ಕುಂದಾಪುರ:ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ಹಕ್ಲಾಡಿ ಗ್ರಾಮ ಪಂಚಾಯತ್ ಸಹಕಾರದಲ್ಲಿ ಬೈಂದೂರು ವಲಯದ ಕುಂದಾಪುರ ತಾಲೂಕಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಹಕ್ಲಾಡಿ ಶಾಲೆಯಲ್ಲಿ ಕ್ರಾಫ್ಟ್ ಮತ್ತು ವಿಜ್ಞಾನ ಮಾದರಿಗಳ ಪ್ರದರ್ಶನ ಹಾಗೂ ಮೆಟ್ರಿಕ್ ಮೇಳ ಬುಧವಾರ ನಡೆಯಿತು.ಶಾಲಾ ವಿದ್ಯಾರ್ಥಿಗಳು ತಯಾರಿಸಿದ ವಿವಿಧ ಮಾದರಿಯ ಕ್ರಾಫ್ಟ್ ಮತ್ತು ವಿಜ್ಞಾನ ಮಾದರಿಗಳ ಪ್ರದರ್ಶನ ಮಾಡಲಾಯಿತು.ತಾವು ತಯಾರಿಸಿದ ವಿಜ್ಞಾನ ಮಾದರಿಗಳ ಕುರಿತು ನೆರೆದವರಿಗೆ ಮಕ್ಕಳು ಮಾಹಿತಿಯನ್ನು ನೀಡಿದರು.ವಿದ್ಯಾರ್ಥಿಗಳು ತಯಾರಿಸಿದ ಆಕರ್ಷಕ ಕ್ರಾಫ್ಟ್ ನೋಡುಗರ ಮನ ಸೆಳೆಯಿತು.
ಮೆಟ್ರಿಕ್ ಮೇಳದ ಅಂಗವಾಗಿ ಶಾಲಾ ಆವರಣದಲ್ಲಿ ಮಕ್ಕಳ ಸಂತೆಯನ್ನು ಏರ್ಪಡಿಸಲಾಗಿತ್ತು.ಹಣ್ಣು,ತರಕಾರಿ ಸೇರದಿದಂತೆ ನಾನಾ ಬಗೆಯ ತಿಂಡಿ ತಿನಿಸುಗಳನ್ನು ಮಕ್ಕಳು ಭರ್ಜರಿಯಾಗಿ ವ್ಯಾಪಾರವನ್ನು ಮಾಡಿದರು.ಶಾಲಾ ಶಿಕ್ಷಕರು ಮತ್ತು ಪೋಷಕವೃಂದವರು,ಎಸ್‍ಡಿಎಂಸಿ ಸದಸ್ಯರು ಮಕ್ಕಳ ವಸ್ತುಗಳನ್ನು ಖರೀದಿ ಮಾಡುವುದರ ಮುಖೇನ ಮಕ್ಕಳಿಗೆ ಪ್ರೋತ್ಸಾಹವನ್ನು ನೀಡಿದರು.
ಹಕ್ಲಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುಭಾಷ್ ಶೆಟ್ಟಿ ಹೊಳ್ಳಗೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ಬಾಲ್ಯದಲ್ಲೇ ಮಕ್ಕಳಿಗೆ ಎಲ್ಲಾ ರೀತಿಯ ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶ ಸಿಕ್ಕಾಗ ಮಾತ್ರ ಪ್ರಬುದ್ಧರಾಗಿ ಬೆಳೆಯಲು ಸಹಕಾರಿ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.
ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಹಕ್ಲಾಡಿ ಶಾಲಾ ಮುಖ್ಯೋಪಾಧ್ಯಾಯಿನಿ ಗೀತಾ.ಬಿ ಪ್ರಾಸ್ತಾವಿಕವಾಗಿ ಮಾತನಾಡಿ,ಶೈಕ್ಷಣಿಕ ಚಟುವಟಿಕೆ ಜತೆಗೆ ಮಕ್ಕಳಿಗೆ ವಿಜ್ಞಾನ ಮತ್ತು ವ್ಯಾಪಾರ ವಹಿವಾಟುವಿನ ಬಗ್ಗೆ ಅರಿವು ಮೂಡಿಸುವ ದೃಷ್ಟಿಯಿಂದ ಇವೊಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.ಸಹಕರಿಸಿದ ಎಲ್ಲರಿಗೂ ಧನ್ಯವಾದವನ್ನು ಅರ್ಪಿಸಿದರು.
ವಿಜ್ಞಾನ ಶಿಕ್ಷಕಿ ಸೌಜನ್ಯ ಮಾತನಾಡಿ,ಮಕ್ಕಳು ತಯಾರಿಸಿದ ವಿಜ್ಞಾನಿ ಮಾದರಿಗಳು ಒಂದಕ್ಕಿಂತ ಒಂದು ಆಕರ್ಷಕವಾಗಿದ್ದು ಮೌಲ್ಯಮಾಪನ ಮಾಡಲು ಯಾರಿಂದಲೂ ಸಾಧ್ಯವಿಲ್ಲ.ಮಕ್ಕಳ ಒಳಗೆ ಅಡಗಿರುವ ಪ್ರತಿಭೆ ಹೊರ ಬರಬೇಕಾದರೆ ಇಂತಹ ಕಾರ್ಯಕ್ರಮಗಳು ಬಹಳಷ್ಟು ಪ್ರಯೋಜನಕಾರಿ ಆಗಿರುತ್ತದೆ ಎಂದರು.
ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಮಾತನಾಡಿ,ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.
ಶಾಲಾ ಎಸ್‍ಡಿಎಂಸಿ ಉಪಾಧ್ಯಕ್ಷೆ ಶಾಂತ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಬೈಂದೂರು ವಲಯ ದೈಹಿಕ ಪರಿವೀಕ್ಷಣಾಧಿಕಾರಿ ಚಂದ್ರಶೇಖರ ಶೆಟ್ಟಿ,ಹೊಸಾಡು ಕ್ಲಸ್ಟರ್ ಸಿಆರ್‍ಪಿ ರಾಮನಾಥ ಮೇಸ್ತ,ನಿವೃತ್ತ ಶಿಕ್ಷಕರಾದ ಸಂಜೀವ ಬಿಲ್ಲವ ಮತ್ತು ಶಾಂತರಾಮ ಶೆಟ್ಟಿ,ಹಕ್ಲಾಡಿ ಪಂಚಾಯಿತಿ ಪಿಡಿಒ ಸತೀಶ್,ಶಾಲಾ ಶಿಕ್ಷಕರಾದ ಶ್ಯಾಮಲ,ಜ್ಯೋತಿ,ಚಂದ್ರಿಕಾ,ಅಭಿಲಾಷ ನಾಯ್ಕ,ಅತಿಥಿ ಶಿಕ್ಷಕರಾದ ವಿನೋದ,ಸುರೇಖಾ,ಗೌರವ ಶಿಕ್ಷಕಿ ಶ್ವೇತಾ,ಎಸ್‍ಡಿಎಂಸಿ ಸದಸ್ಯರು,ಮಕ್ಕಳ ಪೋಷಕರು,ವಿದ್ಯಾರ್ಥಿಗಳು,ಗ್ರಾಮಸ್ಥರು ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿನಿ ಸಮಸ್ತ ನಿರೂಪಿಸಿದರು.ಸಹಶಿಕ್ಷಕ ಶಿವರಾಜ್ ಪ್ರತಿಜ್ಞಾವಿಧಿ ಭೋಧಿಸಿದರು.ಶಿಕ್ಷಕಿ ಸೌಜನ್ಯ ವಂದಿಸಿದರು.
ವರದಿ:ಜಗದೀಶ ದೇವಾಡಿಗ
ಕುಂದಾಪುರ:ಪುದುಚೇರಿಯಲ್ಲಿ ನಡೆದ 21 ನೇ ರಾಷ್ಟ್ರ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿಥ್ಮೆಟಿಕ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿದ ಹಟ್ಟಿಯಂಗಡಿ ಸಿದ್ಧಿ ವಿನಾಯಕ…
ಕುಂದಾಪುರ:2025 ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ತಾಲೂಕು ಮಟ್ಟದಲ್ಲಿ ಅತಿ ಹೆಚ್ಚು ಅಂಕ ಹಾಗೂ ರಾಜ್ಯ ಮಟ್ಟದಲ್ಲಿ 7ನೇ ರ್ಯಾಂಕ್…
ಕುಂದಾಪುರ:ಗ್ರಾಮ ಪಂಚಾಯಿತಿ ಹೊಸಾಡು,ಆರೋಗ್ಯ ಇಲಾಖೆ,ಕೃಷಿ ಇಲಾಖೆ,ಅರಣ್ಯ ಇಲಾಖೆ,ಆರಕ್ಷಕ ಠಾಣೆ ಗಂಗೊಳ್ಳಿ,ಪಶು ಸಂಪಗೋನಾ ಮತ್ತು ತೋಟಗಾರಿಕಾ ಹಾಗೂ ಮೆಸ್ಕಾಂ,ಶಿಕ್ಷಣ ಇಲಾಖೆ,ಆಯುಷ್ ಮತ್ತು…
ಕುಂದಾಪುರ:ಗ್ರಾಮೀಣ ಪ್ರದೇಶದ ಕೃಷಿಕರಿಗೆ ಅನುಕೂಲವಾಗುವ ಉದ್ದೇಶದಿಂದ ಕಳೆದ ಹನ್ನೊಂದು ವರ್ಷಗಳ ಹಿಂದೆ ಶ್ರೀ ಮೂಕಾಂಬಿಕಾ ಭತ್ತ ಬೆಳೆಗಾರರ ಒಕ್ಕೂಟವನ್ನು ಹುಟ್ಟು…
oplus_2 ಮುಳ್ಳಿಕಟ್ಟೆ:ಲಯನ್ಸ್ ಕ್ಲಬ್ ಹಕ್ಲಾಡಿ ಚೆನ್ನಕೇಶವ ಜೋನ್ 2 ರೀಜನ್ 6 ಡಿಸ್ಟ್ರಿಕ್ಟ್ 317 ಸಿವತಿಯಿಂದ ಲಯನ್ ಆಸರೆ ಯೋಜನೆ…
ಕುಂದಾಪುರ:ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ ಆಂಡ್ ಆರ್‌ಚೀಟಿಕ್ಸ್ (ಸಿವಿಲ್ ಎಂಜಿನಿಯರ್ ಮತ್ತು ವಾಸ್ತುಶಿಲ್ಪಿಗಳ ಸಲಹಾ ಸಂಘ) ಕುಂದಾಪುರ ಇದರ…