ಕುಂದಾಪುರ:2023-240 ಶೈಕ್ಷಣಿಕ ವರ್ಷದ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ಕುಂದಾಪುರದ ಎಕ್ಸಲೆಂಟ್
ಪಪೂ ಕಾಲೇಜಿಗೆ ರಾಜ್ಯಮಟ್ಟದಲ್ಲಿ 13 ಸ್ಥಾನಗಳು ಬಂದಿದ್ದು, ಶೇ.1೦೦ ಫಲಿತಾಂಶ ಲಭಿಸಿದೆ. ಅತೀ ಹೆಚ್ಚು ರ‍್ಯಾಂಕ್‌ಗಳನ್ನು ಪಡೆದ ಕುಂದಾಪುರದ ಏಕೈಕ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ಸಂಸ್ಥೆಯಲ್ಲಿ ವಾಣಿಜ್ಯ ಹಾಗೂ ವಿಜ್ಞಾನ ವಿಭಾಗಗಳಿದ್ದು ಒಟ್ಟು 404 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆಗೊಂಡು ಶೇ.1೦೦ ಫಲಿತಾಂಶ ಬರುವುದರೊಂದಿಗೆ ವಿಜ್ಞಾನ ವಿಭಾಗದಲ್ಲಿ ೦8 ಸ್ಥಾನಗಳು ಹಾಗೂ ವಾಣಿಜ್ಯ ವಿಭಾಗದಲ್ಲಿ ೦5 ಸ್ಥಾನಗಳನ್ನು ರಾಜ್ಯಮಟ್ಟದಲ್ಲಿ ಗಳಿಸುವುದರ ಮೂಲಕ ಸಂಸ್ಥೆಯ ಕೀರ್ತಿ ಕಳಶಕ್ಕೆ ಇನ್ನು ಹೊಳಪು ನೀಡಿದ್ದಾರೆ.
ಸಂಸ್ಥೆಯ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಚಿರಾಗ್ 592 ಅಂಕಗಳೊಂದಿಗೆ ರಾಜ್ಯಮಟ್ಟದಲ್ಲಿ 7ನೇ ಸ್ಥಾನ, ಅನನ್ಯ ಉಡುಪ 590 ಅಂಕಗಳೊಂದಿಗೆ 6ನೇ ಸ್ಥಾನ, ನಾಗರಾಜ ಉಪ್ಪಾರ್ 590 ಅಂಕಗಳೊಂದಿಗೆ 9ನೇ ಸ್ಥಾನ, ರಕ್ಷಾ ಆರ್ ಪೂಜಾರಿ 590 ಅಂಕಗಳೊಂದಿಗೆ 9ನೇ ಸ್ಥಾನ, ನಿಶಾ 589,1೦ ನೇ ಸ್ಥಾನ, ನಿರ್ಮಿತಾ ಎನ್. ಡಿ 588 ಅಂಕಗಳೊಂದಿಗೆ 11 ನೇ ಸ್ಥಾನ, ವಿನುತಾ 588 ಅಂಕಗಳೊAದಿಗೆ 11ನೇ ಸ್ಥಾನ, ಸನ್ನಿದಿ ಕುಲಾಲ್ 588 ಅಂಕಗಳೊAದಿಗೆ 11 ನೇ ಸ್ಥಾನ,ಪಡೆದುಕೊಂಡಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 315 ವಿದ್ಯಾರ್ಥಿಗಳೂ ತೇರ್ಗಡೆಗೊಂಡು ಶೇಕಡ 1೦೦ ಫಲಿತಾಂಶ ಬಂದಿದೆ 246 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ 68 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ ಒಬ್ಬ ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ.
ಹಾಗೇ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ರಿತನ್ಯ ನಾಯ್ಕ 591 ಅಂಕಗಳೊಂದಿಗೆ ರಾಜ್ಯಮಟ್ಟದಲ್ಲಿ 7 ನೇ ಸ್ಥಾನ , ಹರ್ಷಿತಾ ಡಿ. ಎಸ್ 591 ಅಂಕಗಳೊಂದಿಗೆ 7 ನೇ ಸ್ಥಾನ , ಸಿಂಚನಾ ಎಸ್ ಬಸ್ರೂರು 589 ಅಂಕಗಳೊಂದಿಗೆ 9 ನೇ ಸ್ಥಾನ, ಸಿಂಚನಾ ಎಸ್ ಶೆಟ್ಟಿ 589 ಅಂಕಗಳೊಂದಿಗೆ 9 ನೇ ಸ್ಥಾನ, ಭೂಮಿಕಾ 588 ಅಂಕಗಳೊಂದಿಗೆ 1೦ ನೇ ಸ್ಥಾನಗಳನ್ನು ಪಡೆಯುದರ ಮೂಲಕ ಅತ್ಯುತ್ಕೃಷ್ಟ ಸಾಧನೆ ಮಾಡಿ ಸಂಸ್ಥೆಯ ಪ್ರತಿಷ್ಟೆಗೆ ಇನ್ನೂ ಮೆರುಗು ನೀಡಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 89 ವಿದ್ಯಾರ್ಥಿಗಳೂ ತೇರ್ಗಡೆಗೊಂಡು ಶೇಕಡ 1೦೦ ಫಲಿತಾಂಶ ಬಂದಿದೆ. 62 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ 27 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ.
ರಾಜ್ಯಮಟ್ಟದಲ್ಲಿ ವಿಶಿಷ್ಟ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಎ೦ .ಎ೦ ಹೆಗ್ಡೆ ಎಜುಕೇಶನಲ್ ಹಾಗೂ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾಗಿರುವ ಶ್ರೀ ಎಂ ಮಹೇಶ್ ಹೆಗ್ಡೆಯವರು ಹಾಗೂ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷರಾಗಿರುವ ಡಾ ರಮೇಶ್ ಶೆಟ್ಟಿಯವರು, ಕಾರ್ಯದರ್ಶಿ ಶ್ರೀ ಪ್ರತಾಪ್‌ಚಂದ್ರ ಶೆಟ್ಟಿಯವರು, ಖಜಾಂಚಿ ಶ್ರೀ ಭರತ್ ಶೆಟ್ಟಿಯವರು, ಹಾಗೂ ಉಪನ್ಯಾಸಕರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿನ ಬಿ.ಸಿ.ಎ ವಿಭಾಗದ ವತಿಯಿಂದ ಎಲೆವೆಂಶಿಯಾ 2ಕೆ24 ಫೆಸ್ಟ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.ರೋಬೊಸಾಫ್ಟ್…
ಉಡುಪಿ:ಜಿಲ್ಲೆಯ ಹೆಬ್ರಿ ತಾಲೂಕಿನ ಹೆಬ್ರಿ ಕಬ್ವಿನಾಲೆ ಸೀತಂಬೈಲುವಿನಲ್ಲಿ ಸೋಮವಾರ ರಾತ್ರಿ ಎ ಎನ್ ಎಫ್ ಹಾಗೂ ನಕ್ಸಲರ ನಡುವೆ ನಡೆದ…
ಕುಂದಾಪುರ:ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕುಂದಾಪುರ,ಕರ್ನಾಟಕ ಪ್ರೌಢ ಶಾಲಾ ಸಹಶಿಕ್ಷಕರ ಸಂಘ ಕುಂದಾಪುರ ತಾಲೂಕು ಘಟಕ…
ಮುಳ್ಳಿಕಟ್ಟೆ:ಕುಂದಾಪುರ ದಿಂದ ಅರಾಟೆಗೆ ಸಾಗುತ್ತಿದ್ದ ಆಟೋ ರಿಕ್ಷಾಕ್ಕೆ ಮುಳ್ಳಿಕಟ್ಟೆ ಸರ್ಕಲ್ ನಲ್ಲಿ ತ್ರಾಸಿ ಕಡೆಯಿಂದ ಕುಂದಾಪುರ ಕಡೆಗೆ ಸಾಗುತ್ತಿದ್ದ ಕಾರು…
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಮತ್ತು ಕುಂದಾಪುರ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ರಕ್ತದಾನ ಶಿಬಿರ ಕಾರ್ಯಕ್ರಮ…
ಜನತಾ ಆವಿಷ್ಕಾರ ಕಾರ್ಯಕ್ರಮದಲ್ಲಿ ತುಂಬಿದ ವಿದ್ಯಾರ್ಥಿ ಸಮೂಹ ಜನತಾ ಪದವಿ ಪೂರ್ವ ಕಾಲೇಜು ಹೆಮ್ಮಾಡಿ ಹೆಮ್ಮಾಡಿ:ಜಗತ್ತು ಇಂದು ವ್ಯಾವಹಾರಿಕವಾಗಿ ಮುನ್ನಡೆಯುತ್ತಿದ್ದು.ವಿದ್ಯಾರ್ಥಿಗಳು…