ಕುಂದಾಪುರ:ತಾಲೂಕಿನ ಶ್ರೀಕ್ಷೇತ್ರ ಬಗ್ವಾಡಿ ಶ್ರೀಮಹಿಷಾಸುರ ಮರ್ದಿನಿ ದೇವಿ ಬ್ರಹ್ಮರಥೋತ್ಸವ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.
ಶ್ರೀಮಹಿಷಾಸುರ ಮರ್ದಿನಿ ದೇವಿ ವಾರ್ಷಿಕ ಬ್ರಹ್ಮರಥೋತ್ಸವ ಅಂಗವಾಗಿ ಮಹಿಳೆರಿಂದ ಸಾಮೂಹಿಕ ಕುಂಕುಮಾರ್ಚನೆ ಸೇವೆ ಜರುಗಿತು.ಶ್ರೀದೇವಿಗೆ ಅಲಂಕಾರ ಪೂಜೆ,ಮಹಾ ಮಂಗಳಾರತಿ ಸೇವೆ,ಮಹಾ ಅನ್ನಸಂತರ್ಪಣೆ ನಡೆಯಿತು.ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಶ್ರೀಕ್ಷೇತ್ರಕ್ಕೆ ಆಗಮಿಸಿ ಶ್ರೀದೇವಿ ಅನ್ನಪ್ರಸಾದ ಸ್ವೀಕರಿಸಿದರು.15 ನೇ ವರ್ಷದ ಶ್ರೀದೇವಿ ಪುರ ಮೆರವಣಿಗೆ ಗಣಪತಿ ಕಟ್ಟೆಯಿಂದ ಬಗ್ವಾಡಿ ನಡು ಹಿತ್ಲುವಿನಲ್ಲಿರುವ ಗ್ರಾಮದ ಕಟ್ಟೆಯವರೆಗೆ ನೆರವೇರಿತು.ಭಕ್ತರು ಭಕ್ತಿ ಭಾವದಿಂದ ಬ್ರಹ್ಮ ರಥವನ್ನು ಎಳೆದರು.ಚಂಡೆ ವಾದನ,ವಾದ್ಯ ಘೋಷ ಮೆರವಣಿಗೆ ಸೊಬಗನ್ನು ಹೆಚ್ಚಿಸಿತು.
ಏಪ್ರಿಲ್ 25 ರಂದು ಶ್ರೀದೇವಿ ತೆಪ್ಪೆÇೀತ್ಸವ ಸೇವೆ:ಶ್ರೀ ಮಹಿಷಾಸುರ ಮರ್ದಿನಿ ದೇವಿ ವಾರ್ಷಿಕ ಬ್ರಹ್ಮರಥೋತ್ಸವ ಅಂಗವಾಗಿ ಕುಣಿತ ಭಜನೆ,ನೃತ್ಯ ವೈಭವ,ನಗೆ ನಾಟಕ,ಶ್ರೀರಾಮ ದರ್ಶನಂ ಯಕ್ಷಗಾನ,ಕಲರವ-2024,ಸಂಗೀತ ರಸ ಸಂಜೆ ಕಾರ್ಯಕ್ರಮ ಜರುಗಿತು.ಏಪ್ರಿಲ್ 25 ರಂದು ಶ್ರೀದೇವಿ ತೆಪ್ಪೆÇೀತ್ಸವ ಸೇವೆ ನಾನಾ ಧಾಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಕುಂದಾಪುರ:ಸರಕಾರದ ಅಧ್ಯಯನದ ವರದಿ ಪ್ರಕಾರ ಶೇ.50 ರಷ್ಟು ಗರ್ಭಿಣಿ ಮಹಿಳೆಯರಲ್ಲಿ ಹಾಗೂ ಶೇ.60 ರಷ್ಟು ಮಕ್ಕಳಲ್ಲಿ ಮತ್ತು ಶೇ.60 ರಷ್ಟು…
ಕುಂದಾಪುರ:ಸಾಮಾಜಿಕ ಜಾಲಾತಾಣದಲ್ಲಿ ನಕಲಿ ಖಾತೆ ಸೃಷ್ಟಿಸಿ,ಬೈಂದೂರು ಕ್ಷೇತ್ರದ ಶಾಸಕರ ವಿರುದ್ಧ ಸುಳ್ಳು ಸುದ್ದಿ ಹರಡಿಸಿ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಾನೂನು…
ಕುಂದಾಪುರ: ಮಾರಿಷಸ್ ದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದ ಸುಳ್ಯದ ಯುವಕನೋರ್ವ ಅಲ್ಲಿನ ಜಲಪಾತ ವೀಕ್ಷಣೆಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ…
ಕುಂದಾಪುರ:ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಹೊಸಹಿತ್ಲು ಸಮೀಪ ಸಮುದ್ರದಲ್ಲಿ ಈಜಲು ಹೋಗಿದ್ದ ನಾಲ್ವರು ವಿದ್ಯಾರ್ಥಿಗಳ ಪೈಕಿ ಮೂವರು ವಿದ್ಯಾರ್ಥಿಗಳು ಸಮುದ್ರ…
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಕಾಲೇಜು ಬ್ರಹ್ಮಾವರದಲ್ಲಿ ಕನ್ನಡ ಭಾμÁ ವಿಭಾಗದ ವತಿಯಿಂದ ಕನ್ನಡ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಸರಕಾರಿ ಪ್ರಥಮ…
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಕಾಲೇಜಿನಲ್ಲಿ ಹಿಂದಿ ಭಾಷಾ ವಿಭಾಗದ ವತಿಯಿಂದ ಹಿಂದಿ ದಿವಸ್ 'ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಪೂರ್ಣ ಪ್ರಜ್ಞಾ…