ಕುಂದಾಪುರ:ಬೈಂದೂರು ತಾಲೂಕಿನ ಉಪ್ಪುಂದ ಪ್ಲೈಒವರ್ ಬಳಿ ಇರುವ ಕೋಟಿಚೆನ್ನಯ್ಯ ಕಾಂಪ್ಲೆಕ್ಸ್ ಕಟ್ಟಡದಲ್ಲಿನ ಸೀತಾಲ್ ಹೋಟೆಲ್ ಪಕ್ಕದಲ್ಲಿ ಭರತ ಆಚಾರ್ಯ ಮಾಲೀಕತ್ವದ ಪವರ್ ಪ್ಲಸ್ ಇಲೆಕ್ಟ್ರಿಕಲ್ಸ್ ಶೋ ರೂಂ ಉದ್ಘಾಟನಾ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಗುರುವಾರ ನಡೆಯಿತು.ಪವರ್ ಪ್ಲಸ್ ಇಲೆಕ್ಟ್ರಿಕಲ್ಸ್ ನೂತನ ಶೋ ರೂಂ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಗಣಪತಿ ಪೂಜೆ,ಗಣಹೋಮ ಜರುಗಿತು.ಬೈಂದೂರು ಭಾಗದಲ್ಲಿಯೆ ಇದೊಂದು ಉನ್ನತ ದರ್ಜೆಯ ಶೋ ರೊಂ ಆಗಿದೆ.ರೈತರಿಗೆ,ಮನೆ ಬಳಕೆಗೆ ಉಪಯೋಗವಾಗುಂತಹ ಎಲ್ಲಾ ಬಗೆಯ ಪಂಪ್‍ಸೇಟ್‍ಗಳು,ಗೃಹಾಪಯೋಗಿ ವಸ್ತುಗಳು ದೊರೆಯಲಿದೆ.
ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹರೀಶ್ ಅವರು ಪವರ್ ಪ್ಲಸ್ ಇಲೆಕ್ಟ್ರಕಲ್ಸ್ ನೂತನ ಶೋ ರೂಂ ಉದ್ಘಾಟಿಸಿ ಮಾತನಾಡಿ,ಗ್ರಾಮೀಣ ಪ್ರದೇಶದ ಜನರಿಗೆ ಹಾಗೂ ರೈತಾಪಿ ವರ್ಗದ ಜನರಿಗೆ ಅನುಕೂಲವಾಗು ದೃಷ್ಟಿಯಿಂದ ಉಪ್ಪುಂದದಲ್ಲಿ ನೂತನವಾಗಿ ಆರಂಭಗೊಂಡಿರುವ ಪವರ್ ಪ್ಲಸ್ ಇಲೆಕ್ಟ್ರಿಕಲ್ಸ್ ಶೋ ರೂಂನ ಪ್ರಯೋಜನವನ್ನು ಊರ ನಾಗರಿಕರು ಬಳಸಿಕೊಳ್ಳುವುದರ ಮುಖೇನ ಯುವ ಉದ್ಯಮಿಯನ್ನು ಪ್ರೋತ್ಸಾಹಿಸಬೇಕೆಂದು ಹೇಳಿದರು.
ಪವರ್ ಪ್ಲಸ್ ಇಲೆಕ್ಟ್ರಿಕಲ್ಸ್ ಶೋ ರೂಂ ಉಪ್ಪುಂದ ಮಾಲೀಕರಾದ ಭರತ್ ಆಚಾರ್ಯ ಮಾತನಾಡಿ,ಗದ್ದೆ ಮತ್ತು ತೋಟಕ್ಕೆ ನೀರನ್ನು ಹಾಯಿಸಲು ಸಿಆರ್‍ಐ ಪಂಪ್ ಸೇಟ್ ಸಹಿತ ಇನ್ನಿತರ ಕಂಪೆನಿಗಳ ಪಂಪ್ ಸೇಟ್ ಮತ್ತು ಬೋರ್‍ವೆಲ್ ಪಂಪ್ ಸೇಟ್ ನಮ್ಮಲ್ಲಿ ದೊರೆಯುತ್ತದೆ.ರೈತರಿಗೆ ರೀಯಾತಿ ದರದಲ್ಲಿ ನೀಡಲಾಗುವುದು ಎಂದು ಹೇಳಿದರು.ಮನೆ ಬಳಕೆಗೆ ಉಪಯೋಗವಾಗುವಂತಹ ಫ್ಯಾನ್,ಲೈಟ್ ಎಲ್ಲಾ ಬಗೆಯ ಇಲೆಕ್ಟ್ರಿಕಲ್ಸ್ ವಸ್ತುಗಳು ದೊರೆಯಲಿದೆ.ಮನೆ ಬಾಗಿಲಿಗೆ ಸರ್ವಿಸ್ ಕೂಡ ನೀಡಲಾಗುವುದು ಎಂದು ಹೇಳಿದರು.
ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ ವಕೀಲ ಮಣಿರಾಜ ಶೆಟ್ಟಿ ಅವರು ಪವರ್ ಪ್ಲಸ್ ಇಲೆಕ್ಟ್ರಿಕಲ್ಸ್ ಶೋ ರೂಂಗೆ ಆಗಮಿಸಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಎ.ಇ ಶಶಿರಾಜ್ ಶೆಟ್ಟಿಯ್ಯಾನ್,ಕೆನರಾ ಬ್ಯಾಂಕ್ ಉಪ್ಪುಂದ ಶಾಖೆ ಮ್ಯಾನೇಜರ್ ಅಭಿಲಾಷ,ಶ್ರೀಧರ ಆಚಾರ್ಯ,ಭೀಷ್ಮ ಆಚಾರ್ಯ,ಶರತ್ ಆಚಾರ್ಯ,ಸತ್ಯನಾರಾಯಣ ಆಚಾರ್ಯ,ಪ್ರಭಾಕರ ಆಚಾರ್ಯ ಮೊವಾಡಿ,ರೇಂಜರ್ ಶಿವರಾಮ ಆಚಾರ್ಯ ಹಾಗೂ ಭರತ ಆಚಾರ್ಯ ಕುಟುಂಬಿಕರು,ಹಿತೈಷಿಗಳು,ಸ್ನೇಹಿತರು ಉಪಸ್ಥಿತರಿದ್ದರು.
ವರದಿ:ಜಗದೀಶ ದೇವಾಡಿಗ
ಸುದ್ದಿಗಳನ್ನು ನಮ್ಮ ಜಾಲತಾಣದಲ್ಲಿ ಬಿತ್ತರಿಸಲು ಸಂಪರ್ಕಿಸಿ -9916284048
ಕುಂದಾಪುರ:ಪುದುಚೇರಿಯಲ್ಲಿ ನಡೆದ 21 ನೇ ರಾಷ್ಟ್ರ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿಥ್ಮೆಟಿಕ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿದ ಹಟ್ಟಿಯಂಗಡಿ ಸಿದ್ಧಿ ವಿನಾಯಕ…
ಕುಂದಾಪುರ:2025 ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ತಾಲೂಕು ಮಟ್ಟದಲ್ಲಿ ಅತಿ ಹೆಚ್ಚು ಅಂಕ ಹಾಗೂ ರಾಜ್ಯ ಮಟ್ಟದಲ್ಲಿ 7ನೇ ರ್ಯಾಂಕ್…
ಕುಂದಾಪುರ:ಗ್ರಾಮ ಪಂಚಾಯಿತಿ ಹೊಸಾಡು,ಆರೋಗ್ಯ ಇಲಾಖೆ,ಕೃಷಿ ಇಲಾಖೆ,ಅರಣ್ಯ ಇಲಾಖೆ,ಆರಕ್ಷಕ ಠಾಣೆ ಗಂಗೊಳ್ಳಿ,ಪಶು ಸಂಪಗೋನಾ ಮತ್ತು ತೋಟಗಾರಿಕಾ ಹಾಗೂ ಮೆಸ್ಕಾಂ,ಶಿಕ್ಷಣ ಇಲಾಖೆ,ಆಯುಷ್ ಮತ್ತು…
ಕುಂದಾಪುರ:ಗ್ರಾಮೀಣ ಪ್ರದೇಶದ ಕೃಷಿಕರಿಗೆ ಅನುಕೂಲವಾಗುವ ಉದ್ದೇಶದಿಂದ ಕಳೆದ ಹನ್ನೊಂದು ವರ್ಷಗಳ ಹಿಂದೆ ಶ್ರೀ ಮೂಕಾಂಬಿಕಾ ಭತ್ತ ಬೆಳೆಗಾರರ ಒಕ್ಕೂಟವನ್ನು ಹುಟ್ಟು…
oplus_2 ಮುಳ್ಳಿಕಟ್ಟೆ:ಲಯನ್ಸ್ ಕ್ಲಬ್ ಹಕ್ಲಾಡಿ ಚೆನ್ನಕೇಶವ ಜೋನ್ 2 ರೀಜನ್ 6 ಡಿಸ್ಟ್ರಿಕ್ಟ್ 317 ಸಿವತಿಯಿಂದ ಲಯನ್ ಆಸರೆ ಯೋಜನೆ…
ಕುಂದಾಪುರ:ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ ಆಂಡ್ ಆರ್‌ಚೀಟಿಕ್ಸ್ (ಸಿವಿಲ್ ಎಂಜಿನಿಯರ್ ಮತ್ತು ವಾಸ್ತುಶಿಲ್ಪಿಗಳ ಸಲಹಾ ಸಂಘ) ಕುಂದಾಪುರ ಇದರ…