ಕುಂದಾಪುರ:ದೇಶದ ಪ್ರತಿಯೊಬ್ಬರಿಗೂ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಅಕ್ಕಿ ವಿತರಿಸುವ ನಿಟ್ಟಿದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಹೊರತಂದಿರುವ ಭಾರತ್ ಅಕ್ಕಿ ವಿತರಣೆಗೆ ಬೈಂದೂರು ಶಾಸಕರಾದ ಗುರುರಾಜ ಗಂಟಿಹೊಳೆ ಉಪ್ಪುಂದ ಸಂತೆ ಮಾರುಕಟ್ಟೆಯಲ್ಲಿ ಬುಧವಾರ ಚಾಲನೆ ನೀಡಿದರು.ಹಸಿವು ಮುಕ್ತ ಭಾರತ ಪರಿಕಲ್ಪನೆ ಇಟ್ಟುಕೊಂಡು, ದೇಶದ ಎಲ್ಲರಿಗೂ ಕಡಿಮೆ ದರದಲ್ಲಿ ಗುಣಮಟ್ಟದ ಅಕ್ಕಿ ತಲುಪಿಸಲು ಕೇವಲ 29 ರೂಪಾಯಿಳಿಗೆ ಭಾರತ್ ಬ್ರ್ಯಾಂಡ್ ಅಕ್ಕಿಯನ್ನು ಭಾರತ್ ರೈಸ್ ಹೆಸರಿನಲ್ಲಿ ವಿತರಿಸಲಾಗುತ್ತಿದೆ.ಇದು ನಿಜವಾದ ಮೋದಿಜಿ ಅವರ ಗ್ಯಾರಂಟಿ ಯೋಜನೆಯಾಗಿದೆ. ಯಾರೂ ಕೂಡ ಕಡಿಮೆ ಬೆಲೆಗೆ ಖರೀದಿಸಬಹುದಾದ ಅಕ್ಕಿ ಬಿಡುಗಡೆಗೊಳಿಸಿರುವುದು ಜನಸಾಮಾನ್ಯರಿಗೆ ನೆರವಾಗಲಿದೆ ಎಂದು ಅಭಿಪ್ರಾಯ ಪಟ್ಟರು.
ಭಾರತ ಬ್ರಾಂಡ್ ಅಕ್ಕಿ ವಿತರಣೆಗೆ ಯಾವುದೇ ರೀತಿಯ ಏಜೆಂಟರು,ಮಧ್ಯವರ್ತಿಗಳ ಹಾವಳಿಯಿಲ್ಲ.ನೇರವಾಗಿ ಮಳಿಗೆಗಳಲ್ಲಿ ಅಕ್ಕಿ ಖರೀದಿಸಬಹುದಾಗಿದೆ ಮತ್ತು ಸ್ಥಳೀಯ ಪಂಚಾಯತ್ ವ್ಯಾಪ್ತಿಯಲ್ಲಿ ಅಕ್ಕಿ ವಿತರಣೆಗೆ ಸಿದ್ಧತೆ ನಡೆಸಲಾಗಿದೆ.ಯಾರೂ ಕೂಡ ಹಸಿವಿನಿಂದ ಬಳಲಬಾರದು ಎಂದು 29 ರೂಪಾಯಿಗಳಿಗೆ ಅಕ್ಕಿ ಒದಗಿಸುವ ಮೂಲಕ ಬೆಲೆ ಏರಿಕೆಯ ಪ್ರಭಾವ ಕೂಡಾ ಜನಸಾಮಾನ್ಯರಿಗೆ ತಟ್ಟದಿರುವಂತೆ ಮೋದಿ ಸರ್ಕಾರ ಕ್ರಮ ಕೈಗೊಂಡಿರುವುದು ಶ್ಲಾಘನೀಯ ಎಂದರು.
ಕುಂದಾಪುರ:ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಕರ್ನಾಟಕ ಪೊಲೀಸ್ ರನ್ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ…
ಕುಂದಾಪುರ:ರಾಜ್ಯ ಸರಕಾರಿ ಶಿಕ್ಷಕರ ನೌಕರರ ಹಾಗೂ ಇಲಾಖೆಯಲ್ಲಿನ ಇತರರ ಗೃಹ ನಿರ್ಮಾಣ ಸಹಕಾರ ಸಂಘ (ನಿ) ಬೆಂಗಳೂರು ಅದರ ರಾಜ್ಯ…
ಕುಂದಾಪುರ:ಮಾಜಿ ಎಂಎಲ್ಎ ಧಾರ್ಮಿಕ ಮುಖಂಡ ಅಜಾತಶತ್ರು ಅಪ್ಪಣ್ಣ ಹೆಗ್ಡೆ ಶನಿವಾರ ವಿಧಿವಶರಾಗಿದ್ದಾರೆ.ನೂರಕ್ಕೂ ಅಧಿಕ ನಾಗಮಂಡಲದ ನೇತೃತ್ವವನ್ನು ವಹಿಸಿಕೊಡಿದ್ದ ಅವರು, ಹಲವು…
ಕುಂದಾಪುರ:ಕಾಂಗ್ರೆಸ್ ಪಕ್ಷದ ಮುಖಂಡರಾದ,ಪ್ರಬಲ ರಾಜಕಾರಣಿ,ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ ತ್ರಾಸಿ ಸೋಮವಾರ ನಿಧನರಾದರು.ಅವರು ಪತ್ನಿ ಮಕ್ಕಳು, ಬಂದು…
ಕುಂದಾಪುರ:ಪುದುಚೇರಿಯಲ್ಲಿ ನಡೆದ 21 ನೇ ರಾಷ್ಟ್ರ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿಥ್ಮೆಟಿಕ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿದ ಹಟ್ಟಿಯಂಗಡಿ ಸಿದ್ಧಿ ವಿನಾಯಕ…
ಕುಂದಾಪುರ:2025 ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ತಾಲೂಕು ಮಟ್ಟದಲ್ಲಿ ಅತಿ ಹೆಚ್ಚು ಅಂಕ ಹಾಗೂ ರಾಜ್ಯ ಮಟ್ಟದಲ್ಲಿ 7ನೇ ರ್ಯಾಂಕ್…