ಕುಂದಾಪುರ:ಹೊಳ್ಮಗೆ ಶ್ರೀ ಹೋರ್ ಬೊಬ್ಬರ್ಯ ದೈವಸ್ಥಾನದ ವಾರ್ಷಿಕ ಗೆಂಡ ಸೇವೆ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಗುರುವಾರ ವಿಜೃಂಭಣೆಯಿಂದ ನಡೆಯಿತು.
ಶ್ರೀ ಹೋರ್ ಬೊಬ್ಬರ್ಯ ದೈವಸ್ಥಾನದ ವಾರ್ಷಿಕ ಹಬ್ಬದ ಅಂಗವಾಗಿ ಶ್ರೀ ದೇವರಿಗೆ ಮಹಾ ಮಂಗಳಾರತಿ ಸೇವೆ,ಹಣ್ಣು ಕಾಯಿ ಸೇವೆ,ಗೆಂಡ ಸೇವೆ,ಯಕ್ಷಗಾನ ಸೇವೆ,ದೈವ ದರ್ಶನ ಸೇವೆ,ಪಾಣರಾಟ ಸೇವೆ,ತುಲಾಭಾರ ಸೇವೆ,ವಿಶೇಷ ಪೂಜೆ ಜರುಗಿತು.
ವಾರ್ಷಿಕ ಹಬ್ಬದ ಪ್ರಯುಕ್ತ ದೈವಸ್ಥಾನವನ್ನು ಪುಷ್ಪಾಲಂಕಾರ ಹಾಗೂ ದೀಪಾಲಂಕಾರದಿಂದ ಶೃಂಗಾರಿಸಲಾಗಿತ್ತು.
ಶ್ರೀಹೋರ್ ಬೊಬ್ಬರ್ಯ ದೈವಸ್ಥಾನ,ಶ್ರೀ ನೆತ್ರ ಹಾೈಗುಳಿ ಹಾಗೂ ಬಂಟರ ಗರಡಿ ದೈವಸ್ಥಾನದ ಮೂರು ದೈವಗಳು ಜೊತೆಯಾಗಿ ಕೊಡಿ ನೀರಿಗೆ ಹೋಗುವುದು ವಿಶೇಷವಾದ ಆಚರಣೆ ಆಗಿದೆ.ಚಂಡೆ,ವಾದ್ಯ ಘೋಷದೊಂದಿಗೆ ದೈವವನ್ನು ಮೆರವಣಿಗೆ ಮೂಲಕ ಕೊಡಿ ನೀರಿಗೆ ಕರೆದುಕೊಂಡು ಹೋಗಲಾಗುತ್ತದೆ.ಇದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಂತಹ ಆಚರಣೆ ಆಗಿದೆ.
ಶ್ರೀ ಹೋರ್ ಬೊಬ್ಬರ್ಯ ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರಾದ ಸುಭಾಷ್ ಶೆಟ್ಟಿ ಹೊಳ್ಮಗೆ ಮಾತನಾಡಿ,ಹೋರ್ ಬೊಬ್ಬರ್ಯ ದೈವಸ್ಥಾನ ಎನ್ನುವಂತಹದ್ದು ಈ ಭಾಗದಲ್ಲಿ ದೊಡ್ಡ ರೀತಿಯ ಕುಟುಂಬ ವರ್ಗವದ ಭಕ್ತ ಸಮೂಹವನ್ನು ಹೊಂದಿದಂತಹ ದೈವಸ್ಥಾನವಾಗಿದೆ.ಬಹಳ ವಿಶೇಷವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ದೈವಸ್ಥಾನದ ವಾರ್ಷಿಕ ಹಬ್ಬ ವಿಜೃಂಭಣೆಯಿಂದ ನಡೆದಿದೆ ಎಂದರು.ದೈವಸ್ಥಾನದ ಹಬ್ಬವೂ ಯಶಸ್ವಿಯಾಗಿ ನಡೆಯಲು ಗ್ರಾಮಸ್ಥರು ಹಾಗೂ ದೈವಸ್ಥಾನದ ಅರ್ಚಕರು ಮತ್ತು ಗ್ರಾಮಸ್ಥರ ಪಾತ್ರ ದೊಡ್ಡದಾಗಿದೆ ಎಂದರು.ಐದು ದಿನಗಳ ಕಾಲ ದೈವಸ್ಥಾನದ ಹಬ್ಬ ನಡೆಯುತ್ತದೆ.ನಾಲ್ಕು ದಿನಗಳ ಕಾಲ ವಿಶೇಷವಾದ ರೀತಿಯಲ್ಲಿ ಕೊಲ ಸೇವೆ ಜರುಗುತ್ತದೆ.ಭಕ್ತ ಸಮೂಹದ ಕೊಡುಗೆ ನಿರಂತರವಾಗಿ ಇರಲಿ ಎಂದು ಬೇಡಿಕೊಂಡರು.ಹೋರ್ ಬೊಬ್ಬಯ,ಬಂಟರಗಡಿ ಹಾಗೂ ನೆತ್ರ ಹಾೈಗುಳಿ ದೈವಸ್ಥಾನದ ಹಬ್ಬ ಒಂದೆ ದಿನ ನಡೆಯುವುದರಿಂದ ದೊಡ್ಡ ರೀತಿಯ ಭಕ್ತ ಸಮೂಹವನ್ನು ನೋಡಬಹುದಾಗಿದೆ ಎಂದರು.
ಶ್ರೀ ಹೋರ್ ಬೊಬ್ಬರ್ಯ ದೈವಸ್ಥಾನದ ಪಾತ್ರಿಗಳಾದ ಗಣೇಶ ಪೂಜಾರಿ ಅವರು ಮಾತನಾಡಿ,ಮೂರು ಜಿಲ್ಲೆಗಳಲ್ಲಿ ದೊಡ್ಡ ರೀತಿ ಭಕ್ತ ಸಮೂಹವನ್ನು ಹೊಂದಿರುವ ದೈವಸ್ಥಾನ ನಮ್ಮದು ಆಗಿದೆ.ದೈವಸ್ಥಾನದಲ್ಲಿ ವಾರ್ಷಿಕವಾಗಿ ನಡೆಯುವ ಜಾತ್ರೆಗೆ ಮೂಲೆ ಮೂಲೆಗಳಿಂದ ಭಕ್ತ ಸಮೂಹ ಹರಿದು ಬರುತ್ತದೆ.ಶ್ರೀ ಬೊಬ್ಬರ್ಯ ದೇವರ ಕಾರಣಿಕ ಶಕ್ತಿ ಮತ್ತು ದೇವರ ಮೇಲಿರುವ ನಂಬಿಕೆಯಿಂದ ವರ್ಷದಿಂದ ವರ್ಷಕ್ಕೆ ಭಕ್ತ ಸಮೂಹದ ಸಂಖ್ಯೆ ಅಧಿಕವಾಗುತ್ತಿದೆ ಎಂದರು.ಪಾಣರಾಟ ಸೇವೆ,ಕೊಡಿ ನೀರಿಗೆ ಹೋಗುವುದು,ತುಲಾಭಾರ ಸೇವೆ ಇಲ್ಲಿನ ವಿಶೇಷ ಸೇವೆ ಆಗಿದೆ ಎಂದು ದೈವಸ್ಥಾನದಲ್ಲಿ ಆಚರಣೆ ಗೊಳ್ಳುವ ಪದ್ಧತಿ ಬಗ್ಗೆ ವಿವರಿಸಿದರು.
ಈ ಸಂದರ್ಭದಲ್ಲಿ ಹೋರ್ ಬೊಬ್ಬರ್ಯ ದೈವಸ್ಥಾನದ ಗೌರವಾಧ್ಯಕ್ಷರಾದ ರಮೇಶ್ ಪೂಜಾರಿ,ಉಪಾಧ್ಯಕ್ಷ ಮಹಾಬಲ ಮೆಂಡನ್,ಕೋಶಾಧಿಕಾರಿ ಅರುಣ ಹೊಳ್ಮಗೆ,ಕಾರ್ಯದರ್ಶಿ ಬಾಬು ಪೂಜಾರಿ ಹಕ್ಲಾಡಿ,ಆಡಳಿತ ಮಂಡಳಿ ಸರ್ವಸದಸ್ಯರು,ಅರ್ಚಕವೃಂದವರು,ಗ್ರಾಮಸ್ಥರು,ಭಕ್ತಾದಿಗಳು ಉಪಸ್ಥಿತರಿದ್ದರು.
ವರದಿ:ಜಗದೀಶ ದೇವಾಡಿಗ
ಸುದ್ದಿಗಳನ್ನು ನಮ್ಮ ಜಾಲತಾಣದಲ್ಲಿ ಪ್ರಕಟಿಸಲು ಸಂಪರ್ಕಿಸಿ-:9916284048
ಕುಂದಾಪುರ:ದೇಶದ ಭದ್ರತೆ ಹಿತದೃಷ್ಠಿಯಿಂದ ನೌಕಪಡೆ,ಕಸ್ಟಮ್ಸ್ ಇಲಾಖೆ,ಕರಾವಳಿ ಕಾವಲು ಲೀಸ್ ಪಡೆ ಸೇರಿದಂತೆ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಬುಧವಾರದಿಂದ 2 ದಿನಗಳ…
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿನ ಬಿ.ಸಿ.ಎ ವಿಭಾಗದ ವತಿಯಿಂದ ಎಲೆವೆಂಶಿಯಾ 2ಕೆ24 ಫೆಸ್ಟ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.ರೋಬೊಸಾಫ್ಟ್…
ಉಡುಪಿ:ಜಿಲ್ಲೆಯ ಹೆಬ್ರಿ ತಾಲೂಕಿನ ಹೆಬ್ರಿ ಕಬ್ವಿನಾಲೆ ಸೀತಂಬೈಲುವಿನಲ್ಲಿ ಸೋಮವಾರ ರಾತ್ರಿ ಎ ಎನ್ ಎಫ್ ಹಾಗೂ ನಕ್ಸಲರ ನಡುವೆ ನಡೆದ…
ಕುಂದಾಪುರ:ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕುಂದಾಪುರ,ಕರ್ನಾಟಕ ಪ್ರೌಢ ಶಾಲಾ ಸಹಶಿಕ್ಷಕರ ಸಂಘ ಕುಂದಾಪುರ ತಾಲೂಕು ಘಟಕ…
ಮುಳ್ಳಿಕಟ್ಟೆ:ಕುಂದಾಪುರ ದಿಂದ ಅರಾಟೆಗೆ ಸಾಗುತ್ತಿದ್ದ ಆಟೋ ರಿಕ್ಷಾಕ್ಕೆ ಮುಳ್ಳಿಕಟ್ಟೆ ಸರ್ಕಲ್ ನಲ್ಲಿ ತ್ರಾಸಿ ಕಡೆಯಿಂದ ಕುಂದಾಪುರ ಕಡೆಗೆ ಸಾಗುತ್ತಿದ್ದ ಕಾರು…
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಮತ್ತು ಕುಂದಾಪುರ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ರಕ್ತದಾನ ಶಿಬಿರ ಕಾರ್ಯಕ್ರಮ…