ಕುಂದಾಪುರ

ಏಕ ಪವಿತ್ರ ನಾಗಮಂಡಲೋತ್ಸವ ಸಂಪನ್ನ

Share

Advertisement
Advertisement

ಕುಂದಾಪುರ:ತಾಲೂಕಿನ ಅಂಪಾರು ಗ್ರಾಮದ ಶಾನ್ಕಟ್ಟು ಕೆಳಗಿನ ಮನೆ ಕುಟುಂಬಸ್ಥರ ವತಿಯಿಂದ ಕುಟುಂಬದ ಆದಿ ಬನದಲ್ಲಿ ಏಕ ಪವಿತ್ರ ನಾಗಮಂಡಲೋತ್ಸವ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ಮಂಗಳವಾರ ಸಂಪನ್ನಗೊಂಡಿತು.
ಶ್ರೀನಾಗ ದೇವರ ಏಕ ಪವಿತ್ರ ನಾಗಮಂಡಲೋತ್ಸವ ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ಸೇವೆ ಜರುಗಿತು.ಸಂಜೆ ದೀಪಾರಾಧನೆ,ಹಾಲಿಟ್ಟು ಸೇವೆ, ಸಂದರ್ಶನ,ಪ್ರಸಾದ ವಿತರಣೆ,ಮಂಗಲ ಪುಣ್ಯಾಹ್ನ, ಮಂತ್ರಾಕ್ಷತೆ ಕಾರ್ಯಕ್ರಮ ನಡೆಯಿತು.ಸಾವಿರಾರು ಜನರು ಆಗಮಿಸಿ ಶ್ರೀ ನಾಗದೇವರ ದರ್ಶನವನ್ನು ಪಡೆದರು.ವಾದ್ಯ ಘೋಷದೊಂದಿಗೆ ನಾಗ ಪಾತ್ರಿಗಳನ್ನು ಮಂಟಪಕ್ಕೆ ಬರಮಾಡಿಕೊಳ್ಳಲಾಯಿತು.
ಶಾನ್ಕಟ್ಟು ಕೆಳಗಿನ ಮನೆ ಚಂದ್ರಹಾಸ ಶೆಟ್ಟಿ ಮಾತನಾಡಿ, ಅವಿಭಜಿತ ದ.ಕ ಜಿಲ್ಲೆಯಲ್ಲಿ ನಾಗದೇವರಿಗೆ ಪ್ರಧಾನವಾದ ಸ್ಥಾನ ಇದೆ.ಕಲಿಯುಗದಲ್ಲಿ ಕಣ್ಣಿಗೆ ಕಾಣುವ ನಾಗ ದೇವರನ್ನು ವಿಶೇಷ ರೀತಿಯಲ್ಲಿ ಆರಾಧಿಸಿಕೊಂಡು ಬರಲಾಗುತ್ತಿದ್ದು ಸಂತಾನ ಕಾರಕನಾದ ನಾಗ ದೇವರಿಗೆ ನಾಗ ಮಂಡಲ ಸೇವೆಯನ್ನು ಭಕ್ತಿಯಿಂದ ಸಮರ್ಪಿಸಲಾಗಿದೆ ಎಂದು ಹೇಳಿದರು.ಕನಸಿನಲ್ಲೂ ಅಂದುಕೊಳ್ಳದ ರೀತಿಯಲ್ಲಿ ಇವೊಂದು ಧಾರ್ಮಿಕ ವಿಜೃಂಭಣೆಯಿಂದ ನಡೆದಿದೆ ಎಂದರು.
ರಾಘವೇಂದ್ರ ಶೆಟ್ಟಿ ತೊಂಬಟ್ಟು ಮಾತನಾಡಿ,ಏಕ ಪವಿತ್ರ ನಾಗಮಂಡಲೋತ್ಸವ ವಿಜೃಂಭಣೆಯಿಂದ ಸಂಪನ್ನಗೊಂಡಿದೆ.ಇವೊಂದು‌ ದೇವತಾ ಕಾರ್ಯ ಯಶಸ್ವಿಯಾಗಿ ನಡೆಯಲು ಸಹಕರಿಸಿದ ಸ್ವಯಂ ಸೇವಕರಿಗೂ,ಗ್ರಾಮಸ್ಥರರಿಗೂ ಶ್ರೀ ನಾಗದೇವರು ಒಳಿತನ್ನು ಮಾಡಲಿ ಎಂದು ಹಾರೈಸಿದರು.
ಚಂದ್ರ ಜೋಗಿ ಶಾನ್ಕಟ್ಟು ಮಾತನಾಡಿ,ಕೆಳಗಿನ ಮನೆ ಕುಟುಂಬಸ್ಥರು ನಡೆಸಿರುವ ಶ್ರೀ ನಾಗದೇವರ ಏಕ ಪವಿತ್ರ ನಾಗಮಂಡಲೋತ್ಸವ ಅಚ್ಚುಕಟ್ಟಾಗಿ ನಡೆದಿದೆ.ಊರಿನಲ್ಲಿ ಹಬ್ಬದ ವಾತಾವರಣವೇ ಸೃಷ್ಟಿ ಆಗಿದೆ ಎಂದು ಹೇಳಿದರು.ಮೂರರಿಂದ ನಾಲ್ಕು ತಿಂಗಳು ಕಾಲ ಶ್ರಮ ವಹಿಸಲಾಗಿದ್ದು ಎಲ್ಲರ ಸಹಕಾರದಿಂದ ವಿಜೃಂಭಣೆಯಿಂದ ಸಂಮಾಪ್ತಿಗೊಂಡಿದೆ ಎಂದರು.
ಸಂತೋಷ ಶೆಟ್ಟಿ ಕೆಳಗಿನ ಮನೆ ಶಾನ್ಕಟ್ಟು ಮಾತನಾಡಿ,ಶ್ರೀ ನಾಗ ದೇವರ ನಾಗಮಂಡಲೋತ್ಸವ ತುಂಬಾ ಯಶಸ್ವಿಯಾಗಿ ವಿಜೃಂಭಣೆಯಿಂದ ನಡೆದಿದೆ.ಊರಿನವರ ಸಹಕಾರ ಮತ್ತು ಶಾನ್ಕಟ್ಟು ಕುಟುಂಬಸ್ಥರ ಸಹಕಾರ ಮುಖ್ಯವಾಗಿದ್ದು ಜಿಲ್ಲೆ,ಹೊರ ರಾಜ್ಯಗಳಿಂದಲೂ ಭಕ್ತರು ಭಾಗವಹಿಸಿದ್ದಾರೆ.ಧನ ಸಹಾಯ ಮತ್ತು ಹೊರೆ ಕಾಣಿಕೆ ನೀಡಿದವರಿಗೆ ಧನ್ಯವಾದವನ್ನು ಅರ್ಪಿಸಿದರು.
ಶಶಿಧರ ಶೆಟ್ಟಿ ಮಾತನಾಡಿ, ಸಾವಿರಾರು ಜನರು ಭೇಟಿ ನೀಡಿ ಅನ್ನಪ್ರಸಾದವನ್ನು ಸ್ವೀಕರಿಸಿದ್ದಾರೆ.ಉಗ್ರಾಣ, ಪಾಕಶಾಲೆ ಪ್ರತಿಯೊಂದು ಯಾವುದೇ ರೀತಿಯ ಚುತ್ತಿ ಬಾರದೆ ವ್ಯವಸ್ಥಿತವಾದ ರೀತಿಯಲ್ಲಿ ನಡೆದಿದೆ ಎಂದು ಹೇಳಿದರು.
ಮನೋಹರ ಶೆಟ್ಟಿ ಮಾತನಾಡಿ,
ಅಂಪಾರು ಗ್ರಾಮದ ಶಾನ್ಕಟ್ಟು ಕೆಳಗಿನ ಮನೆ ಕುಟುಂಬಸ್ಥರ ಸಹಕಾರದಲ್ಲಿ ಏಕ ಪವಿತ್ರ ನಾಗಮಂಡಲೋತ್ಸವ ವಿದ್ಯುಕ್ತವಾಗಿ ನಡೆದಿದೆ.ಅನ್ನ ಪ್ರಸಾದವನ್ನು ಸ್ವೀಕರಿಸಲು ಬಂದಂತಹ ಭಕ್ತಾದಿಗಳು ಶಾಂತ ಚಿತ್ತದಿಂದ ಸೇವೆಯಲ್ಲಿ ಪಾಲ್ಗೊಂಡಿರುವುದು ಖುಷಿ ವಿಚಾರವಾಗಿದೆ ಎಂದರು.
ಈ ಸಂದರ್ಭದಲ್ಲಿ ಅಂಪಾರು ಗ್ರಾಮದ ಶಾನ್ಕಟ್ಟು ಕೆಳಗಿನ ಮನೆ ಕುಟುಂಬಸ್ಥರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಮಂಡಲ ಮಂಟಪದಲ್ಲಿ ಶ್ರೀ ನಾಗದೇವರ ಸೇವೆ ವಿಜೃಂಭಣೆಯಿಂದ ನಡೆಯಿತು.ಭಕ್ತರು ಮಂತ್ರ ಮುಗ್ಧರಾಗಿ ನಾಗದೇವರ ಸೇವೆಯಲ್ಲಿ ಪಾಲ್ಗೊಂಡಿದ್ದರು.ಪ್ರಧಾನ ತಂತ್ರಿಗಳಾದ ಕೆ.ವೇದ ಮೂರ್ತಿ ಶ್ರೀಪತಿ ಭಟ್ ಕಂಬಿಕಲ್ಲು ಅವರು ಧಾರ್ಮಿಕ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.
ನಾಗಪಾತ್ರಿಗಳಾದ ಅಂಪಾರು‌ ಎ.ರವಿರಾಜ ದರ್ಶನ ಸೇವೆಯನ್ನು ನೀಡಿದರು.ಸರ್ವೋತ್ತಮ ವೈದ್ಯರ ತಂಡ ದಕ್ಕೆ ಬಲಿ ಸೇವೆ ನೆರವೇರಿಸಿದರು.

Advertisement
Advertisement
Advertisement

Share
Team Kundapur Times

Recent Posts

ತ್ರಾಸಿ:ಹೆದ್ದಾರಿಯಲ್ಲಿ ಕಾರಿಗೆ ಅಡ್ಡ ಬಂದ ಗೂಳಿ

ಕುಂದಾಪುರ:ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮುರುಡೇಶ್ವರ ದಿಂದ ಉಡುಪಿಗೆ ಸಾಗುತ್ತಿದ್ದ ಕಾರಿಗೆ ತ್ರಾಸಿ ಸಮೀಪ ಮೊವಾಡಿ ಕ್ರಾಸ್‍ನಲ್ಲಿ ಗೂಳಿಯೊದು ಅಡ್ಡ ಬಂದ…

13 hours ago

ಅಬ್ಬರಿಸಿದ ಮಳೆಗೆ ಉಕ್ಕೇರಿದ ಕಡಲು:ಜನರಲ್ಲಿ ಮೂಡಿದ ಆತಂಕ

ಕುಂದಾಪುರ:ಬುಧವಾರ ಸುರಿದ ಭಾರಿ ಗಾಳಿ ಮಳೆಗೆ ಕಡಲು ಉಕ್ಕೇರಿದ ಪರಿಣಾಮ ಕಂಚುಗೋಡು ಭಾಗದಲ್ಲಿ ಬೃಹತ್ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸಿದೆ.ಅಲೆಗಳ…

1 day ago

ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನಿಂದ ಸಂಭ್ರಮದ ದಸರಾ ಆಚರಣೆ

ಕುಂದಾಪುರ:ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ಕುಂದಾಪುರ,ಸುಜ್ಞಾನ ಪದವಿ ಪೂರ್ವ ಕಾಲೇಜು,ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆ, ಯಡಾಡಿ-ಮತ್ಯಾಡಿ, ಇಲ್ಲಿ ದಸರಾ ಹಬ್ಬವನ್ನು ಸಂಭ್ರಮದಿಂದ…

3 days ago

ಬಿ.ಎಚ್.ಪಿ ಮೀನುಗಾರಿಕಾ ಬೋಟ್ ಶುಭಾರಂಭ

ಕುಂದಾಪುರ:ಮೀನುಗಾರಿಕಾ ವೃತ್ತಿಯಲ್ಲಿ ಹಲವಾರು ವರ್ಷಗಳ ಅನುಭವವನ್ನು ಹೊಂದಿರುವ ಮತ್ಸೋದ್ಯಮಿಗಳಾದ ಉಪ್ಪುಂದ ನಾಗರಾಜ ಖಾರ್ವಿ ಮತ್ತು ಸುಬ್ರಹ್ಮಣ್ಯ ಖಾರ್ವಿ ಮಾಲೀಕತ್ವದ ಬಿ.ಎಚ್.ಪಿ…

4 days ago

ಚಾಲಕನ ನಿಯಂತ್ರಣ ತಪ್ಪಿ ಹೊಳೆಗೆ ಬಿದ್ದ ಖಾಸಗಿ ಬಸ್‌:ಚಾಲಕ ಸ್ಥಳದಲ್ಲೇ ಸಾವು

ನೈಲಾಡಿ:ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನೆಲ್ಯಾಡಿ ಸಮೀಪದ ಲಾವತ್ತಡ್ಕ ಎಂಬಲ್ಲಿ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಗುಂಡ್ಯ ಹೊಳೆಗೆ ಬಿದ್ದ…

4 days ago

ಧರ್ಮ ಗಂಗೋತ್ರಿ ಭರತ ಶೆಟ್ಟಿ ಸಿ.ಸಿ.ಎಫ್ ಮೆಂಬರ್ ಆಗಿ ಆಯ್ಕೆ

ಕುಂದಾಪುರ:ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೊಲ್ಲೂರು ನಿವಾಸಿ ಧರ್ಮಗಂಗೋತ್ರಿ ಭರತ್ ಶೆಟ್ಟಿ ಅವರು ಭಾರತ ಸಂವಿಧಾನದ ಕಾರ್ಯವನ್ನುವಿಜಿಲೆಕ್ಸ್ ಅಪರಾಧ ನಿಯಂತ್ರಣ…

6 days ago