ಕುಂದಾಪುರ

ರಾಷ್ಟ್ರ ಭಕ್ತರು ಮತ್ತು ಹಣವಂತರ ನಡುವೆ ನಡೆಯುವ ಚುನಾವಣೆ, ಬೈಂದೂರುನಲ್ಲಿ ಈಶ್ವರಪ್ಪ ಶಕ್ತಿ ಪ್ರದರ್ಶನ

Share

ಕುಂದಾಪುರ:ಕುಟುಂಬ ರಾಜಕಾರಣವನ್ನು ಹೊಗಲಾಡಿಸುವ ಉದ್ದೇಶದಿಂದ ಹಾಗೂ ಪಕ್ಷದ ಆಂತರಿಕ ಸಮಸ್ಯೆಗಳನ್ನು ಶುದ್ಧಿಕರಣ ಮಾಡುವ ದೃಷ್ಟಿಯಿಂದ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೆ.ಎಸ್ ಈಶ್ವರಪ್ಪ ಹೇಳಿದರು.
ಬೈಂದೂರು ತಾಲೂಕಿನ ಉಪ್ಪುಂದ ಪರಿಚಯ ಹೋಟೆಲ್‍ನಲ್ಲಿ ಭಾನುವಾರ ನಡೆದ ಬೈಂದೂರು ತಾಲೂಕು ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.
ಇದು ರಾಷ್ಟ್ರಭಕ್ತರು ಮತ್ತು ಹಣವಂತರ ನಡುವೆ ನಡೆಯುವ ಚುನಾವಣೆ ಇದಾಗಿದೆ.ಬೈಂದೂರು ಹಿಂದುತ್ವ ನೆಲೆಯನ್ನು ಹೊಂದಿರುವ ಕ್ಷೇತ್ರವಾಗಿದೆ, ಪ್ರತಿಯೊಂದು ಬೂತ್‍ನಲ್ಲಿ ಹಿಂದೂ ಕಾರ್ಯಕರ್ತರಿದ್ದಾರೆ.ಕಾರ್ಯಕರ್ತರು ಶ್ರಮಿಸಿದರೆ ನಮ್ಮ ಗೆಲುವ ನಿಶ್ಚಿತವಾಗಲಿದೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದರು.ರಾಘವೇಂದ್ರ ಅವರಿಂದ ಹಿಂದು ಕಾರ್ಯಕರ್ತರಿಗೆ ಅನ್ಯಾಯವಾಗಿದೆ ಇವೊಂದು ಚುನಾವಣೆ ನೆರವಾಗಿ ರಾಷ್ಟ್ರ ಭಕ್ತರು ಕುಟುಂಬ ರಾಜಕಾರಣವನ್ನು ಮಾಡುವವರ ವಿರುದ್ಧವಾಗಿದೆ ಎಂದರು.ಮೋದಿಜಿ ಮತ್ತು ಅಮಿತ್ ಶಾ ಅವರ ಗುರಿ ಕೂಡ ಕುಟುಂಬ ರಾಜಕಾರಣವನ್ನು ಹೊಗಲಾಡಿಸುವುದು ಆಗಿದೆ ಅವರ ಆಶೀರ್ವಾದ ನನ್ನ ಮೇಲೆ ಇದೆ ಎಂದು ಹೇಳಿದರು.
ಹಿಂದುತ್ವಕ್ಕೆ ಯಾರಾದರೂ ಅಪಮಾನ ಮಾಡಿದರೆ ಎಂದಿಗೂ ನಾನು ಸಹಿಸುವುದಿಲ್ಲ,ಹಿಂದು ಸಂಘಟನೆಗಳು ನ್ಯಾಯದ ಪರವಾಗಿ ಕೆಲಸವನ್ನು ಮಾಡುತ್ತಿದ್ದಾರೆ ಹಿಂದು ಸಂಘಟನೆಯ ಕಾರ್ಯಕರ್ತರಿಗೆ ಅನ್ಯಾಯವಾದರೆ ಎಂದಿಗೂ ಸಹಿಸುವ ಪ್ರಶ್ನೆ ಎಲ್ಲಾ ಕಾರ್ಯಕರ್ತರ ಕಾವಲಿಗೆ ಸದಾ ನಾನು ಇರಲಿದ್ದೇನೆ ಎಂದು ಹಿಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.
ಬಿಜೆಪಿ ಪಕ್ಷವನ್ನು ಕುಟುಂಬ ರಾಜಕಾರಣದಿಂದ ರಕ್ಷಿಸಲು ಹಾಗೂ ಪಕ್ಷವನ್ನು ಸಂಪೂರ್ಣವಾಗಿ ಶುದ್ಧಿಕರಣ ಮಾಡಲು ನನಗೆ ಮತವನ್ನು ನೀಡಬೇಕೆಂದು ಕೇಳಿಕೊಂಡರು.ತಾನು ಎಂದಿಗೂ ಬಿಜೆಪಿ ಪಕ್ಷವನ್ನು ತೊರೆಯುವುದಿಲ್ಲ ಯಡಿಯೂರಪ್ಪ ಅವರಂತೆ ನಾನು ಮಾತೃ ಪಕ್ಷಕ್ಕೆ ದ್ರೊಹವನ್ನು ಬಗೆಯಲಾರೆ ಎಂದು ಹೇಳಿದರು.
ಕಳೆದ 40 ವರ್ಷಗಳಿಂದ ಭಾರತೀಯ ಜನತಾ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ತೊಡಗಿಸಿಕೊಂಡಿದ್ದೇನೆ ಪಕ್ಷ ನೀಡಿದ ಎಲ್ಲಾ ಜವಾಬ್ದಾರಿಗಳನ್ನು ಅತ್ಯಂತ ಪ್ರಾಮಾಣಿಕವಾಗಿ ನಿಭಾಯಿಸಿ ಕಳೆದ ಚುನಾವಣೆಯಲ್ಲಿ ಪಕ್ಷದ ಮುಖಂಡರ ಮಾತಿಗೆ ಚಕಾರವೆತ್ತದೆ ರಾಜಕೀಯ ನಿವೃತ್ತಿ ಘೋಷಿಸಿದೆ.ಈ ಲೋಕಸಭಾ ಚುನಾವಣೆಯಲ್ಲಿ ಪುತ್ರನಿಗೆ ಹಾವೇರಿಯಿಂದ ಟಿಕೆಟ್ ಕೇಳಿದ್ದೆ ಆದರೆ ಯಡಿಯೂರಪ್ಪ ಕೇವಲ ತನ್ನ ಕುಟುಂಬದ ಮಮತೆಯಿಂದ ಹಿಂದುಳಿದ ನಾಯಕ ಬೆಳೆಯಬಾರದೇನ್ನುವ ಉದ್ದೇಶದಿಂದ ಹೊಂದಾಣಿಕೆಯ ರಾಜಕೀಯ ಮಾಡಿಕೊಂಡಿದ್ದಾರೆ ಶೋಭಾ ಕರಂದ್ಲಾಜೆಗೆ ಚಿಕ್ಕಮಂಗಳೂರಿನ ಜನ ಗೋ ಬ್ಯಾಕ್ ಶೋಭಾ ಎಂದಾಗ ಬದಲಿ ಕ್ಷೇತ್ರ ಒದಗಿಸುವ ಇವರು ತಮ್ಮ ಮಕ್ಕಳ ಮಮತೆಯಲ್ಲಿ ನನಗೆ ಅನ್ಯಾಯ ಮಾಡಿದ್ದಾರೆ ನಾನು ಹಿಂದುತ್ವವನ್ನು ಉಸಿರಾಗಿಸಿಕೊಂಡ ರಾಜಕಾರಣಿ ಈ ಚುನಾವಣೆಯಲ್ಲಿ ಹಿಂದುತ್ವ ದೇಶ ಅಭಿವೃದ್ಧಿ ರಾಜಕಾರಣ ಹಾಗೂ ಕುಟುಂಬ ರಾಜಕಾರಣ ಕುರಿತು ಜನ ಸ್ಪಷ್ಟ ಫಲಿತಾಂಶ ನೀಡಲಿದ್ದಾರೆ.ಯಾವ ಒತ್ತಡಗಳಿಗೂ ಮಣಿಯಲಾರೆ.ಬ್ರಹ್ಮ ಬಂದು ಹೇಳಿದರು ಈ ಚುನಾವಣೆಯಿಂದ ಹಿಂದೆ ಸರಿಯಲಾರೆ ಎಂದು ಈಶ್ವರಪ್ಪ ಹೇಳಿದರು.
ರಾಷ್ಟ್ರ ಭಕ್ತ ಹೆಸರಿನಲ್ಲಿ ಮತಯಾಚನೆ:ಯಡಿಯೂರಪ್ಪ ವಿರುದ್ದ ಬಂಡಾಯ ಸಾರಿದ ಈಶ್ವರಪ್ಪ ಬಣಕ್ಕೆ ಬೈಂದೂರಿನಲ್ಲಿ ಜನಬೆಂಬಲ ದೊರೆಯದೇನ್ನುವ ಬಿಜೆಪಿಯವರ ಚಿಂತನೆಗೆ ಬಾನುವಾರದ ಸಮಾವೇಶ ಶಾಕ್ ಕೊಟ್ಟಿದೆ.ಕ್ಕಿಕ್ಕಿರಿದು ಸೇರಿದ ಕಾರ್ಯಕರ್ತರ ದಂಡು ಹಾಗೂ ಅಪಾರ ಜನಸ್ತೋಮ ಈಶ್ವರಪ್ಪ ಬಳಗದ ಹುಮ್ಮಸ್ಸು ಹೆಚ್ಚಿಸಿದೆ.ಬಿಜೆಪಿ ಹಾಗೂ ಸಂಘ ಪರಿವಾರದ ಬಹುತೇಕ ಕಾರ್ಯಕರ್ತರು ಈಶ್ವರಪ್ಪ ಸಮಾವೇಶದ ಜವಬ್ದಾರಿ ವಹಿಸಿಕೊಂಡಿದ್ದರು.ದೇಶಕ್ಕೆ ಮೋದಿ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಹಿಂದುತ್ವದ ನಾಯಕ ಈಶ್ವರಪ್ಪ ಎನ್ನುವ ಪರಿಕಲ್ಪನೆಯಲ್ಲಿ ಕಾರ್ಯಕರ್ತರ ಸಮಾವೇಶವನ್ನು ಆಯೋಜಿಸಲಾಗಿತ್ತು.ರಾಷ್ಟ್ರ ಭಕ್ತ ಎಂಬ ಹೆಸರಿನಲ್ಲಿ ಈಶ್ವರಪ್ಪನವರು ಮತವನ್ನು ಯಾಚಿಸಿದರು.
ವೇದಿಕೆಯಲ್ಲಿ ಕಾಂತೇಶ್ ಈಶ್ವರಪ್ಪ, ಸಂಘಟಕ ಶ್ರೀಧರ ಬಿಜೂರು, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯ ಗೋಪಾಲಕೃಷ್ಣ ನಾಡ, ತಾಲೂಕು ಪಂಚಾಯತ್ ಮಾಜಿ ಸದಸ್ಯ ನಾರಾಯಣ ಗುಜ್ಜಾಡಿ, ಗೋಪಾಲಗಾಣಿಗ ಬೈಂದೂರು, ಸುವರ್ಣ ಪೂಜಾರಿ ಬಿಜೂರು, ಹಿಂದೂ ಜಾಗರಣೆಯ ಅಧ್ಯಕ್ಷ ಯಶವಂತ ಗಂಗೊಳ್ಳಿ, ವಿನಯ್ ನಾಯರಿ ನಾವುಂದ , ಮಂಜುನಾಥ ರಾವ್ ಬೈಂದೂರು, ಗಣೇಶ್ ಬೈಂದೂರು ಇನ್ನಿತರರು ಉಪಸ್ಥಿತರಿದ್ದರು.
ಶ್ರೀಧರ್ ಬಿಜೂರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಗೋಪಾಲಕೃಷ್ಣ ನಾಡ ವಂದಿಸಿದರು.

Advertisement

Share
Team Kundapur Times

Recent Posts

ಎಸ್ಐ ನಾಸೀರ್ ಹುಸೇನ್ ಕುಸಿದು ಬಿದ್ದು ಮೃತ್ಯು

ಕುಂದಾಪುರ:ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಕರ್ನಾಟಕ ಪೊಲೀಸ್ ರನ್ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ…

2 days ago

ನಿರ್ದೇಶಕರಾಗಿ ಸುರೇಂದ್ರ ಗುಡ್ಡೆಹೋಟೆಲ್ ಆಯ್ಕೆ

ಕುಂದಾಪುರ:ರಾಜ್ಯ ಸರಕಾರಿ ಶಿಕ್ಷಕರ ನೌಕರರ ಹಾಗೂ ಇಲಾಖೆಯಲ್ಲಿನ ಇತರರ ಗೃಹ ನಿರ್ಮಾಣ ಸಹಕಾರ ಸಂಘ (ನಿ) ಬೆಂಗಳೂರು ಅದರ ರಾಜ್ಯ…

2 days ago

ಧಾರ್ಮಿಕ ಮುಖಂಡ ಅಪ್ಪಣ್ಣ ಹೆಗ್ಡೆ ವಿಧಿವಶ

ಕುಂದಾಪುರ:ಮಾಜಿ ಎಂಎಲ್ಎ ಧಾರ್ಮಿಕ ಮುಖಂಡ ಅಜಾತಶತ್ರು ಅಪ್ಪಣ್ಣ ಹೆಗ್ಡೆ ಶನಿವಾರ ವಿಧಿವಶರಾಗಿದ್ದಾರೆ.ನೂರಕ್ಕೂ ಅಧಿಕ ನಾಗಮಂಡಲದ ನೇತೃತ್ವವನ್ನು ವಹಿಸಿಕೊಡಿದ್ದ ಅವರು, ಹಲವು…

3 weeks ago

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕಾಂಗ್ರೆಸ್ ಪಕ್ಷದ ಮುಖಂಡ ರಾಜು ದೇವಾಡಿಗ ತ್ರಾಸಿ ನಿಧನ

ಕುಂದಾಪುರ:ಕಾಂಗ್ರೆಸ್ ಪಕ್ಷದ ಮುಖಂಡರಾದ,ಪ್ರಬಲ ರಾಜಕಾರಣಿ,ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ ತ್ರಾಸಿ ಸೋಮವಾರ ನಿಧನರಾದರು.ಅವರು ಪತ್ನಿ ಮಕ್ಕಳು, ಬಂದು…

4 weeks ago

ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆ:ಸಹೋದರರು ಸಾಧನೆ

ಕುಂದಾಪುರ:ಪುದುಚೇರಿಯಲ್ಲಿ ನಡೆದ 21 ನೇ ರಾಷ್ಟ್ರ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿಥ್ಮೆಟಿಕ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿದ ಹಟ್ಟಿಯಂಗಡಿ ಸಿದ್ಧಿ ವಿನಾಯಕ…

1 month ago

ಸಾಧಕ ವಿದ್ಯಾರ್ಥಿ ವೈಷ್ಣವಿಗೆ ಗೌರವದ ಸನ್ಮಾನ

ಕುಂದಾಪುರ:2025 ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ತಾಲೂಕು ಮಟ್ಟದಲ್ಲಿ ಅತಿ ಹೆಚ್ಚು ಅಂಕ ಹಾಗೂ ರಾಜ್ಯ ಮಟ್ಟದಲ್ಲಿ 7ನೇ ರ್ಯಾಂಕ್…

1 month ago