ಕುಂದಾಪುರ:ತಾಲೂಕಿನ ತ್ರಾಸಿ ಗ್ರಾಮದ ಮೊವಾಡಿ ಶ್ರೀಮಾಣಿಸಿದ್ಧಲಿಂಗೇಶ್ವರ ದೇವಸ್ಥಾನದ ಸುವರ್ಣಮಹೋತ್ಸವ,ಮಹಾಶಿವರಾತ್ರಿ ಉತ್ಸವ,ರಾಜ್ಯ ಮಟ್ಟದ ಕುಣಿತ ಭಜನಾ ಸ್ಪರ್ಧೆ ಕಾರ್ಯಕ್ರಮ,ಅನ್ನಸಂತರ್ಪಣೆ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಗುರುವಾರ ಅದ್ದೂರಿಯಾಗಿ ನಡೆಯಿತು.ಭಾರಂಗಿ ಕೂಡ್ಲಿಮಠ ಮಹಾ ಸಂಸ್ಥಾನ ತಾಳಗುಪ್ಪ ಸಾಗರ ಪರಮ ಪೂಜ್ಯ ಶ್ರೀ ಸಿದ್ಧವೀರ ಮಹಾಸ್ವಾಮೀಜಿ ಅವರನ್ನು ಭವ್ಯ ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಯಿತು.
ಪರಮ ಪೂಜ್ಯ ಶ್ರೀ ಸಿದ್ಧವೀರ ಮಹಾಸ್ವಾಮೀಜಿ ಅವರು ರಾಜ್ಯ ಮಟ್ಟದ ಕುಣಿತ ಭಜನಾ ಸ್ಪರ್ಧೆಯನ್ನು ಉದ್ಘಾಟಿಸಿ,ಆಶೀರ್ವಚನ ನೀಡಿ ಮಾತನಾಡಿ,ದುಡಿಮೆಯಿಂದ ಬೇಕಾದಷ್ಟು ಹಣವನ್ನು ಸಂಪಾದಿಸಬಹುದು ಆದರೆ ಜೀವನದಲ್ಲಿ ನೆಮ್ಮದಿಯನ್ನು ಸಂಪಾದನೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ.ಭಕ್ತಿ ಮಾರ್ಗದಲ್ಲಿ ಸಾಗಿದರೆ ಜೀವನದಲ್ಲಿ ನೆಮ್ಮದಿ ಬದುಕನ್ನು ಕಾಣುವುದರ ಜತೆಗೆ ಸುಸಂಸ್ಕøತರಾಗಿ ಬದುಕಲು ಸಾಧ್ಯವಿದೆ ಎಂದು ಹೇಳಿದರು.
ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿ,ಭಜನಾ ತಂಡವನ್ನು ಕಟ್ಟಿಕೊಂಡು ಕಳೆದ ಐವತ್ತು ವರ್ಷಗಳಿಂದ ಭಜನಾ ಕೈಂಕರ್ಯದಲ್ಲಿ ತೊಡಗಿಕೊಂಡಿರುವ ಮೊವಾಡಿ ಶ್ರೀಮಾಣಿಸಿದ್ಧಲಿಂಗೇಶ್ವರ ಭಜನಾ ತಂಡವು ಧಾರ್ಮಿಕ ಕ್ಷೇತ್ರಕ್ಕೆ ತನ್ನದೆ ರೀತಿಯಲ್ಲಿ ದೊಡ್ಡ ಕೊಡುಗೆಯನ್ನು ನೀಡಿದೆ ಎಂದು ಶ್ಲಾಘೀಸಿದರು.
ಅಧ್ಯಕ್ಷತೆ ವಹಿಸಿದ್ದ ಶ್ರೀಮಾಣಿಸಿದ್ಧಲಿಂಗೇಶ್ವರ ದೇವಸ್ಥಾನ ಮೊವಾಡಿ ಗೌರವಾಧ್ಯಕ್ಷ ಅನಂತ ಮೊವಾಡಿ ಮಾತನಾಡಿ,ಭಜನೆಗಿರುವ ಮಹತ್ವ ಮತ್ತು ಹಿಂದಿನ ಪರಂಪರೆಯನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ದೃಷ್ಟಿಯಿಂದ ಶಿವರಾತ್ರಿ ಜಾಗರಣೆ ಅಂಗವಾಗಿ ಭಜನಾ ಮಹೋತ್ಸವ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ.ಪ್ರತಿ ಮನೆಯಲ್ಲಿಯೂ ಭಜನೆ ಸಪ್ಪಳ ಮರುಕಳಿಸಬೇಕಿದೆ ಎಂದರು.
ತ್ರಾಸಿ ಪಂಚಾಯಿತಿ ಅಧ್ಯಕ್ಷ ಮಿಥುನ್ ದೇವಾಡಿಗ ಮತ್ತು ಉಪಾಧ್ಯಕ್ಷೆ ಹೇಮ,ಉದ್ಯಮಿ ಶಿವ ಆರ್ ಪೂಜಾರಿ ಆನಗೋಡು,ಕೆನರಾ ಬ್ಯಾಂಕ್ ನಿವೃತ್ತ ಹಿರಿಯ ವ್ಯವಸ್ಥಾಪಕ ಚಂದ್ರಶೇಖರ್,ಶ್ರೀಮಾಣಿ ಸಿದ್ಧಲಿಂಗೇಶ್ವರ ದೇವಸ್ಥಾನ ಮೊವಾಡಿ ಮೊಕ್ತೇಸರರಾದ ಸುಧಾಕರ ಮೊವಾಡಿ ಮತ್ತು ವಿಜಯ ಹಾಗೂ ಬಿ.ಕೆ ನಾರಾಯಣ,ಗೌರವ ಕಾರ್ಯದರ್ಶಿ ವೆಂಕಟ ಪೂಜಾರಿ,ಶೇಖರ್ ಗಾಣಿಗ,ರವಿರಾಜ್ ಶೆಟ್ಟಿ ಆನಗೋಡು,ಪಂಚಾಯಿತಿ ಸದಸ್ಯ ವಿಜಯ ಚುಟ್ಟಿತ್ತಾರು,ಜಿ.ಟಿ ಮಂಜುನಾಥ ಗಂಗೊಳ್ಳಿ,ರವಿಜ ಪೂಜಾರಿ ಕಳಿನಮನೆ,ದೇವಸ್ಥಾನದ ಅಧ್ಯಕ್ಷ ಗಣೇಶ,ಟಿ.ವಿ ಸುಬ್ಬಣ್ಣ,ತೀರ್ಪುಗಾರರು ಉಪಸ್ಥಿತರಿದ್ದರು.ಅನಾರೋಗ್ಯ ಪೀಡಿತರಿಗೆ ಧನಸಹಾಯ ವಿತರಿಸಲಾಯಿತು.ದಾನಿಗಳನ್ನು,ಹಿರಿಯರನ್ನು ಗೌರವಿಸಲಾಯಿತು.
ಸುಧಾಕರ ಮೊವಾಡಿ ಸ್ವಾಗತಿಸಿ,ಪ್ರಾಸ್ತಾವಿಕವಾಗಿ ಮಾತನಾಡಿದರು.ಗಣೇಶ ನಿರೂಪಿಸಿದರು.ಸಂತೋಷ ಎಂ.ಆರ್ ವಂದಿಸಿದರು.ನಾನಾ ಭಜನಾ ತಂಡಗಳಿಂದ ಕುಣಿತ ಭಜನಾ ಸ್ಪರ್ಧೆ ಜರುಗಿತು.
ನಮ್ಮ ಜಾಲತಾಣದಲ್ಲಿ ಸುದ್ದಿಗಳನ್ನು ಪ್ರಕಟಿಸಲು ಸಂಪರ್ಕಿಸಿ -9916284048
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಾಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರದಲ್ಲಿ ಹೊಸ ವರ್ಷ ಆಚರಣೆ ಅದ್ದೂರಿಯಾಗಿ ನಡೆಯಿತು.ಕಾಲೇಜಿನ ಸಂಸ್ಥಾಪಕರಾದ ಸುಬ್ರಹ್ಮಣ್ಯ ಅವರು ದೀಪ ಬೆಳಗಿಸುವುದರ…
ಕುಂದಾಪುರ:ರತ್ನಮ್ಮ ಗ್ರೂಪ್ಸ್ ಪುನೀತ್ ಶೆಟ್ಟಿ ಮಾಲೀಕತ್ವದ ಆದಿಶಕ್ತಿ ಎಂಟರ್‍ಪ್ರೈಸ್ ಹಾರ್ಡವೇರ್ ಬೈಂದೂರು ತಾಲೂಕಿನ ಯರುಕೋಣೆ ಮುಖ್ಯ ರಸ್ತೆಯಲ್ಲಿನ ಮೂಕಾಂಬಿಕಾ ಕಾಂಪ್ಲೆಕ್ಸ್…
ಕುಂದಾಪುರ:ಧಿಮಂತ ರಾಜಕಾರಣಿ ಹಾಗೂ ತಮ್ಮ ಸಾಮಾಜಿಕ ಕಾರ್ಯಗಳ ಮೂಲಕ ಮನೆ ಮಾತಾಗಿರುವ ದಿ ಆರ್.ಕೆ ಸಂಜೀವ ರಾವ್ ಖಂಬದಕೋಣೆ ಅವರ…
ಮಂಗಳೂರು:ಅರ್ಕುಳದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಟಿಪ್ಪರ್ ಅಡಿಗೆ ಸಿಲುಕಿ ಸಸಿಹಿತ್ಲು ಮೇಳದ ಕಲಾವಿದ ಪ್ರವಿತ್ ಆಚಾರ್ಯ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ…
ಕುಂದಾಪುರ:ತಾಲೂಕು ಅಂಪಾರು ಗ್ರಾಮದ ಬಲಾಡಿ ಕಲ್ ತೋಡ್ಮಿ ಮನೆಯ ಕುಟುಂಬದವರ ಮೂಲ ನಾಗಬನದಲ್ಲಿ ಚತುಃಪವಿತ್ರ ನಾಗಮಂಡಲೋತ್ಸವ ವಿಜೃಂಭಣೆಯಿಂದ ನಡೆಯಿತುಶ್ರೀ ದೇವರಿಗೆ…
ಕುಂದಾಪುರ:ಬೈಂದೂರು ತಾಲೂಕಿನ ಆಲೂರು ಗ್ರಾಮದ (ಹೇರೂರು) ಹುಂತನಗೋಳಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ಎಳ್ಳಮಾವಾಸ್ಯೆ ಜಾತ್ರಾ ಮಹೋತ್ಸವ…