ಕುಂದಾಪುರ

ತ್ರಾಸಿ:ಮಕ್ಕಳ ವಿಶೇಷ ಗ್ರಾಮಸಭೆ,ಮಕ್ಕಳ ಹಬ್ಬ ಕಾರ್ಯಕ್ರಮ

Share

ಕುಂದಾಪುರ:ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಗ್ರಾಮ ಪಂಚಾಯಿತಿ ಕಡೆಯಿಂದ ಎಲ್ಲಾ ರೀತಿಯ ಸಹಕಾರವನ್ನು  ನೀಡಲಾಗುವುದು ಎಂದು ತ್ರಾಸಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಿಥುನ್ ದೇವಾಡಿಗ ಹೇಳಿದರು.ಕರ್ನಾಟಕ ಸರಕಾರ,ಜಿಲ್ಲಾ ಪಂಚಾಯತ್ ಉಡುಪಿ,ತಾಲೂಕು ಪಂಚಾಯತ್ ಕುಂದಾಪುರ,ಗ್ರಾಮ ಪಂಚಾಯತ್ ತ್ರಾಸಿ ವತಿಯಿಂದ ತ್ರಾಸಿ ಬೀಚ್ ಗಾರ್ಡನ್‍ನಲ್ಲಿ ಶುಕ್ರವಾರ ನಡೆದ ಮಕ್ಕಳ ವಿಶೇಷ ಗ್ರಾಮಸಭೆ,ಮಕ್ಕಳ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮಕ್ಕಳ ವಿಶೇಷ ಗ್ರಾಮಸಭೆಯನ್ನು ನಡೆಸಲು ತ್ರಾಸಿ ಗ್ರಾಮ ಪಂಚಾಯತ್‍ನ್ನು ಆಯ್ಕೆ ಮಾಡಿರುವುದಕ್ಕೆ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗೆ ವಂದನೆಯನ್ನು ಸಲ್ಲಿಸಿದರು.

ತ್ರಾಸಿ ಪಂಚಾಯಿತಿ ಉಪಾಧ್ಯಕ್ಷೆ ಹೇಮಾ ಮತ್ತು ಸದಸ್ಯರಾದ ವಿಜಯ ಪೂಜಾರಿ,ಗೀತಾ ದೇವಾಡಿಗ,ನಾಗರತ್ನ ಶೆಟ್ಟಿಗಾರ್,ಶಿಕ್ಷಣ ಸಂಯೋಜಕ ಯೋಗೀಶ್,ಮಕ್ಕಳ ರಕ್ಷಣ ಘಟಕ ಮಹೇಶ್ ದೇವಾಡಿಗ,ಶಿಶು ಅಭಿವೃದ್ಧಿ ಇಲಾಖೆ ರೇಖಾ,ಗುಜ್ಜಾಡಿ ಪ್ರೌಢಶಾಲೆ ಶಿಕ್ಷಕಿ ಬಬಿತಾ ರಾಣಿ,ಮೊವಾಡಿ ಶಾಲೆ ಮುಖ್ಯೋಪಾಧ್ಯಾಯಿನಿ ಶರಾವತಿ,ನಮ್ಮ ಭೂಮಿ ಅನಿತಾ,ಮಕ್ಕಳ ಮಿತ್ರರು,ಸಹಾಸ್ ಸಂಸ್ಥೆ ಪ್ರತಿನಿಧಿಗಳು,ಸಂಜೀವಿನಿ ಸಂಘದ ಸದಸ್ಯರು,ಪಂಚಾಯಿತಿ ಸಿಬ್ಬಂದಿಗಳು,ಮಕ್ಕಳ ಪೆÇೀಷಕರು,ವಿದ್ಯಾರ್ಥಿಗಳು,ಶಿಕ್ಷಕರು,ಆರೋಗ್ಯ ಮತ್ತು ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.ಪಿಡಿಒ ಶೋಭಾ ಸ್ವಾಗತಿಸಿದರು.ನಮ್ಮ ಭೂಮಿ ಶ್ರೀನಿವಾಸ ಗಾಣಿಗ ಪ್ರಾಸ್ತಾವಿಕವಾಗಿ ಮಾತನಾಡಿದರು.ಶಿಕ್ಷಕಿ ಭಾಗಿರಥಿ ನಿರೂಪಿಸಿದರು.ಪಂಚಾಯಿತಿ ಲೆಕ್ಕ ಪರಿಶೋಧಕ ಶಿವಾನಂದ ಅನುಪಾಲನಾ ವರದಿ ಮಂಡಿಸಿದರು.

ಮಕ್ಕಳ ಗ್ರಾಮಸಭೆಯಲ್ಲಿ ಮಕ್ಕಳ ಸಮಸ್ಯೆ ಅನಾವರಣ:ಮೊವಾಡಿ ಶಾಲೆ ವಿದ್ಯಾರ್ಥಿನಿ ರಮ್ಯ ತ್ರಾಸಿ-ಮೊವಾಡಿ ಸಂಪರ್ಕಕ್ಕೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಬೇಡಿಕೆಯನ್ನು ಇಟ್ಟರು ಹಾಗೂ ಆರುಷ ಸಿಂಗಲ್ ಪೇರೆಂಟ್ ವಿಷಯವನ್ನು ಪ್ರಸ್ತಾಪಿಸಿ ಅನಾರೋಗ್ಯದಿಂದ ಪೀಡಿತರಾದ ತಮ್ಮ ತಾಯಿಗೆ ವಾಕರ್ ಮತ್ತು ಮಾಶಾಸನ ನೀಡುವಂತೆ ಕೇಳಿಕೊಂಡರು.ಅಮೃತ ದಾರಿ ದೀಪ ಕಲ್ಪಿಸುವಂತೆ ಮನವಿ ಮಾಡಿದರು.ಗುಜ್ಜಾಡಿ ಪ್ರೌಢಶಾಲೆ ವಿದ್ಯಾರ್ಥಿ ಸಮರ್ಥ ಶಾಲೆ ಸಂಪರ್ಕ ರಸ್ತೆಯನ್ನು ದುರಸ್ತಿಗೊಳಿಸುವಂತೆ,ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಆಗ್ರಹಸಿದರು.ತೇಜಸ್ ಶಾಲೆ ಕೊಠಡಿ ನವೀಕರಣ ಮತ್ತು ಶಾಲೆಗೆ ಸುಣ್ಣಬಣ್ಣ ಬಳಿಯಲು ಕ್ರಮ ಕೈಗೊಳ್ಳಬೇಕು ಎಂದರು.ಅಂಗನವಾಡಿ ಶಾಲೆ ವಿದ್ಯಾರ್ಥಿನಿ ಸಂಸ್ಕøತಿ ಮಾತನಾಡಿ,ಪೌಷ್ಠಿಕ ತೋಟ ರಚನೆ,ಆಟಿಕೆಗಳನ್ನು ಪಂಚಾಯತ್ ವತಿಯಿಂದ ನೀಡಬೇಕು ಎನ್ನುವ ಬೇಡಿಕೆಯನ್ನು ಸಭೆಯಲ್ಲಿ ಮಂಡಿಸುವುದರ ಮುಖೇನ ಪುಟಾಣಿ ಬಾಲಕಿ ಮಕ್ಕಳ ಗ್ರಾಮಸಭೆಯಲ್ಲಿ ಎಲ್ಲರ ಗಮನವನ್ನು ಸೆಳೆದಳು.ಮಕ್ಕಳ ಗ್ರಾಮ ಸಭೆ ಅಧ್ಯಕ್ಷತೆ ವಹಿಸಿದ್ದ ತ್ರಾಸಿ ಪಂಚಾಯಿತಿ ಅಧ್ಯಕ್ಷ ಮಿಥುನ್ ದೇವಾಡಿಗ ಮಾತನಾಡಿ,ಪಂಚಾಯತ್ ಮಟ್ಟದ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸಲಾಗುವುದು,ಗಂಭೀರ ಸಮಸ್ಯೆಗಳ ಪಟ್ಟಿಯನ್ನು ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದರು.

ಮಕ್ಕಳ ವಿಶೇಷ ಗ್ರಾಮ ಸಭೆ ಮತ್ತು ಮಕ್ಕಳ ಹಬ್ಬವನ್ನು ಆಚರಿಸಲು ರಾಜ್ಯದ 6222 ಗ್ರಾಮ ಪಂಚಾಯತ್‍ಗಳಲ್ಲಿ 100 ಗ್ರಾಮ ಪಂಚಾಯತ್‍ನ್ನು ಸರಕಾರ ಆಯ್ಕೆಮಾಡಿದೆ.

Advertisement

Share
Team Kundapur Times

Recent Posts

ತ್ರಾಸಿ-ಮರವಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ:ಮೂರು ಸಾವುಕುಂದಾಪುರ:ತ್ರಾಸಿ ಮರವಂತೆ ಬೀಚ್ ಮುಂಭಾಗ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬುಧವಾರ ಸಂಭವಿಸಿದ…

2 days ago

ಲಾರಿಗೆ ಕಾರು ಡಿಕ್ಕಿ:ನೆಲಮಂಗಲ ಮೂಲದ ಇಬ್ಬರು ಸಾವು

ಕುಂದಾಪುರ:ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೈಂದೂರು ತಾಲೂಕಿನ ನಾವುಂದ ಮಸ್ಕಿಯಲ್ಲಿ…

1 month ago

ಏಪ್ರಿಲ್ 12 ರಂದು ಅರಾಟೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಏಕಪವಿತ್ರ ನಾಗಮಂಡಲೋತ್ಸವ

ಕುಂದಾಪುರ:ತಾಲೂಕಿನ ಹೊಸಾಡು ಗ್ರಾಮದ ಅರಾಟೆ ಚಿತ್ತೇರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಏಪ್ರಿಲ್ 12 ರ ಭಾನುವಾರ ದಂದು ನಡೆಯಲಿರುವ ಶ್ರೀ…

1 month ago

ಎಸ್ಐ ನಾಸೀರ್ ಹುಸೇನ್ ಕುಸಿದು ಬಿದ್ದು ಮೃತ್ಯು

ಕುಂದಾಪುರ:ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಕರ್ನಾಟಕ ಪೊಲೀಸ್ ರನ್ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ…

2 months ago

ನಿರ್ದೇಶಕರಾಗಿ ಸುರೇಂದ್ರ ಗುಡ್ಡೆಹೋಟೆಲ್ ಆಯ್ಕೆ

ಕುಂದಾಪುರ:ರಾಜ್ಯ ಸರಕಾರಿ ಶಿಕ್ಷಕರ ನೌಕರರ ಹಾಗೂ ಇಲಾಖೆಯಲ್ಲಿನ ಇತರರ ಗೃಹ ನಿರ್ಮಾಣ ಸಹಕಾರ ಸಂಘ (ನಿ) ಬೆಂಗಳೂರು ಅದರ ರಾಜ್ಯ…

2 months ago

ಧಾರ್ಮಿಕ ಮುಖಂಡ ಅಪ್ಪಣ್ಣ ಹೆಗ್ಡೆ ವಿಧಿವಶ

ಕುಂದಾಪುರ:ಮಾಜಿ ಎಂಎಲ್ಎ ಧಾರ್ಮಿಕ ಮುಖಂಡ ಅಜಾತಶತ್ರು ಅಪ್ಪಣ್ಣ ಹೆಗ್ಡೆ ಶನಿವಾರ ವಿಧಿವಶರಾಗಿದ್ದಾರೆ.ನೂರಕ್ಕೂ ಅಧಿಕ ನಾಗಮಂಡಲದ ನೇತೃತ್ವವನ್ನು ವಹಿಸಿಕೊಡಿದ್ದ ಅವರು, ಹಲವು…

3 months ago