ಕುಂದಾಪುರ:ವಸಂತ ಶಿಬಿರದ ಉದ್ಘಾಟನಾ ಕಾರ್ಯಕ್ರಮ ಏಪ್ರಿಲ್ 11 ರ ಗುರುವಾರದಂದು ಮಧ್ಯಾಹ್ನ 2.30ಕ್ಕೆ ಬೈಂದೂರು ತಾಲೂಕಿನ ನಾವುಂದ ಬಡಾಕೆರೆ ಧಾರ್ಮಿಕ ಮಂದಿರದಲ್ಲಿ ನಡೆಯಲಿದೆ.
ಹಾಲಾಡಿ ಪಂಚಾಂಗಕರ್ತರು ವಿದ್ವಾನ್ ವಾಸುದೇವ ಜೋಯಿಸರು ತಟ್ಟುವಟ್ಟು,ನಾಗಯಕ್ಷೀ ಪಾತ್ರಿಗಳು ಮತ್ತು ಆಡಳಿತ ಧರ್ಮದರ್ಶಿಗಳು ಶ್ರೀರಾಜರಾಜೇಶ್ವರಿ ದೇವಸ್ಥಾನ ಪಡುಕೋಣೆ ರಾಜೇಶ್ ಹೆಬ್ಬಾರ್,ಮಾಜಿ ಧರ್ಮದರ್ಶಿಗಳು ಶ್ರೀಕ್ಷೇತ್ರ ಕೊಲ್ಲೂರು ರಾಜೇಶ್ ಕಾರಂತ್ ಉಪ್ಪಿನಕುದ್ರು,ನಿವೃತ್ತ ಮಹಾಪ್ರಬಂಧಕರು ಕರ್ನಾಟಕ ಬ್ಯಾಂಕ್ ಯರ್ಲಪಾಡಿ ನಾಗರಾಜ ರಾವ್ ಬಾಯರಿ,ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯ ಕಳಿ ಆಲೂರು ಡಾ.ರಾಜೇಶ್ ಬಾಯರಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಸನ್ಮಾನ ಕಾರ್ಯಕ್ರಮ,ಪ್ರತಿಭಾ ಪುರಸ್ಕಾರ ವಿತರಣೆ:-ವೇದ.ಮೂರ್ತಿ ಸೀತಾರಾಮ ಅಡಿಗ ಬೈಂದೂರು,ವೇದ ಮೂರ್ತಿ ನಾಗೇಶ್ ಭಟ್ಟ್ ದೇವಲ್ಕುಂದ,ವಿಶ್ರಾಂತ ಅಧ್ಯಾಪಕರು ಮದವ ಮಂಜರು ಅರೆಹೊಳೆ ಅವರನ್ನು ವಸಂತ ಶಿಬಿರದಲ್ಲಿ ಸನ್ಮಾನಿಸಲಾಗುತ್ತದೆ.ವೇದ ಮೂರ್ತಿ ನಾಗೇಂದ್ರ ಹೆಬ್ಬಾರ್ ಬವಲಾಡಿ ರಂಗೋಲಿ ಚಿತ್ರಕಾರರು,ಪ್ರಾಣಿ ಪಕ್ಷಿಕಗಳ ಸಂರಕ್ಷಕರು ಉರಗ ತಜ್ಞರಾದ ಸುಧೀಂದ್ರ ಐತಾಳ್,ಕವಿಗಳಾದ ಮಂಜುನಾಥ ಮರವಂತೆ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ ಎಂದು ಪ್ರಾಂತೀಯ ಧರ್ಮಾಧಿಕಾರಿಗಳು ಶ್ರೀಶಾರದ ಪೀಠಂ ಶೃಂಗೇರಿ ಹಾಗೂ ನಾಗ ಪಾತ್ರಿಗಳು ವೇದ ಮೂರ್ತಿ ಲೋಕೇಶ್ ಅಡಿಗ ತಿಳಿಸಿದ್ದಾರೆ.
ಕುಂದಾಪುರ:ಮಹಿಳಾ ಮೀನುಗಾರರ ವಿವಿಧೋದ್ದೇಶ ಸಹಕಾರಿ ಸಂಘ ಮರವಂತೆ,ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು,ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಉಡುಪಿ ಹಾಗೂ…
ಕುಂದಾಪುರ:ನೃತ್ಯ ಬಿಂಬ ಸಾಂಸ್ಕೃತಿಕ ಪ್ರತಿಷ್ಠಾನ ಬೆಂಗಳೂರು ಮತ್ತು ಕಲೆಗಳ ಉತ್ಸವ ಬೆಂಗಳೂರು ಅವರ ಜಂಟಿ ಆಶ್ರಯದಲ್ಲಿ ಉಡುಪಿ ಜಿಲ್ಲೆಯ ಪ್ರಸಿದ್ಧಕೊಲ್ಲೂರು…
ಕುಂದಾಪುರ:ಜೂನ್.21 ರಂದು ಸ್ಕೂಟರ್ನಲ್ಲಿ ಅಕ್ರಮವಾಗಿ ಗೋಮಾಂಸವನ್ನು ಸಾಗಾಟ ಮಾಡುತ್ತಿದ್ದ ಗಂಗೊಳ್ಳಿ ಮೀನು ಮಾರ್ಕೆಟ್ ಬಳಿ ನಿವಾಸಿ ಅಬ್ದುಲ್ ರಹೀಮ್ (35)…
ಬೈಂದೂರು:ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ವಾದ ಜಿಲ್ಲಾ ಸಮಿತಿ ವತಿಯಿಂದ ಬೈಂದೂರು ತಾಲೂಕು ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಭೀಮ…
ಮುಳ್ಳಿಕಟ್ಟೆ:ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ನಿವಾಸಿ ಆಯುರ್ವೇದ ವೈದ್ಯ ಡಾ.ಶ್ರೀನಿವಾಸ ಪೈ (62) ಹೃದಯಘಾತದಿಂದ ಸೋಮವಾರ ನಿಧನರಾದರು.ಅವರಿಗೆ ಪತ್ನಿ,ಮಗಳು,ತಂದೆ,ಇಬ್ಬರು…
ಕುಂದಾಪುರ:ದೂರದರ್ಶನ ಚಂದನ ಟಿವಿಯಲ್ಲಿ ಜೂನ್.16 ರ ಬೆಳಿಗ್ಗೆ 8 ಕ್ಕೆ ಯೋಗಾಚಾರ್ಯ ಸಂತೋಷ್ ಕುಮಾರ್ ಅವರಿಂದ ವ್ಯಾಯಾಮ ಮತ್ತು ಯೋಗಾಸನ…