ಕುಂದಾಪುರ:ಮಾರಣಕಟ್ಟೆ ಸುಬ್ರಹ್ಮಣ್ಯ ಮಂಜ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಾರಣಕಟ್ಟೆ ಸುಬ್ರಹ್ಮಣ್ಯ ಮಂಜರವರ ಸಂಸ್ಮರಣಾ ಕಾರ್ಯಕ್ರಮದ ಅಂಗವಾಗಿ ಕಲ್ಪವೃಕ್ಷ ಸೇವೆ ಉಸಿರು ಕಾರ್ಯಕ್ರಮ ಹಾಗೂ ಸಾಧಕರಿಗೆ ಸನ್ಮಾನ,ಅಶಕ್ತರಿಗೆ ಧನಸಹಾಯ ವಿತರಣೆ ಕಾರ್ಯಕ್ರಮ ಅನುಗ್ರಹ ಮಾರಣಕಟ್ಟೆಯಲ್ಲಿ ಮಂಗಳವಾರ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾರಣಕಟ್ಟೆ ಸುಬ್ರಹ್ಮಣ್ಯ ಮಂಜ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತರಾದ ಎಂ.ಕೃಷ್ಣ ಮೂರ್ತಿ ಮಂಜರು ಮಾತನಾಡಿ,ದುಡಿಮೆ ಒಂದಂಶ ಹಣವನ್ನು ಸಮಾಜಕ್ಕೆ ಮೀಸಲು ಇಡುವುದರಿಂದ ಅಶಕ್ತರ ಬಾಳಿಗೆ ನೆರವಾಗುವುದರ ಜೊತೆಗೆ ಸಶಕ್ತವಾದ ಸಮಾಜ ನಿರ್ಮಾಣ ಮಾಡುವಲ್ಲಿ ಸಹಕಾರ ನೀಡಿದಂತೆ ಆಗುತ್ತದೆ.ದೇವರನ್ನು ಭಜಿಸಿದಷ್ಟೆ ಪುಣ್ಯದ ಫಲ ಸಮಾಜ ಸೇವೆಯಿಂದಲೂ ನಮಗೆ ದೊರಕುತ್ತದೆ ಎಂದು ಹೇಳಿದರು.ಶೈಕ್ಷಣಿ,ಸಾಮಾಜಿಕ,ಧಾರ್ಮಿಕ,ವೈವಾಹಿಕ ಕಾರ್ಯಗಳಿಗೆ ಟ್ರಸ್ಟ್ ಮೂಲಕ ನೆರವನ್ನು ನೀಡಲಾಗುತ್ತಿದ್ದು.ಟ್ರಸ್ಟ್ ಮೂಲಕ ಮಾಡುತ್ತಿರುವ ಸೇವಾ ಕಾರ್ಯ ಮುಂದುವರಿಯಬೇಕು ಎನ್ನುವ ದೃಷ್ಟಿಯಿಂದ,ಶಾಶ್ವತವಾಗಿ ಟ್ರಸ್ಟ್‍ನ್ನು ಉಳಿಸಿಕೊಳ್ಳಲು ಕಟ್ಟಡ ನಿರ್ಮಾಣ ಮಾಡಬೇಕ್ಕೆನ್ನುವ ಆಲೋಚನೆಯನ್ನು ಮಾಡಲಾಗಿದೆ.ನನ್ನ ಮೊದಲ ಗುರಿ ಶಿಕ್ಷಣ ಕ್ಷೇತ್ರವಾಗಿದ್ದು ವಿದ್ಯೆ ಎನ್ನುವುದು ಎಲ್ಲರಿಗೂ ಸುಲಭದಲ್ಲಿ ದೊರಕುವಂತೆ ಆಗಬೇಕೆಂದರು.
ಕುಟುಂಬ ವ್ಯವಸ್ಥೆಯಲ್ಲಿ ಬದುಕುದರಿಂದ ಸಾಧನೆಯ ಹಾದಿಯಲ್ಲಿ ಸಾಗಬಹುದಾಗಿದೆ.ಮನುಷ್ಯರ ಜೀವನದಲ್ಲಿ ಉಸಿರು ಇದ್ದರೆ ಎನ್ನನ್ನು ಬೇಕಾದರು ಸಾಧಿಸಬಹುದು ಎಂದು ಅಭಿಪಾಯಪಟ್ಟರು.
ಮಾರಣಕಟ್ಟೆ ಸುಬ್ರಹ್ಮಣ್ಯ ಮಂಜ ಚಾರಿಟೇಬಲ್ ಟ್ರಸ್ಟ್ ಗೌರವಾಧ್ಯಕ್ಷರಾದ ಶ್ರೀಧರ ಮಂಜರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ಯಾವುದೇ ರೀತಿ ಪತ್ರಿಫಲಾಕ್ಷೆಯನ್ನು ಬಯಸದೆ ಕೇವಲ ಸೇವಾ ಮನೋಭಾವದಿಂ ಸಾಮಾಜಿಕ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬರಲಾಗುತ್ತಿದೆ.ಕ್ಷೇತ್ರ ಆದಿ ದೇವನಾದ ಬ್ರಹ್ಮಲಿಂಗೇಶ್ವರ ದೇವರ ಕೃಪೆಯಿಂದಲೆ ಎಲ್ಲಾ ಕಾರ್ಯವೂ ನಡೆದುಕೊಂಡು ಸಾಗುತ್ತಿದೆ ಹೊರತು ನಮ್ಮದು ಏನು ಇಲ್ಲಾ ಎಂದು ಹೇಳಿದರು.ದೇವರ ಕೃಪೆ ಇದ್ದರೆ ಮಾತ್ರ ಎಲ್ಲವೂ ಸಸುತ್ರವಾಗಿ ನಡೆಯಲು ಸಾಧ್ಯವಿದೆ ಎಂದರು.
ಗೀತಾನಂದ ಫೌಂಡೇಶನ್ ಪ್ರವರ್ತಕರಾದ ಆನಂದ ಸಿ.ಕುಂದರ್ ಮಾತನಾಡಿ,ತಾನು ಮಾಡಿದ ಸಂಪಾದನೆಯನ್ನು ಯಾವ ರೀತಿ ವಿನಿಯೋಗ ಮಾಡಬೇಕೆಂದು ಅರಿತು ಕೊಂಡವರು ಮಾತ್ರ ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಯಾಗಿ ನಿಲ್ಲುತ್ತಾರೆ ಆ ನಿಟ್ಟಿನಲ್ಲಿ ಮಾರಣಕಟ್ಟೆ ಕೃಷ್ಣ ಮೂರ್ತಿ ಮಂಜರು ಎಲ್ಲರಿಗೂ ಮಾದರಿಯಾಗಿದ್ದಾರೆ.ಜಗತ್ತಿನಲ್ಲಿ ದಾನವು ಶ್ರೇಷ್ಠವಾದ ಸ್ಥಾನವನ್ನು ಪಡೆದುಕೊಂಡಿದೆ.ಅದು ನಿಜವಾದ ವ್ಯಕ್ತಿಗೆ ತಲುಪುವಂತೆ ಇರಬೇಕು ಎಂದರು.
ಕುಂದಾಪುರ ಹಿರಿಯ ವಕೀಲರಾದ ಎ.ಎಸ್.ಎನ್ ಹೆಬ್ಬಾರ್ ಮಾತನಾಡಿ,ತಂದೆ ಹೆಸರಿನಲ್ಲಿ ಅಶಕ್ತರಿಗೆ ಸಹಾಯ ಮಾಡುವುದರ ಮೂಲಕ ಮಾತೃ ಮತ್ತು ಪಿತೃರ ಮೇಲಿನ ಗೌರವನ್ನು ಎತ್ತಿಹಿಡಿದಿರುವುದು ಭಾರತೀಯ ಸಂಸ್ಕøತಿಯನ್ನು ಅನಾವರಣಗೊಳಿಸದಂತೆ ಇದೆ.ಮಂಜರ ಸಾಮಾಜಿಕ ಕಾರ್ಯ ಮತ್ತು ತಂದೆ ತಾಯಿಯನ್ನು ಗೌರವಿಸುವ ಗುಣ ಸುಶಕ್ಷಿತ ಸಮಾಜ ಅರಿತುಕೊಂಡಾಗ ಸಮಾಜದಲ್ಲಿ ಅಸಾಮಾತೋಲನ ಹೊಗಲಾಡಿ,ಅನಾಥಾಶ್ರಮಗಳ ಸಂಖ್ಯೆಯೂ ಕಣ್ಮರೆ ಆಗಲಿದೆ ಎಂದು ಹೇಳಿದರು.
ಅಷ್ಟಾಂಗ ಯೋಗ ಗುರುಕುಲ ಪಾಂಡೇಶ್ವರ ಸಾಸ್ತಾನ ವಿದ್ವಾನ್ ಡಾ.ವಿಜಯ ಮಂಜರು ಮಾತನಾಡಿ,ಗಳಿಸಿದ ಸಂಪತ್ತಿನಲ್ಲಿ ಒಂದಂಶವನ್ನು ಸಮಾಜ ಬಡಜನರಿಗೆ ಹಂಚುದರ ಮೂಲಕ ಜೀವನದಲ್ಲಿ ಸಂತೋಷವನ್ನು ಕಾಣುತ್ತಿರುವ ಕೃಷ್ಣಮೂರ್ತಿ ಮಂಜರ ಜೀವನ ಶೈಲಿ ಎಲ್ಲರಿಗೂ ಅನುಕರಣೀಯವಾದದ್ದು.ಒಳ್ಳೆ ಮನಸ್ಸಿನಿಂದ ದಾನ ಮಾಡುವುದರಿಂದ ದಾನದ ಶ್ರೇಷ್ಠತೆ ಹೆಚ್ಚುದರ ಜತೆಗೆ ಆ ವ್ಯಕ್ತಿಯ ವ್ಯಕ್ತಿತ್ವವೂ ಕೂಡ ಶ್ರೇಷ್ಠತೆಯಿಂದಲೆ ಕೂಡಿರುತ್ತದೆ ಎಂದರು.
ಕುಂದಾಪುರ ವೈದ್ಯಾಧಿಕಾರಿ ಡಾ.ನಾಗೇಶ್ ಅವರು ಸೇವಾರತ್ನ ಪ್ರಶಸ್ತಿಯನ್ನು ಸ್ವೀಕರಿಸಿ ಮಾತಾನಾಡಿ,ಇವೊಂದು ಪುರಸ್ಕಾರ ನನಗೆ ವಿಶಿಷ್ಟವಾದ ಅನುಭವವನ್ನು ನೀಡಿದೆ.ಎಲ್ಲಾ ರೀತಿಯಲ್ಲಿಯೂ ಸೇವಾ ಕಾರ್ಯವನ್ನು ಮಾಡುತ್ತಿರುವ ಕೃಷ್ಣ ಮೂರ್ತಿ ಮಂಜರ ಸೇವಾ ಕಾರ್ಯ ಮಾದರಿಯಾಗಿದ್ದು ಅವರಿಂದ ಸೇವಾ ಕಾರ್ಯಗಳು ನಡೆಯುವಂತೆ ಆಗಲಿ ಎಂದು ಶುಭಹಾರೈಸಿದರು.
ಡಾ.ವೆಂಕಟರಮಣ ಭಟ್ ನೆಂಪು ಅವರು ವಿಶೇಷ ಗೌರವ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿ,ದಾನ ಸಂಸ್ಕøತಿಯನ್ನು ಆಚರಣೆ ಮಾಡಿಕೊಂಡು ಬಂದವರು ಕೃಷ್ಣಮೂರ್ತಿ ಮಂಜರು.ಅವರಲ್ಲಿ ಅಡಗಿರುವ ಮಹತ್ತರ ಗುಣ ಊಹೆಗೂ ನಿಲುಕದ್ದು.ಸಮಾಜ ಸುಸ್ಥಿರವಾಗಿ ಉಳಿಯಬೇಕಾದರೆ ಇಂತಹವರ ಅವಶಕ್ಯತೆ ಇದೆ ಎಂದರು.ಅನ್ನವನ್ನು ಹುಡುಕಿಕೊಂಡು ಹೋದವರು ಸಾವಿರಾರು ಜನರಿಗೆ ಅನ್ನವನ್ನು ನೀಡುತ್ತಿದ್ದಾರೆ.ಅವರಿಗೆ ಭಗವಂತನು ಒಳಿತನ್ನು ಮಾಡಲಿ ಎಂದು ಪ್ರಾರ್ಥಿಸಿದರು.
ಸಾಧಕರಿಗೆ ಪ್ರಶಸ್ತಿ ಪುರಸ್ಕಾರ:ಶ್ರೀಮಹಾಲಿಂಗೇಶ್ವರ ದೇವಸ್ಥಾನ ಇಡೂರು ಅರ್ಚಕರಾದ ವೇದ.ಮೂರ್ತಿ,ಸೀತಾರಾಮ ಅಡಿಗ ಅವರಿಗೆ ವೈದಿಕ ರತ್ನ ಪ್ರಶಸ್ತಿಯನ್ನು,ಬಾಳೆಕುದ್ರು ರಾಮಚಂದ್ರ ಉಪಾಧ್ಯಾಯ ಬೆಂಗಳೂರು ಅವರಿಗೆ ಅಮೂಲ್ಯ ರತ್ನ ಪ್ರಶಸ್ತಿ,ಸಾರ್ವಜನಿಕ ಆಸ್ಪತ್ರೆ ಕುಂದಾಪುರ ವೈದ್ಯಾಧಿಕಾರಿ ಡಾ.ನಾಗೇಶ್ ಅವರಿಗೆ ಸೇವಾರತ್ನ ಪ್ರಶಸ್ತಿಯನ್ನು ಹಾಗೂ ಮಕ್ಕಳ ಮೇಳ ಸಾಲಿಗ್ರಾಮ ಸಂಚಾಲಕರಾದ ರಾಷ್ಟ್ರಪ್ರಶಸ್ತಿ ವಿಜೇತರಾದ ಎಚ್.ಶ್ರೀಧರ ಹಂದೆ ಕೋಟ ಅವರಿಗೆ ಕಲಾರತ್ನ ಪ್ರಶಸ್ತಿ ಮತ್ತು ಡಾ.ವೆಂಕಟರಮಣ ಭಟ್ ನೆಂಪು ಅವರಿಗೆ ವಿಶೇಷ ಗೌರವ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.
ನೆರವು ವಿತರಣೆ:ಕಲ್ಪವೃಕ್ಷ ಸೇವೆಯೇ ಉಸಿರು ಯೋಜನೆಯಡಿ ಸುಮಾರು 25 ಜನರಿಗೆ ಶೈಕ್ಷಣಿಕ ನೆರವು,ವೈದ್ಯಕೀಯ ನೆರವು ವಿತರಣೆ,ವಿವಾಹ ನೆರವು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ಸದಾಶಿವ ಶೆಟ್ಟಿ,ಶ್ರೀ ಬಹ್ಮಲಿಂಗೇಶ್ವರ ದೇವಸ್ಥಾನ ಮಾರಣಕಟ್ಟೆ ಅರ್ಚಕರಾದ ವಿಘ್ನೇಶ್ವರ ಮಂಜರು,ಟ್ರಸ್ಟ್‍ನ ಕಾರ್ಯಾಧ್ಯಕ್ಷರಾದ ನಾಗರಾಜ ಮಂಜರು,ಅತಿಥಿ ಗಣ್ಯರು ಉಪಸ್ಥಿತರಿದ್ದರು.
ಮಾರಣಕಟ್ಟೆ ದಿ.ಸುಬ್ರಹ್ಮಣ್ಯ ಮಂಜರರವರ ಸಂಸ್ಮರಣಾ ಕಾರ್ಯಕ್ರಮದ ಅಂಗವಾಗಿ ನೃತ್ಯರುಪಕ,ಮೆಕ್ಕೆಕಟ್ಟು ಮೇಳದವರಿಂದ ಯಕ್ಷಗಾನ ಕಾರ್ಯಕ್ರಮ ಜರುಗಿತು.ಶ್ರೀಧರ ಮಂಜರು ಸ್ವಾಗತಿಸಿದರು.
ಶಶಿಧರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.ದಾಮೋದರ ಶರ್ಮಾ ನಿರೂಪಿಸಿದರು.
ವರದಿ-ಜಗದೀಶ್ ದೇವಾಡಿಗ ಮುಳ್ಳಿಕಟ್ಟೆ
ನಮ್ಮ ಜಾಲಾತಾಣದಲ್ಲಿ ಸುದ್ದಿಗಳನ್ನು ಪ್ರಕಟಿಸಲು ಸಂಪರ್ಕಿಸಿ-9916284048
ಕುಂದಾಪುರ:ದೇಶದ ಭದ್ರತೆ ಹಿತದೃಷ್ಠಿಯಿಂದ ನೌಕಪಡೆ,ಕಸ್ಟಮ್ಸ್ ಇಲಾಖೆ,ಕರಾವಳಿ ಕಾವಲು ಲೀಸ್ ಪಡೆ ಸೇರಿದಂತೆ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಬುಧವಾರದಿಂದ 2 ದಿನಗಳ…
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿನ ಬಿ.ಸಿ.ಎ ವಿಭಾಗದ ವತಿಯಿಂದ ಎಲೆವೆಂಶಿಯಾ 2ಕೆ24 ಫೆಸ್ಟ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.ರೋಬೊಸಾಫ್ಟ್…
ಉಡುಪಿ:ಜಿಲ್ಲೆಯ ಹೆಬ್ರಿ ತಾಲೂಕಿನ ಹೆಬ್ರಿ ಕಬ್ವಿನಾಲೆ ಸೀತಂಬೈಲುವಿನಲ್ಲಿ ಸೋಮವಾರ ರಾತ್ರಿ ಎ ಎನ್ ಎಫ್ ಹಾಗೂ ನಕ್ಸಲರ ನಡುವೆ ನಡೆದ…
ಕುಂದಾಪುರ:ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕುಂದಾಪುರ,ಕರ್ನಾಟಕ ಪ್ರೌಢ ಶಾಲಾ ಸಹಶಿಕ್ಷಕರ ಸಂಘ ಕುಂದಾಪುರ ತಾಲೂಕು ಘಟಕ…
ಮುಳ್ಳಿಕಟ್ಟೆ:ಕುಂದಾಪುರ ದಿಂದ ಅರಾಟೆಗೆ ಸಾಗುತ್ತಿದ್ದ ಆಟೋ ರಿಕ್ಷಾಕ್ಕೆ ಮುಳ್ಳಿಕಟ್ಟೆ ಸರ್ಕಲ್ ನಲ್ಲಿ ತ್ರಾಸಿ ಕಡೆಯಿಂದ ಕುಂದಾಪುರ ಕಡೆಗೆ ಸಾಗುತ್ತಿದ್ದ ಕಾರು…
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಮತ್ತು ಕುಂದಾಪುರ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ರಕ್ತದಾನ ಶಿಬಿರ ಕಾರ್ಯಕ್ರಮ…