ಕುಂದಾಪುರ:ಉಡುಪಿ ಜಿಲ್ಲಾ ಕ್ಯಾಟರಿಂಗ್ ಮಾಲೀಕರ ಸಂಘದ ಉದ್ಘಾಟನಾ ಕಾರ್ಯಕ್ರಮ ಸಂತೆಕಟ್ಟೆ ಲಕ್ಷ್ಮೀ ನಗರದ ಗ್ರೀನ್ ಎಕ್ಸರ್ ಓಪನ್ ಗಾರ್ಡನ್‌ನಲ್ಲಿ ಮಂಗಳವಾರ ನಡೆಯಿತು.ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀಈಶ ವಿಠಲದಾಸ ಸ್ವಾಮೀಜಿ ದೀಪ ಪ್ರಜ್ವಲಿಸುವ ಮೂಲಕ ಜಿಲ್ಲಾ ಕ್ಯಾಟರಿಂಗ್ ಮಾಲೀಕರ ಸಂಘವನ್ನು ಉದ್ಘಾಟಿಸಿದರು.ಬಳಿಕ ಆಶೀರ್ವಚನ ನೀಡಿ,ಗುಣಮಟ್ಟ,ರುಚಿ,ಶುಚಿಯಾದ ಆಹಾರ ಪದಾರ್ಥಗಳನ್ನು ಪೂರೈಕೆ ಮಾಡುವ ಮಹತ್ತರವಾದ ಜವಾಬ್ದಾರಿ ಕ್ಯಾಟರಿಂಗ್ ಮಾಲೀಕರ ಮೇಲಿದೆ.ಈ ವೃತ್ತಿಯನ್ನು ಭಗವಂತನಿಗೆ ಕೊಡುವ ಯಜ್ಞದಂತೆ ಕಾಣಬೇಕೆಂದರು.ಅವಕಾಶ ವಂಚಿತರ ಹಸಿವು ತಣ್ಣಿಸುವುದು,ಕಣ್ಣೀರು ಒರೆಯುವ ಕೆಲಸ ನಿಜಕ್ಕೂ ಭಗವಂತನಿಗೆ ತಲುಪುತ್ತದೆ. ಈ ನಿಟ್ಟಿನಲ್ಲಿ ಕ್ಯಾಟರಿಂಗ್ ಸಂಘಟನೆಯ ಮೂಲಕ ಸಮಾಜದ ನೋವು ನಲಿವುಗಳಿಗೆ ಸ್ಪಂದಿಸಬೇಕೆಂದರು.
ಉಡುಪಿ ಡಯಾಸಿಸ್‌ನ ವಿಕಾರ್ ಜನರಲ್ ರೆ. ಫರ್ಡಿನೆಂಡ್ ಗೋನ್ಸ್ವಾಲಿಸ್ ಮಾತನಾಡಿ, ಆಧುನಿಕ ಯುಗದಲ್ಲಿ ಕ್ಯಾಟರಿಂಗ್ ಉದ್ಯಮಕ್ಕೆ ಹೆಚ್ಚಿನ ಬೇಡಿಕೆವಿದ್ದು,ಗುಣಮಟ್ಟ, ರುಚಿಯಲ್ಲಿ ಎಂದೂ ರಾಜೀಯಾಗದೇ ಉತ್ತಮ ಆಹಾರವನ್ನು ನೀಡಬೇಕು. ಈ ಬಗ್ಗೆ ಉದ್ಯಮಿದಾರರು ಗಮನ ಹರಿಸಬೇಕು. ಆಹಾರ ಪದಾರ್ಥಗಳನ್ನು ಪ್ರಸ್ತುತ ಪಡಿಸುವುದು ಅಗತ್ಯವಾಗಿದೆ. ಆರೋಗ್ಯದ ಮೇಲೆ ಪರಿಣಾಮ ಬೀರುವ, ಕಲಬೆರಕೆಯ ಆಹಾರವನ್ನು ತಯಾರಿಸಬೇಡಿ ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಅಸೋಸಿಯೇಷನ್ ಅಧ್ಯಕ್ಷ ನವೀನ್ ಅಮೀನ್ ಮಾತನಾಡಿ, ಕ್ಯಾಟರಿಂಗ್ ಮಾಲೀಕರ ಸಮಸ್ಯೆ ಪರಿಹಾರಕ್ಕೆ ಒಟ್ಟಾಗಿ ಸೇರಿದಾಗ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಕ್ಯಾಟರಿಂಗ್ ಸಮಸ್ಯೆಯನ್ನು ಭಿನ್ನಾಭಿಪ್ರಾಯ ದೂರೀಕರಿಸುವುದು, ದರಪಟ್ಟಿ ಮಾಡುವುದು, ಸಂಕಷ್ಟಕ್ಕೆ ಸ್ಪಂದಿಸುವುದು ನಮ್ಮ ಸಂಘಟನೆಯ ಮೊದಲ ಆದ್ಯತೆ. ಸರಕಾರದ ಕಾನೂನು ತೊಡಕುಗಳ ಬಗ್ಗೆ ಧ್ವನಿ ಎತ್ತುವುದಕ್ಕೆ ಸಾಧ್ಯವಿದೆ. ಸಂಘಟನೆಯಲ್ಲಿ ಇದ್ದಾಗ ನಾವೆಲ್ಲರೂ ಬೆಳೆಯುವುದಕ್ಕೆ ಸಾಧ್ಯವಾಗುತ್ತದೆ ಎಂದರು.
ಉಡುಪಿ ಜಿಲ್ಲಾ ಕ್ಯಾಟರಿಂಗ್ ಮಾಲೀಕರ ಸಂಘದ ಪ್ರಮುಖರಾದ ಹಾಗೂ ಕ್ಯಾಟರಿಂಗ್ ಸಂಸ್ಥೆಯ ಮಾಲೀಕರಾದ ಭರತ್ ಶೆಟ್ಟಿ, ಇಗ್ನೇಷಿಯಸ್ ಡಿಸೋಜ, ರೋನಾಲ್ಡ್ ರೋಡ್ರಿಗಸ್, ರವೀಂದ್ರ ಶೆಟ್ಟಿ ಶಿರ್ವ, ಅನಿಲ್ ಡಿಮೆಲ್ಲೊ, ಅನಿಲ್ ಡೆಸಾ, ದಯಾನಂದ್, ರಮೇಶ್, ಭಾಸ್ಕರ್, ಸುಶಾಂತ್, ಪ್ರಸಾದ್ ಅಂಚನ್ ಉಪಸ್ಥಿತರಿದ್ದರು.ಸಂಘದ ಉಪಾಧ್ಯಕ್ಷ ಜೂಲಿಯಸ್ ಲಿವೀಸ್ ದಾನಿಗಳ ಪಟ್ಟಿ ವಾಚಿಸಿದರು. ಕಾರ್ಯದರ್ಶಿ ಗಣೇಶ್ ಸಾಲ್ಯಾನ್ ವಂದಿಸಿದರು. ಗೌರವ ಸಲಹೆಗಾರ ಡೇನಿಷ್ ರೋಡ್ರಿಗಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ದೀಕ್ಷಿತ್ ಶೆಟ್ಟಿ ಸ್ವಾಗತಿಸಿ, ಆಲ್ವಿನ್ ಅಂದ್ರಾದೆ ನಿರೂಪಿಸಿದರು.
ಕುಂದಾಪುರ:ಮಾರಣಕಟ್ಟೆ ಮೇಳದ ಯಕ್ಷಗಾನ ಕಲಾವಿದರಾದ ಐರ್ಬೈಲು ಆನಂದ ಶೆಟ್ಟಿ ಅವರ ಮಗಳು ಸೀಮಾ ಶೆಟ್ಟಿ ಎಂಬುವರು ಏ.೨೩ ರ ಬುಧವಾರ…
ಕುಂದಾಪುರ:ಆಗುAಬೆ ಕಡೆ ಯಿಂದ ತೀರ್ಥ ಹಳ್ಳಿಗೆ ಸಾಗುತ್ತಿದ್ದ ಬಸ್ ತೀರ್ಥಹಳ್ಳಿ ಎಂಬಲ್ಲಿ ಕುಂದಾಪುರ ಕಡೆಗೆ ಸಾಗುತ್ತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದ…
ಕುಂದಾಪುರ:ನಮ್ಮ ದೇಶದಲ್ಲಿ ಆಹಾರ ಹಣದುಬ್ಬರ ಕ್ಕೆ ಸರ್ಕಾರ ಕೈಗೊಳ್ಳುವ ಕ್ರಮಗಳ ಜೊತೆಗೆ ದುಡಿಯುವ ಕೈಗಳಿಗಿಂತ ಉಣ್ಣುವ ಕೈಗಳು ಹೆಚ್ಚಾಗಿದೆ.ಆಲಸ್ಯಕರ ಜೀವನ…
ಕುಂದಾಪುರ:ಸಿಸಿಟಿವಿ ಮತ್ತು ಮಾನಿಟರಿಂಗ್ ಕ್ಷೇತ್ರದಲ್ಲಿ ಈಗಾಗಲೇ ಬಹಳಷ್ಟು ಹೆಸರನ್ನು ಗಳಿಸಿರುವ ದಿಗಂತ ಶೆಟ್ಟಿ ಮತ್ತು ದಿಕ್ಷೀತ್ ಶೆಟ್ಟಿ ಮಾಲಿಕತ್ವದಲ್ಲಿ ಫಿಯರ್ಲೆಸ್…
ಕುಂದಾಪುರ:ಕೆಸಿಡಿಸಿ ವಿಭಾಗೀಯ ವ್ಯವಸ್ಥಾಪಕ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಕುಂದಾಪುರ ತಾಲೂಕಿನ ಕಟ್‌ಬೇಲ್ತೂರು ನಿವಾಸಿಯಾಗಿರುವ ಬೈಂದೂರಿನ ಉದಯ ಕುಮಾರ್ ಜೋಗಿ…
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿನ ಬಿ.ಸಿ.ಎ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗೆ ಉದಯೋನ್ಮುಖ ತಂತ್ರಜ್ಞಾನಗಳು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಡೈರೆಕ್ಟರ್ ಇಂಚಾರ್ಜ್,ಪಿಪಿಸಿ…