ಕುಂದಾಪುರ

ಮಾಣಿಕೊಳಲು ಶ್ರೀಲಕ್ಷ್ಮೀಚೆನ್ನಕೇಶವ ದೇವರ ಶ್ರೀಮನ್ಮಹಾರಥೋತ್ಸವ

Share

Advertisement
Advertisement
Advertisement

ಕುಂದಾಪುರ:ಹದಿನಾರು ಮಾಗಣೆಯ ಒಡೆಯನಾದ ಕುಂದಾಪುರ ತಾಲೂಕಿನ ಕುಂದಬಾರಂದಾಡಿ ಗ್ರಾಮದ ಮಾಣಿಕೊಳಲು ಶ್ರೀಲಕ್ಷ್ಮೀಚೆನ್ನಕೇಶವ ದೇವರ ಶ್ರೀಮನ್ಮಹಾರಥೋತ್ಸವ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ವೈಭವದಿಂದ ಬುಧವಾರ ನಡೆಯಿತು.ಭಕ್ತಿಭಾವದಿಂದ ಭಕ್ತಾದಿಗಳು ರಥವನ್ನು ಎಳೆದರು.ಚಂಡೆ ವಾದನ,ವಾದ್ಯಘೋಷ ರಥೋತ್ಸವದ ಸೊಬಗನ್ನು ಹೆಚ್ಚಿಸಿತು.
ಶ್ರೀ ಲಕ್ಷ್ಮೀಚೆನ್ನಕೇಶವ ದೇವರ ಮನ್ಮಹಾರಥೋತ್ಸವ ಕಾರ್ಯಕ್ರಮದ ಅಂಗವಾಗಿ ವಾಸ್ತು ರಾಕ್ಷೋಘ್ನ ಹೋಮ,ಬಲಿ ಉತ್ಸವ,ಕಟ್ಟೆ ಪೂಜೆ,ಧ್ವಜಾರೋಹಣ,ಪ್ರಧಾನ ಹೋಮ,ಮಹಾಪೂಜೆ ಅನ್ನಪ್ರಸಾದ ಸೇವೆ ಮಹಾ ರಂಗಪೂಜೆ.ಹಟ್ಟಿಯಂಗಡಿ ಮೇಳದವರಿಂದ ಯಕ್ಷಗಾನ ಕಾರ್ಯಕ್ರಮ ಜರುಗಿತು.ಏಪ್ರಿಲ್.18 ರಂದು ಚೂರ್ಣೋತ್ಸವ,ಏಪಿಲ್ 19 ರಂದು ಶುಕ್ರವಾರ ಅವಭೃತ ತೆಪೆÇೀತ್ಸವ ಕಾರ್ಯಕ್ರಮ ವೈಭವದಿಂದ ನಡೆಯಲಿದೆ.
ಹಿರಿಯರಾದ ಗಣಪ್ಪಯ್ಯ ಶೆಟ್ಟಿ ಮಾತನಾಡಿ,11ನೇ ಶತಮಾನದಲ್ಲಿ ಸ್ಥಾಪನೆಯಾದ ಶ್ರೀಮಾಣಿಕೊಳಲು ಶ್ರೀಲಕ್ಷ್ಮೀಚೆನ್ನಕೇಶವ ದೇವಸ್ಥಾನವನ್ನು ಕಮಿಟಿ ಅವರ ಸಹಕಾರದಿಂದ ಹಂತ ಹಂತವಾಗಿ ಜೀರ್ಣೋದ್ಧಾರ ಮಾಡಲಾಗಿದೆ.ದೇವಸ್ಥಾನದ ಕೆರೆ ಅಭಿವೃದ್ಧಿ ಸಹಿತ ಬಹಳಷ್ಟು ಕಾರ್ಯಗಳು ಬಾಕಿ ಇದ್ದು,ದಾನಿಗಳು,ಗ್ರಾಮಸ್ಥರು,ಜನಪ್ರತಿನಿಧಿಗಳು ಸಹಕಾರವನ್ನು ನೀಡಬೇಕೆಂದು ಕೇಳಿಕೊಂಡರು.
ದೇವಸ್ಥಾನದ ಆಡಳಿತ ಸಮಿತಿ ಕಾರ್ಯದರ್ಶಿ ಸತೀಶ್ ಶೆಟ್ಟಿ ಯಳೂರು ಮಾತನಾಡಿ,16 ಮಾಗಣೆಯನ್ನು ಹೊಂದಿರುವ ಮಾಣಿಕೊಳಲು ಶ್ರೀಚೆನ್ನಕೇಶವ ದೇವರ ಕಾರಣಿಕ ಶಕ್ತಿ ಅಪಾರವಾದದ್ದು.ಸಂಪ್ರದಾಯ ಬದ್ಧವಾಗಿ ಪ್ರತಿ ವರ್ಷ ಶ್ರೀದೇವರ ರಥೋತ್ಸವ ಕಾರ್ಯಕ್ರಮ ದಾನಿಗಳು,ಊರವರ ಸಹಕಾರದಿಂದ ನಡೆಯುತ್ತಿದೆ ಎಂದರು.ದೇವಸ್ಥಾನದಲ್ಲಿ ಅಭಿವೃದ್ಧಿ ಕೆಲಸಗಳು ಇನ್ನಷ್ಟು ಬಾಕಿ ಉಳಿದಿದ್ದು ಶ್ರೀಕ್ಷೇತ್ರದ ಅಭಿವೃದ್ಧಿ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕೆಂದು ವಿನಂತಿಸಿಕೊಂಡರು.
ದೇವಸ್ಥಾನದ ಅಧ್ಯಕ್ಷರಾದ ಎಚ್.ಜಗದೀಶಯ್ಯ ಹಲ್ಸನಾಡು ಅವರು ಶುಭಕೋರಿದರು.ಈ ಸಂದರ್ಭದಲ್ಲಿ ಲಕ್ಷ್ಮೀನಾರಾಯಣ ಹೆಬ್ಬಾರ್,ವಿಶ್ವನಾಥ ಗಾಣಿಗ,ಕೃಷ್ಣ ಪೂಜಾರಿ,ಚಂದ್ರಹಾಸ ಹೊಳ್ಮಗೆ,ಸುಧಾಕರ ಕೊಳೂರು,ಹೇಮಾವತಿ ಆಚಾರ್ಯ,ಶುಭಮತಿ ದೇವಾಡಿಗ ಮಾಣಿಕೊಳಲು,ಅರ್ಚಕರಾದ ಗುರುರಾಜ ಉಡುಪ,ಚಂದ್ರಶೇಖರ ಉಪಾಧ್ಯ,ಗ್ರಾಮಸ್ಥರು ಉಪಸ್ಥಿತರಿದ್ದರು.

Advertisement
Advertisement
Advertisement

Share
Team Kundapur Times

Recent Posts

ಅಂತರಾಷ್ಟ್ರೀಯ ಸಹಕಾರ ವರ್ಷಾಚರಣೆ

ಕುಂದಾಪುರ:ಮಹಿಳಾ ಮೀನುಗಾರರ ವಿವಿಧೋದ್ದೇಶ ಸಹಕಾರಿ ಸಂಘ ಮರವಂತೆ,ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು,ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಉಡುಪಿ ಹಾಗೂ…

1 week ago

ಶ್ರೀ ಮೂಕಾಂಬಿಕೆ ಸನ್ನಿಧಿಯಲ್ಲಿ ನೃತ್ಯ ಕಲೋತ್ಸವ ಕಾರ್ಯಕ್ರಮ

ಕುಂದಾಪುರ:ನೃತ್ಯ ಬಿಂಬ ಸಾಂಸ್ಕೃತಿಕ ಪ್ರತಿಷ್ಠಾನ ಬೆಂಗಳೂರು ಮತ್ತು ಕಲೆಗಳ ಉತ್ಸವ ಬೆಂಗಳೂರು ಅವರ ಜಂಟಿ ಆಶ್ರಯದಲ್ಲಿ ಉಡುಪಿ ಜಿಲ್ಲೆಯ ಪ್ರಸಿದ್ಧಕೊಲ್ಲೂರು…

1 week ago

ಸ್ಕೂಟರ್‍ನಲ್ಲಿ ಗೋಮಾಂಸ ಸಾಗಾಟ:ಆರೋಪಿ ಅರೆಸ್ಟ್

ಕುಂದಾಪುರ:ಜೂನ್.21 ರಂದು ಸ್ಕೂಟರ್‍ನಲ್ಲಿ ಅಕ್ರಮವಾಗಿ ಗೋಮಾಂಸವನ್ನು ಸಾಗಾಟ ಮಾಡುತ್ತಿದ್ದ ಗಂಗೊಳ್ಳಿ ಮೀನು ಮಾರ್ಕೆಟ್ ಬಳಿ ನಿವಾಸಿ ಅಬ್ದುಲ್ ರಹೀಮ್ (35)…

2 weeks ago

ಜೂನ್.29 ರಂದು ಭೀಮ ಶಕ್ತಿ ಸಮಾವೇಶ

ಬೈಂದೂರು:ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್‍ವಾದ ಜಿಲ್ಲಾ ಸಮಿತಿ ವತಿಯಿಂದ ಬೈಂದೂರು ತಾಲೂಕು ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಭೀಮ…

2 weeks ago

ಆಯುರ್ವೇದ ವೈದ್ಯ ಡಾ.ಶ್ರೀನಿವಾಸ್ ಪೈ

ಮುಳ್ಳಿಕಟ್ಟೆ:ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ನಿವಾಸಿ ಆಯುರ್ವೇದ ವೈದ್ಯ ಡಾ.ಶ್ರೀನಿವಾಸ ಪೈ (62) ಹೃದಯಘಾತದಿಂದ ಸೋಮವಾರ ನಿಧನರಾದರು.ಅವರಿಗೆ ಪತ್ನಿ,ಮಗಳು,ತಂದೆ,ಇಬ್ಬರು…

2 weeks ago

ವ್ಯಾಯಾಮ ಮತ್ತು ಯೋಗಾಸನ ನಡುವಿನ ವ್ಯತ್ಯಾಸ ಕಾರ್ಯಕ್ರಮ ಚಂದನ ಟಿವಿಯಲ್ಲಿ ನೇರ ಪ್ರಸಾರ

ಕುಂದಾಪುರ:ದೂರದರ್ಶನ ಚಂದನ ಟಿವಿಯಲ್ಲಿ ಜೂನ್.16 ರ ಬೆಳಿಗ್ಗೆ 8 ಕ್ಕೆ ಯೋಗಾಚಾರ್ಯ ಸಂತೋಷ್ ಕುಮಾರ್ ಅವರಿಂದ ವ್ಯಾಯಾಮ ಮತ್ತು ಯೋಗಾಸನ…

3 weeks ago