ಕುಂದಾಪುರ:ದ್ವಿತೀಯ ಪಿಯುಸಿ ಪರೀಕ್ಷೆ ಮರು ಮೌಲ್ಯಮಾಪನದಲ್ಲಿ ಹೆಮ್ಮಾಡಿ ಜನತಾ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಲಾವಣ್ಯ ಕುಂದಾಪುರ ಮತ್ತು ಬೈಂದೂರು ತಾಲೂಕಿನಲ್ಲಿ ಪ್ರಥಮ ಸ್ಥಾನಗಳಿಸಿದ್ದಾರೆ.
ಜನತಾ ಸ್ವತಂತ್ರ ಪದವಿ ಪೂರ್ವ ಕಾಲೇಜಿನ 12 ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ರ್ಯಾಂಕ್ ದೊರೆತಿದೆ.
2023-24ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಮರು ಮೌಲ್ಯಮಾಪನದಲ್ಲಿ ಲಾವಣ್ಯ592(ವಾಣಿಜ್ಯ ವಿಭಾಗ) ಕುಂದಾಪುರ ತಾಲೂಕಿಗೆ ಪ್ರಥಮ ರ್ಯಾಂಕ್,ಜಿಲ್ಲೆಗೆ ತ್ರತೀಯ ಸ್ಥಾನ ಹಾಗೂ ರಾಜ್ಯಕ್ಕೆ 6ನೇ ರ್ಯಾಂಕ್ ಪಡೆದಿದ್ದಾರೆ.ಒಟ್ಟು 12 ವಿದ್ಯಾರ್ಥಿಗಳು ಅತ್ಯದಿಕ ಅಂಕಗಳನ್ನು ಪಡೆದು ರಾಜ್ಯ ಮಟ್ಟದಲ್ಲಿ ಅದ್ವಿತೀಯ ಸಾಧನೆ ಮಾಡಿರುತ್ತಾರೆ.ಕ್ರಮವಾಗಿ ಲಾವಣ್ಯ 592(ವಾಣಿಜ್ಯ ವಿಭಾಗ),ಪ್ರತೀಕ್ಷಾ 589 (ವಾಣಿಜ್ಯ ವಿಭಾಗ),ಪ್ರಜ್ವಲ್ ಪೂಜಾರಿ 588 (ವಿಜ್ಞಾನ ವಿಭಾಗ),ಪವಿತ್ರಾ 588(ವಿಜ್ಞಾನ ವಿಭಾಗ),ಐಶ್ವರ್ಯ ವೈದ್ಯ 587(ವಿಜ್ಞಾನ ವಿಭಾಗ),ರಿಷಿಕಾ ಮೊಂಟೆರೋ 585(ವಿಜ್ಞಾನ ವಿಭಾಗ),ಪ್ರಜ್ವಲ್ ದೇವಾಡಿಗ 584 (ವಿಜ್ಞಾನ ವಿಭಾಗ),ಕ್ಷಮಾ ಪಡಿಯಾರ್ 582(ವಿಜ್ಞಾನ ವಿಭಾಗ),ದೀಪಿಕಾ 581(ವಿಜ್ಞಾನ ವಿಭಾಗ), ಸಿಂಧು 581(ವಾಣಿಜ್ಯ ವಿಭಾಗ), ಕೌಶಲ್ ಆಚಾರ್ಯ 580 (ವಾಣಿಜ್ಯ ವಿಭಾಗ),ಶ್ರೀಶ ಶೆಟ್ಟಿ 580(ವಿಜ್ಞಾನ ವಿಭಾಗ)
,ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ,ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವೃಂದದವರು ಅಭಿನಂದಿಸಿದ್ದಾರೆ.
ಕುಂದಾಪುರ:ಸಮುದ್ರದಲ್ಲಿ ಜೆಸ್ಕಿ ರೈಡ್ ಮೂಲಕ (ವಾಟರ್ ಬೈಕ್) ಡ್ರೈವ್ ಮಾಡುತ್ತಿದ್ದ ಸಂದರ್ಭದಲ್ಲಿ ಅಲೆಯ ಹೊಡೆತಕ್ಕೆ ಜೆಸ್ಕಿ ರೈಡ್ ಸಮುದ್ರದಲ್ಲಿ ಉರುಳಿ…
ಕುಂದಾಪುರ:ಒಂದು ಊರಿನಲ್ಲಿರುವ ಶಾಲೆ ಯಾವುದೆ ರೀತಿಯ ಕೊರತೆ ಇಲ್ಲದೆ ಮುನ್ನೆಡೆಯುತ್ತಿದೆ ಎಂದಾದರೆ ಅದು ಊರಿನ ಬೆಳವಣಿಗೆಯ ಸಂಕೇತವಾಗಿದೆ.ಆ ನಿಟ್ಟಿನಲ್ಲಿ ಬಡಾಕೆರೆ…
ಕುಂದಾಪುರ:ಭಾರತದಲ್ಲಿ ಅತ್ಯಂತ ದೊಡ್ಡ ಮಾರುಕಟ್ಟೆ ವ್ಯವಸ್ಥೆಯನ್ನು ಹೊಂದಿರುವ ಜನಪ್ರೀಯ ಎಚ್.ಪಿ ಫ್ಯೂಲ್ಸ್ ನ ಘಟಕ ಸುಸಜ್ಜಿತವಾದ ವ್ಯವಸ್ಥೆಯಡಿಯಲ್ಲಿ ಕುಂದಾಪುರ ತಾಲೂಕಿನ…
ಕುಂದಾಪುರ:ಭಾರತದಲ್ಲಿ ಅತ್ಯಂತ ದೊಡ್ಡ ಮಾರುಕಟ್ಟೆ ವ್ಯವಸ್ಥೆಯನ್ನು ಹೊಂದಿರುವ ಜನಪ್ರೀಯ ಎಚ್.ಪಿ ಫ್ಯೂಲ್ಸ್ ನ ಘಟಕ ಸುಸಜ್ಜಿತವಾದ ವ್ಯವಸ್ಥೆಯಡಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ…
ಕುಂದಾಪುರ:ಮಂಡಾಡಿ ಹೋರ್ವರಮನೆಯ ಹದಿನೇಳನೆ ವರ್ಷದ ಕಂಬಳೋತ್ಸವ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ಶುಕ್ರವಾರ ನಡೆಯಿತು.ಮಂಡಾಡಿ ಹೋರ್ವರಮನೆ ಸಾಂಪ್ರದಾಯಿಕ ಕಂಬಳೋತ್ಸವದಲ್ಲಿ…
ಕುಂದಾಪುರ:ಬೈಂದೂರು ವಲಯದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ (ಉತ್ತರ) ಬಡಾಕೆರೆಯಲ್ಲಿ ಡಿಸೆಂಬರ್ 14.ರಂದು ಸ್ನೇಹ ಸಮ್ಮಿಲನ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ…