ಸಿದ್ದಾಪುರ: ಇತ್ತೀಚಿಗೆ ಸುರಿದ ಗಾಳಿಮಳೆಯಿಂದಾಗಿ ಹೊಸಂಗಡಿ ಗ್ರಾಮದ ಹೊಳೆಶಂಕರನಾರಾಣ ವ್ಯಾಪ್ತಿಯ ಮನೆಯೊಂದರ ಮೇಲೆ ಮರ ಬಿದ್ದು ಮನೆಯೆ ಮೇಲ್ಛಾವಣಿಗೆ ಸಂಪೂರ್ಣ ಹಾನಿಯುಂಟಾಗಿದ್ದು, ಬೈಂದೂರು ಕ್ಷೇತ್ರದ ಜನಪ್ರಿಯ ಶಾಸಕರಾದ ಗುರುರಾಜ ಗಂಟಿಹೊಳೆ ಅವರು ಸಂತ್ರಸ್ತರ ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು,ಮರ ಬಿದ್ದು ಹಾನಿಯಾದ ಮನೆಯ ಭಾಗವನ್ನು ಸಂಪೂರ್ಣವಾಗಿ ಪರಿಶೀಲಿಸಿದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರ ಪರವಾಗಿ ಚುನಾವಣೆ ಪ್ರಚಾರದಲ್ಲಿ ತಲ್ಲೀನರಾಗಿದ್ದ ಶಾಸಕರಾದ ಗುರುರಾಜ ಗಂಟಿಹೊಳೆ ಅವರಿಗೆ ಸಿದ್ದಾಪುರ, ಹೊಸಂಗಡಿ ಭಾಗದ ಕಾರ್ಯಕರ್ತರು ಮನೆ ಮೇಲೆ ಮರ ಬಿದ್ದಿರುವ ಬಗ್ಗೆ ಮಾಹಿತಿ ನೀಡಿದ ಕೂಡಲೇ ಬುಧವಾರ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ಅವಲೋಕಿಸಿದರು.ಮನೆ ಮರ ಬಿದ್ದ ಪರಿಣಾಮ ಮನೆಯು ಸಂಪೂರ್ಣ ಹಾನಿಯಾಗಿದ್ದು ಮಾತ್ರವಲ್ಲದೇ ಮನೆಯ ಮೂವರಿಗೆ ಗಂಭೀರ ಸ್ವರೂಪದ ಗಾಯವೂ ಆಗಿದೆ. ಗಾಯಗೊಂಡಿರುವ ಮನೆಯ ಸದಸ್ಯರೊಂದಿಗೂ ಕೆಲಕಾಲ ಶಾಸಕರು ಮಾತನಾಡಿ ಅವರನ್ನು ಸಂತೈಸಿದರು.
ಮಳೆ ಮತ್ತು ಗಾಳಿ ಜೋರಾಗಿ ಬಂದಿದ್ದರಿಂದ ಮರ ಕುಸಿದು ಮನೆಯ ಮೇಲೆ ಬಿದ್ದಿದೆ. ಮನೆಯ ಒಂದು ಭಾಗಕ್ಕೆ ಸಂಪೂರ್ಣ ಹಾನಿಯಾಗಿದೆ. ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಗರಿಷ್ಠ ಎಷ್ಟು ಪರಿಹಾರ ಒದಗಿಸಲು ಸಾಧ್ಯವೋ ಆ ಪ್ರಯತ್ನ ಮಾಡಲಾಗುವುದು. ಪಂಚಾಯತಿ,ತಹಶೀಲ್ದಾರ್ ಮೂಲಕ ಜಿಲ್ಲಾಡಳಿತಕ್ಕೂ ಮಾಹಿತಿ ಹೋಗಲಿದೆ.ನೊಂದ ಕುಟುಂಬಕ್ಕೆ ಅಗತ್ಯ ಪರಿಹಾರ ಸಿಗಲಿದೆ ಎಂದರು.
ಮೂರು ದಿನಗಳ ಹಿಂದೆ ಸುರಿದ ಧಾರಕಾರ ಮಳೆಗೆ ಬೃಹತ್ ಮರವೊಂದು ಮನೆಯ ಮಲೆ ಬಿದ್ದು ಮನೆಯ ಒಂದು ಭಾಗವನ್ನು ಸಂಪೂರ್ಣ ಹಾನಿ ಮಾಡಿದೆ. ಮೇಲ್ಛಾವಣಿ ಕುಸಿದಿದ್ದು ಮಾತ್ರವಲ್ಲದೇ ಗೋಡೆಗಳು ಬಿರುಕುಬಿಟ್ಟಿವೆ. ಇಡೀ ಮನೆಯ ಪುನರ್ ನಿರ್ಮಾಣ ಆಗಬೇಕಿದೆ. ಹಾಗೆಯೇ ಮರ ಮನೆ ಮೇಲೆ ಬೀಳುವ ಸಂದರ್ಭದಲ್ಲಿ ಮನೆಯೊಳಗಿದ್ದ ಮೂವರಿಗೂ ಗಂಭೀರ ಗಾಯಗಳಾಗಿವೆ. ಈ ವಿಷಯ ತಿಳಿದ ಕೂಡಲೇ ಶಾಸಕರು ಸ್ಥಳಕ್ಕೆ ಭೇಟಿ ನೀಡಿ ನೋಂದ ಕುಟುಂಬದವರೊಂದಿಗೆ ಮಾತನಾಡುವ ಮಾನವೀಯ ಕಾರ್ಯ ನಡೆಸಿದ್ದಾರೆ.
ಈ ವೇಳೆ ಬಿಜೆಪಿ ಪ್ರಮುಖರಾದ ಸುರೇಶ್ ಶೆಟ್ಟಿ,ಪ್ರಧಾನ ಕಾರ್ಯದರ್ಶಿ ಉಮೇಶ್ ಶೆಟ್ಟಿ ಕಲ್ ಗೆದ್ದೆ ಜಿಲ್ಲಾ ಪಂಚಾಯತ್ ಸದಸ್ಯರಾದ ರೋಹಿತ್ ಶೆಟ್ಟಿ,ಶ್ರೀಗಣೇಶ ಗಾಣಿಗ ಹಾಗೂ ಸ್ಥಳೀಯ ಕಾರ್ಯಕರ್ತರು ಉಪಸ್ಥಿತರಿದ್ದರು.
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿನ ಬಿ.ಸಿ.ಎ ವಿಭಾಗದ ವತಿಯಿಂದ ಎಲೆವೆಂಶಿಯಾ 2ಕೆ24 ಫೆಸ್ಟ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.ರೋಬೊಸಾಫ್ಟ್…
ಉಡುಪಿ:ಜಿಲ್ಲೆಯ ಹೆಬ್ರಿ ತಾಲೂಕಿನ ಹೆಬ್ರಿ ಕಬ್ವಿನಾಲೆ ಸೀತಂಬೈಲುವಿನಲ್ಲಿ ಸೋಮವಾರ ರಾತ್ರಿ ಎ ಎನ್ ಎಫ್ ಹಾಗೂ ನಕ್ಸಲರ ನಡುವೆ ನಡೆದ…
ಕುಂದಾಪುರ:ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕುಂದಾಪುರ,ಕರ್ನಾಟಕ ಪ್ರೌಢ ಶಾಲಾ ಸಹಶಿಕ್ಷಕರ ಸಂಘ ಕುಂದಾಪುರ ತಾಲೂಕು ಘಟಕ…
ಮುಳ್ಳಿಕಟ್ಟೆ:ಕುಂದಾಪುರ ದಿಂದ ಅರಾಟೆಗೆ ಸಾಗುತ್ತಿದ್ದ ಆಟೋ ರಿಕ್ಷಾಕ್ಕೆ ಮುಳ್ಳಿಕಟ್ಟೆ ಸರ್ಕಲ್ ನಲ್ಲಿ ತ್ರಾಸಿ ಕಡೆಯಿಂದ ಕುಂದಾಪುರ ಕಡೆಗೆ ಸಾಗುತ್ತಿದ್ದ ಕಾರು…
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಮತ್ತು ಕುಂದಾಪುರ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ರಕ್ತದಾನ ಶಿಬಿರ ಕಾರ್ಯಕ್ರಮ…
ಜನತಾ ಆವಿಷ್ಕಾರ ಕಾರ್ಯಕ್ರಮದಲ್ಲಿ ತುಂಬಿದ ವಿದ್ಯಾರ್ಥಿ ಸಮೂಹ ಜನತಾ ಪದವಿ ಪೂರ್ವ ಕಾಲೇಜು ಹೆಮ್ಮಾಡಿ ಹೆಮ್ಮಾಡಿ:ಜಗತ್ತು ಇಂದು ವ್ಯಾವಹಾರಿಕವಾಗಿ ಮುನ್ನಡೆಯುತ್ತಿದ್ದು.ವಿದ್ಯಾರ್ಥಿಗಳು…