ಕುಂದಾಪುರ:ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಗ್ರಾಮ ಪಂಚಾಯಿತಿ ಕಡೆಯಿಂದ ಎಲ್ಲಾ ರೀತಿಯ ಸಹಕಾರವನ್ನು ನೀಡಲಾಗುವುದು ಎಂದು ತ್ರಾಸಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಿಥುನ್ ದೇವಾಡಿಗ ಹೇಳಿದರು.ಕರ್ನಾಟಕ ಸರಕಾರ,ಜಿಲ್ಲಾ ಪಂಚಾಯತ್ ಉಡುಪಿ,ತಾಲೂಕು ಪಂಚಾಯತ್ ಕುಂದಾಪುರ,ಗ್ರಾಮ ಪಂಚಾಯತ್ ತ್ರಾಸಿ ವತಿಯಿಂದ ತ್ರಾಸಿ ಬೀಚ್ ಗಾರ್ಡನ್‍ನಲ್ಲಿ ಶುಕ್ರವಾರ ನಡೆದ ಮಕ್ಕಳ ವಿಶೇಷ ಗ್ರಾಮಸಭೆ,ಮಕ್ಕಳ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮಕ್ಕಳ ವಿಶೇಷ ಗ್ರಾಮಸಭೆಯನ್ನು ನಡೆಸಲು ತ್ರಾಸಿ ಗ್ರಾಮ ಪಂಚಾಯತ್‍ನ್ನು ಆಯ್ಕೆ ಮಾಡಿರುವುದಕ್ಕೆ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗೆ ವಂದನೆಯನ್ನು ಸಲ್ಲಿಸಿದರು.
ತ್ರಾಸಿ ಪಂಚಾಯಿತಿ ಉಪಾಧ್ಯಕ್ಷೆ ಹೇಮಾ ಮತ್ತು ಸದಸ್ಯರಾದ ವಿಜಯ ಪೂಜಾರಿ,ಗೀತಾ ದೇವಾಡಿಗ,ನಾಗರತ್ನ ಶೆಟ್ಟಿಗಾರ್,ಶಿಕ್ಷಣ ಸಂಯೋಜಕ ಯೋಗೀಶ್,ಮಕ್ಕಳ ರಕ್ಷಣ ಘಟಕ ಮಹೇಶ್ ದೇವಾಡಿಗ,ಶಿಶು ಅಭಿವೃದ್ಧಿ ಇಲಾಖೆ ರೇಖಾ,ಗುಜ್ಜಾಡಿ ಪ್ರೌಢಶಾಲೆ ಶಿಕ್ಷಕಿ ಬಬಿತಾ ರಾಣಿ,ಮೊವಾಡಿ ಶಾಲೆ ಮುಖ್ಯೋಪಾಧ್ಯಾಯಿನಿ ಶರಾವತಿ,ನಮ್ಮ ಭೂಮಿ ಅನಿತಾ,ಮಕ್ಕಳ ಮಿತ್ರರು,ಸಹಾಸ್ ಸಂಸ್ಥೆ ಪ್ರತಿನಿಧಿಗಳು,ಸಂಜೀವಿನಿ ಸಂಘದ ಸದಸ್ಯರು,ಪಂಚಾಯಿತಿ ಸಿಬ್ಬಂದಿಗಳು,ಮಕ್ಕಳ ಪೆÇೀಷಕರು,ವಿದ್ಯಾರ್ಥಿಗಳು,ಶಿಕ್ಷಕರು,ಆರೋಗ್ಯ ಮತ್ತು ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.ಪಿಡಿಒ ಶೋಭಾ ಸ್ವಾಗತಿಸಿದರು.ನಮ್ಮ ಭೂಮಿ ಶ್ರೀನಿವಾಸ ಗಾಣಿಗ ಪ್ರಾಸ್ತಾವಿಕವಾಗಿ ಮಾತನಾಡಿದರು.ಶಿಕ್ಷಕಿ ಭಾಗಿರಥಿ ನಿರೂಪಿಸಿದರು.ಪಂಚಾಯಿತಿ ಲೆಕ್ಕ ಪರಿಶೋಧಕ ಶಿವಾನಂದ ಅನುಪಾಲನಾ ವರದಿ ಮಂಡಿಸಿದರು.
ಮಕ್ಕಳ ಗ್ರಾಮಸಭೆಯಲ್ಲಿ ಮಕ್ಕಳ ಸಮಸ್ಯೆ ಅನಾವರಣ:ಮೊವಾಡಿ ಶಾಲೆ ವಿದ್ಯಾರ್ಥಿನಿ ರಮ್ಯ ತ್ರಾಸಿ-ಮೊವಾಡಿ ಸಂಪರ್ಕಕ್ಕೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಬೇಡಿಕೆಯನ್ನು ಇಟ್ಟರು ಹಾಗೂ ಆರುಷ ಸಿಂಗಲ್ ಪೇರೆಂಟ್ ವಿಷಯವನ್ನು ಪ್ರಸ್ತಾಪಿಸಿ ಅನಾರೋಗ್ಯದಿಂದ ಪೀಡಿತರಾದ ತಮ್ಮ ತಾಯಿಗೆ ವಾಕರ್ ಮತ್ತು ಮಾಶಾಸನ ನೀಡುವಂತೆ ಕೇಳಿಕೊಂಡರು.ಅಮೃತ ದಾರಿ ದೀಪ ಕಲ್ಪಿಸುವಂತೆ ಮನವಿ ಮಾಡಿದರು.ಗುಜ್ಜಾಡಿ ಪ್ರೌಢಶಾಲೆ ವಿದ್ಯಾರ್ಥಿ ಸಮರ್ಥ ಶಾಲೆ ಸಂಪರ್ಕ ರಸ್ತೆಯನ್ನು ದುರಸ್ತಿಗೊಳಿಸುವಂತೆ,ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಆಗ್ರಹಸಿದರು.ತೇಜಸ್ ಶಾಲೆ ಕೊಠಡಿ ನವೀಕರಣ ಮತ್ತು ಶಾಲೆಗೆ ಸುಣ್ಣಬಣ್ಣ ಬಳಿಯಲು ಕ್ರಮ ಕೈಗೊಳ್ಳಬೇಕು ಎಂದರು.ಅಂಗನವಾಡಿ ಶಾಲೆ ವಿದ್ಯಾರ್ಥಿನಿ ಸಂಸ್ಕøತಿ ಮಾತನಾಡಿ,ಪೌಷ್ಠಿಕ ತೋಟ ರಚನೆ,ಆಟಿಕೆಗಳನ್ನು ಪಂಚಾಯತ್ ವತಿಯಿಂದ ನೀಡಬೇಕು ಎನ್ನುವ ಬೇಡಿಕೆಯನ್ನು ಸಭೆಯಲ್ಲಿ ಮಂಡಿಸುವುದರ ಮುಖೇನ ಪುಟಾಣಿ ಬಾಲಕಿ ಮಕ್ಕಳ ಗ್ರಾಮಸಭೆಯಲ್ಲಿ ಎಲ್ಲರ ಗಮನವನ್ನು ಸೆಳೆದಳು.ಮಕ್ಕಳ ಗ್ರಾಮ ಸಭೆ ಅಧ್ಯಕ್ಷತೆ ವಹಿಸಿದ್ದ ತ್ರಾಸಿ ಪಂಚಾಯಿತಿ ಅಧ್ಯಕ್ಷ ಮಿಥುನ್ ದೇವಾಡಿಗ ಮಾತನಾಡಿ,ಪಂಚಾಯತ್ ಮಟ್ಟದ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸಲಾಗುವುದು,ಗಂಭೀರ ಸಮಸ್ಯೆಗಳ ಪಟ್ಟಿಯನ್ನು ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದರು.
ಮಕ್ಕಳ ವಿಶೇಷ ಗ್ರಾಮ ಸಭೆ ಮತ್ತು ಮಕ್ಕಳ ಹಬ್ಬವನ್ನು ಆಚರಿಸಲು ರಾಜ್ಯದ 6222 ಗ್ರಾಮ ಪಂಚಾಯತ್‍ಗಳಲ್ಲಿ 100 ಗ್ರಾಮ ಪಂಚಾಯತ್‍ನ್ನು ಸರಕಾರ ಆಯ್ಕೆಮಾಡಿದೆ.
ವರದಿ: ಜಗದೀಶ ದೇವಾಡಿಗ
ಸುದ್ದಿಗಳನ್ನು ನಮ್ಮ ಜಾಲತಾಣದಲ್ಲಿ ಬಿತ್ತರಿಸಲು ಸಂಪರ್ಕಿಸಿ 9916284048
ಕುಂದಾಪುರ:ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಕರ್ನಾಟಕ ಪೊಲೀಸ್ ರನ್ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ…
ಕುಂದಾಪುರ:ರಾಜ್ಯ ಸರಕಾರಿ ಶಿಕ್ಷಕರ ನೌಕರರ ಹಾಗೂ ಇಲಾಖೆಯಲ್ಲಿನ ಇತರರ ಗೃಹ ನಿರ್ಮಾಣ ಸಹಕಾರ ಸಂಘ (ನಿ) ಬೆಂಗಳೂರು ಅದರ ರಾಜ್ಯ…
ಕುಂದಾಪುರ:ಮಾಜಿ ಎಂಎಲ್ಎ ಧಾರ್ಮಿಕ ಮುಖಂಡ ಅಜಾತಶತ್ರು ಅಪ್ಪಣ್ಣ ಹೆಗ್ಡೆ ಶನಿವಾರ ವಿಧಿವಶರಾಗಿದ್ದಾರೆ.ನೂರಕ್ಕೂ ಅಧಿಕ ನಾಗಮಂಡಲದ ನೇತೃತ್ವವನ್ನು ವಹಿಸಿಕೊಡಿದ್ದ ಅವರು, ಹಲವು…
ಕುಂದಾಪುರ:ಕಾಂಗ್ರೆಸ್ ಪಕ್ಷದ ಮುಖಂಡರಾದ,ಪ್ರಬಲ ರಾಜಕಾರಣಿ,ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ ತ್ರಾಸಿ ಸೋಮವಾರ ನಿಧನರಾದರು.ಅವರು ಪತ್ನಿ ಮಕ್ಕಳು, ಬಂದು…
ಕುಂದಾಪುರ:ಪುದುಚೇರಿಯಲ್ಲಿ ನಡೆದ 21 ನೇ ರಾಷ್ಟ್ರ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿಥ್ಮೆಟಿಕ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿದ ಹಟ್ಟಿಯಂಗಡಿ ಸಿದ್ಧಿ ವಿನಾಯಕ…
ಕುಂದಾಪುರ:2025 ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ತಾಲೂಕು ಮಟ್ಟದಲ್ಲಿ ಅತಿ ಹೆಚ್ಚು ಅಂಕ ಹಾಗೂ ರಾಜ್ಯ ಮಟ್ಟದಲ್ಲಿ 7ನೇ ರ್ಯಾಂಕ್…