀಯ ಸಂಸ್ಕøತಿಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ಅವಶ್ಯಕತೆ ಇದೆ ವೇದಿಕೆಯ ಸದುಪಯೋಗ ಮಡೆದುಕೊಂಡಾಗ ಸಮಾಜದಲ್ಲಿ ಆದರ್ಶ ವ್ಯಕ್ತಿಯಾಗಿ ಬದುಕಬಹುದು ಎಂದರು ಹೇಳಿದರು.
ಕಾಲೇಜಿನ ವೈಸ್ ಪ್ರಿನ್ಸಿಪಾಲ್ ಸುಜಾತ ಅವರು ಮಾತನಾಡಿ,ಸಂಸ್ಕೃತಿ ಎನ್ನುವುದು ಭಾರತೀಯ ಪರಂಪರೆಯ ಜೀವಾಳವಾಗಿದೆ.ಸಾಂಪ್ರದಾಯಿಕ ದಿನಾಚರಣೆ ವಿದ್ಯಾರ್ಥಿಗಳಿಗೆ ಉತ್ತಮ ವೇದಿಕೆಯನ್ನು ಒದಗಿಸಿಕೊಟ್ಟಿದೆ ಎಂದರು.
ಕಾಲೇಜಿನ ವಿದ್ಯಾರ್ಥಿ ಸೌರಭ ಶೆಟ್ಟಿ ಮಾತನಾಡಿ,ವಿದ್ಯಾಲಕ್ಷ್ಮೀ ಶಿಕ್ಷಣ ಸಂಸ್ಥೆ ನನಗೆ ಒಳ್ಳೆ ಅವಕಾಶವನ್ನು ಒದಗಿಸಿಕೊಟ್ಟಿದೆ ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.
ಕಾಲೇಜಿನ ವಿದ್ಯಾರ್ಥಿನಿ ಪ್ರಾಂಜಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡು ಮಾತನಾಡಿ,ಸಾಂಪ್ರದಾಯಿಕ ದಿನಾಚರಣೆ ನನಗೆ ಹೊಸ ಅನುಭವನ್ನು ತಂದು ಕೊಟ್ಟಿದೆ ಎಂದರು.
ವಿದ್ಯಾರ್ಥಿನಿ ಶೈನಿ ವಸ್ತು ಪ್ರದರ್ಶನ ಕುರಿತು ವಿವರಿಸಿ ಮಾತನಾಡಿ,ಹಳೆ ಸಾಂಪ್ರದಾಯಿಕ ಶೈಲಿಯ ವಸ್ತುಗಳ ಬಗ್ಗೆ ವಿವರಿಸಿದರು.
ಕಾಲೇಜಿನ ವಿದ್ಯಾರ್ಥಿನಿ ಸ್ನೇಹ ಹಳ್ಳಿ ಬದುಕಿನ ಜೀವನ ಪದ್ಧತಿ ಬಗ್ಗೆ ಅಭಿಪ್ರಾಯವನ್ನು ಹಂಚಿಕೊಂಡು ಮಾತನಾಡಿ,ಅವಿಭಕ್ತ ಕುಟುಂಬದ ಕುರಿತು ಮತ್ತು ಆಧುನಿಕ ಬದುಕಿನ ಚಿತ್ರಣದ ಬಗ್ಗೆ ವಿವರಿಸಿದರು.
ಈ ಸಂದರ್ಭದಲ್ಲಿ ವಿದ್ಯಾಲಕ್ಷ್ಮೀ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಬ್ರಹ್ಮವಾರ ಕಾಲೇಜಿನನಿರ್ದೇಶಕಿ ಮಮತಾ,ವೈಸ್ ಪ್ರಿಸ್ಸಿಪಾಲ್ ಸುಜಾತ,ಸಾಂಸ್ಕ್ರತಿಕ ವೇದಿಕೆ ಸಂಚಾಲಕಿ ರಝಿಕಾ,ಅನುಪಮ ಭಟ್ ಮತ್ತು ಶಿಕ್ಷಕವೃಂದವರು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಸನ್ನಿಧಿ ಸ್ವಾಗತಿಸಿದರು.ಸ್ವಾತಿ ನಿರೂಪಿಸಿದರು.ಪ್ರಿಯಾಂಕ ಶೆಟ್ಟಿ ವಂದಿಸಿದರು.
ಕುಂದಾಪುರದ:ಗ್ರಾಮೀಣ ಪ್ರದೇಶದಲ್ಲಿ ಅತಿ ಕಡಿಮೆ ಸಮಯದಲ್ಲಿ ಅತ್ಯಂತ ಶೀಘ್ರವಾಗಿ ತನ್ನ ಶೈಕ್ಷಣಿಕ ವಿಶೇಷತೆಯಿಂದ ರಾಷ್ಟ್ರ ಮಟ್ಟದಲ್ಲಿ ಶೈಕ್ಷಣಿಕವಾಗಿ ಗುರುತಿಸಿಕೊಂಡ ಹೆಗ್ಗಳಿಕೆಗೆ…
ಕುಂದಾಪುರ:ಸಮುದ್ರದಲ್ಲಿ ಜೆಸ್ಕಿ ರೈಡ್ ಮೂಲಕ (ವಾಟರ್ ಬೈಕ್) ಡ್ರೈವ್ ಮಾಡುತ್ತಿದ್ದ ಸಂದರ್ಭದಲ್ಲಿ ಅಲೆಯ ಹೊಡೆತಕ್ಕೆ ಜೆಸ್ಕಿ ರೈಡ್ ಸಮುದ್ರದಲ್ಲಿ ಉರುಳಿ…
ಕುಂದಾಪುರ:ಒಂದು ಊರಿನಲ್ಲಿರುವ ಶಾಲೆ ಯಾವುದೆ ರೀತಿಯ ಕೊರತೆ ಇಲ್ಲದೆ ಮುನ್ನೆಡೆಯುತ್ತಿದೆ ಎಂದಾದರೆ ಅದು ಊರಿನ ಬೆಳವಣಿಗೆಯ ಸಂಕೇತವಾಗಿದೆ.ಆ ನಿಟ್ಟಿನಲ್ಲಿ ಬಡಾಕೆರೆ…
ಕುಂದಾಪುರ:ಭಾರತದಲ್ಲಿ ಅತ್ಯಂತ ದೊಡ್ಡ ಮಾರುಕಟ್ಟೆ ವ್ಯವಸ್ಥೆಯನ್ನು ಹೊಂದಿರುವ ಜನಪ್ರೀಯ ಎಚ್.ಪಿ ಫ್ಯೂಲ್ಸ್ ನ ಘಟಕ ಸುಸಜ್ಜಿತವಾದ ವ್ಯವಸ್ಥೆಯಡಿಯಲ್ಲಿ ಕುಂದಾಪುರ ತಾಲೂಕಿನ…
ಕುಂದಾಪುರ:ಭಾರತದಲ್ಲಿ ಅತ್ಯಂತ ದೊಡ್ಡ ಮಾರುಕಟ್ಟೆ ವ್ಯವಸ್ಥೆಯನ್ನು ಹೊಂದಿರುವ ಜನಪ್ರೀಯ ಎಚ್.ಪಿ ಫ್ಯೂಲ್ಸ್ ನ ಘಟಕ ಸುಸಜ್ಜಿತವಾದ ವ್ಯವಸ್ಥೆಯಡಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ…
ಕುಂದಾಪುರ:ಮಂಡಾಡಿ ಹೋರ್ವರಮನೆಯ ಹದಿನೇಳನೆ ವರ್ಷದ ಕಂಬಳೋತ್ಸವ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ಶುಕ್ರವಾರ ನಡೆಯಿತು.ಮಂಡಾಡಿ ಹೋರ್ವರಮನೆ ಸಾಂಪ್ರದಾಯಿಕ ಕಂಬಳೋತ್ಸವದಲ್ಲಿ…